ಬೆಂಗಳೂರು (ಮೇ 27): ನಮ್ಮ ಮೆಟ್ರೋ (Namma Metro) ನೇರಳೆ ಮಾರ್ಗದಲ್ಲಿ ಒಂದು ದಿನದ ಮೆಟ್ರೋ ಸೇವೆ ಸ್ಥಗಿತಗೊಳ್ಳಲಿದ ಎಂದು BMRCL ಪ್ರಕಟಣೆಯಲ್ಲಿ ತಿಳಿಸಿದೆ. ನೇರಳೆ ಮಾರ್ಗದಲ್ಲಿ (Purple Line) ಮೆಟ್ರೋ ನಿಲ್ದಾಣಗಳ ಕಾಮಗಾರಿ ಹಿನ್ನೆಲೆ ಒಂದು ದಿನದ ಮಟ್ಟಿಗೆ ಮೆಟ್ರೋ ಸೇವೆ ಸ್ಥಗಿತಗೊಳಿಸಲಾಗುತ್ತೆ. 28.05.2022 ರಂದು ರಾತ್ರಿ 09.30 ಗಂಟೆಯಿಂದ ಎಂ.ಜಿ. ರಸ್ತೆ (MG Road) ಮತ್ತು ಟ್ರಿನಿಟಿ ಮೆಟ್ರೋ ನಿಲ್ದಾಣಗಳ ಕಾಮಗಾರಿ ಹಿನ್ನೆಲೆ ಮೆಟ್ರೋ ಸಂಚಾರ ಬಂದ್ (Traffic Band) ಆಗಲಿದೆ. ಎಂ.ಜಿ. ರಸ್ತೆ ಮೆಟ್ರೋ ನಿಲ್ದಾಣದಿಂದ ಬೈಯಪ್ಪನಹಳ್ಳಿ ಮೆಟ್ರೋ ನಿಲ್ದಾಣದವರೆಗೆ ವಾಣಿಜ್ಯ ಸೇವೆ ಸ್ಥಗಿತಗೊಳ್ಳಲಿದೆ. ಈ ಅವಧಿಯಲ್ಲಿ ಮೆಟ್ರೋ ಸೇವೆಯು ಎಂ.ಜಿ. ರಸ್ತೆ ಮತ್ತು ಕಂಗೇರಿ ಮಟ್ರೋ ನಿಲ್ದಾಣಗಳ ನಡುವೆ ಮಾತ್ರ ಸೇವೆ ಲಭ್ಯವಿರುತ್ತದೆ.
ಕಾಮಗಾರಿ ಹಿನ್ನೆಲೆ ಸಂಚಾರ ಸ್ಥಗಿತ
ಕೆಂಗೇರಿ ಮೆಟ್ರೋ ನಿಲ್ದಾಣದಿಂದ ಬೈಯಪ್ಪನಹಳ್ಳಿ ಕಡೆಗೆ ಕೊನೆಯ ರೈಲು ರಾತ್ರಿ 8.40 ಗಂಟೆಗೆ ಹೊರಡಲಿದೆ ಮತ್ತು ಬೈಯಪ್ಪನಹಳ್ಳಿ ಮೆಟ್ರೋ ನಿಲ್ದಾಣದಿಂದ ಕೆಂಗೇರಿ ಕಡೆಗೆ ರಾತ್ರಿ 9,10 ಗಂಟೆಗೆ ಹೊರಡುತ್ತದೆ. ಬೈಯಪ್ಪನಹಳ್ಳಿಗೆ ಕೊನೆಯ ರೈಲು ಕೆಂಪೇಗೌಡ ಮೆಟ್ರೋ ನಿಲ್ದಾಣದಿಂದ ರಾತ್ರಿ 9.10 ಗಂಟೆಗೆ ಹೊರಡುತ್ತದೆ. ಭಾನುವಾರದಂದು ನೇರಳೆ ಮಾರ್ಗದಲ್ಲಿ ಬೆಳಿಗ್ಗೆ 7.00 ಗಂಟೆಯಿಂದ ಮೆಟ್ರೋ ಸೇವೆ ಪುನರಾರಂಭಿಸಲಾಗುತ್ತದೆ. ಹಸಿರು ಮಾರ್ಗದ ಮೆಟ್ರೋ ರೈಲು ಸೇವೆಯಲ್ಲಿ ಯಾವುದೇ ಬದಲಾವಣೆ ಇಲ್ಲ
ಮೆಟ್ರೋ ಪ್ರಯಾಣಿಕರಿಗೆ 5 ದಿನದ ಪಾಸ್
ಬೆಂಗಳೂರು: ಟ್ರಾಫಿಕ್ (Traffic) ಕಿರಿಕಿರಿಯಿಂದ ತಪ್ಪಿಸಿ ಸುಖಕರ ಪ್ರಯಾಣದಿಂದ ಜನರ ಮನಗೆದ್ದಿರೋ ನಮ್ಮ ಮೆಟ್ರೋ (Namma Metro), ಇದೀಗ ಪ್ರಯಾಣಿಕರಿಗಾಗಿ ಮತ್ತೊಂದು ಸಿಹಿಸುದ್ದಿ ನೀಡಿದೆ. ಇತ್ತೀಚೆಗಷ್ಟೆ 1 ಹಾಗೂ 3 ದಿನಗಳ ಪಾಸ್ ಜಾರಿಗೆ ತಂದಿದ್ದ BMRCL, ಇದೀಗ 5 ದಿನಗಳ ಪಾಸ್ನನ್ನು ಜಾರಿಗೆ ತಂದಿದೆ. ಪ್ರಯಾಣಿಕರಿಗೆ ಮತ್ತಷ್ಟು ಅನುಕೂಲವಾಗಲೆಂದು ಈ ಪಾಸ್ (Pass) ಬಿಡುಗಡೆ ಮಾಡಿರೋದಾಗಿ BMRCL ತಿಳಿಸಿದೆ.
ಇದನ್ನೂ ಓದಿ: PM Narendra Modi: ಶಾಸಕ ಜಿ.ಟಿ.ದೇವೇಗೌಡ ಮೊಮ್ಮಗಳು ನಿಧನ ಹಿನ್ನೆಲೆ: ಪತ್ರ ಬರೆದು ಕುಟುಂಬಸ್ಥರಿಗೆ ಪ್ರಧಾನಿ ಮೋದಿ ಸಾಂತ್ವನ
5 ದಿನದ ಮೆಟ್ರೋ ಪಾಸ್
1 ದಿನ ಹಾಗೂ 3 ದಿನದ ಮೆಟ್ರೋ ಪಾಸ್ಗಳನ್ನು ಈ ಹಿಂದೆ ಜಾರಿಗೆ ತರಲಾಗಿತ್ತು. ಇದರ ಜೊತೆ ನಿಗಮವು ದಿನಾಂಕ 23-05-2022 ರಿಂದ ಜಾರಿಗೆ ಬರುವಂತೆ ಮತ್ತೊಂದು ರೀತಿಯ ಪಾಸ್ ಎಂದರೆ 5 ದಿನದ ಪಾಸ್ ಅನ್ನು ಪರಿಚಯಿಸುತ್ತಿದೆ. 5 ದಿನದ ಪಾಸ್ ಬೆಲೆ 550 ರೂ ಇರಲಿದೆ. ಮರುಪಾವತಿಸಬಹುದಾದ ಸ್ಮಾರ್ಟ್ ಕಾರ್ಡ್ ಭದ್ರತಾ ಠೇವಣಿ ರೂ 50 ರೂ ಇರಲಿದೆ.
ಎಲ್ಲಾ ಮೆಟ್ರೋ ನಿಲ್ದಾಣಗಳಲ್ಲಿ ಲಭ್ಯ
ಈ ಸ್ಮಾರ್ಟ್ ಕಾರ್ಡ್ನನ್ನು ಯಾವುದೇ ಮೆಟ್ರೋ ನಿಲ್ದಾಣಗಳಲ್ಲಿ ಖರೀದಿಸಬಹುದಾಗಿದೆ. ಪ್ರಯಾಣಿಕರು ಖರೀದಿಸಿದ ದಿನಾಂಕದಿಂದ 5 ದಿನಗಳವರೆಗೆ ಯಾವುದೇ ಮೆಟ್ರೋ ನಿಲ್ದಾಣದಿಂದ ಯಾವುದೇ ನಿಲ್ದಾಣಕ್ಕೆ ಅನಿಯಮಿತವಾಗಿ ಪ್ರಯಾಣಿಸಬಹುದಾಗಿದೆ.
ಬೈಯಪ್ಪನ ಹಳ್ಳಿಯಿಂದ ವೈಟ್ಫೀಲ್ಡ್ಗೆ ಶೀಘ್ರವೇ ಮೆಟ್ರೋ ಸಂಚಾರ
ಬೆಂಗಳೂರಿನಲ್ಲಿ ನಿತ್ಯ ಸಾವಿರಾರು ಪ್ರಯಾಣಿಕರಿಗೆ ಟ್ರಾಫಿಕ್ ಕಿರಿಕಿರಿಯಿಂದ ಮುಕ್ತಿ ನೀಡಿರುವ ನಮ್ಮ ಮೆಟ್ರೋ ವಿಸ್ತರಣೆ ಕಾರ್ಯ ಮತ್ತಷ್ಟು ಚುರುಕುಗೊಂಡಿದೆ. ಹಲವು ಐಟಿ-ಬಿಟಿ ಕಂಪನಿಗಳನ್ನು ಹೊಂದಿರುವ ವೈಟ್‌ಫೀಲ್ಡ್ ಗೂ ಶೀಘ್ರವೇ ಮೆಟ್ರೋ ವಿಸ್ತರಣೆ ಆಗಲಿದೆ. ಮೆಟ್ರೋ ಪ್ರಯಾಣಿಕರಿಗೆ ಸಂಚಾರ ಮತ್ತಷ್ಟು ಸರಳವಾಗಲಿದೆ. 2 ವರ್ಷಗಳಿಂದ ವಿಳಂಬಗೊಂಡಿದ್ದ ಮೆಟ್ರೋ ನೇರಳೆ ಮಾರ್ಗದ ಬೈಯಪ್ಪನಹಳ್ಳಿ ಹಾಗೂ ವೈಟ್‌ಫೀಲ್ಡ್ ನಡುವಿನ ಕಾಮಗಾರಿಯನ್ನು BMRCL ಇದೀಗ ಚುರುಕುಗೊಳಿಸಿದೆ. ಮುಂದಿನ ವರ್ಷ ಮಾರ್ಚ್ನಲ್ಲಿ ಬೈಯಪ್ಪನಹಳ್ಳಿಯಿಂದ ವೈಟ್‌ಫೀಲ್ಡ್ ವರೆಗೂ ಮೆಟ್ರೋ ಸಂಚಾರ ಪಾರಂಭವಾಗಲಿದೆ.
ಇದನ್ನೂ ಓದಿ; Belagavi: ಮತ್ತೆ ಎಂಇಎಸ್ ಪುಂಡಾಟ; ಕನ್ನಡ ಹಾಡು ಹಾಕಿದ್ದಕ್ಕೆ ಬೈಕ್ಗೆ ಬೆಂಕಿ ಹಚ್ಚಿ ಹಲ್ಲೆ
ಮತ್ತಷ್ಟು ಚುರುಕುಗೊಂಡ BMRCL ಕಾಮಗಾರಿ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ