Vandita Sharma: ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಯಾಗಿ ವಂದಿತಾ ಶರ್ಮಾ ನೇಮಕ: ಅಧಿಕಾರ ಸ್ವೀಕರಿಸುತ್ತಿದ್ದಂತೆ ದಾಖಲೆ

ಮೂಲತಃ ಪಂಜಾಬ್ ಮೂಲದವರಾಗಿರುವ ವಂದಿತಾ ಶರ್ಮಾ ಅವರು, 1986 ಬ್ಯಾಚ್ ನ ಅಧಿಕಾರಿಯಾಗಿದ್ದಾರೆ. ಕೋವಿಡ್ ಸಂದರ್ಭದಲ್ಲಿ ಲಸಿಕೆ ವಿತರಣೆಗೆ ಸಂಬಂಧಿಸಿದ ನೋಡಲ್ ಅಧಿಕಾರಿಯಾಗಿದ್ದರು.

ವಂದಿತಾ ಶರ್ಮಾ

ವಂದಿತಾ ಶರ್ಮಾ

  • Share this:
ರಾಜ್ಯ ಸರ್ಕಾರದ ಹಾಲಿ ಮುಖ್ಯ ಕಾರ್ಯದರ್ಶಿಯಾಗಿರುವ (Karnataka Chief Secretary) ಪಿ.ರವಿಕುಮಾರ್ (P Ravikumar) ಮೇ 31ರಂದು ನಿವೃತ್ತರಾಗಲಿದ್ದಾರೆ. ಈ ಹಿನ್ನೆಲೆ ರಾಜ್ಯ ಸರ್ಕಾರದ ಅಭಿವೃದ್ಧಿ ಆಯುಕ್ತೆ ಹಾಗೂ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿರುವ ವಂದಿತಾ ಶರ್ಮಾ (IAS Officer Vandita Sharma) ಅವರನ್ನು ನೂತನ ಮುಖ್ಯ ಕಾರ್ಯದರ್ಶಿಯನ್ನಾಗಿ ನೇಮಿಸಿ ಆದೇಶ ಹೊರಡಿಸಲಾಗಿದೆ. ವಂದಿತಾ ಶರ್ಮಾ ಅವರ ಅಧಿಕಾರದ ಅವಧಿ 2023 ನವೆಂಬರ್ ವರೆಗೆ ಇರಲಿದೆ. ಈ ಹುದ್ದೆಗೇರಿದ ನಾಲ್ಕನೇ ಮಹಿಳೆ ಇವರಾಗಿದ್ದಾರೆ. ಈ ಹಿಂದೆ 200ರಲ್ಲಿ ತೆರೇಸಾ ಭಟ್ಟಾಚಾರ್ಯ (Theresa Bhattacharya), 2006ರಲ್ಲಿ ಮಾಲತಿ ದಾಸ್ (Malatidas) ಮತ್ತು 2017ರಲ್ಲಿ ರತ್ನಪ್ರಭಾ (Ratnaprabha) ಅವರು ಮುಖ್ಯ ಕಾರ್ಯದರ್ಶಿಗಳಾಗಿ ಸೇವೆ ಸಲ್ಲಿಸಿದ್ದಾರೆ.

ಮೂಲತಃ ಪಂಜಾಬ್ ಮೂಲದವರಾಗಿರುವ ವಂದಿತಾ ಶರ್ಮಾ ಅವರು, 1986 ಬ್ಯಾಚ್ ನ ಅಧಿಕಾರಿಯಾಗಿದ್ದಾರೆ. ಕೋವಿಡ್ ಸಂದರ್ಭದಲ್ಲಿ ಲಸಿಕೆ ವಿತರಣೆಗೆ ಸಂಬಂಧಿಸಿದ ನೋಡಲ್ ಅಧಿಕಾರಿಯಾಗಿದ್ದರು. ಕೇಂದ್ರ ಸರ್ಕಾರದ ಬಾಹ್ಯಾಕಾಶ ಇಲಾಖೆಯಲ್ಲಿಯೂ ವಂದಿತಾ ಶರ್ಮಾ ಸೇವೆ ಸಲ್ಲಿಸಿದ್ದಾರೆ. ರಾಜ್ಯ ಐಎಎಸ್ ಅಧಿಕಾರಿಗಳ ಸಂಘದ ಅಧ್ಯಕ್ಷೆಯಾಗಿದ್ದಾರೆ.

ಪತಿ ಪ್ರಸಾದ್ ಸಹ ಐಎಎಸ್ ಅಧಿಕಾರಿ

ಇನ್ನೂ ವಂದಿತಾ ಶರ್ಮಾ ಅವರ ಪತಿ ಐಎಸ್ಎನ್ ಪ್ರಸಾದ್ ಸಹ ಐಎಎಸ್ ಅಧಿಕಾರಿಯಾಗಿದ್ದಾರೆ. ರಾಜ್ಯದ ಹಣಕಾಸು ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಈಗ ಪತ್ನಿ ವಂದಿತಾ ಶರ್ಮಾ ಕೆಳಗೆ ಕೆಲಸ ಮಾಡೋದು ವಿಶೇಷ.

ಇದನ್ನೂ ಓದಿ:  Bengaluru: ಲಾಲ್​ಬಾಗ್​ನಲ್ಲಿ ಮಾವು-ಹಲಸಿನ ಮೇಳ; ವೆರೈಟಿ ಮ್ಯಾಂಗೋ ಕೊಳ್ಳಲು ಮುಗಿಬಿದ್ದ ಜನ

9 ಅಧಿಕಾರಿಗಳ ಶಾರ್ಟ್ ಲಿಸ್ಟ್

ಮೇ 31ರಂದು ನಿವೃತ್ತಿಯಾಗುತ್ತಿರುವ ರವಿಕುಮಾರ್ ಅವರ ಸ್ಥಾನಕ್ಕೆ ಸರ್ಕಾರ 9 ಮಂದಿಯ ಹೆಸರನ್ನು ಶಾರ್ಟ್ ಲಿಸ್ಟ್ ಮಾಡಿತ್ತು. ಈ ಪಟ್ಟಿಯಲ್ಲಿ ವಂದಿತಾ ಶರ್ಮಾ ಅವರ ಹೆಸರನ್ನು ಅಂತಿಮಗೊಳಿಸಿದೆ. ಈ ಪಟ್ಟಿಯಲ್ಲಿ ವಂದಿತಾ ಶರ್ಮಾ ಅವರ ಪತಿ ಐಎಸ್‌ಎನ್‌ ಪ್ರಸಾದ್‌, ಶಾಲಿನಿ ರಜನೀಶ್‌, ಇವಿ ರಮಣ ರೆಡ್ಡಿ, ಗೌರವ್‌ ಗುಪ್ತಾ, ರಜನೀಶ್‌ ಗೋಯಲ್‌, ಜಿ ಕುಮಾರ್‌ ನಾಯ್ಕ್, ಅಜಯ್‌ ಸೇಠ್‌ ಹಾಗೂ ರಾಕೇಶ್‌ ಸಿಂಗ್‌ ಹೆಸರುಗಳಿದ್ದವು ಎಂದು ವರದಿಯಾಗಿದೆ.

2017ರಲ್ಲಿ ರತ್ನಪ್ರಭಾ ಅವರ ಅಧಿಕಾರವಧಿಯಲ್ಲಿ ರಾಜ್ಯ ಪೊಲೀಸ್ ಮಹಾ ನಿರ್ದೇಶಕರಾಗಿ ನೀಲಮಣಿ ಎನ್ ರಾಜು ಅಧಿಕಾರ ಸ್ವೀಕರಿಸಿದ್ದರು. ರಾಜ್ಯದ ಎರಡು ಪ್ರಮುಖ ಎರಡು ಹುದ್ದೆಗಳಲ್ಲಿ ಮಹಿಳೆಯರಿದ್ದರು ಎಂಬ ಅಂಶ ವಿಶೇಷವಾಗಿತ್ತು.

ಶಕ್ತಿ ಸೌಧದಲ್ಲಿ ಮೂವರು ಮಹಿಳಾಧಿಕಾರಿಗಳು

ಈಗ ವಂದಿತಾ ಶರ್ಮಾ ಅಧಿಕಾರ ಸ್ವೀಕರಿಸುತ್ತಿದ್ದಂತೆ ಹೊಸ ದಾಖಲೆಯೊಂದು ದಾಖಲಾಗಲಿದೆ. ರಾಜ್ಯದ ಶಕ್ತಿ ಕೇಂದ್ರ ವಿಧಾನಸೌಧದಲ್ಲಿರುವ ಮೂರು ಪ್ರಮುಖ ಹುದ್ದೆಗಳನ್ನು ಮಹಿಳೆಯರು ಅಲಂಕರಿಸಿದಂತಾಗುತ್ತದೆ. ಸದ್ಯ ರಾಜ್ಯ ವಿಧಾನಸಭೆ  ಕಾರ್ಯದರ್ಶಿ ಎಂ.ಕೆ.ವಿಶಾಲಕ್ಷಿ ಮತ್ತು ರಾಜ್ಯ ವಿಧಾನ ಪರಿಷತ್ ಕಾರ್ಯದರ್ಶಿಯಾಗಿ ಕೆ.ಆರ್.ಮಹಾಲಕ್ಷ್ಮಿ ಸೇವೆ ಸಲ್ಲಿಸುತ್ತಿದ್ದಾರೆ.

BSYಗೆ ಪತ್ರ ಬರೆದಿದ್ರು!

ಕೋವಿಡ್ ಸಂದರ್ಭದಲ್ಲಿ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಬೆಡ್ ಬ್ಲಾಕಿಂಗ್ ಪ್ರಕರಣದಲ್ಲಿ ಶಾಸಕ ಸತೀಶ್ ರೆಡ್ಡಿ ಅವರ ಬೆಂಬಲಿಗರು ಐಎಎಸ್ ಅಧಿಕಾರಿ ಯಶವಂತ್ ಅವರ ಮೇಲೆ ಹಲ್ಲೆಗೆ ಪ್ರಯತ್ನಿಸಿದ್ದರು. ಈ ಸಂಬಂಧ ಅಂದಿನ ಮುಖ್ಯಮಂತ್ರಿಗಳಾಗಿದ್ದ ಬಿ.ಎಸ್.ಯಡಿಯೂರಪ್ಪ ಅವರಿಗೆ ಪತ್ರ ಬರೆದು ಘಟನೆಯನ್ನು ತೀವ್ರವಾಗಿ ಖಂಡಿಸಿದ್ದರು.

ಇದನ್ನೂ ಓದಿ:  Siddaramaiah Letter: ದಾವೋಸ್ ಪ್ರವಾಸದಿಂದ ಬಂದ ಸಿಎಂ ಬೊಮ್ಮಾಯಿಗೆ ಪತ್ರ ಬರೆದು ಶಾಕ್​ ಕೊಟ್ಟ ಸಿದ್ದು

ಶಾಸಕ ಜಿ ಟಿ ದೇವೇಗೌಡ ಮೊಮ್ಮಗಳು ನಿಧನ: ಪ್ರಧಾನಿ ಮೋದಿ ಸಾಂತ್ವನ

ಶಾಸಕ ಜಿ ಟಿ ದೇವೇಗೌಡರ (G.T Deve Gowda) ಮೊಮ್ಮಗಳು (Grand Daughter) ಮೃತಪಟ್ಟ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಜಿ.ಟಿ ದೇವೇಗೌಡ ಅವರ ಕುಟುಂಬಕ್ಕೆ ಪತ್ರ (Letter) ಬರೆದು ಸಾಂತ್ವನ ಹೇಳಿದ್ದಾರೆ. ಜಿ.ಟಿ. ದೇವೇಗೌಡ ಅವರೇ, ನಿಮ್ಮ ಮೊಮ್ಮಗಳಾದ ಗೌರಿ (Gowri) ನಿಧನದ ಬಗ್ಗೆ ತಿಳಿದು ನನಗೆ ಆಘಾತವಾಗಿದೆ ಮತ್ತು ತೀವ್ರ ನೋವಾಗಿದೆ. ಇಷ್ಟು ಎಳೆ ವಯಸ್ಸಿನಲ್ಲಿ ಅವಳು ಇಹಲೋಕ ತ್ಯಜಿಸಿದ್ದಾಳೆ ಎಂದರೆ ನಂಬುವುದು ಅಸಾಧ್ಯ. ತೀವ್ರ ದುಃಖದ ಈ ಸಮಯದಲ್ಲಿ ನನ್ನ ಹೃತ್ಪೂರ್ವಕ ಸಂತಾಪಗಳು ಎಂದಿದ್ದಾರೆ
Published by:Mahmadrafik K
First published: