• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Pratap Simha: ಸೋಮಣ್ಣ ಪರ ಪ್ರಚಾರಕ್ಕೆ ತೆರಳಿದ್ದ ಸಂಸದ ಪ್ರತಾಪ್ ಸಿಂಹಗೆ ವರುಣಾ ಕ್ಷೇತ್ರದ ಮತದಾರರಿಂದ ಕ್ಲಾಸ್‌!

Pratap Simha: ಸೋಮಣ್ಣ ಪರ ಪ್ರಚಾರಕ್ಕೆ ತೆರಳಿದ್ದ ಸಂಸದ ಪ್ರತಾಪ್ ಸಿಂಹಗೆ ವರುಣಾ ಕ್ಷೇತ್ರದ ಮತದಾರರಿಂದ ಕ್ಲಾಸ್‌!

ಪ್ರತಾಪ್​ಸಿಂಹಗೆ ಸ್ಥಳೀಯರಿಂದ ತರಾಟೆ

ಪ್ರತಾಪ್​ಸಿಂಹಗೆ ಸ್ಥಳೀಯರಿಂದ ತರಾಟೆ

ವಿ ಸೋಮಣ್ಣ ಪರ ಭರ್ಜರಿಯಾಗಿ ಪ್ರಚಾರ ಮಾಡುತ್ತಿರುವ ಸಂಸದ ಪ್ರತಾಪ್ ಸಿಂಹ ಅವರಿಗೆ ವರುಣಾ ಕ್ಷೇತ್ರದ ಮತದಾರರು ಕ್ಲಾಸ್ ತೆಗೆದುಕೊಂಡಿದ್ದಾರೆ.

  • Share this:

ಮೈಸೂರು: ವರುಣಾ ಕ್ಷೇತ್ರ (Varuna Constituency) ಈ ಬಾರಿಯ ಚುನಾವಣೆಯಲ್ಲಿ ಹೈವೋಲ್ಟೇಜ್ ಕ್ಷೇತ್ರಗಳ ಪೈಕಿ ಮುಂಚೂಣಿಯಲ್ಲಿದೆ. ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಅವರ ವಿರುದ್ಧ ಸ್ಪರ್ಧಿಸೋಕೆ ಸಚಿವ ವಿ ಸೋಮಣ್ಣ (V Somanna) ಅವರನ್ನು ಬಿಜೆಪಿ ಹೈಕಮಾಂಡ್‌ ಕಣಕ್ಕಿಳಿಸಿದೆ.


ವರುಣಾದಲ್ಲಿ ಅಭ್ಯರ್ಥಿ ಘೋಷಣೆಯಾದಾಗಿನಿಂದ ವಿ ಸೋಮಣ್ಣ ಅವರು ವರುಣಾದಲ್ಲಿ ಪ್ರಚಾರ ಕಾರ್ಯ ನಡೆಸುತ್ತಿದ್ದಾರೆ. ಸೋಮಣ್ಣ ಪರ ಸಂಸದ ಪ್ರತಾಪ್ ಸಿಂಹ (Pratap Simha) ಕೂಡ ಭರ್ಜರಿಯಾಗಿ ಪ್ರಚಾರ ಮಾಡುತ್ತಿದ್ದಾರೆ. ಆದರೆ ಇಂದು ಮಾತ್ರ ಪ್ರತಾಪ್ ಸಿಂಹಗೆ ಮತದಾರರು ಸರಿಯಾಗಿ ಕ್ಲಾಸ್ ತೆಗೆದುಕೊಂಡಿದ್ದಾರೆ.


ಇದನ್ನೂ ಓದಿ: Siddaramaiah: 2017ರಲ್ಲಿ ಮಾಂಸ ತಿಂದು ಮೈಸೂರು ದಸರಾ ಅಂಬಾರಿಗೆ ಪೂಜೆ ಮಾಡಿದ್ರಾ ಸಿದ್ದರಾಮಯ್ಯ!?


ಪ್ರತಾಪ್ ಸಿಂಹಗೆ ಮತದಾರರ ಕ್ಲಾಸ್


ಹೌದು. ಇಂದು ಸಂಸದ ಪ್ರತಾಪ್ ಸಿಂಹ ಅವರು ವರುಣಾ ವಿಧಾನಸಭಾ ಕ್ಷೇತ್ರದಲ್ಲಿ ವಿ ಸೋಮಣ್ಣ ಪರ ಪ್ರಚಾರ ಕಾರ್ಯ ಹಮ್ಮಿಕೊಂಡಿದ್ದರು. ವಿ ಸೋಮಣ್ಣ ಅವರಿಗೆನೇ ಮೊನ್ನೆ ಲಲಿತಾದ್ರಿಪುರ ಗ್ರಾಮದಲ್ಲಿ ಗ್ರಾಮಸ್ಥರು ತರಾಟೆ ತೆಗೆದುಕೊಂಡಿದ್ದರು. ಇದರ ಬೆನ್ನಲ್ಲೇ ಇದೀಗ ಸಂಸದ ಪ್ರತಾಪ್ ಸಿಂಹ ಅವರನ್ನೂ ನಿಲ್ಲಿಸಿ ಮತದಾರರು ಕ್ಲಾಸ್ ತೆಗೆದುಕೊಂಡಿದ್ದಾರೆ.


ಸಿದ್ದರಾಮಯ್ಯ ವಿರುದ್ಧ ಪದೇ ಪದೇ ಮಾತನಾಡುತ್ತಿರುವ ಪ್ರತಾಪ್ ಸಿಂಹ ಅವರನ್ನು ನಿಲ್ಲಿಸಿದ ಗ್ರಾಮಸ್ಥರು, ಅಕ್ಕಿ ನಮ್ಮದು, ಚೀಲ ಮಾತ್ರ ಸಿದ್ದರಾಮಯ್ಯ ಅವ್ರದ್ದು ಅಂತೀರಾ, ಬಿಜೆಪಿಯವರು ಯಾಕೆ ಅಕ್ಕಿ ಕಡಿಮೆ ಕೊಡ್ತೀದ್ದೀರಾ? ಮೈಸೂರಿಗೆ ಸಿದ್ದರಾಮಯ್ಯ ಅವರ ಕೊಡುಗೆ ಏನು ಅಂತಾ ಪ್ರಶ್ನೆ ಮಾಡ್ತೀರಾ? ಸಿದ್ದರಾಮಯ್ಯ ಅವ್ರ ಹತ್ರ ಕುಳಿತುಕೊಳ್ಳಿ ಗೊತ್ತಾಗುತ್ತೆ ಎಂದು ತರಾಟೆಗೆ ತೆಗೆದುಕೊಂಡರು.


ಸಂವಿಧಾನ ಬದಲಿಸ್ತೀರಾ?


ಇಷ್ಟು ಮಾತ್ರವಲ್ಲದೇ, ನೀವು ಬಿಜೆಪಿಯವರು ಅಂಬೇಡ್ಕರ್ ಬರೆದ ಸಂವಿಧಾನವನ್ನೇ ಬದಲು ಮಾಡ್ತೀನಿ ಅಂತೀರಾ..? ಸಂಸದ ಶ್ರೀನಿವಾಸ್ ಪ್ರಸಾದ್ ಇದುವರೆಗೂ ಕ್ಷೇತ್ರಕ್ಕೆ ಬಂದೇ ಇಲ್ಲ. ಮಹದೇವಪ್ಪ ವಿರುದ್ಧ ಮಾತಾಡ್ತೀರಾ? ರಸ್ತೆಗಳ ರಾಜ ಅಂತೀರಾ, ಬರೀ ಸುಳ್ಳು ಹೇಳ್ತೀರಾ ನಿಮ್ಮ ಕೊಡುಗೆ ಏನ್ರೀ.? ಎಂದು ಪ್ರತಾಪ್ ಸಿಂ ಜನರಿಂದ ಕ್ಲಾಸ್ ತೆಗೆದುಕೊಂಡರು.


ಇದನ್ನೂ ಓದಿ: Bengaluru Mysuru Expressway: ಹೆಸರಿನ ಕುರಿತು ಹೊರಬಿತ್ತು ಮಹತ್ವದ ಸ್ಪಷ್ಟನೆ


ಮತದಾರರ ಆಕ್ರೋಶಕ್ಕೆ ಗುರಿಯಾದ ಪ್ರತಾಪ್ ಸಿಂಹ ಪ್ರತ್ಯುತ್ತರ ಕೊಡಲಾಗದೆ ಸುಮ್ಮನಾದರು. ಬಳಿಕ ಅಲ್ಲಿಂದ ತೆರಳಿ ಮತ್ತೊಂದು ಕಡೆ ಪ್ರಚಾರ ಕಾರ್ಯವನ್ನು ಮುಂದುವರೆಸಿದರು.

top videos


    ಮೊನ್ನೇ ವರುಣಾ ವಿಧಾನಸಭಾ ಕ್ಷೇತ್ರದಲ್ಲಿ ಬರುವ ಲಲಿತಾದ್ರಿಪುರ ಗ್ರಾಮದಲ್ಲಿ ಸೋಮಣ್ಣ ಹಾಗೂ ಪ್ರತಾಪ್ ಸಿಂಹ ಅವರಿಗೆ ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡಿದ್ದರು. ನೂರಾರು ಕೋಟಿ ರೂಪಾಯಿ ಕೊಟ್ಟಿದ್ದೇವೆ ಎನ್ನುತ್ತೀರಿ., ನಮಗೇನು ಮಾಡಿದ್ದೀರಾ? ನಮಗಿಲ್ಲಿ ಸಮುದಾಯ ಭವನವೂ ಇಲ್ಲ. ನೀವೇ ಉಸ್ತುವಾರಿ ಸಚಿವರಾಗಿದ್ದಾಗ ಏನು ಕೊಟ್ಟಿದ್ದೀರಿ? ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. ಈ ವೇಳೆ ವಿಡಿಯೋ ಮಾಡುತ್ತಿದ್ದ ವ್ಯಕ್ತಿಯನ್ನು ಪ್ರತಾಪ್ ಸಿಂಹ ಹಾಗೂ ಸೋಮಣ್ಣ ತೆಡೆದು ಮೊಬೈಲ್ ಕಿತ್ತುಕೊಳ್ಳಲು ಯತ್ನಿಸಿದ್ದರು. ಆದರೂ ಆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

    First published: