Madikeri Mango: ಹತ್ತಕ್ಕೂ ಹೆಚ್ಚು ಬಗೆಯ ಸೈಸರ್ಗಿಕ ಮಾವಿನ ಹಣ್ಣುಗಳು! ಕೊಳ್ಳಲು ಮುಗಿಬಿದ್ದ ಜನ 

ಎರಡು ದಿನಗಳು ನಡೆಯಲಿರುವ ಮಾವು ಮೇಳದಲ್ಲಿ ಭರ್ಜರಿ ಮಾರಾಟ ನಡೆಯಲಿದ್ದು ಕೇವಲ ಒಂದೆರಡು ಬಗೆಯ ಹಣ್ಣುಗಳನ್ನಷ್ಟೇ ನೋಡಿರುವ ಕೊಡಗಿನ ಜನರು ಈ ಮೇಳದಲ್ಲಿ ಹತ್ತಕ್ಕೂ ಬಗೆಯ ಮಾವಿನ ಹಣ್ಣುಗಳನ್ನು ಕೊಂಡು ಸವಿ ನೋಡಬಹುದು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಕೊಡಗು(ಜೂ.04): ಇದು ಮಾವಿನ ಹಣ್ಣಿನ ಸೀಸನ್. ಎಲ್ಲಿ ನೋಡಿದರೆ ಮಾವಿನ ಹಣ್ಣುಗಳ ರಾಶಿ. ರಸಭರಿತ ವಿವಿಧ ತಳಿಯ ಮಾವಿನ ಹಣ್ಣಿನ (Mango) ಘಮ ದೂರದವರೆಗೂ ಬರುತ್ತದೆ. ಜನ ಹಣ್ಣುಗಳನ್ನು ಕೊಳ್ಳಲು ಮುಗಿಬೀಳುತ್ತಾರೆ. ವರೈಟಿ ಮಾವಿನ ಹಣ್ಣು ತಂದು ರುಚಿ ನೋಡುತ್ತಾರೆ. ನೋಡಿದರೆ ಕಚ್ಚಬೇಕೆನಿಸುವಷ್ಟು ಕೆಂಪಾದ ಹಣ್ಣು, ಎತ್ತ ತಿರುಗಿದರೂ ಕಣ್ಣುಕೋರೈಸುವ ಅಷ್ಟೇ ಅಲ್ಲ, ಗಮಗಮಿಸೋ ರಸಪೂರಿ ಮಾವಿನ ಹಣ್ಣು. ಇದು ಸದಾ ಪ್ರವಾಸಿಗರಿಂದ ತುಂಬಿ ತುಳುಕುವ ಪ್ರವಾಸಿ ಜಿಲ್ಲೆ, ಪ್ರವಾಸಿಗರ ಹಾಟ್ ಸ್ಪಾಟ್  ಮಡಿಕೇರಿಯಲ್ಲಿ ನಡೆಯುತ್ತಿರುವ ಮಾವು ಮೇಳದಲ್ಲಿನ (Mango Mela) ಜಲಕ್. ಹೌದು ಕೊಡಗು (Kodagu) ಜಿಲ್ಲಾ ಹಾಪ್‍ಕಾಮ್ಸ್, ಜಿಲ್ಲಾ ಪಂಚಾಯತ್ ಹಾಗೂ ತೋಟಗಾರಿಕೆ ಇಲಾಖೆ ವತಿಯಿಂದ ನಗರದ ಕೊಡಗು ಜಿಲ್ಲಾ ಹಾಪ್‍ಕಾಮ್ಸ್ ಆವರಣದಲ್ಲಿ ಮಾವು ಮೇಳ ನಡೆಯುತ್ತಿದೆ.

ಶುಕ್ರವಾರದಿಂದ ಆರಂಭವಾಗಿರುವ ಮಾವು ಮೇಳ ಭಾನುವಾರದವರೆಗೆ ಅಂದರೆ ಮೂರು ದಿನಗಳ ಕಾಲ ನಡೆಯುತ್ತಿದೆ. ಈ ಮಾವು ಮೇಳದಲ್ಲಿ ರಾಮನಗರ, ಮಂಡ್ಯ, ಮೈಸೂರು, ಮಾಗಡಿ ಭಾಗಗಳಿಂದ ಹತ್ತಾರು ವ್ಯಾಪಾರಿಗಳು ಮಾವು ಹಣ್ಣುಗಳ ಅಂಗಡಿಗಳ ತೆರೆದು ಹಣ್ಣು ಮಾರಾಟ ಮಾಡುತ್ತಿದ್ದಾರೆ.

ಕೊಡಗಿನಲ್ಲಿ ರುಚಿಯಾದ ಮಾವು ಸಿಗಲ್ಲ

ಕೊಡಗಿನಲ್ಲಿ ಶೀತದ ವಾತಾವರಣ ಇರುವುದರಿಂದ ಇಲ್ಲಿ ವಿವಿಧ ರೀತಿಯ ಮಾವುಗಳು ದೊರೆಯುವುದಿಲ್ಲ. ಹೆಚ್ಚೆಂದರೆ ಎರಡರಿಂದ ಮೂರು ವಿಧದ ಮಾವುಗಳು ಸಿಗುತ್ತವೆ. ಅವು ಕೂಡ ಹುಳಿಯಾಗಿರುತ್ತವೆ ಎನ್ನುವುದು ಎಲ್ಲರಿಗೂ ಗೊತ್ತೇ ಇದೆ. ಆದರೆ ಕೊಡಗು ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ನಡೆಯುತ್ತಿರುವ ಮಾವು ಮೇಳದಲ್ಲಿ ಬಾದಾಮಿ, ರಸಪುರಿ, ಸಿಂಧೂರ, ತೋತಾಪುರಿ, ದಾಶೇರಿ, ಮಲಗೋವ, ಮಲ್ಲಿಕಾ, ಬೈಗನ್‍ಪಲ್ಲಿ ಜೊತೆಗೆ ಕೊಡಗಿನದ್ದೇ ಕಾಡು ಮಾವುಗಳ ಮಾರಾಟ ನಡೆಯುತ್ತಿದೆ.

ಮಾವು ಪ್ರಿಯರು ಖುಷ್

ಹೀಗೆ ಹತ್ತಕ್ಕೂ ಹೆಚ್ಚು ರೀತಿಯ ಮಾವಿನ ಹಣ್ಣುಗಳು ಒಂದೆಡೆಯೇ ದೊರೆಯುತ್ತಿದ್ದು ಮೇಳದಲ್ಲಿ ಎಲ್ಲರನ್ನು ಸೆಳೆಯುತ್ತವೆ. ಹೀಗೆ ಬಗೆಬಗೆಯ ಮಾವಿನ ಹಣ್ಣುಗಳು ಒಂದೇ ಸೂರಿನಲ್ಲಿ ದೊರೆಯುತ್ತಿರುವುದರಿಂದ ಕೊಡಗಿನ ಮಾವು ಪ್ರಿಯರು ಬಹಳ ಖುಷಿಯಿಂದ ಮಾವು ಖರೀದಿ ಮಾಡುತ್ತಿದ್ದಾರೆ.

ಇನ್ನೂ ಎರಡು ದಿನಗಳು ನಡೆಯಲಿರುವ ಮಾವು ಮೇಳದಲ್ಲಿ ಭರ್ಜರಿ ಮಾರಾಟ ನಡೆಯಲಿದ್ದು ಕೇವಲ ಒಂದೆರಡು ಬಗೆಯ ಹಣ್ಣುಗಳನ್ನಷ್ಟೇ ನೋಡಿರುವ ಕೊಡಗಿನ ಜನರು ಈ ಮೇಳದಲ್ಲಿ ಹತ್ತಕ್ಕೂ ಬಗೆಯ ಮಾವಿನ ಹಣ್ಣುಗಳನ್ನು ಕೊಂಡು ಸವಿ ನೋಡಬಹುದು.

ಇದನ್ನೂ ಓದಿ: School Student: ಮಳೆಗಾಲದಲ್ಲಿ ಮಲೆನಾಡ ಮಕ್ಕಳ ಫಜೀತಿ, ಬಿಸಿಲಲ್ಲಿ ಪುಸ್ತಕ ಒಣಗಿಸಬೇಕಾದ ಪರಿಸ್ಥಿತಿ!

ಈ ಸಂದರ್ಭ ಮಾತನಾಡಿದ ಮದ್ದೂರಿನ ವ್ಯಾಪಾರಿ ಪದ್ಮಕಲಾ ಅವರು ಮಾರುಕಟ್ಟೆಗಳಲ್ಲಿ ಮಾರಾಟವಾಗುವ ಮಾವುಗಳಿಗೆ ಸಾಮಾನ್ಯವಾಗಿ ಪೌಡರ್ ಹಾಕಿ ಹಣ್ಣು ಮಾಡಲಾಗುತ್ತದೆ. ಜೊತೆಗೆ ತಾಜಾ ಹಣ್ಣುಗಳು ಸಿಗುವುದು ಅಪರೂಪ. ಆದರೆ ಈ ಮಾವು ಮೇಳದಲ್ಲಿ ನೈಸರ್ಗಿಕವಾಗಿ ಹಣ್ಣು ಮಾಡಿದ ಮಾವಿನ ಹಣ್ಣುಗಳನ್ನು ಮಾತ್ರವೇ ಮಾರಾಟ ಮಾಡಲಾಗುತ್ತಿದೆ. ಹೀಗಾಗಿ ಕೊಡಗಿನ ಜನರು ತಮಗೆ ಇಷ್ಟವಾದ ಮಾವಿನ ಹಣ್ಣುಗಳನ್ನು ಖರೀದಿಸಬಹುದು ಎಂದಿದ್ದಾರೆ.

ಮೇಳ ಆರಂಭದ ಮೊದಲ ದಿನವೇ ಖುಷಿಯಿಂದಲೇ ಹಣ್ಣುಗಳನ್ನು ಖರೀದಿಸಿದ ಗ್ರಾಹಕರಾದ ಗೀತಾ ಅವರು ಕೊಡಗಿನಲ್ಲಿ ಇಷ್ಟೊಂದು ವೆರೈಟಿ ಮಾವುಗಳು ಸಿಗುವುದಿಲ್ಲ. ಇದೇ ಮೊದಲ ಬಾರಿಗೆ ಕೊಡಗಿನಲ್ಲಿ ನಡೆಯುತ್ತಿರುವ ಮಾವು ಮೇಳದಲ್ಲಿ ತರಾವರಿ ತಳಿಯ ಹಣ್ಣುಗಳಿವೆ.

ಇದನ್ನೂ ಓದಿ: ರಸ್ತೆಗುಂಡಿ ಮುಚ್ಚೋತನಕ ಬಿಡಲ್ಲ! ತಡರಾತ್ರಿ ಸಿಟಿ ರೌಂಡ್ಸ್ ಹಾಕಿದ BBMP ಕಮಿಷನರ್!

ಇಲ್ಲಿಯೇ ರುಚಿಯನ್ನು ನೋಡಿದ್ದು ತುಂಬಾ ಸಿಹಿಯಾಗಿ, ರಸಭರಿತವಾಗಿವೆ. ಯಾವುದೇ ಹಣ್ಣು ಶೀತವಲ್ಲ, ಎಲ್ಲರೂ ಮಾವು ಖರೀದಿಸಿ ಅವುಗಳನ್ನು ಸವಿಯಿರಿ ಎಂದಿರುವ ಅವರು ನಾನು ಖರೀದಿಸುವುದಕ್ಕೂ ತುಂಬಾ ಖಷಿಯಾಗುತ್ತಿದೆ ಎಂದಿದ್ದಾರೆ.
Published by:Divya D
First published: