Chandrashekhar Guruji: ಹುಬ್ಬಳ್ಳಿಯಲ್ಲಿ ಚಂದ್ರಶೇಖರ ಗುರೂಜಿ ಅಂತ್ಯಕ್ರಿಯೆ, ಒಡೆಯನ ಸಮಾಧಿ ಬಳಿ ಕುಳಿತ ನಾಯಿ!

ಸರಳ ವಾಸ್ತು ಸಂಸ್ಥಾಪಕ, ಖ್ಯಾತ ವಾಸ್ತು ತಜ್ಞ ಚಂದ್ರಶೇಖರ ಗುರೂಜಿ ಅಂತ್ಯಸಂಸ್ಕಾರ ಹುಬ್ಬಳ್ಳಿಯ ಸುಳ್ಳ ರಸ್ತೆಯಲ್ಲಿರುವ ಜಮೀನಿನಲ್ಲಿ ಇಂದು ನಡೆಯಿತು. ವೀರಶೈವ ಲಿಂಗಾಯತ ಸಂಪ್ರದಾಯದಂತೆ 10 ಸ್ವಾಮೀಜಿಗಳು ಅಂತ್ಯ ಕ್ರಿಯೆಯನ್ನು ನಡೆಸಿ ಕೊಟ್ಟರು.

ಚಂದ್ರಶೇಖರ ಗುರೂಜಿ

ಚಂದ್ರಶೇಖರ ಗುರೂಜಿ

  • Share this:
ಹುಬ್ಬಳ್ಳಿ: ನಿನ್ನೆ ತಮ್ಮ ಆಪ್ತರಿಂದಲೇ ಖಾಸಗಿ ಹೋಟೆಲ್‌ (Hotel) ಒಂದರಲ್ಲಿ ಹತ್ಯೆಯಾಗಿದ್ದ (Murder) ಖ್ಯಾತ ವಾಸ್ತು ತಜ್ಞ (Famous Vastu Expert) ಚಂದ್ರಶೇಖರ ಗುರೂಜಿ (Chandrashekhar Guruji) ಅಂತ್ಯಕ್ರಿಯೆ (Funeral) ಇಂದು ನಡೆಯಿತು. ಹುಬ್ಬಳ್ಳಿಯ (Hubballi) ಸುಳ್ಳ ಗ್ರಾಮದ ಹೊಲದಲ್ಲಿ ಅಂತ್ಯಕ್ರಿಯೆ ನೆರವೇರಿತು. ವೀರಶೈವ ಲಿಂಗಾಯತ (Veerashaiva Lingayat) ವಿಧಿವಿಧಾನದಂತೆ ಕುಟುಂಬಸ್ಥರು, ಆಪ್ತರು, ಅಭಿಮಾನಿಗಳ ಸಮ್ಮುಖದಲ್ಲಿ ಅಂತ್ಯಸಂಸ್ಕಾರ ನಡೆಯಿತು. ಈ ವೇಳೆ ಅವರ ಪತ್ನಿ ಅಂಕಿತಾ, ಮಗಳು ಸ್ವಾತಿ ಹಾಗೂ ಸರಳ ವಾಸ್ತು ಸಂಸ್ಥೆಯ ಉದ್ಯೋಗಿಗಳ ಅಕ್ರಂದನ ಮುಗಿಲು ಮುಟ್ಟಿತ್ತು. 10 ಸ್ವಾಮೀಜಿಗಳು ಅಂತ್ಯ ಕ್ರಿಯೆಯನ್ನು ನಡೆಸಿ ಕೊಟ್ಟರು. ಗುರೂಜಿಯ ಅಂತ್ಯ ಕ್ರಿಯೆಯಲ್ಲಿ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್‌ ಮುತಾಲಿಕ್‌, ನಿಡುಮಾಮಿಡಿ ಶ್ರೀಗಳು ಸೇರಿದಂತೆ ಹಲವು ಗಣ್ಯರು ಭಾಗಿಯಾಗಿದ್ದರು.

ಚಂದ್ರಶೇಖರ ಗುರೂಜಿ ಪಾರ್ಥಿವ ಶರೀರದ ಮೆರವಣಿಗೆ

ಕಿಮ್ಸ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಯಿತು. ಬಳಿಕ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಿದರು. ಇದಾದ ಬಳಿಕ  ಚಂದ್ರಶೇಖರ್ ಗುರೂಜಿ ಪಾರ್ಥಿವ ಶರೀರವನ್ನು 4 ಕಿ.ಮೀ. ಗೂ ಅಧಿಕ ದೂರ ಮೆರವಣಿಗೆ ಮೂಲಕ ತರಲಾಯಿತು. ದಾರಿಯುದ್ದಕ್ಕೂ ಗುರೂಜಿ ಸಂಬಂಧಿಕರು, ಅವರ ಸಂಸ್ಥೆಗಳಲ್ಲಿ ಕೆಲಸ ಮಾಡುವ ಉದ್ಯೋಗಿಗಳು ಸೇರಿದಂತೆ ಆವರ ಅಭಿಮಾನಿಗಳು ಕಣ್ಣೀರು ಸುರಿಸಿದರು.



ಹುಬ್ಬಳ್ಳಿಯ ಸುಳ್ಳ ಗ್ರಾಮದಲ್ಲಿ ಅಂತ್ಯಕ್ರಿಯೆ

ಸರಳ ವಾಸ್ತು ಸಂಸ್ಥಾಪಕ, ಖ್ಯಾತ ವಾಸ್ತು ತಜ್ಞ ಚಂದ್ರಶೇಖರ ಗುರೂಜಿ ಅಂತ್ಯಸಂಸ್ಕಾರ ಹುಬ್ಬಳ್ಳಿಯ ಸುಳ್ಳ ರಸ್ತೆಯಲ್ಲಿರುವ ಜಮೀನಿನಲ್ಲಿ ಇಂದು ನಡೆಯಿತು. ವೀರಶೈವ ಲಿಂಗಾಯತ ಸಂಪ್ರದಾಯದಂತೆ 10 ಸ್ವಾಮೀಜಿಗಳು ಅಂತ್ಯ ಕ್ರಿಯೆಯನ್ನು ನಡೆಸಿ ಕೊಟ್ಟರು. ಸುಮಾರು 2 ಗಂಟೆಗೂ ಹೆಚ್ಚು ಕಾಲ ಪೂಜಾ ವಿಧಿವಿಧಾನ ನಡೆಸಿದರು. ಚಂದ್ರಶೇಖರ ಗುರೂಜಿ ಸಹೋದರನ ಹಿರಿಯ ಪುತ್ರ ಸಂತೋಷ್ ಲಿಂಗಾಯತ ಸಂಪ್ರದಾಯದಂತೆ ಅಂತ್ಯಕ್ರಿಯೆ ನೆರವೇರಿಸಿದರು. ಈ ವೇಳೆ  ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಗುರೂಜಿ ಪತ್ನಿ ಅಂಕಿತಾ, ಮಗಳು ಸ್ವಾತಿ ಕಣ್ಣೀರು ಹಾಕಿದ್ರು.

ಇದನ್ನೂ ಓದಿ: Chandrashekhar Guruji ಹತ್ಯೆ ಬಗ್ಗೆ ಆರೋಪಿ ಕೊಟ್ಟಿದ್ದನಾ ಸುಳಿವು? ಸಂಭವಾಮಿ ಯುಗೇ ಯುಗೇ ಎಂದಿದ್ದೇಕೆ ಹಂತಕ?

10 ಸ್ವಾಮೀಜಿಗಳಿಂದ ವಿಧಿ ವಿಧಾನ

10 ಸ್ವಾಮೀಜಿಗಳು ಪಂಚಾಕ್ಷರಿ ಮಂತ್ರ, ಮಂಗಳಾರತಿ ಬಳಿಕ ಮೃತ ದೇಹದ ಹಣೆಗೆ ವಿಭೂತಿ ಧಾರಣೆ ಮಾಡಿ ಅವರ ಪಾದದ ಮೇಲೆ ಸ್ವಾಮೀಜಿಗಳು ಪಾದ ಇಟ್ಟು ಪೂಜೆ ನಡೆಸಿದರು. ಅಷ್ಟ ದಿಕ್ಕುಗಳಲ್ಲಿ ಮಹಾಂತ್ರ ಬರೆದು ಇಡಲಾಯಿತು. ಕೊನೆಯಲ್ಲಿ ಪುಷ್ಪಾರ್ಚನೆ ಅಂತ್ಯ ಕ್ರಿಯೆಯ ವಿಧಿ ವಿಧಾನ ಮುಗಿಸಲಾಯಿತು. ಇದಕ್ಕೂ ಮುನ್ನ ಸಮಾಧಿ ಸ್ಥಳದಲ್ಲಿ ಗುರೂಜಿ ಅವರ ಅಕ್ಕ ಕಣ್ಣೀರಿಡುತ್ತಲೇ ಮೂರ್ಛೆ ಹೋದ ಘಟನೆಯೂ ನಡೆಯಿತು.

ಒಡೆಯನಿಗಾಗಿ ನಾಯಿಯ ಮೂಕರೋಧನೆ

ಇನ್ನು ಚಂದ್ರಶೇಖರ ಗುರೂಜಿ ಸಾಕಿದ ನಾಯಿಯೊಂದು ಮೂಕವಾಗಿ ರೋಧಿಸುತ್ತಿದ್ದ ದೃಶ್ಯ ಮನಮಿಡಿಯುವಂತಿತ್ತು. ಅವರ ಪ್ರೀತಿಯ ಸಾಕುನಾಯಿ ಪ್ರಿನ್ಸ್ ಅಂತ್ಯಕ್ರಿಯೆ ನಡೆಯುವ ಸ್ಥಳದಲ್ಲೇ ಕುಳಿತಿತ್ತು. ಇದಕ್ಕೂ ಮುಂಚೆ ಪಾರ್ಥಿವ ಶರೀರದ ಬಾಕ್ಸ್ ಮೇಲೆ ಕುಳಿತು ಅಂತಿಮ ದರ್ಶನ ಪಡೆದ ಪ್ರಿನ್ಸ್‌, ಪಾರ್ಥೀವ ಶರೀರದ ಬಾಕ್ಸ್ ನ್ನು ಒಂದು ಸುತ್ತು ಹಾಕಿ ಅಂತಿಮ ನಮನ ಸಲ್ಲಿಸಿತು.

ಇದನ್ನೂ ಓದಿ: Chandrashekhar Guruji ಕೊಲೆ ಸುತ್ತ ಹೆಣ್ಣು-ಹೊನ್ನು-ಮಣ್ಣು ಗುಮಾನಿ; ಆರೋಪಿಯ ಪತ್ನಿ ವನಜಾಕ್ಷಿ ಸ್ಫೋಟಕ ಹೇಳಿಕೆ

ಗುರೂಜಿ ಪಾರ್ಥೀವ ಶರೀರ ಬಾಕ್ಸ್ ತೆರೆಯುತ್ತಿದ್ದಂತೆಯೆ ಬೊಗಳಲು ಆರಂಭಿಸಿದ ನಾಯಿ, ಅಂತ್ಯಕ್ರಿಯೆ ಪ್ರಕ್ರಿಯೆ ಆರಂಭಗೊಳ್ಳುತ್ತಿದ್ದಂತೆಯೇ ಬೊಗಳಿ ರೋದಿಸಿತು. ಪ್ರೀತಿಯ ನಾಯಿ ರೋಧಿಸುವುದನ್ನು ನೋಡಿ ಕುಟುಂಬ ಸದಸ್ಯರೂ ಕಣ್ಣೀರಿಟ್ಟರು.
Published by:Annappa Achari
First published: