• Home
 • »
 • News
 • »
 • state
 • »
 • Vande Bharat Express: ಮೈಸೂರು-ಬೆಂಗಳೂರು ಟಿಕೆಟ್ ದರ ದುಬಾರಿ! ರೈಲು ಹೊರಡುವ ಸಮಯ ಯಾವುದ್ರೀ?

Vande Bharat Express: ಮೈಸೂರು-ಬೆಂಗಳೂರು ಟಿಕೆಟ್ ದರ ದುಬಾರಿ! ರೈಲು ಹೊರಡುವ ಸಮಯ ಯಾವುದ್ರೀ?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ದಕ್ಷಿಣ ಭಾರತದ ಮೊದಲ ವಂದೇ ಭಾರತ್ ರೈಲು ಚೆನ್ನೈ ಮತ್ತು ಬೆಂಗಳೂರು ಮತ್ತು ಮೈಸೂರು ನಡುವೆ ಸಂಚಾರ ಮಾಡಲಿದೆ. ಇದೀಗ ವಂದೇ ಭಾರತ್ ರೈಲಿನ ದರ ಬಿಡುಗಡೆ ಮಾಡಲಾಗಿದೆ. ಇನ್ನು ಈಗಾಗಲೇ ಸಂಚಾರ ಮಾಡುತ್ತಿರುವ ಶತಾಬ್ದಿ ರೈಲಿಗಿಂತ ವಂದೇ ಭಾರತ್ ರೈಲಿನ ದರ ಭಿನ್ನವಾಗಿದೆ.

 • News18 Kannada
 • Last Updated :
 • Mysore, India
 • Share this:

  ಬೆಂಗಳೂರು: ದೇಶಕ್ಕೆ (Country) ಈಗ ಐದನೇ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು (Vande Bharat Express Train)  ದೊರೆತಿದೆ. ಈ ರೈಲು ಚೆನ್ನೈನಿಂದ ಬೆಂಗಳೂರಿನ ಮೂಲಕ ಮೈಸೂರಿಗೆ ಸಂಚಾರ ಮಾಡಲಿದೆ. ಇದು ದಕ್ಷಿಣ ಭಾರತದ ಮೊದಲ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಆಗಿದೆ. ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲಿಗೆ ಪ್ರಧಾನಿ ಮೋದಿ, ಬೆಂಗಳೂರು ನಗರದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಲ್ಲಿ ಶುಕ್ರವಾರ ಹಸಿರು ನಿಶಾನೆ ತೋರಿದ್ರು. ಕರ್ನಾಟಕ ಪ್ರವಾಸದಲ್ಲಿದ್ದ ಪ್ರಧಾನಿ ಮೋದಿ, ಹಲವು ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ಸಹ ನೀಡಿದ್ರು. ಈಗಾಗಲೇ ದಕ್ಷಿಣ ಭಾರತದ ಮೊದಲ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ವೇಳಾಪಟ್ಟಿ ಮತ್ತು ದರದ ಪಟ್ಟಿ ಬಿಡುಗಡೆ ಮಾಡಲಾಗಿದೆ.


  ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ವೇಳಾಪಟ್ಟಿ ಮತ್ತು ದರದ ಪಟ್ಟಿ ಬಿಡುಗಡೆ


  ಇನ್ನು ದಕ್ಷಿಣ ಭಾರತದ ಮೊದಲ ವಂದೇ ಭಾರತ್ ರೈಲು ಚೆನ್ನೈ ಮತ್ತು ಬೆಂಗಳೂರು ಮತ್ತು ಮೈಸೂರು ನಡುವೆ ಸಂಚಾರ ಮಾಡಲಿದೆ. ಇದೀಗ ವಂದೇ ಭಾರತ್ ರೈಲಿನ ದರ ಬಿಡುಗಡೆ ಮಾಡಲಾಗಿದೆ. ಇನ್ನು ಈಗಾಗಲೇ ಸಂಚಾರ ಮಾಡುತ್ತಿರುವ ಶತಾಬ್ದಿ ರೈಲಿಗಿಂತ ವಂದೇ ಭಾರತ್ ರೈಲಿನ ದರ ಭಿನ್ನವಾಗಿದೆ.


  ಮೈಸೂರು ಮತ್ತು ಬೆಂಗಳೂರು ಪ್ರಯಾಣ ಮಾಡುವ ಪ್ರಯಾಣಿಕರಿಗೆ ವಂದೇ ಭಾರತ್ ರೈಲಿನ ದರ, ಶತಾಬ್ದಿ ರೈಲಿಗಿಂತ ಹೆಚ್ಚಿಗೆ ಇದೆ. ಇತ್ತ ಬೆಂಗಳೂರಿನಿಂದ ಚೆನ್ನೈಗೆ ಪ್ರಯಾಣಿಸುವ ಪ್ರಯಾಣಿಕರಿಗೆ ಈಗಿರುವ ದರಕ್ಕಿಂತ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲಿನ ದರ ಕಡಿಮೆ ಆಗಿದೆ.


  ಮೈಸೂರು ಮತ್ತು ಬೆಂಗಳೂರು ಟಿಕೆಟ್‌ ದರ ದುಪ್ಪಟ್ಟು


  ಶತಾಬ್ದಿ ರೈಲಿನಲ್ಲಿ ಮೈಸೂರಿನಿಂದ ಬೆಂಗಳೂರಿಗೆ ಚೇರ್‌ ಕಾರ್‌ ಸೀಟಿಗೆ 315 ರೂ. ದರವಿದೆ. ಅದೇ ವೇಳೆ ವಂದೇ ಭಾರತ್‌ ರೈಲಿನನಲ್ಲಿ ಟಿಕೆಟ್‌ ಬೆಲೆ 720 ರೂ. ಇದೆ. ಎಕ್ಸಿಕ್ಯೂಟಿವ್‌ ಗೆ 925 ರೂ. ಇರುವ ದರ ವಂದೇ ಭಾರತ್ ರೈಲಿನಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ 1,215 ರೂ. ಹೆಚ್ಚಿಸಲಾಗಿದೆ.


  ಬೆಂಗಳೂರಿನಿಂದ ಮೈಸೂರಿಗೆ ವಂದೇ ಭಾರತ್‌ ರೈಲಿನಲ್ಲಿ ಚೇರ್‌ ಕಾರ್‌ ದರ 515 ರೂ. ಹಾಗೂ ವಾಪಸ್‌ ಬರೋಕೆ ಟಿಕೆಟ್‌ ದರ 720 ರೂ. ಇದೆ. ಇನ್ನು ಬೆಂಗಳೂರಿನಿಂದ ಚೆನ್ನೈ ಪ್ರಯಾಣಿಸಲು ಟಿಕೆಟ್‌ ದರ ವಂದೇ ಭಾರತ್‌ ರೈಲಿನಲ್ಲಿ 940 ರೂ. ಇದೆ. ಶತಾಬ್ದಿಗಿಂತ ಕಡಿಮೆ ದರ ವಿಧಿಸಲಾಗಿದೆ. ವಂದೇ ಭಾರತ್ ರೈಲಿನಲ್ಲಿ ಬೆಂಗಳೂರಿನಿಂದ ಚೆನ್ನೈ ಪ್ರಯಾಣಿಸಲು ಎಕ್ಸಿಕ್ಯೂಟಿವ್‌ ಸೀಟಿನ ದರ 1,835 ರೂ. ಇದೆ. 140 ರೂ. ಕಡಿಮೆಯಿದೆ.


  ದೇಶದ ಐದನೇ ವಂದೇ ಭಾರತ್ ರೈಲಿನ ವೇಳಾಪಟ್ಟಿ ಹೀಗಿದೆ


  ಚೆನ್ನೈನಿಂದ ಮೈಸೂರಿಗೆ ರೈಲು ಸಂಖ್ಯೆ 20607- ಚೆನ್ನೈ ರೈಲು ನಿಲ್ದಾಣದಿಂದ 05: 50 ಕ್ಕೆ ಹೊರಡಲಿದೆ. ಈ ರೈಲು 10: 20 ನಿಮಿಷಕ್ಕೆ ಬೆಂಗಳೂರು ಸಿಟಿ ಜಂಕ್ಷನ್ ತಲುಪಲಿದೆ. ಇಲ್ಲಿ 5 ನಿಮಿಷ ನಿಲ್ಲುತ್ತದೆ. 10: 25 ಕ್ಕೆ ಹೊರಡುತ್ತದೆ. ನಂತರ 12: 20ಕ್ಕೆ ಮೈಸೂರು ತಲುಪಲಿದೆ.


  ಮೈಸೂರಿನಿಂದ ಚೆನ್ನೈ ರೈಲು ಸಂಖ್ಯೆ 20608 - ಮೈಸೂರಿನಿಂದ 13: 05 ಅಂದ್ರೆ 1:05 ಕ್ಕೆ ಹೊರಡಲಿದೆ. ಈ ರೈಲು 14: 50 ಅಂದ್ರೆ 2: 50ಕ್ಕೆ ಬೆಂಗಳೂರು ತಲುಪಲಿದೆ. ಇದು ಬೆಂಗಳೂರಿನಿಂದ 14: 55 ಅಂದ್ರೆ 2: 55ಕ್ಕೆ ಹೊರಡುತ್ತದೆ. 5 ನಿಮಿಷ ನಿಲ್ಲುತ್ತದೆ ರೈಲು 19: 30 ಅಂದ್ರೆ 7: 30 ಕ್ಕೆ ಚೆನ್ನೈ ತಲುಪಲಿದೆ. ಈ ರೈಲು ಕೇವಲ ಬೆಂಗಳೂರು ಮತ್ತು ಕಟಪಾಡಿಯಲ್ಲಿ ನಿಲುಗಡೆಯಾಗಲಿದೆ.


  ಇದನ್ನೂ ಓದಿ: ನರೇಂದ್ರ ಮೋದಿ-ಪವನ್ ಕಲ್ಯಾಣ್ ಭೇಟಿ, ಆಂಧ್ರ-ತೆಲಂಗಾಣದಲ್ಲಿ ಅರಳುತ್ತಾ ಕಮಲ?


  ವಂದೇ ಭಾರತ್ ರೈಲು ಚೆನ್ನೈನಿಂದ ಬೆಂಗಳೂರು ತಲುಪಲು 4 ಗಂಟೆ 30 ನಿಮಿಷ ತೆಗೆದುಕೊಳ್ಳುತ್ತದೆ. ಬೆಂಗಳೂರಿನಿಂದ ಮೈಸೂರು ತಲುಪಲು 2 ಗಂಟೆ ಸಮಯ ತೆಗೆದುಕೊಳ್ಳುತ್ತದೆ. ಚೆನ್ನೈನಿಂದ ಮೈಸೂರಿಗೆ 6 ಗಂಟೆ 30 ನಿಮಿಷಗಳಲ್ಲಿ ತಲುಪಲಿದೆ. ವಂದೇ ಭಾರತ್‌ ರೈಲು ಹೊಸ ಫೀಚರ್‌ ಹೊಂದಿದೆ.

  Published by:renukadariyannavar
  First published: