Kolara: ಸಿದ್ದರಾಮಯ್ಯ ಅವರು ಕುರಿ ಆದರೂ, ಟಗರು ತುಂಬಾ ಹುಷಾರ್ ಎಂದ ವರ್ತೂರು ಪ್ರಕಾಶ್

ಮಂಗಳೂರಿನಲ್ಲಿ ಫಾಸಿಲ್ ಕೊಲೆ ಕೇಸ್ ಸಂಬಂದ ಮಾದ್ಯಮಗಳು ಹೆಚ್ಚು ಪ್ರಚಾರ ನೀಡುತ್ತಿದೆ, ಫಾಸಿಲ್ ಕೊಲೆ ಕೇಸ್ ನಲ್ಲಿ ಹಿಂದೂಗಳ ಪಾತ್ರವಿಲ್ಲ, ಅವರ ಧರ್ಮದಲ್ಲೆ ಕೆಲ ಭಿನ್ನಾಭಿಪ್ರಾಯ ಉಂಟಾಗಿ ಗಲಾಟೆ ನಡೆದು ಕೊಲೆಯಾಗಿದೆ, ಮಾದ್ಯದವರು ಪ್ರವೀಣ್ ನೆಟ್ಟಾರು ರಂತಹ ಯುವಕರಿಗೆ ಹೆಚ್ಚು ಪ್ರಾತಿನಿಧ್ಯ ಕೊಡಬೇಕು ಎಂದರು.

ವರ್ತೂರು ಪ್ರಕಾಶ್

ವರ್ತೂರು ಪ್ರಕಾಶ್

  • Share this:
ಕೋಲಾರ(ಆ.02): ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೋಲಾರ (Kolara) ಕ್ಷೇತ್ರಕ್ಕೆ ಬರುತ್ತಾರೆ ಎಂದು ಸುಳ್ಳು ವಂದತಿ ಹರಡಿ   ಹಿಂದುಳಿದ ವರ್ಗದವರ ಮತ ಪಡೆಯಲು ಹಾಲಿ ಕಾಂಗ್ರೆಸ್ (Congress) ಶಾಸಕರು ಮುಂದಾಗಿದ್ದಾರೆಂದು, ಮಾಜಿ ಸಚಿವ ವರ್ತೂರು ಪ್ರಕಾಶ್ ಟೀಕಿಸಿದ್ದಾರೆ.  ಮಾಲೂರು, ಬಂಗಾರಪೇಟೆ ಶ್ರೀನಿವಾಸಪುರ ಶಾಸಕರು ಅವರೇ ತೋಡಿರುವ  ಗುಂಡಿಯಲ್ಲಿ  ರಾಜಕೀಯವಾಗಿ ಬೀಳಲಿದ್ದಾರೆ  ಎಂದು  ಮಾಜಿ ಸಚಿವ ವರ್ತೂರು ಪ್ರಕಾಶ್ ಟಾಂಗ್ ನೀಡಿದರು. ಮಾಲೂರು ಪಟ್ಟಣಕ್ಕೆ ಖಾಸಗಿ ಕಾರ್ಯಕ್ರಮ ಪ್ರಯುಕ್ತ ಆಗಮಿಸಿದ ಅವರು, ಮಾದ್ಯಮವರ ಜೊತೆಗೆ  ಮಾತನಾಡಿದರು,  ಕೋಲಾರ ವಿಧಾನಸಭಾ ಕ್ಷೇತ್ರದಿಂದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸ್ಪರ್ಧಿಸಲು ಬರುತ್ತಿದ್ದಾರೆ ಎಂದು ಕಾಂಗ್ರೆಸ್ ಶಾಸಕರು ಗೊಂದಲ ಸೃಷ್ಟಿ ಮಾಡುತ್ತಿದ್ದಾರೆ.

ಮಾಲೂರು ಶಾಸಕ ಕೆವೈ ನಂಜೇಗೌಡ, ರಮೇಶ್ ಕುಮಾರ್, ನಾರಾಯಣಸ್ವಾಮಿ ಗೊಂದಲ  ಹರಡಿಸುತ್ತಿದ್ದಾರೆ ಎಂದು ಕಿಡಿಕಾರಿದರು. ಕುರುಬ ಸಮುದಾಯದ ಮತಗಳನ್ನು ಪಡೆಯಲು ಈ ರೀತಿ ವದಂತಿ ಹಬ್ಬಿಸಲಾಗಿದೆ ಎಂದರು.

ಕೋಲಾರದಲ್ಲಿ ಸ್ಪರ್ಧೆ ಕುರಿತು ಸಿದ್ದರಾಮಯ್ಯ ಅವರು  ಕುರಿ ಆದರೂ, ಟಗರು ತುಂಬಾ ಹುಷಾರ್ ಆಗಿದೆ, ಕೋಲಾರದಲ್ಲಿ ಕುರುಬ ಸಮಾಜವನ್ನು ಒಡೆಯುವ ಕೆಲಸ ಎಂದು ಮಾಡುವುದಿಲ್ಲ, ಸಿದ್ದರಾಮಯ್ಯ ಸಹ ಯಾವ ಕ್ಷೇತ್ರದಲ್ಲಿ ಚುನಾವಣೆಗೆ ಸ್ಪರ್ಧಿಸುತ್ತೇನೆ ಎಂದು ಹೇಳಿಲ್ಲ ಎಂದರು.

ನಂಗೆ, ಮಂಜುನಾಥ್ ಗೌಡ ರಿಗೆ ಜಿಲ್ಲೆಯ ಜವಾಬ್ದಾರಿ ನೀಡಲಿ

ಕೋಲಾರ ಜಿಲ್ಲೆಯ ಜವಾಬ್ದಾರಿಯನ್ನು ಮಂಜುನಾಥಗೌಡ ಮತ್ತು ನನಗೆ ಬಿಜೆಪಿ ಸಂಘಟನಾ ಉಸ್ತುವಾರಿಯನ್ನು ನೀಡಿದರೆ ಜಿಲ್ಲೆಯಲ್ಲಿ ಕಾಂಗ್ರೆಸ್ ಹೆಸರಿಲ್ಲದಂತೆ ಮಾಡುತ್ತೇವೆ ಎಂದು ವರ್ತೂರು ಪ್ರಕಾಶ್ ಎಚ್ಚರಿಕೆ ನೀಡಿದರು,  ಕೆಜಿಎಫ್, ಕೋಲಾರ ಮಾಲೂರು, ಬಂಗಾರಪೇಟೆ, ಕ್ಷೇತ್ರಗಳಲ್ಲಿ ಬಿಜೆಪಿ ಉತ್ತಮವಾಗಿದ್ದು ಶ್ರೀನಿವಾಸಪುರ ಮತ್ತು ಮುಳಬಾಗಿಲುನಲ್ಲಿ ಪಕ್ಷ ಸಂಘಟನೆ ಇನ್ನೂ ಹೆಚ್ಚು ಅಗಬೇಕಿದೆ,  ವರಿಷ್ಠರ ಜೊತೆ ಚರ್ಚಿಸಿ ಕೋಲಾರ ಜಿಲ್ಲೆಯಲ್ಲಿ ಆರು ಕ್ಷೇತ್ರಗಳಲ್ಲಿ ಗೆಲ್ಲಿಸುವುದಾಗಿ  ಹೇಳಿದರು.

ಮಂಗಳೂರಿನ ಫಾಸಿಲ್ ಹತ್ಯೆ ಕೇಸ್ - ಕೊನೆಯಲ್ಲಿ ಹಿಂದೂಗಳ ಪಾತ್ರವಿಲ್ಲ.

ಮಂಗಳೂರಲ್ಲಿ ನಡೆದ ಫಾಜಿಲ್ ಹತ್ಯೆ ಕೇಸ್   ಕೋಮು ಘರ್ಷಣೆಯಿಂದ ನಡೆದಿಲ್ಲ ಎಂದು ವರ್ತೂರು ಪ್ರಕಾಶ್ ಹೇಳಿದ್ದಾರೆ, ಮುಸ್ಲಿಂ - ಮುಸ್ಲಿಂ ಹೊಡೆದಾಟದಲ್ಲಿ ಫಾಜಿಲ್ ಸಾವಾಗಿದೆ, ಆದರೆ ಮಾಧ್ಯಮದವರು ಇಂತದಕ್ಕೆಲ್ಲಾ ಹೆಚ್ಚು ಪ್ರಚಾರ ನೀಡಬಾರದು, ಮತ್ತೊಮ್ಮೆ ಪ್ರವೀಣ್ ನೆಟ್ಟಾರು ಕೊಲೆ ಮತ್ತೆ ಮರುಕಳಿಸಬಾರದು, ದೇಶದಲ್ಲಿ ಹಿಂದೂಗಳಿಗೆ ರಕ್ಷಣೆ ಇಲ್ಲದಂತಾಗಿದೆ.

ಇದನ್ನೂ ಓದಿ: Kodagu: ಸ್ಥಳೀಯರ ರಾಜಕೀಯ ಕುತಂತ್ರಕ್ಕೆ ಬೀದಿಗೆ ಬಿದ್ದ ಕುಟುಂಬ; ಮುಂದೇನು?

ಕಾಂಗ್ರೆಸ್ ನವರು ಮತಕ್ಕಾಗಿ ದೇಶ ಮಾರಿಕೊಳ್ಳುವ ಕೆಲಸ ಮಾಡಬಾರದು,  ಕೊಲೆಗಡುಕರನ್ನ ಕಾಂಗ್ರೆಸ್ ಪಕ್ಷ ಸಮರ್ಥನೆ ಮಾಡಿಕೊಳ್ಳಬಾರದು, ಹಾಗಾಗಿ ಎಲ್ಲಾ ಹಿಂದೂ ಯುವಕರು ಧೈರ್ಯದಿಂದ ಹೋರಾಡಬೇಕಿದೆ, ದೇಶ ರಕ್ಷಣೆಗೆ ಎಲ್ಲರು ಮುಂದಾಗಬೇಕಿದೆ ಇಲ್ಲವಾದರೆ ದೇಶದಲ್ಲಿನ ಹಿಂದೂಗಳ ಮೇಲಿನ ದಾಳಿಯನ್ನ ತಪ್ಪಿಸಲು ಸಾಧ್ಯವಿಲ್ಲ, ಆರ್.ಎಸ್.ಎಸ್, ಬಜರಂಗದಳ, ಬಿಜೆಪಿ ಯುವ ಮೋರ್ಚಾ ಸದಸ್ಯರ ಮೇಲೆ ದಾಳಿಯಾಗುತ್ತಿದೆ,  ಇದನ್ನ ಎದುರಿಸದೇ ಹೋದಲ್ಲಿ ಎಲ್ಲರ ಮೇಲೀ ದಾಳಿಗಳು ನಡೆಯುತ್ತದೆ, ಪೊಲೀಸ್ ಇಲಾಖೆಯಿಂದ ಎಲ್ಲವನ್ನು ತಡೆಯಲು ಸಾಧ್ಯವಿಲ್ಲ ಎಲ್ಲರು ಒಗ್ಗೂಡಿ ಹೋರಾಡೋಣ ಎಂದು ಕರೆ ನೀಡಿದರು.
Published by:Divya D
First published: