ಪ್ರೇಮಿಗಳ ದಿನಾಚರಣೆ ದಿನವೇ ಜಲಾಶಯಕ್ಕೆ ಹಾರಿ ಪ್ರೇಮಿಗಳು ಆತ್ಮಹತ್ಯೆ ಶರಣು

ಸಚಿನ್ ಮತ್ತು ಸಿಂಧು ಕಳೆದ ಹಲವು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು ಎನ್ನಲಾಗಿದೆ. ಆದರೆ ಇವರಿಬ್ಬರ ಪ್ರೀತಿಗೆ ಮನೆಯವರು ಸಮ್ಮತಿ ಸೂಚಿಸಿರಲಿಲ್ಲ. ಬದಲಾಗಿ ಸಿಂಧುಗೆ ಬೇರೆ ಹುಡುಗನೊಂದಿಗೆ ವಿವಾಹ ಮಾಡಲು ಆಕೆಯ ಮನೆಯವರು ಸಿದ್ಧತೆ ನಡೆಸಿದ್ದರು ಎನ್ನಲಾಗಿದೆ.

news18-kannada
Updated:February 14, 2020, 7:37 PM IST
ಪ್ರೇಮಿಗಳ ದಿನಾಚರಣೆ ದಿನವೇ ಜಲಾಶಯಕ್ಕೆ ಹಾರಿ ಪ್ರೇಮಿಗಳು ಆತ್ಮಹತ್ಯೆ ಶರಣು
ಸಾಂದರ್ಭಿಕ ಚಿತ್ರ
  • Share this:
ಕೊಡಗು (ಫೆ.14) : ಪ್ರೀತಿಸಿದ್ದ ಹುಡುಗಿಗೆ ಬೇರೆ ಹುಡುಗನೊಂದಿಗೆ ಮದುವೆ ಫಿಕ್ಸ್ ಮಾಡಿದ್ದರಿಂದ ನೊಂದ ಯುವತಿ ಪ್ರೀತಿಸಿದ ಹುಡುಗನೊಂದಿಗೆ ಜಲಾಶಯಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೊಡಗು ಜಿಲ್ಲೆ ಸೋಮವಾರಪೇಟೆ ತಾಲ್ಲೂಕಿನ ಹಾರಂಗಿಯಲ್ಲಿ ನಡೆದಿದೆ.

ಮೂಲತಃ ಮೈಸೂರು ಜಿಲ್ಲೆ ಹುಣಸೂರು ತಾಲ್ಲೂಕಿನ ಕೊತ್ತೆಗಾಲ ಗ್ರಾಮದ ನಾಗರಾಜ್ ಹಾಗೂ ಪವಿತ್ರ ದಂಪತಿಯ ಮೊದಲನೆ ಮಗ ಸಚಿನ್, ಹುಣಸೂರು ತಾಲ್ಲೂಕಿನ ಯಮಗುಂಬ ಗ್ರಾಮದ ಜಲೇಂದ್ರ ಹಾಗೂ ಜ್ಯೋತಿ ದಂಪತಿಯ ಪುತ್ರಿ ಸಿಂಧು ಆತ್ಮಹತ್ಯಗೆ ಶರಣಾದ ಪ್ರೇಮಿಗಳು.

ಸಚಿನ್ ಮತ್ತು ಸಿಂಧು ಕಳೆದ ಹಲವು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು ಎನ್ನಲಾಗಿದೆ. ಆದರೆ ಇವರಿಬ್ಬರ ಪ್ರೀತಿಗೆ ಮನೆಯವರು ಸಮ್ಮತಿ ಸೂಚಿಸಿರಲಿಲ್ಲ. ಬದಲಾಗಿ ಸಿಂಧುಗೆ ಬೇರೆ ಹುಡುಗನೊಂದಿಗೆ ವಿವಾಹ ಮಾಡಲು ಆಕೆಯ ಮನೆಯವರು ಸಿದ್ಧತೆ ನಡೆಸಿದ್ದರು ಎನ್ನಲಾಗಿದೆ.

ಇದನ್ನೂ ಓದಿ : ಬೆಂಗಳೂರಲ್ಲಿ ಡ್ಯಾನ್ಸರ್​ಗಳಿಗೆ ಸ್ಟೇಜ್ ಶೋ ಆಸೆ ತೋರಿಸಿ ವೇಶ್ಯಾವಾಟಿಕೆಗೆ ದೂಡುವ ಜಾಲ ಪತ್ತೆ

ಇದರಿಂದ ಮನನೊಂದ ಇಬ್ಬರು ಪ್ರೇಮಿಗಳು ಕೊಡಗಿನ ಹಾರಂಗಿ ಜಲಾಶಯಕ್ಕೆ ಬೈಕ್‌ನಲ್ಲಿ ಬಂದಿದ್ದರು. ಬಳಿಕ ಜಲಾಶಯಕ್ಕೆ ಹಾರಿ ಆತ್ಮ ಹತ್ಯೆ ಮಾಡಿಕೊಂಡಿದ್ದಾರೆ. ವಿಷಯ ತಿಳಿದ ಅಗ್ನಿಶಾಮಕ ದಳದ ಸಿಬ್ಬಂದಿ ಮೃತದೇಹಗಳನ್ನು ಹೊರ ತೆಗೆದಿದ್ದಾರೆ. ಮೃತದೇಹಗಳನ್ನು ಕುಶಾಲನಗರ ಆಸ್ಪತ್ರೆಗೆ ಸಾಗಿಸಲಾಗಿದೆ.

ಘಟನೆ ಸಂಬಂಧ ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
First published:February 14, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ