ವಾಸುದೇವ ಮಯ್ಯ ಡೆತ್​ ನೋಟ್​ನಲ್ಲಿತ್ತು 11 ಜನರ ಹೆಸರು; ಸಿಐಡಿಗೆ ಪ್ರಕರಣ ವರ್ಗಾವಣೆ

ವಾಸುದೇವ ಮಯ್ಯ ಡೆತ್ ನೋಟ್ ನಲ್ಲಿ 11 ಜನರ ಬಗ್ಗೆ ಉಲ್ಲೇಖ ಮಾಡಿದ್ದರು. ಹೀಗಾಗಿ ವಾಸುದೇವ ಅವರ ಮಗಳು 11 ಜನರ ಮೇಲೆ ದೂರು ದಾಖಲು ಮಾಡಿದ್ದರು.

M Vasudeva Maiya

M Vasudeva Maiya

  • Share this:
ಬೆಂಗಳೂರು (ಜು.9): ಗುರುರಾಘವೇಂದ್ರ ಕೋ ಆಪರೇಟಿವ್ ಸೊಸೈಟಿ ಅವ್ಯವಹಾರ ಪ್ರಕರಣದ ತನಿಖೆ ನಡೆಯುತ್ತಿರುವಾಗಲೇ ಸಂಸ್ಥೆಯ ನಿವೃತ್ತ ಸಿಇಓ ವಾಸುದೇವ ಮಯ್ಯ ಆತ್ಮಹತ್ಯೆ ಮಾಡಿಕೊಂಡಿದ್ದರು. ಈಗ ಪ್ರಕರಣವನ್ನು ಸಿಐಡಿಗೆ ವರ್ಗಾವಣೆಯಾಗಿದೆ.  

ವಾಸುದೇವ ಮಯ್ಯ ಆತ್ಮಹತ್ಯೆ ಘಟನೆ ಹೈ ಪ್ರೋಫೈಲ್ ಪ್ರಕರಣವಾಗಿದ್ದು ಸಾಕಷ್ಟು ಸಂಶಯಗಳಿಗೆ ಎಡೆ ಮಾಡಿಕೊಟ್ಟಿತು. ಕೋ ಆಪರೇಟಿವ್ ಸೊಸೈಟಿ ಅವ್ಯವಹಾರ ಪ್ರಕರಣದ ತನಿಖೆ ಚುರುಕಾಗಿ ನಡೆಯುತ್ತಿದ್ದ ವೇಳೆಯೇ ವಾಸುದೇವ ಮಯ್ಯ ಆತ್ಮಹತ್ಯೆ ಮಾಡಿಕೊಂಡಿದ್ದರು ಹಾಗೂ ಆತ್ಮಹತ್ಯೆ ಸಂದರ್ಭದಲ್ಲಿ ಕಾರಿನಲ್ಲಿ ಡೆತ್ ನೋಟ್ ಪತ್ತೆಯಾಗಿದ್ದು ಅದರಲ್ಲಿ ಸೊಸೈಟಿಯಿಂದ ಸಾಲ ಪಡೆದವರು ಹಾಗೂ ಬ್ಯಾಂಕ್ ನ ಆಧಿಕಾರಿಗಳ ಹೆಸರು ಸಹ ಉಲ್ಲೇಖ ಮಾಡಿ ಸಾವಿಗೆ ಶರಣಾಗಿದ್ದರು ಎನ್ನಲಾಗಿದೆ.

ವಾಸುದೇವ ಮಯ್ಯ ಡೆತ್ ನೋಟ್ ನಲ್ಲಿ 11 ಜನರ ಬಗ್ಗೆ ಉಲ್ಲೇಖ ಮಾಡಿದ್ದರು. ಹೀಗಾಗಿ ವಾಸುದೇವ ಅವರ ಮಗಳು 11 ಜನರ ಮೇಲೆ ದೂರು ದಾಖಲು ಮಾಡಿದ್ದರು. ಇನ್ನುಮ ಕೋ ಆಪರೇಟಿವ್ ಸೊಸೈಟಿಯ ಅವ್ಯವಹಾರ ಪ್ರಕರಣದ ತನಿಖೆ ನಡೆಸುತ್ತಿದ್ದು ವೇಳೆ ಬ್ಯಾಂಕ್ ನಿಂದ ಕೋಟಿಗಟ್ಟಲೆ ಸಾಲ ಪಡೆದಿದ್ದವರ ಮೇಲೆ ಸಿಐಡಿ ದಾಳಿ ನಡೆಸಿ ಪರಿಶೀಲನೆ ನಡೆಸಿತ್ತು. ಇದೀಗ ಡೆತ್ ನೋಟ್ ನಲ್ಲಿ ಇರುವ ಹೆಸರುಗಳು ಹಾಗೂ ಸಿಐಡಿ ತನಿಖೆ ವೇಳೆ ಪತ್ತೆಯಾದ ವ್ಯಕ್ತಿಗಳಿಗೆ ಸಾಮ್ಯತೆ ಇದ್ದು ಎರಡು ಪ್ರಕರಣದ ತನಿಖೆ ಸಿಐಡಿ ಹೆಗಲಿಗೆ ವಹಿಸಲಾಗಿದೆ.

ಗುರುರಾಘವೇಂದ್ರ ಕೋ ಆಪರೇಟಿವ್ ಸೊಸೈಟಿ ನಿವೃತ್ತ ಸಿಇಓ ಆಗಿದ್ದ ವಾಸುದೇವ ಮಯ್ಯ ಇದೇ 6 ರಂದು ಪೂರ್ಣಪ್ರಜ್ಞಾ ನಗರದ ಪಾರ್ಕ್ ಬಳಿ ಕಾರಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಆತ್ಮಹತ್ಯೆ ಬಗ್ಗೆ ಸಂಶಯ ವ್ಯಕ್ತಪಡಿಸಿ ವಾಸುದೇವ ಮಯ್ಯ ಪುತ್ರಿ ರಶ್ಮಿ ಸುಬ್ರಮಣ್ಯಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದರು.

ಇದನ್ನೂ ಓದಿ: 1400 ಕೋಟಿ ರೂಪಾಯಿ ಅವ್ಯವಹಾರ, ವಾಸುದೇವ ಮಯ್ಯ ಸಾವಿನ ಸುತ್ತ ಅನುಮಾನ

ಏನಿದು ಹಗರಣ?
ಈ ಹಿಂದೆ ವಾಸುದೇವ ಮಯ್ಯ ಹಲವು ವರ್ಷಗಳ ಕಾಲ ರಾಘವೇಂದ್ರ ಕೋ ಆಪರೇಟಿವ್​ ಬ್ಯಾಂಕ್ ನ ಸಿಇಒ ಆಗಿದ್ದರು. ಇವರು ಅಧಿಕಾರ ವಹಿಸಿದ ಬಳಿಕ ಬ್ಯಾಂಕ್ ನಲ್ಲಿ ಅವ್ಯವಹಾರ ನಡೆದಿದ್ದ ಆರೋಪ ಕೇಳಿ ಬಂದಿತ್ತು. ಈ ಬಗ್ಗೆ ಮಾಹಿತಿ ಪಡೆದ ಎಸಿಬಿ ಅಧಿಕಾರಿಗಳು ಇದೇ ವರ್ಷ ಜೂನ್ ತಿಂಗಳ ೧೮ರಂದು ದಾಳಿ ನಡೆಸಿದ್ದರು. ಬ್ಯಾಂಕ್ ನ ಕೇಂದ್ರ ಕಚೇರಿ ಸೇರಿದಂತೆ ಐದಕ್ಕೂ ಹೆಚ್ಚು ಕಡೆ ದಾಳಿ ನಡೆದಿತ್ತು. ದಾಳಿ ವೇಳೆ ಹಲವು ದಾಖಲೆಗಳು ಪತ್ತೆಯಾಗಿದ್ದವು.

ವಾಸುದೇವ ಮಯ್ಯ ಸೂಪರ್ ಸೀಡ್ ಆಗೋವರೆಗೂ ಅವ್ಯವಹಾರ ನಡೆದಿದೆ ಎನ್ನುವ ಮಾಹಿತಿ ಆಧರಿಸಿ ದಾಳಿ ನಡೆಸಲಾಗಿತ್ತು ಎನ್ನಲಾಗಿದೆ. ಸಾಲ ನೀಡುವಾಗ ಆರ್​​ಬಿಐ ನಿಯಮಾವಳಿ ಉಲ್ಲಂಘನೆ ಮಾಡಿರುವುದು ಮೇಲ್ನೋಟಕ್ಕೆ ಕಂಡು ಬಂದಿತ್ತು. ಯಾವುದೇ ದಾಖಲೆ ಇಲ್ಲದೇ 140 ರಿಂದ 150 ಕೋಟಿಯಷ್ಟು ಸಾಲ ಕೊಟ್ಟಿದ್ದರು ಎನ್ನಲಾಗಿದೆ. ಸದ್ಯ ಎಸಿಬಿಯಿಂದ ಪ್ರಕರಣ ಸಿಐಡಿಗೆ ವರ್ಗಾವಣೆ ಆಗಿದೆ. ಸಿಐಡಿಗೆ ಪ್ರಕರಣ ವರ್ಗಾವಣೆಯಾದ ಬಳಿಕ ವಾಸುದೇವ್ ತಲೆಮರೆಸಿಕೊಂಡಿದ್ದರು.
Published by:Rajesh Duggumane
First published: