22 ವರ್ಷಗಳ ಹಿಂದೆ ಗುಜರಾತ್ನಲ್ಲಿ ದೇವೇಗೌಡರಿಂದ ವಜುಭಾಯ್ ವಾಲಾಗೆ ಎದುರಾಗಿತ್ತು ಸಂಕಷ್ಟ..!


Updated:May 16, 2018, 10:26 PM IST
22 ವರ್ಷಗಳ ಹಿಂದೆ ಗುಜರಾತ್ನಲ್ಲಿ ದೇವೇಗೌಡರಿಂದ ವಜುಭಾಯ್ ವಾಲಾಗೆ ಎದುರಾಗಿತ್ತು ಸಂಕಷ್ಟ..!

Updated: May 16, 2018, 10:26 PM IST
- ನ್ಯೂಸ್18 ಕನ್ನಡ

ಬೆಂಗಳೂರು(ಮೇ 16): ಬಿಜೆಪಿಗೆ ಸರಕಾರ ರಚಿಸಲು ಆಹ್ವಾನ ಕೊಟ್ಟು ಜೆಡಿಎಸ್ ಆಸೆಗೆ ತಣ್ಣೀರೆರಚಿದ ರಾಜ್ಯಪಾಲ ವಜುಭಾಯ್ ವಾಲಾ ಅವರಿಗೂ ಹೆಚ್.ಡಿ. ದೇವೇಗೌಡರಿಗೂ 22 ವರ್ಷಗಳ ಹಿಂದಿನ ನಂಟಿದೆ. ದೇವೇಗೌಡರ ಅಣತಿಯಂತೆ ಗುಜರಾತ್​ನಲ್ಲಿ ನಡೆದ ರಾಜಕೀಯ ವಿಪ್ಲವದಲ್ಲಿ ಇದೇ ವಜುಭಾಯ್ ವಾಲಾ ಸಂಕಷ್ಟಕ್ಕೆ ಸಿಲುಕಿದ ಘಟನೆ ಈಗ ಉಲ್ಲೇಖಾರ್ಹವಾಗಿದೆ. 1996ರಲ್ಲಿ ಅಂದಿನ ಪ್ರಧಾನಿಯಾಗಿದ್ದ ಹೆಚ್.ಡಿ. ದೇವೇಗೌಡರ ಸಲಹೆ ಮೇರೆಗೆ ರಾಷ್ಟ್ರಪತಿಗಳು ಆಗಿನ ಗುಜರಾತ್​ನ ಬಿಜೆಪಿ ಸರಕಾರವನ್ನು ವಜಾ ಮಾಡಿದ್ದರು. ಶಂಕರ್ ಸಿಂಗ್ ವಘೇಲಾ ಅವರು ಆಗಿನ ಬಿಜೆಪಿಯನ್ನು ವಿಭಜಿಸಿ ಕಾಂಗ್ರೆಸ್ ಬೆಂಬಲದೊಂದಿಗೆ ಹೊಸ ಸರಕಾರ ರಚಿಸಲು ದೇವೇಗೌಡರೇ ಕಾರಣರಾಗಿದ್ದರು. ಆಗ ಗುಜರಾತ್ ಬಿಜೆಪಿಯ ಅಧ್ಯಕ್ಷರಾಗಿದ್ದವರು ಇದೇ ವಜುಭಾಯ್ ವಾಲಾ. ವಜುಭಾಯ್ ಕಣ್ಣೆದುರೇ ಬಿಜೆಪಿ ಪಕ್ಷ ಹೋಳಾಗಲು ದೇವೇಗೌಡರೇ ಕಾರಣರಾದರೂ, ಕಾಂಗ್ರೆಸ್​ನ ಬಾಹ್ಯ ಬೆಂಬಲದ ಕೃಪೆಯಲ್ಲಿ ಸರಕಾರ ಮುನ್ನಡೆಸುತ್ತಿದ್ದ ದೇವೇಗೌಡರಿಗೆ ಅಂಥದ್ದೊಂದು ನಿರ್ಧಾರ ಕೈಗೊಳ್ಳುವ ಸಹಜ ಒತ್ತಡವಿದ್ದಿದ್ದನ್ನು ತಳ್ಳಿಹಾಕಲು ಸಾಧ್ಯವಿಲ್ಲ.

ರಾಜ್ಯಪಾಲ ವಜುಭಾಯ್ ವಾಲಾ ಅವರು 12 ವರ್ಷಗಳ ಹಿಂದಿನ ಆ ಬೆಳವಣಿಗೆಯನ್ನು ಮನಸಿನಲ್ಲಿಟ್ಟುಕೊಂಡು ಈಗ ನಿರ್ಧಾರ ಕೈಗೊಳ್ಳುತ್ತಿದ್ದಾರಾ ಎಂಬುದು ಗೊತ್ತಿಲ್ಲ. ಆದರೆ, ಬಹುಮತ ಪಡೆದ ಅಥವಾ ಅತಿಹೆಚ್ಚು ಸ್ಥಾನ ಪಡೆದ ಪಕ್ಷಕ್ಕೆ ಸರಕಾರ ರಚನೆಗೆ ಮೊದಲ ಆಹ್ವಾನ ಕೊಡುವುದು ಇತ್ತೀಚಿನ ವರ್ಷದವರೆಗೂ ಸಹಜ ನಿರ್ಧಾರವಾಗಿತ್ತು. ರಾಜ್ಯಪಾಲರು ಅದನ್ನು ಮಾಡಿದ್ದಾರೆ.

ವಜುಭಾಯ್ ವಾಲಾ ಅವರು ಗುಜರಾತ್​ನ ಕಟ್ಟಾ ಬಿಜೆಪಿ ನಾಯಕರಾಗಿದ್ದವರು. ಎಂಬತ್ತರ ದಶಕದವರೆಗೂ ಕಾಂಗ್ರೆಸ್ ಭದ್ರಕೋಟೆಯಾಗಿದ್ದ ರಾಜಕೋಟ್​ನಲ್ಲಿ ಕೇಸರೀಧ್ವಜ ಹಾರಿಸಿದವರು ಇದೇ ವಜುಭಾಯ್ ವಾಲಾ. ನರೇಂದ್ರ ಮೋದಿ ಸಿಎಂ ಆದಾಗ ಅವರಿಗಾಗಿ ತಮ್ಮ ಸ್ಥಾನವನ್ನು ಬಿಟ್ಟುಕೊಟ್ಟಿದ್ದರು. ಮೋದಿ ಸಂಪುಟದಲ್ಲಿ ವಾಲಾ ಅವರು ಹಣಕಾಸು ಸಚಿವರಾಗಿಯೂ ಕೆಲಸ ಮಾಡಿದರು. ಮೋದಿ ಪ್ರಧಾನಿ ಆದಾಗ ವಜುಬಾಯ್​ಗೆ ಗೌರವ ಸೂಚಕವಾಗಿ ಕರ್ನಾಟಕದ ರಾಜ್ಯಪಾಲರಾಗಿ ನೇಮಿಸಿದರು.
First published:May 16, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ