ಇಂದು ಸಂಜೆ 5.30ಕ್ಕೆ ವರ್ಷದ ಕನ್ನಡಿಗ ಕಾರ್ಯಕ್ರಮ; ಸಿನಿಮಾ-ರಾಜಕೀಯ ವ್ಯಕ್ತಿಗಳ ಸಮಾಗಮ

ಇಂದು ಸಂಜೆ 5.30ಕ್ಕೆ ನ್ಯೂಸ್​18 ಕನ್ನಡದಲ್ಲಿ ವರ್ಷದ ಕನ್ನಡಿಗ ಪ್ರಶಸ್ತಿ ಸಮಾರಂಭ ನಡೆಯುತ್ತಿದೆ. ನಟ ಪುನೀತ್​ ರಾಜ್​ಕುಮಾರ್​, ಗೋಲ್ಡನ್​ ಸ್ಟಾರ್​ ಗಣೇಶ್, ನಟಿ ಹರಿಪ್ರಿಯಾ ಸೇರ ಅನೇಕ ಗಣ್ಯರು ಸಮಾರಂಭದಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

news18-kannada
Updated:February 29, 2020, 12:29 PM IST
ಇಂದು ಸಂಜೆ 5.30ಕ್ಕೆ ವರ್ಷದ ಕನ್ನಡಿಗ ಕಾರ್ಯಕ್ರಮ; ಸಿನಿಮಾ-ರಾಜಕೀಯ ವ್ಯಕ್ತಿಗಳ ಸಮಾಗಮ
ವರ್ಷದ ಕನ್ನಡಿಗ ಕಾರ್ಯಕ್ರಮದ ಪೋಸ್ಟರ್​
  • Share this:
ಬೆಂಗಳೂರು (ಫೆ.29): ಮೈಸೂರ್​ ಸ್ಯಾಂಡಲ್ ಮತ್ತು ನ್ಯೂಸ್​18 ಕನ್ನಡ ಅರ್ಪಿಸುವ ವರ್ಷದ ಕನ್ನಡಿಗ 2020 ಕಾರ್ಯಕ್ರಮ ಇಂದು (ಶನಿವಾರ) ಸಂಜೆ 5.30ಕ್ಕೆ ನ್ಯೂಸ್​18 ಕನ್ನಡದಲ್ಲಿ ಪ್ರಸಾರವಾಗಲಿದೆ. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.

ನಟ ಪುನೀತ್​ ರಾಜ್​ಕುಮಾರ್​, ಗೋಲ್ಡನ್​ ಸ್ಟಾರ್​ ಗಣೇಶ್, ನಟಿ ಹರಿಪ್ರಿಯಾ, ನೀನಾಸಂ ಸತೀಶ್​, ಸನಾ ತಿಮ್ಮಯ್ಯ, ಡಾಲಿ ಧನಂಜಯ್​, ನಟಿ ಅದಿತಿ ಪ್ರಭುದೇವ, ಸಚಿವ ಗೋಪಾಲಯ್ಯ, ಎಸ್​ಟಿ ಸೂಮಶೇಖರ್​, ಡಿಸಿಎಂ ಅಶ್ವಥ್​ ನಾರಾಯಣ್​, ತೇಜಸ್ವಿ ಸೂರ್ಯ, ಸದಾನಂದ ಗೌಡ, ಜಯ ಮೃತ್ಯುಂಜಯ ಸ್ವಾಮೀಜಿ, ಮಾಳ್ವಿಕಾ ಅವಿನಾಶ್​, ಉದ್ಯಮಿ ಆಶಿಶ್​ ಬಲ್ಲಾಳ್​ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

ಕ್ರೀಡೆ, ಸಾಹಿತ್ಯ, ಸಮಾಜ ಸೇವೆ , ವಿಜ್ಞಾನ ಮತ್ತು ತಂತ್ರಜ್ಞಾನ, ವಾಣಿಜ್ಯ, ಕಲೆ ಮತ್ತು ಮನರಂಜನೆ, ಜೀವಮಾನ ಸಾಧನೆ, ವರ್ಷದ ಕನ್ನಡಿಗ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತಿದೆ.
First published:February 29, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ