HOME » NEWS » State » VATAL NAGAR TO ORGANIZE HUGE PROTEST RALLY DEMANDING MEKEDATU PROJECT IN RAMANAGAR GNR

‘ಮೇಕೆದಾಟು ಯೋಜನೆಗೆ ಆಗ್ರಹಿಸಿ ರಾಮನಗರದಲ್ಲಿ ಸೆ.26ಕ್ಕೆ ಬೃಹತ್​​ ಹೋರಾಟ‘ - ವಾಟಾಳ್​​ ನಾಗರಾಜ್​​

ಇದೇ ಸೆಪ್ಟೆಂಬರ್​​ 26ನೇ ತಾರೀಕಿನಂದು ರಾಮನಗರದಲ್ಲಿ ಬೃಹತ್ ಚಳುವಳಿ ಮಾಡಲಾಗುತ್ತೆ. ಮೇಕೆದಾಟು ಯೋಜನೆ ಆಗಲೇಬೇಕೆಂದು ಒತ್ತಾಯಿಸಿ ಹೋರಾಟ ಮಾಡ್ತೇವೆ ಎಂದರು ವಾಟಾಳ್​ ನಾಗರಾಜ್​​.

news18-kannada
Updated:September 16, 2020, 8:16 PM IST
‘ಮೇಕೆದಾಟು ಯೋಜನೆಗೆ ಆಗ್ರಹಿಸಿ ರಾಮನಗರದಲ್ಲಿ ಸೆ.26ಕ್ಕೆ ಬೃಹತ್​​ ಹೋರಾಟ‘ - ವಾಟಾಳ್​​ ನಾಗರಾಜ್​​
ವಾಟಾಳ್ ನಾಗರಾಜ್
  • Share this:
ರಾಮನಗರ(ಸೆ.16): ಮೇಕೆದಾಟು ಯೋಜನೆಯನ್ನ ರಾಜ್ಯ ಬಿಜೆಪಿ ಸರ್ಕಾರ ಯಾವುದೇ ಕಾರಣಕ್ಕೂ ಮಾಡುವುದಿಲ್ಲ. ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಸುಮ್ಮನೇ ಬಂದು ತಿರುಗಾಡಿ ಹೋಗಿದ್ದಾರೆ ಅಷ್ಟೇ. ಸಿಎಂ ಯಡಿಯೂರಪ್ಪ ಅಂದ್ರೆ ಸುಳ್ಳು, ಸುಳ್ಳು ಅಂದ್ರೆ ಯಡಿಯೂರಪ್ಪ. ಹಾಗಾಗಿ ಯಾವುದೇ ಕಾರಣಕ್ಕೂ ಈ ಸರ್ಕಾರದಲ್ಲಿ ಮೇಕೆದಾಟು ಯೋಜನೆ ಆಗಲ್ಲ ಎಂದು ಹಿರಿಯ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಂದು ರಾಮನಗರದ ಐಜೂರು ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಬಳಿಕ ಮಾತಾಡಿದ ವಾಟಾಳ್​​ ನಾಗರಾಜ್​​ ಅವರು, ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ ಕೂಗುವ ಮೂಲಕ ಮೇಕೆದಾಟು ಯೋಜನೆ ಆಗಲಿ ಎಂದು ಆಗ್ರಹಿಸಿದರು. ತಮಿಳುನಾಡಿನ ಸಿಎಂ ಪಳನಿಸ್ವಾಮಿ ಅಧಿವೇಶನದಲ್ಲಿ ಮಾತನಾಡುತ್ತ ಯಾವುದೇ ಕಾರಣಕ್ಕೂ ಮೇಕೆದಾಟು ಯೋಜನೆ ಆಗಲು ಬಿಡಲ್ಲ ಎಂದಿದ್ದಾರೆ. ಆದರೆ ನಮ್ಮ ಯೋಜನೆಯ ಬಗ್ಗೆ ಮಾತನಾಡಲು ಅವರು ಯಾರು ಎಂದು ವಾಟಾಳ್ ಪ್ರಶ್ನೆ ಮಾಡಿದರು.

ಇನ್ನು, ಇದೇ ಸೆಪ್ಟೆಂಬರ್​​ 26ನೇ ತಾರೀಕಿನಂದು ರಾಮನಗರದಲ್ಲಿ ಬೃಹತ್ ಚಳುವಳಿ ಮಾಡಲಾಗುತ್ತೆ. ಮೇಕೆದಾಟು ಯೋಜನೆ ಆಗಲೇಬೇಕೆಂದು ಒತ್ತಾಯಿಸಿ ಹೋರಾಟ ಮಾಡ್ತೇವೆ. ತಮಿಳುನಾಡಿನ ಜನಪ್ರತಿನಿಧಿಗಳು ಮೇಕೆದಾಟಿಗೆ ತಕರಾರು ಮಾಡಿದ್ರೆ ಕರ್ನಾಟಕ-ತಮಿಳುನಾಡಿನ ಗಡಿ ಬಂದ್ ಮಾಡಲಾಗುತ್ತೆ ಎಚ್ಚರಿಕೆ ನೀಡಿದರು.

ಹೀಗೆ ಮುಂದುವರಿದ ವಾಟಾಳ್​​ ನಾಗರಾಜ್​​, ರಾಮನಗರದಲ್ಲಿ ತಮಿಳುನಾಡಿನ ಭೂತವನ್ನ ದಹನ ಮಾಡ್ತೇವೆ. ಈ ವಿಚಾರದ ಬಗ್ಗೆ ಮಾತಾಡಲು ರಾಜ್ಯ ಸರ್ಕಾರಕ್ಕೆ ತಾಕತ್ತಿಲ್ಲ ಎಂದರು.

ಹಾಗೆಯೇ ಸ್ಯಾಂಡಲ್​​ವುಡ್​ ಡ್ರಗ್ಸ್​​ ಕೇಸ್​​ ಸಂಬಂಧ ಪ್ರತಿಕ್ರಿಯೆ ನೀಡಿದ ಕನ್ನಡಪರ ಹೋರಾಟಗಾರ ವಾಟಾಳ್​, ಕೇವಲ ನಟಿ ರಾಗಿಣಿ ಮತ್ತು ಸಂಜನಾ ಮಾತ್ರ ಭಾಗಿಯಾಗಿದ್ದಾರಾ? ಎಂದು ಪ್ರಶ್ನಿಸಿದರು. ರಾಜಕಾರಣಿಗಳ ಕುಟುಂಬಸ್ಥರು, ಉದ್ಯಮಿಗಳ ಮಕ್ಕಳು ಎಲ್ಲರೂ ಕೇಸ್​ನಲ್ಲಿ ಭಾಗಿಯಾಗಿದ್ದಾರೆ. ಹೀಗಿದ್ದರೂ ನಟಿಯರ ಬಗ್ಗೆ ಮಾತ್ರ ಪ್ರಚಾರ ಮಾಡಲಾಗುತ್ತಿದೆ ಎಂದರು.
Youtube Video

ಇದನ್ನೂ ಓದಿ: ಬಾಬ್ರಿ ಮಸೀದಿ ಧ್ವಂಸ ಪ್ರಕರಣ: ಸೆ.30ಕ್ಕೆ ತೀರ್ಪು, ಅಡ್ವಾಣಿ ಸೇರಿ ಎಲ್ಲಾ ಆರೋಪಿಗಳು ಹಾಜರಿರಬೇಕು ಎಂದ ಕೋರ್ಟ್​

ಇದೊಂದು ದೊಡ್ಡ ಷಡ್ಯಂತ್ರ. ಡ್ರಗ್ಸ್ ಕೇಸ್ ಮುಚ್ಚಿಹಾಕಲು ಏನೆಲ್ಲ ತಂತ್ರ ಮಾಡಬೇಕೋ ಅದು ನಡೆಯುತ್ತಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ವಾಟಳ್​ ಕಿಡಿಕಾರಿದರು.
Published by: Ganesh Nachikethu
First published: September 16, 2020, 8:14 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories