ಭೂಮಿ ಬಿಟ್ಟು ಆಗಸದಲ್ಲಿ ವ್ಯಾಲೆಂಟೆನ್ಸ್ ಡೇ ಆಚರಿಸಿಕೊಂಡ 25 ಜೋಡಿಗಳು


Updated:February 14, 2018, 8:59 PM IST
ಭೂಮಿ ಬಿಟ್ಟು ಆಗಸದಲ್ಲಿ ವ್ಯಾಲೆಂಟೆನ್ಸ್ ಡೇ ಆಚರಿಸಿಕೊಂಡ 25 ಜೋಡಿಗಳು
ವಿಮಾನದಲ್ಲಿ ವ್ಯಾಲೆಂಟಿನ್ಸ್ ಡೇ ಆಚರಣೆ

Updated: February 14, 2018, 8:59 PM IST
-ಸೌಮ್ಯ ಕಳಸ, ನ್ಯೂಸ್ 18 ಕನ್ನಡ

ಬೆಂಗಳೂರು(ಫೆ.14): ಇವತ್ತು ಪ್ರೇಮಿಗಳ ದಿನ. ಹುಡುಗನೊಬ್ಬ ತನ್ನ ಮನದನ್ನೆಗೆ ವ್ಯಾಲೆಂಟೈನ್ಸ್ ಡೇ ಸರ್ಪ್ರೈಸ್ ಕೊಡುವುದಕ್ಕೆ ನೇರವಾಗಿ ಜಕ್ಕೂರು ಏರೋಡ್ರೋಮ್​ಗೆ ಕರ್ಕೊಂಡು ಬಂದಿದ್ದ. ಸರ್ಪ್ರೈಸ್ ಏನಪ್ಪಾ ಅಂತ ಕಣ್ಣರಳಿಸಿಕೊಂಡು ಕಾಯುತ್ತಿದ್ದ ಹುಡುಗಿಯನ್ನ ನೇರವಾಗಿ ಆಕಾಶಕ್ಕೇ ಹಾರಿಸಿಕೊಂಡು ಹೋಗಿಬಿಟ್ಟ. ಹೌದು, ಭೂಮಿ ಬಿಟ್ಟು ವಿಮಾನದಲ್ಲಿ ಹಾರುವ ಮೂಲಕ ಆಗಸದಲ್ಲಿ ಇಲ್ಲೊಂದಿಷ್ಟು ಪ್ರೇಮಿಗಳು ಆಚರಿಸಿಕೊಂಡರು. ಇದಕ್ಕಾಗಿ ಜಕ್ಕೂರು ಏರೋಡ್ರೋಮ್​ನಲ್ಲಿ ವಿಶೇಷ ವಿಮಾನದ ವ್ಯವಸ್ಥೆ ಮಾಡಲಾಗಿತ್ತು.

4 ಸೀಟಿನ ಪುಟಾಣಿ ಸೆಸ್ನಾ ವಿಮಾನದಲ್ಲಿ ಒಮ್ಮೆಗೆ ಒಂದು ಜೋಡಿ ಮಾತ್ರ ಪ್ರಯಾಣ ಮಾಡಲು ಅವಕಾಶವಿದೆ. ವಿಮಾನ ಸಮುದ್ರ ಮಟ್ಟದಿಂದ 3ರಿಂದ 4 ಸಾವಿರ ಅಡಿ ಎತ್ತರಕ್ಕೆ ಹೋಗುತ್ತಿದ್ದಂತೆ ಪೈಲಟ್ ಇವರಿಗೆ ತಿಳಿಸುತ್ತಾರೆ. ಆಗ ಕೇಕ್ ಕತ್ತರಿಸಿ ಪ್ರೇಮಿಗಳ ದಿನ ಆಚರಿಸಿ ಖುಷಿಪಡುತ್ತಿದ್ದಾರೆ. ಮಾಮೂಲಿ ಡಿನ್ನರ್, ಡೇಟ್, ರೋಸ್​ಗಳ ಸೆಲಬ್ರೇಶನ್​ಗಿಂತಾ ಈ ವಿಭಿನ್ನ ಆಚರಣೆ ಕಿಕ್ ಕೊಡುತ್ತೆ ಅಂತಿದ್ದಾರೆ ಜೋಡಿಗಳು.

ವಿಮಾನದಲ್ಲಿ ವ್ಯಾಲೆಂಟಿನ್ಸ್ ಡೇ ಆಚರಣೆ


ಈ ವ್ಯಾಲೆಂಟೈನ್ಸ್ ಡೇ ದಿನದಂದು ಒಟ್ಟು 25 ಜೋಡಿಗಳು ಪುಟ್ಟ ವಿಮಾನದಲ್ಲಿ ಹಾರುವ ಮೂಲಕ ಮೋಡಗಳ ನಡುವೆ ಸೆಲಬ್ರೇಟ್ ಮಾಡಿದ್ದಾರೆ. ಆಕಾಶದಿಂದ ಬೆಂಗಳೂರಿನ ಪಕ್ಷಿನೋಟ ನೋಡುವ ಥ್ರಿಲ್ ಜೊತೆಗೆ ಪಕ್ಕದಲ್ಲೇ ಪ್ರೀತಿಪಾತ್ರರೂ ಇದ್ದಿದ್ರಿಂದ ಅವರ ಖುಷಿ ದುಪ್ಪಟ್ಟಾಗಿತ್ತು.
.

 
Loading...

 
First published:February 14, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ