ಮೈಸೂರು: ಬಿಜೆಪಿ (BJP) ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿಎಲ್ ಸಂತೋಷ್ (BL Santhosh) ದ್ವೇಷ ರಾಜಕಾರಣ ಮಾಡುತ್ತಿದ್ದಾರೆ. ಪಾಪ ಸಂತೋಷ್ ಅವರಿಗೆ ನಾನು ಸೋಲಬೇಕು ಎಂಬ ಉದ್ದೇಶವನ್ನು ಹೊಂದಿರಬೇಕು. ಏಕೆಂದರೆ ಅವರು ಪಕ್ಕಾ ಆರ್ಎಸ್ಎಸ್ನಿಂದ (RSS) ಬಂದವರು. ದ್ವೇಷದಿಂದ ಸೋಮಣ್ಣ (Somanna) ಅವರನ್ನು ಸ್ಪರ್ಧೆ ಮಾಡುವಂತೆ ಮಾಡಿದ್ದಾರೆ. ಆದರೆ ಜನರು ವೋಟ್ (Vote) ಕೊಡ್ತಾರೆ. ಸಂತೋಷ್ ಏನು ವೋಟರಾ? ರಾಜಕೀಯ ದ್ವೇಷದಿಂದ ರಾಜಕಾರಣ (Hate Politics) ಮಾಡಬಾರದು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರು ವಾಗ್ದಾಳಿ ನಡೆಸಿದ್ದಾರೆ.
ವರುಣಾ ಅಖಾಡದಲ್ಲಿ ಸಿದ್ದರಾಮಯ್ಯ ಅವರು ಇಂದಿನಿಂದ ಮತ ಬೇಟೆ ಶುರು ಮಾಡಿದ್ದು, ಲಿಂಗಾಯತ ಹಾಗೂ ಹಿಂದುಳಿದ ವರ್ಗದ ಮತ ಬ್ಯಾಂಕ್ ಮಾಜಿ ಸಿಎಂ ಕೈ ಹಾಕಿದ್ದಾರೆ. ಅತಿ ಹೆಚ್ಚು ಲಿಂಗಾಯತ ಸಮುದಾಯ ಇರುವ ಗ್ರಾಮಗಳಲ್ಲಿ ಸಿದ್ದರಾಮಯ್ಯ ಮತ ಬೇಟೆ ಮಾಡಿದ್ದು, ನಾಮಪತ್ರ ಸಲ್ಲಿಸಿದ ಮೂರನೇ ದಿನಕ್ಕೆ ವರುಣ ಪ್ರಚಾರ ಆರಂಭಿಸಿದ್ದಾರೆ.
ಇದನ್ನೂ ಓದಿ: Accident: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಭೀಕರ ಅಪಘಾತ; ಇಬ್ಬರು ಮಕ್ಕಳು ಸೇರಿ ಮೂವರ ಸಾವು
ವರುಣಾದ ಹಲವು ಗ್ರಾಮಗಳಿಗೆ ಭೇಟಿ ನೀಡಿದ ಬಳಿಕ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ ಅವರು, ಕ್ಷೇತ್ರದಲ್ಲಿ ಎರಡೂ ಬಾರಿ ಸ್ಪರ್ಧೆ ಮಾಡಿದ್ದೇನೆ. ಮತದಾರರು ಬದಲಾವಣೆ ಆಗಿಲ್ಲ, ಈ ಹಿಂದಿಗಿಂತ ಹೆಚ್ಚಿನ ಪ್ರೀತಿ ತೋರಿಸುತ್ತಿದ್ದಾರೆ. ವರುಣಾ ಹೋಬಳಿಯಲ್ಲಿ ನಾನು 1978ರಿಂದ ಸ್ಪರ್ಧೆ ಮಾಡಿದ್ದೇನೆ.
ನಾನು ವಿಶ್ವಾಸದಿಂದ ಇರುವಂತೆ ಜನರು ಮಾಡಿದ್ದಾರೆ. ಮೊದಲಿನಿಂದ ನನಗೆ ಇಲ್ಲಿ ಗೌರವಿಸುತ್ತಿದ್ದಾರೆ. ಇಂದು ಒಂದು ದಿನ ಕ್ಷೇತ್ರದಲ್ಲಿ ಪ್ರಚಾರ ಮಾಡುತ್ತೇನೆ. ಆ ಬಳಿಕ ಮತದಾನಕ್ಕೂ ಮುನ್ನ ಎರಡು ದಿನಗಳು ಮಾತ್ರ ಕ್ಷೇತ್ರದಲ್ಲಿ ಪ್ರಚಾರ ಮಾಡುತ್ತೇನೆ ಎಂದು ಸಿದ್ದರಾಮಯ್ಯ ವಿವರಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ