• ಹೋಂ
 • »
 • ನ್ಯೂಸ್
 • »
 • ರಾಜ್ಯ
 • »
 • Kichcha Sudeep: ವಾಲ್ಮೀಕಿ ಜಾತ್ರೆಗೆ ನಟ ಸುದೀಪ್​ಗೆ ಆಹ್ವಾನವೇ ಇರಲಿಲ್ಲ; ಕಿಚ್ಚನ ಅಭಿಮಾನಿಗಳ ಕ್ಷಮೆ ಕೇಳಿದ ಬಿಜೆಪಿ ಶಾಸಕ ರಾಜುಗೌಡ

Kichcha Sudeep: ವಾಲ್ಮೀಕಿ ಜಾತ್ರೆಗೆ ನಟ ಸುದೀಪ್​ಗೆ ಆಹ್ವಾನವೇ ಇರಲಿಲ್ಲ; ಕಿಚ್ಚನ ಅಭಿಮಾನಿಗಳ ಕ್ಷಮೆ ಕೇಳಿದ ಬಿಜೆಪಿ ಶಾಸಕ ರಾಜುಗೌಡ

ನಟ ಸುದೀಪ್/ ಶಾಸಕ ರಾಜುಗೌಡ

ನಟ ಸುದೀಪ್/ ಶಾಸಕ ರಾಜುಗೌಡ

ಸುದೀಪ್ ಅವರು ಯಾವಾಗಲೂ ಜಾತ್ರೆಗೆ ಬರುತ್ತೇನೆ ಅಂತ ಮಾತು ಕೊಟ್ಟಿದ್ದರು. ಈ ಬಾರಿ ಜಾತ್ರೆ ಬಗ್ಗೆ ಅವರ ಗಮನಕ್ಕೆ ಇಲ್ಲದಿದ್ದರಿಂದ ಹೈದರಾಬಾದ್ ನಲ್ಲಿ ಶೂಟಿಂಗ್ ಗೆ ಹೋಗಿದ್ದಾರೆ ಎಂದು ಶಾಸಕ ರಾಜುಗೌಡ ಸ್ಪಷ್ಟನೆ ನೀಡಿದ್ದಾರೆ.

 • News18 Kannada
 • 5-MIN READ
 • Last Updated :
 • Davanagere (Davangere), India
 • Share this:

ದಾವಣಗೆರೆ: ಜಿಲ್ಲೆಯ ಹರಿಹರ (Harihar) ತಾಲೂಕಿನ ರಾಜನಹಳ್ಳಿಯಲ್ಲಿ (Valmiki Gurupeeta Rajanahalli) ಇಂದು ನಡೆದ ವಾಲ್ಮೀಕಿ ಜಾತ್ರೆಗೆ ನಟ ಕಿಚ್ಚ ಸುದೀಪ್ (Kichcha Sudeep) ಆಗಮಿಸುತ್ತಾರೆ ಎಂದು ವೇದಿಕೆ ಮೇಲೆ ನುಗ್ಗಲು ಅಭಿಮಾನಿಗಳು ಯತ್ನಿಸಿದ್ದರು. ಈ ವೇಳೆ ಅಭಿಮಾನಿಗಳನ್ನು (Sudeep Fans) ನಿಯಂತ್ರಸಲು ಪೊಲೀಸರು ಹರಸಾಹಸ ಪಟ್ಟಿದ್ದರು. ಲಘು ಲಾಠಿ ಪ್ರಹಾರ (Lathi Charge) ನಡೆಸಲು ಸಹ ಮುಂದಾಗಿದ್ದರು. ಆದರೆ ಕಾರ್ಯಕ್ರಮದಲ್ಲಿ ಗಣ್ಯರು ಲಾಠಿ ಬೀಸದಂತೆ ಮನವಿ ಮಾಡಿದ ಹಿನ್ನೆಲೆಯಲ್ಲಿ ಅಭಿಮಾನಿಗಳನ್ನು ನಿಯಂತ್ರಣ ಮಾಡಲು ಪೊಲೀಸರು ಹರಸಾಹಸ ಪಟ್ಟರು. ಈ ವೇಳೆ ಪೊಲೀಸರ (Police) ಮೇಲೆ ಕೆಲ ಅಭಿಮಾನಿಗಳು ಚೇರ್ ಎಸೆದಿದ್ದರು. ಈ ಘಟನೆ ಸ್ಥಳದಲ್ಲಿ ಕೆಲ ಸಮಯ ಗೊಂದಲವನ್ನು ಉಂಟು ಮಾಡಲು ಕಾರಣವಾಗಿತ್ತು.


ಚೇರುಗಳನ್ನು ಪುಡಿ ಪುಡಿ ಮಾಡಿದ್ದ ಅಭಿಮಾನಿಗಳು


ಈ ವೇಳೆಗೆ ವೇದಿಕೆ ಮೇಲೆ ಆಗಮಿಸಿದ್ದ ವಾಲ್ಮೀಕಿ ಶ್ರೀಗಳು, ಜಾತ್ರೆಗೆ ಕಿಚ್ಚ ಸುದೀಪ್ ಬರೋದಿಲ್ಲ ಎಂದು ಘೋಷಣೆ ಮಾಡಿದ್ದರು. ಶ್ರೀಗಳು ಘೋಷಣೆ ಮಾಡುತ್ತಿದ್ದಂತೆ ರೊಚ್ಚಿಗೆದ್ದ ಅಭಿಮಾನಿಗಳು, ಕಾರ್ಯಕ್ರಮದಲ್ಲಿದ್ದ ಚೇರುಗಳನ್ನು ಪುಡಿ ಪುಡಿ ಮಾಡಿದ್ದರು. ಘಟನೆ ಕುರಿತಂತೆ ಸ್ಪಷ್ಟನೆ ನೀಡಿರುವ ಬಿಜೆಪಿ ಶಾಸಕ ರಾಜುಗೌಡ ಅವರು, ನಟ ಸುದೀಪ್ ಅಭಿಮಾನಿಗಳಿಗೆ ಕ್ಷಮೆ ಯಾಚಿಸಿದ್ದಾರೆ.ಇದನ್ನೂ ಓದಿ: Basavaraj Bommai: SC/ST ಮೀಸಲಾತಿ ಹೆಚ್ಚಳಕ್ಕೆ ಕಾನೂನು ಬಲ; ಬಿಜೆಪಿ ಟೀಕಿಸುತ್ತಿದ್ದವರಿಗೆ ಸರ್ಕಾರದ ಮಾಸ್ಟರ್‌ ಸ್ಟ್ರೋಕ್‌!


ಕಿಚ್ಚ ಅಭಿಮಾನಿಗಳ ಕ್ಷಮೆ ಕೋರಿದ ಶಾಸಕ ರಾಜುಗೌಡ


ವಿಡಿಯೋದಲ್ಲಿಈ ಬಗ್ಗೆ ಮಾತನಾಡಿರುವ ಯಾದಗಿರಿ ಜಿಲ್ಲೆಯ ಸುರಪುರ ಶಾಸಕ ರಾಜುಗೌಡ, ವಾಲ್ಮೀಕಿ ಜಾತ್ರೆಗೆ ನಾನು ಸೇರಿದಂತೆ ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಸ್ವಾಮೀಜಿಗಲು, ಹಲವು ಗಣ್ಯರು ಆಗಮಿಸಿದ್ದರು.


ಕಾರ್ಯಕ್ರಮದಲ್ಲಿ ನಟ ಸುದೀಪ್ ಅಭಿಮಾನಿಗಳು ಸಾಕಷ್ಟು ಜನ ಬಂದಿದ್ದರು. ಆದರೆ ಸುದೀಪ್ ಅವರಿಗೆ ಈ ಕಾರ್ಯಕ್ರಮದ ಬಗ್ಗೆ ಮಾಹಿತಿ ಇರಲಿಲ್ಲ, ಅವರ ಗಮನಕ್ಕೂ ತಂದಿರಲಿಲ್ಲ. ಈ ಕಾರ್ಯಕ್ರಮಕ್ಕಾಗಿ ಯಾರು ಕೂಡ ಹೋಗಿ ಸುದೀಪ್​ ಅವರಿಗೆ ಆಹ್ವಾನ ಕೊಟ್ಟಿರಲಿಲ್ಲ, ಆದ್ದರಿಂದಲೇ ಅವರು ಹೈದರಾಬಾದ್​ನಲ್ಲಿ ಶೂಟಿಂಗ್​ನಲ್ಲಿದ್ದರು.
ಸುದೀಪ್​ ಅವರಿಗೆ ಕಾರ್ಯಕ್ರಮಕ್ಕೆ ಮಾಹಿತಿಯನ್ನೇ ಕೊಟ್ಟಿರಲಿಲ್ಲ


ಸುದೀಪ್ ಅವರು ಯಾವಾಗಲೂ ಜಾತ್ರೆಗೆ ಬರುತ್ತೇನೆ ಅಂತ ಮಾತು ಕೊಟ್ಟಿದ್ದರು. ಈ ಬಾರಿ ಜಾತ್ರೆ ಬಗ್ಗೆ ಅವರ ಗಮನಕ್ಕೆ ಇಲ್ಲದಿದ್ದರಿಂದ ಹೈದರಾಬಾದ್ ನಲ್ಲಿ ಶೂಟಿಂಗ್ ಗೆ ಹೋಗಿದ್ದಾರೆ. ನಿಮ್ಮ ಮನಸ್ಸಿಗೆ ಇದರಿಂದ ಬೇಜಾರಾಗಿದೆ ಅಂತ ನಮಗೆ ಗೊತ್ತಾಗಿದೆ. ಜಾತ್ರೆ ಆಗಮಿಸದ ವಿಚಾರದಲ್ಲಿ ಸುದೀಪ್​ ಅವರ ತಪ್ಪು ಯಾವುದೇ ಇಲ್ಲ. ಇಲ್ಲಿ ಕಮ್ಯೂನಿಕೇಶನ್​ ಗ್ಯಾಪ್ ಆಗಿದೆ. ಮುಂದಿನ ಬಾರಿ ವಾಲ್ಮೀಕಿ ಜಾತ್ರೆಗೆ ನಾವೆಲ್ಲ ಸೇರಿ ಸುದೀಪ್ ಅವರ ಜೊತೆಗೆ ಮಾತನಾಡಿ ಜಾತ್ರೆಗೆ ಕರೆತಂದು ಇನ್ನಷ್ಟು ಯಶಸ್ವಿಯಾಗುವಂತೆ ಮಾಡುತ್ತೇವೆ.


ಇದನ್ನೂ ಓದಿ: Bengaluru: ಮೊದಲ ಪತ್ನಿ ಕಣ್ತಪ್ಪಿಸಿ 2ನೇ ಪತ್ನಿಗೆ ಸೀಮಂತ, ಸಂಭ್ರಮ ನಡೆಯುತ್ತಿದ್ದ ಮನೆ ರಣರಂಗ! ಅಸಲಿಗೆ ಆಗಿದ್ದೇನು?


ಯಾವುದೇ ಮಾಹಿತಿ ಇಲ್ಲದೆ ವೇದಿಕೆ ಮೇಲಿದ್ದ ನಿರೂಪಕರು ಸುದೀಪ್​ ಬರ್ತಿದ್ದಾರೆ ಅಂತ ವೇದಿಕೆ ಮೇಲೆ ಹೇಳಿದ್ದಾರೆ. ಇದರಿಂದ ಅಭಿಮಾನಿಗಳು ಹೆಚ್ಚಿನ ನಿರೀಕ್ಷೆ ಹೊಂದಿದ್ದರು. ಇದರಿಂದ ನಿಮ್ಮ ಮನಸ್ಸಿಗೆ ಬೇಜಾರಾಗಿದೆ ಕ್ಷಮಿಸಿ. ಮುಂದಿನ ಬಾರಿ ಸುದೀಪ್ ಅವರನ್ನು ಜಾತ್ರೆಗೆ ಕರೆಸಿ, ಹೆಚ್ಚಿನ ಸಮಯ ಅಭಿಮಾನಿಗಳ ಜೊತೆ ಕಳೆಯುವಂತೆ ಮಾಡುತ್ತೇವೆ. ಅಭಿಮಾನಿಗಳು ಯಾರು ಕೂಡ ಬೇಜಾರು ಮಾಡಿಕೊಳ್ಳಬಾರದೆಂದು ಮನವಿ ಮಾಡಿದ್ದಾರೆ.

Published by:Sumanth SN
First published: