ವಚನಾನಂದ ಶ್ರೀಗಳ ಬೆನ್ನಿಗೆ ನಿಂತ ಪ್ರಸನ್ನಾನಂದ ಸ್ವಾಮೀಜಿ; ಪಂಚಮಸಾಲಿ‌ ಸಮುದಾಯ ಜಾಗೃತವಾಗಲು ಕರೆ

ನಾವು ಹರಿಯ ಉಪಾಸಕರು ಹಾಗೂ ನೀವು ಹರನ ಉಪಾಸಕರು. ಈ ಅಸಂಘಟಿತ ಎರಡು ಸಮುದಾಯಗಳಿಂದ ಈಗ 21 ಜನ ಶಾಸಕರಿದ್ದಾರೆ. ಮುಂದಿನ ದಿನಗಳಲ್ಲಿ51 ಜನ ಶಾಸಕರಾಗುತ್ತಾರೆ. ಎರಡು ಸಮುದಾಯ ಒಟ್ಟಾಗಿದ್ದರೆ ಲೋಕಸಭೆ, ವಿಧಾನಸಭೆ ಚುನಾವಣೆಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತವೆ ಎಂದು ವಾಲ್ಮೀಕಿ ಶ್ರೀ ಅಭಿಪ್ರಾಯಪಟ್ಟರು.

news18-kannada
Updated:January 15, 2020, 4:48 PM IST
ವಚನಾನಂದ ಶ್ರೀಗಳ ಬೆನ್ನಿಗೆ ನಿಂತ ಪ್ರಸನ್ನಾನಂದ ಸ್ವಾಮೀಜಿ; ಪಂಚಮಸಾಲಿ‌ ಸಮುದಾಯ ಜಾಗೃತವಾಗಲು ಕರೆ
ಪ್ರಸನ್ನಾನಂದ ಸ್ವಾಮೀಜಿ-ವಚನಾನಂದ ಸ್ವಾಮೀಜಿ
  • Share this:
ದಾವಣಗೆರೆ(ಜ.15): ಮುರುಗೇಶ್​ ನಿರಾಣಿಯವರಿಗೆ ಸಚಿವ ಸ್ಥಾನ ನೀಡಲೇಬೇಕೆಂದು ಸಿಎಂ ಬಿಎಸ್​ವೈಗೆ ಎಚ್ಚರಿಕೆ ನೀಡಿದ್ದ ಪಂಚಮಸಾಲಿ ಸಮುದಾಯದ ವಚನಾನಂದ ಶ್ರೀಗಳಿಗೆ ಈಗ ವಾಲ್ಮೀಕಿ ಗುರುಪೀಠದ ಶ್ರೀ ಪ್ರಸನ್ನಾನಂದ ಸ್ವಾಮೀಜಿ ಬೆಂಬಲ ನೀಡಿದ್ದಾರೆ. ದಾವಣಗೆರೆ ಜಿಲ್ಲೆಯ ಹರಿಹರದ ಹರ ಜಾತ್ರೆಯಲ್ಲಿ ಪಂಚಮಸಾಲಿ ಸಮುದಾಯಕ್ಕೆ ಬೆಂಬಲ ಕೊಡುವುದಾಗಿ ಬಹಿರಂಗವಾಗಿಯೇ ಘೋಷಿಸಿದ್ದಾರೆ.

ಹರ ಜಾತ್ರೆಯಲ್ಲಿ ವಾಲ್ಮೀಕಿ ಶ್ರೀ ಹಾಗೂ ಪಂಚಮಸಾಲಿ ಶ್ರೀ ವಚನಾನಂದ ಶ್ರೀ ಒಗ್ಗಟ್ಟಿನ ಮಂತ್ರ ಜಪಿಸಿದ್ದಾರೆ. ಕೈ ಕೈ ಹಿಡಿದು ಮೇಲೆತ್ತಿ ಒಂದೇ ಮಾತರಂ ಘೋಷಣೆ ಕೂಗಿದ್ದಾರೆ. ಈ ಜಾತ್ರೆಯಿಂದ ಪಂಚಮಸಾಲಿ‌ ಸಮುದಾಯದವರು ಜಾಗೃತರಾಗಬೇಕು. ಹರಜಾತ್ರೆಯಲ್ಲಿ ಸಮುದಾಯದ ಇತಿಹಾಸ ಮೆಲುಕು ಹಾಕಬೇಕು ಎಂದು ಪ್ರಸನ್ನಾನಂದ ಸ್ವಾಮೀಜಿ ಕರೆ ಕೊಟ್ಟಿದ್ದಾರೆ.

ಸಿಎಂ ಯಡಿಯೂರಪ್ಪ ಮತ್ತು ಸಂತೋಷ್ ಜಗಳದಿಂದ ರಾಜ್ಯಕ್ಕೆ ಕುಷ್ಠರೋಗ ; ಮಾರುತಿ ಮಾನ್ಪಡೆ ಕಿಡಿ

ನಿನ್ನೆ ಪಂಚಮಸಾಲಿ ಸಮುದಾಯದ ಮುರುಗೇಶ್ ನೀರಾಣಿಗೆ ಸಚಿವ ಸ್ಥಾನ ನೀಡುವಂತೆ ವಚನಾನಂದ ಶ್ರೀಗಳು ಸಿಎಂ ಬಿಎಸ್​ವೈಗೆ ಖಡಕ್ ಎಚ್ಚರಿಕೆ ನೀಡಿದ್ದರು. ಪಂಚಮಸಾಲಿ ಗುರುಪೀಠದ ವಚನಾನಂದ ಶ್ರೀಗಳ ಒತ್ತಾಯಕ್ಕೆ ನನ್ನ ಬೆಂಬಲ ಇದೆ. ಪಂಚಮಸಾಲಿ ಸಮುದಾಯದ ಹೋರಾಟಕ್ಕೆ ವಾಲ್ಮೀಕಿ ಗುರುಪೀಠದ ಬೆಂಬಲ ಸದಾ ಇರುತ್ತದೆ ಎಂದು ಪುನರ್​ ಉಚ್ಚರಿಸಿದರು.

ನಾವು ಹರಿಯ ಉಪಾಸಕರು ಹಾಗೂ ನೀವು ಹರನ ಉಪಾಸಕರು. ಈ ಅಸಂಘಟಿತ ಎರಡು ಸಮುದಾಯಗಳಿಂದ ಈಗ 21 ಜನ ಶಾಸಕರಿದ್ದಾರೆ. ಮುಂದಿನ ದಿನಗಳಲ್ಲಿ51 ಜನ ಶಾಸಕರಾಗುತ್ತಾರೆ. ಎರಡು ಸಮುದಾಯ ಒಟ್ಟಾಗಿದ್ದರೆ ಲೋಕಸಭೆ, ವಿಧಾನಸಭೆ ಚುನಾವಣೆಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತವೆ ಎಂದು ವಾಲ್ಮೀಕಿ ಶ್ರೀ ಅಭಿಪ್ರಾಯಪಟ್ಟರು.

2012ರ ನಿರ್ಭಯಾ ಅತ್ಯಾಚಾರ ಪ್ರಕರಣ: ಜ.22ಕ್ಕೆ ನಾಲ್ವರು ದೋಷಿಗಳಿಗೆ ಗಲ್ಲುಶಿಕ್ಷೆ ಅಸಾಧ್ಯ?

ಉಪಚುನಾವಣೆ ವೇಳೆ ಪೂಜ್ಯರು ತೆಗೆದುಕೊಂಡ ಖಡಕ್ ತೀರ್ಮಾನದಿಂದ ಅರುಣ್ ಇಂದು ರಾಣೆಬೆನ್ನೂರು ಶಾಸಕರಾಗಿದ್ದಾರೆ.ಸಿಎಂ ಬಿಎಸ್ ವೈ  ಗಂಭೀರವಾಗಿ ಖಡಕ್‌ ತೀರ್ಮಾನಗಳನ್ನು ಕೈಗೊಳ್ಳುತ್ತಿದ್ದರು. ಆದರೆ ಇತ್ತೀಚೆಗೆ ಮೌನವಾಗುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
First published: January 15, 2020, 4:48 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading