HOME » NEWS » State » VATAL NAGARAJ ANNOUNCED HIS FULL SUPPORT FARMERS PROTEST GNR

’ರೈತರ ಹೋರಾಟಕ್ಕೆ ಸಂಪೂರ್ಣ ಬೆಂಬಲ‘ - ಕನ್ನಡಪರ ಹೋರಾಟಗಾರ ವಾಟಾಳ್​​ ನಾಗರಾಜ್​​ ಘೋಷಣೆ

ಸಿಎಂ ಬಿಎಸ್​ ಯಡಿಯೂರಪ್ಪರ ಸಂಪುಟದಲ್ಲಿರುವ ಸಚಿವರಿಗೆ ಧೈರ್ಯವಿಲ್ಲ. ರೈತರ ಪರವಾಗಿ ನಿಲ್ಲುವ ಶಕ್ತಿ ಯಾರಿಗೂ ಇಲ್ಲ. ಹಾಗಾಗಿ ನಾವು ರೈತರ ಜೊತೆಗೆ ನಿಲ್ಲುತ್ತೇವೆ. ಸೋಮವಾರದ ಹೋರಾಟಕ್ಕೆ ಬೆಲೆ ಕೊಟ್ಟರೇ ಸರಿ. ಇಲ್ಲವಾದರೆ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡಲಾಗುತ್ತೆ ಎಂದು ವಾಟಾಳ್​​ ನಾಗರಾಜ್​​ ಎಚ್ಚರಿಕೆ ನೀಡಿದರು.

news18-kannada
Updated:September 26, 2020, 4:06 PM IST
’ರೈತರ ಹೋರಾಟಕ್ಕೆ ಸಂಪೂರ್ಣ ಬೆಂಬಲ‘ - ಕನ್ನಡಪರ ಹೋರಾಟಗಾರ ವಾಟಾಳ್​​ ನಾಗರಾಜ್​​ ಘೋಷಣೆ
ಪ್ರತಿಭಟನೆ ನಡೆಸಿದ ವಾಟಾಳ್​​ ನಾಗರಾಜ್
  • Share this:
ರಾಮನಗರ(ಸೆ.26): ಇದೇ 28ನೇ ತಾರೀಕಿನಂದು ಸೋಮವಾರ ಎಪಿಎಂಸಿ ಮತ್ತು ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ವಿರೋಧಿಸಿ ರೈತರು ಬೆಂಗಳೂರಿನಲ್ಲಿ ಬೃಹತ್​​ ಹೋರಾಟ ನಡೆಸಲು ನಿರ್ಧರಿಸಿದ್ಧಾರೆ. ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ನಡೆಯುತ್ತಿರುವ ಈ ರೈತರ ಹೋರಾಟಕ್ಕೆ ಕನ್ನಡಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್ ಬೆಂಬಲ ವ್ಯಕ್ತಪಡಿಸಿದ್ದಾರೆ. ಹಾಗೆಯೇ ಚಲನಚಿತ್ರ ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷ ಸಾ.ರಾ ಗೋವಿಂದ್ ಸಹ ಬೆಂಬಲ ಘೋಷಿಸಿದ್ಧಾರೆ. ಈ ಸಂಬಂಧ ಇಂದು ರಾಮನಗರದ ಐಜೂರು ವೃತ್ತದಲ್ಲಿ ರಾಜ್ಯ ಹಾಗೂ ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದ ವಾಟಾಳ್ ನಾಗರಾಜ್, ಸಾ.ರಾ ಗೋವಿಂದ್ ಮತ್ತವರ ಸಂಗಡಿಗರು ಘೋಷಣೆಗಳು ಕೂಗುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು. ಕೇಂದ್ರ ಸರ್ಕಾರ ರೈತ ವಿರೋಧಿ ಕಾಯ್ದೆಯನ್ನ ಜಾರಿಗೆ ತರುವ ಮೂಲಕ ರೈತರಿಗೆ ಅನ್ಯಾಯ ಮಾಡುತ್ತಿದೆ. ಸಿಎಂ ಬಿಎಸ್​ ಯಡಿಯೂರಪ್ಪ ಏಕಚಕ್ರಾಧಿಪತಿಯಾಗಿದ್ದಾರೆ ಎಂದರು ವಾಟಾಳ್​​ ನಾಗರಾಜ್​​.

ಸಿಎಂ ಬಿಎಸ್​ ಯಡಿಯೂರಪ್ಪರ ಸಂಪುಟದಲ್ಲಿರುವ ಸಚಿವರಿಗೆ ಧೈರ್ಯವಿಲ್ಲ. ರೈತರ ಪರವಾಗಿ ನಿಲ್ಲುವ ಶಕ್ತಿ ಯಾರಿಗೂ ಇಲ್ಲ. ಹಾಗಾಗಿ ನಾವು ರೈತರ ಜೊತೆಗೆ ನಿಲ್ಲುತ್ತೇವೆ. ಸೋಮವಾರದ ಹೋರಾಟಕ್ಕೆ ಬೆಲೆ ಕೊಟ್ಟರೇ ಸರಿ. ಇಲ್ಲವಾದರೆ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡಲಾಗುತ್ತೆ ಎಂದು ವಾಟಾಳ್​​ ನಾಗರಾಜ್​​ ಎಚ್ಚರಿಕೆ ನೀಡಿದರು.

ಇನ್ನು, ಇದೇ ವೇಳೆ ಮಾತಾಡಿದ ಸಾ.ರಾ ಗೋವಿಂದ್​​, ನಾವು ರೈತರ ಹೋರಾಟಕ್ಕೆ ಬೆಂಬಲ ಕೊಡುತ್ತೇವೆ. ಯಾವುದೇ ಕಾರಣಕ್ಕೂ ಈ ಕಾಯ್ದೆ ಜಾರಿಗೆ ಬರಬಾರದು. ಇದರಿಂದಾಗಿ ಖಾಸಗಿ ಕಂಪನಿಗಳಿಗೆ ಅನುಕೂಲವಾಗಲಿದೆ ಅಷ್ಟೇ. ರೈತರಿಗೆ ಯಾವುದೇ ಅನುಕೂಲವಿಲ್ಲ. ಹಾಗಾಗಿ ರೈತರ ಜೊತೆಗೆ ಕನ್ನಡಪರ ಸಂಘಟನೆಗಳು ನಿಲ್ಲಲಿವೆ ಎಂದರು.
Youtube Video

ಇದನ್ನೂ ಓದಿ: ‘ತೆಲುಗು ಪ್ರಭಾವಿತ ಆಂಧ್ರದ ಗಡಿ ಜಿಲ್ಲೆ ಚಿಕ್ಕಬಳ್ಳಾಪುರದಲ್ಲಿ ಕನ್ನಡಕ್ಕೆ ಆದ್ಯತೆ ನೀಡಬೇಕು‘ - ಡಿಸಿ ಆರ್​​. ಲತಾ

ರಾಮನಗರದಲ್ಲಿಯೂ ಸಹ ರೈತರ ಪರವಾಗಿ ಹೋರಾಟ ಮಾಡ್ತೇವೆ. ಇದರ ಜೊತೆಗೆ ಮೇಕೆದಾಟು ಯೋಜನೆಯ ಪರವಾಗಿ ಹೋರಾಟ ಮಾಡಲಾಗುತ್ತೆ. ರಾಜ್ಯ ಹಾಗೂ ಕೇಂದ್ರ ಸರ್ಕಾರ ಆದಷ್ಟು ಬೇಗ ಮೇಕೆದಾಟು ಯೋಜನೆಯನ್ನ ಪ್ರಾರಂಭಿಸಬೇಕೆಂದು ಎಂದು ಕರುನಾಡ ಸೇನೆ ರಾಮನಗರ ಜಿಲ್ಲಾಧ್ಯಕ್ಷ ಜಗದೀಶ್ ಒತ್ತಾಯ ಮಾಡಿದರು.
Published by: Ganesh Nachikethu
First published: September 26, 2020, 4:04 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories