ಬಸವನಾಡಿನಲ್ಲಿ ನಾಳೆ ಲೋಕಾರ್ಪಣೆಯಾಗಲಿದೆ ವಾಜಪೇಯಿ ಪ್ರತಿಮೆ; ರಾಜ್ಯದ ಮೊದಲ, ದೇಶದಎರಡನೇ ಬೃಹತ್​ ಪ್ರತಿಮೆ ಇದು

ಬಿಜೆಪಿ ಶಾಸಕ ಬಸನಗೌಡ ರಾ.ಪಾಟೀಲ ಯತ್ನಾಳ ಅವರ ಪ್ರಯತ್ನದ ಫಲವಾಗಿ ಬಸವ ನಾಡಿನಲ್ಲಿ ವಾಜಪೇಯಿ ಅವರ ಹೆಸರಿನಲ್ಲಿ ರಸ್ತೆ ಮತ್ತು ಪ್ರತಿಮೆ ನಿರ್ಮಾಣವಾಗಿದೆ. 

ಅನಾವರಣಗೊಳ್ಳಲು ಸಿದ್ದವಾಗಿರುವ ಪ್ರತಿಮೆ

ಅನಾವರಣಗೊಳ್ಳಲು ಸಿದ್ದವಾಗಿರುವ ಪ್ರತಿಮೆ

  • Share this:
ವಿಜಯಪುರ  (ಡಿ. 24): ಮಾಜಿ ಪ್ರಧಾನಿ ಅಟಲ್​ ಬಿಹಾರಿ ವಾಜಪೇಯಿ ಅವರ ಜನ್ಮ ದಿನದ ಅಂಗವಾಗಿ ನಾಳೆ ಅಂದರೆ ಡಿ. 25ರಂದು ನಗರದಲ್ಲಿ ನಗರದಲ್ಲಿ ಅವರ ಪ್ರತಿಮೆ ಲೋಕಾರ್ಪಣೆಗೊಳ್ಳಲಿದೆ.  ಬಿಜೆಪಿ ಶಾಸಕ ಬಸನಗೌಡ ರಾ.ಪಾಟೀಲ ಯತ್ನಾಳ ಅವರ ಪ್ರಯತ್ನದ ಫಲವಾಗಿ ಬಸವ ನಾಡಿನಲ್ಲಿ ವಾಜಪೇಯಿ ಅವರ ಹೆಸರಿನಲ್ಲಿ ರಸ್ತೆ ಮತ್ತು ಪ್ರತಿಮೆ ನಿರ್ಮಾಣವಾಗಿದೆ.  ನಗರದ ಗಾಂಧಿಚೌಕ್ ನಿಂದ ಎಪಿಎಂಸಿ ಮೂಲಕ ಸಾಗುವ ಇಂಡಿ ರಸ್ತೆ ಕೋಟೆ ಗೋಡೆ ಮೂಲಕ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 52 ರ ಮೂಲಕ ಹೊಸ ಕಿರಾಣಿ ಬಜಾರವರೆಗೆ ಇರುವ ಸುಮಾರು 5 ಕಿ. ಮಿ. ರಸ್ತೆಗೆ ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಮಾರ್ಗ್ ಎಂದು ಹೆಸರಿಡಲಾಗಿದೆ.  ಸದ್ಯಕ್ಕೆ ಗಾಂಧಿಚೌಕಿನಿಂದ ಕೋಟೆ ಗೋಡೆವರೆಗೆ 1.90 ಕಿ. ಮೀ. ರಸ್ತೆಯನ್ನು ರೂ. 14.30 ಕೋ. ವೆಚ್ಚದಲ್ಲಿ ಕಾಂಕ್ರಿಟ್ ಮಾಡಲಾಗಿದ್ದು, ಈ ರಸ್ತೆ 16 ಮೀಟರ್ ಅಗಲವಿದೆ.  ಈ ರಸ್ತೆಯ ಪಕ್ಕದಲ್ಲಿ ಡಕ್ಟ್, ಫುಟಪಾತ್, ವಿದ್ಯುತ್ ದೀಪಗಳು, ಡ್ರೇನ್, ಒಳಚರಂಡಿ ವ್ಯವಸ್ಥೆಯನ್ನು ಮಾಡಲಾಗಿದ್ದು, ಇದೊಂದು ಮಾದರಿ ರಸ್ತೆಯಾಗಿದೆ. ನಗರ ಬಿಜೆಪಿ ಶಾಸಕ ಬಸನಗೌಡ ರಾ. ಪಾಟೀಲ ಯತ್ನಾಳ ಅವರ ಉತ್ಸುಕತೆಯಿಂದ ಈ ಕಾರ್ಯ ನಡೆದಿದ್ದು, ನಾಳೆ ಬೆ. 11ಕ್ಕೆ ಲೋಕಾರ್ಪಣೆ ನಡೆಯಲಿದೆ.

ದೇಶದಲ್ಲಿ 2ನೇ, ರಾಜ್ಯದಲ್ಲಿ ಮೊದಲ ವಾಜಪೇಯಿ ಬೃಹತ್​ ಪ್ರತಿಮೆ

ವಾಜಪೇಯಿ ಮಾರ್ಗ್ ಉದ್ಘಾಟನೆಯ ಜೊತೆಯಲ್ಲಿಯೇ ಕಿರಾಣಾ ಬಜಾರ ಬಳಿ ಇದೇ ರಸ್ತೆಯಲ್ಲಿ ವಾಜಪೇಯಿ ಅವರ ಕಂಚಿನ ಪ್ರತಿಮೆಯ ಅನಾವರಣವೂ ನಡೆಯಲಿದೆ. 6 ಅಡಿ ಎತ್ತರದ ಕಟ್ಟೆಯನ್ನು ನಿರ್ಮಿಸಿ ಅದರ ಮೇಲೆ ಈ 6 ಅಡಿ ಎತ್ತರದ ವಾಜಪೇಯಿ ಅವರ ಕಂಚಿನ ಮೂರ್ತಿಯನ್ನು ನಿಲ್ಲಿಸಲಾಗಿದೆ.  ಉತ್ತರ ಪ್ರದೇಶದ ಲಖನೌ ನಂತರ  ಇಷ್ಟೋಂದು ದೊಡ್ಡದಾದ ವಾಜಪೇಯಿ ಅವರು ನಿಂತಿರುವ ಕಂಚಿನ ಪ್ರತಿಮೆ ನಗರದಲ್ಲಿ ಅನವಾರಣಗೊಳ್ಳಲಿದೆ. ರಾಜ್ಯದಲ್ಲಿ ವಾಯಪೇಯಿ ಅವರ ಮೊದಲ ಪ್ರತಿಮೆ ಇದಾಗಿದೆ.  6.50 ಲಕ್ಷ ವೆಚ್ಚದ ಮೂರ್ತಿಯನ್ನು ರೂ. 2.80 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗಿರುವ ಕಟ್ಟೆಯನ್ನು ಅಂದರೆ ಪೆಡಸ್ಟೈಲ್ ನಿರ್ಮಾಣದ ಸಂಪೂರ್ಣ ಹಣವನ್ನು ಶಾಸಕ ಬಸನಗೌಡ ರಾ. ಪಾಟೀಲ ಯತ್ನಾಳ ನೀಡಿದ್ದಾರೆ. 

Vajpayee Statue inauguration tomorrow in vijayapura 

 ಈ ಕುರಿತು ಪ್ರತಿಕ್ರಿಯೆ ನೀಡಿರುವ  ನಗರ ಬಿಜೆಪಿ ಶಾಸಕ ಬಸನಗೌಡ ರಾ. ಪಾಟೀಲ ಯತ್ನಾಳ, ವಿಜಯಪುರ ಜ್ಞಾನಯೋಗಾಶ್ರಮದ ಶ್ರೀ ಸಿದ್ಧೇಶ್ವರ ಸ್ವಾಮೀಜಿ ಸಾನಿಧ್ಯದಲ್ಲಿ ಈ ಕಾರ್ಯಕ್ರಮ ನಡೆಯಲಿದೆ.  ಈ ಕಾರ್ಯಕ್ರಮವನ್ನು ವರ್ಚ್ಯೂವಲ್ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ಲೋಕಾರ್ಪಣೆ ಮಾಡಲಿದ್ದಾರೆ.  ಈ ಕುರಿತು ತಾವು ಈಗಾಗಲೇ ಪ್ರಧಾನಿ ಅವರಿಗೆ ಮನವಿ ಮಾಡಿದ್ದೇನೆ.  ಪ್ರಧಾನಿ ಅವರು ರಾಜ್ಯ ಮುಖ್ಯ ಕಾರ್ಯದರ್ಶಿಗಳಿಂದ ಈ ಕಾರ್ಯಕ್ರಮದ ಕುರಿತು ಮಾಹಿತಿ ಪಡೆದಿದ್ದಾರೆ. ಇಂದು ಸಂಜೆಯ ವರೆಗೆ ಈ ಕುರಿತು ಪ್ರಧಾನಿ ಅಧಿಕೃತ ಮಾಹಿತಿ ನೀಡುವ ವಿಶ್ವಾಸವಿದೆ ಎಂದು ತಿಳಿಸಿದರು.

ಇಂಡಿ ರಸ್ತೆ ವಿಜಯಪುರ ನಗರದ ಪ್ರಮುಖ ವ್ಯಾಪಾರ ಮತ್ತು ವಾಣಿಜ್ಯ ಕೇಂದ್ರಗಳ ರಸ್ತೆ.  ಸುಮಾರು ರೂ. 20 ಕೋ. ವೆಚ್ಚದಲ್ಲಿ ಈಗ ರಸ್ತೆ ನಿರ್ಮಾಣ ಮಾಡಲಾಗಿದೆ.  ಮತ್ತೆ ರೂ. 10 ಕೋ. ವೆಚ್ಚದಲ್ಲಿ ಇದನ್ನು ಬೈಪಾಸ್ ರಸ್ತೆಯವರೆಗೆ ವಿಸ್ತರಿಸಲಾಗುವುದು.  ಇಂಡಿ ರಸ್ತೆಗೆ ಭಾರತ ರತ್ನ ಅಟಲ ಬಿಹಾರಿ ವಾಜಪೇಯಿ ಮಾರ್ಗ ಎಂದು ನಾಮಕರಣ ಮಾಡಲಾಗುತ್ತಿದೆ ತಿಳಿಸಿದರು.  

ವಾಜಪೇಯಿ ಸರಕಾರದಲ್ಲಿ ಯತ್ನಾಳ ಮೊದಲಿಗೆ ಕೇಂದ್ರ ಜವಳಿ ಮತ್ತು ನಂತರ ರೇಲ್ವೆ ಖಾತೆ ಸಹಾಯಕರಾಗಿ ಕೆಲಸ ಮಾಡಿದ್ದರು.  ಈ ಸಂದರ್ಭದಲ್ಲಿ ವಾಜಪೇಯಿ ಅವರು ಅಂದು ಎನ್ ಡಿ ಎ ಅಂಗಪಕ್ಷವಾಗಿದ್ದ ತೆಲಗು ದೇಶಂ ಪಾರ್ಟಿ ಆಲಮಟ್ಟಿ ಜಲಾಷಯದ ಎತ್ತರವನ್ನು 519.60 ಮೀ. ಗೆ ಹೆಚ್ಚಳಕ್ಕೆ ವಿರೋಧ ವ್ಯಕ್ತಪಡಿಸಿತ್ತು.  ಆದರೂ, ಉತ್ತರ ಕರ್ನಾಟಕದ ಜೀವನಾಡಿಯಾಗಿರುವ ಆಲಮಟ್ಟಿ ಜಲಾಶಯದ ಎತ್ತರ ಹೆಚ್ಚಳದ ವಿಚಾರದಲ್ಲಿ ವಾಜಪೇಯಿ ಕರ್ನಾಟಕದ ಪರವಾಗಿ ನಿಂತಿದ್ದರು.

ಅಲ್ಲದೇ, ಯಾವುದೇ ಗಾಡ್ ಫಾದರ್ ಇಲ್ಲದೇ ತಮ್ಮನ್ನು ರಾಜಕೀಯವಾಗಿ ಬೆಳೆಯಲು ಕಾರಣರಾದ ಹಿನ್ನೆಲೆಯಲ್ಲಿ ವಾಜಪೇಯಿ ಅವರ ಸ್ಮರಣಾರ್ಥ ಈ ರಸ್ತೆ ವಾಜಪೇಯಿ ಅವರ ನಾಮಕರಣ ಮತ್ತು ಅವರ ಮೂರ್ತಿ ಸ್ಥಾಪನೆ ಮಾಡುತ್ತಿರುವುದಾಗಿ ತಿಳಿಸಿದ್ದಾರೆ. 

ನಾಳೆಯ ವಾಜಪೇಯಿ ಅವರ ಜನ್ಮದಿನ, ರಸ್ತೆ ಉದ್ಘಾಟನೆ ಮತ್ತು ಮೂರ್ತಿ ಲೋಕಾರ್ಪಣೆಗಾಗಿ  ಸಕಲ ಸಿದ್ಧತೆಗಳನ್ನು ಮಾಡಲಾಗಿದೆ.  ಇಡೀ ರಸ್ತೆಯಲ್ಲಿ ಕೇಸರಿ ಬಣ್ಣದ ಪರಪರಿಗಳನ್ನು ಕಟ್ಟಲಾಗಿದೆ.  ಇಡೀ ವೃತ್ತವನ್ನು ಶುಚಿಗೊಳಿಸಲಾಗಿದೆ. ಅಷ್ಟೇ ಅಲ್ಲ, ಯತ್ನಾಳ ತಾವು ಅಧ್ಯಕ್ಷರಾಗಿರುವ ಶ್ರೀ ಸಿದ್ಧೇಶ್ವರ ಸಂಸ್ಥೆಯ ಅಡಿಯಲ್ಲಿ ಸಂಸ್ಥೆಯ ವತಿಯಿಂದ ನಗರದ ಅಥಣಿ ರಸ್ತೆಯಲ್ಲಿರುವ ಕೋರ್ಚ್ ಕಾಲೋನಿಯಲ್ಲಿ ಹೊಸದಾಗಿ ನಿರ್ಮಿಸಲಾಗಿರುವ ರೂ. 5 ಕೋ. ವೆಚ್ಚದಲ್ಲಿ 2 ಎಕರೆಯಲ್ಲಿ ನಿರ್ಮಿಸಿದ ಸಿ ಬಿ ಎಸ್ ಸಿ. ಹೊಸ ಶಿಶು ನಿಕೇತನ ಶಾಲೆಗೆ ಶ್ರೀ ಅಟಲ್ ಬಿಹಾರಿ ವಾಜಪೇಯಿ ಶಿಶು ನಿಕೇತನ ಎಂದು ನಾಮಕರಣ ಮಾಡಿದ್ದು, ಈ ಶಾಲೆಯ ಉದ್ಘಾಟನೆಯನ್ನೂ ಕೂಡ ವಾಜಪೇಯಿ ಅವರ ಜನ್ಮದಿನವಾದ ನಾಳೆ ಮಾಡಲಿದ್ದಾರೆ.
Published by:Seema R
First published: