ನಾಡಿನೆಲ್ಲೆಡೆ ವೈಕುಂಠ ಏಕಾದಶಿ ಸಂಭ್ರಮ; ಇಂದು ವಿಷ್ಣುವಿನ ದರ್ಶನ ಪಡೆದರೆ ಮೋಕ್ಷ ಪ್ರಾಪ್ತಿ..!

ವೈಕುಂಠ ಏಕಾದಶಿಯ ದಿನ ವೈಕುಂಠದ ಬಾಗಿಲು ತೆರೆದಿರುತ್ತದೆ ಎಂದು ಪ್ರತೀತಿ ಇದೆ. ಅಂದು ವೆಂಕಟೇಶ್ವರ, ಶ್ರೀನಿವಾಸ, ವಿಷ್ಣು ದೇವರ ದರ್ಶನ ಪಡೆದರೆ ಸ್ವರ್ಗ ಪ್ರಾಪ್ತಿಯಾಗುತ್ತದೆ ಎಂಬ ಭಾವನೆಯು ಇದೆ.

Latha CG | news18india
Updated:December 18, 2018, 1:09 PM IST
ನಾಡಿನೆಲ್ಲೆಡೆ ವೈಕುಂಠ ಏಕಾದಶಿ ಸಂಭ್ರಮ; ಇಂದು ವಿಷ್ಣುವಿನ ದರ್ಶನ ಪಡೆದರೆ ಮೋಕ್ಷ ಪ್ರಾಪ್ತಿ..!
ವೈಕುಂಠ ಏಕಾದಶಿ
Latha CG | news18india
Updated: December 18, 2018, 1:09 PM IST
ಇಂದು ನಾಡಿನೆಲ್ಲೆಡೆ ವೈಕುಂಠ ಏಕಾದಶಿ ಸಂಭ್ರಮ ಮನೆಮಾಡಿದೆ. ವೈಕುಂಠ ಏಕಾದಶಿ ಏಕಾದಶಿಗಳಲ್ಲಿ ವಿಶೇಷ ದಿನ. ಚಾಂದ್ರಮಾನ ಪುಷ್ಯಮಾಸ ಶುಕ್ಲಪಕ್ಷದ ಏಕಾದಶಿಯೇ ಈ ವಿಶೇಷ ದಿನ. ಈ ದಿನ ವೆಂಕಟೇಶ್ವರ, ಶ್ರೀನಿವಾಸ, ವಿಷ್ಣು ದೇವಸ್ಥಾನಗಳಲ್ಲಿ ಜನಸಂದಣಿ ಹೆಚ್ಚು. ಈ ದಿನ ದೇವಸ್ಥಾನಗಳಲ್ಲಿ ನಿರ್ಮಿಸಿರುವ ವೈಕುಂಠ ದ್ವಾರವನ್ನು ಪ್ರವೇಶಿಸಿದರೆ ಮೋಕ್ಷ ಸಿಗುವುದೆಂಬ ಪ್ರತೀತಿಯಿದೆ.

ಏಕಾದಶ ಈ ಸಂಸ್ಕೃತ ಪದದ ಅರ್ಥ ಹನ್ನೊಂದು. ಹಿಂದೂ ಪಂಚಾಂಗದ 12 ಮಾಸಗಳ ಶುಕ್ಲ ಪಕ್ಷದ ಮತ್ತು ಕೃಷ್ಣ ಪಕ್ಷದ ಹನ್ನೊಂದನೆಯ ದಿನವನ್ನು ಏಕಾದಶಿ ಎನ್ನಲಾಗುತ್ತದೆ. ಒಂದು ಮಾಸದಲ್ಲಿ ಎರಡು ಏಕಾದಶಿಗಳಿರುತ್ತವೆ. ಈ ದಿನದಂದು ಯಾವ ಆಹಾರವನ್ನೂ ಸೇವಿಸದೆ, ಉಪವಾಸ ಮಾಡುವ ಸಂಪ್ರದಾಯವಿದೆ.  ವೈಕುಂಠ ಏಕಾದಶಿಯ ದಿನ ವೈಕುಂಠದ (ಸ್ವರ್ಗದ ಅಥವಾ ವಿಷ್ಣುಲೋಕದ) ಬಾಗಿಲು ತೆರೆದಿರುತ್ತದೆ ಎಂದು ಪ್ರತೀತಿ ಇದೆ. ಅಂದು ವೆಂಕಟೇಶ್ವರ, ಶ್ರೀನಿವಾಸ, ವಿಷ್ಣು ದೇವರ ದರ್ಶನ ಪಡೆದರೆ ಸ್ವರ್ಗ ಪ್ರಾಪ್ತಿಯಾಗುತ್ತದೆ ಎಂಬ ಭಾವನೆಯು ಇದೆ.

ನಾಡಿನೆಲ್ಲೆಡೆ ವೈಕುಂಠ ಏಕಾದಶಿ ಆಚರಣೆ:

ಸಾಂಸ್ಕೃತಿಕ ನಗರಿಯಲ್ಲಿ ವೆಂಕಟೇಶ್ವರನ ದರ್ಶನ ಪಡೆಯಲು ಮುಂಜಾನೆಯಿಂದಲೇ ಭಕ್ತರ ದಂಡು ಹರಿದು ಬಂದಿದೆ. ಮೈಸೂರಿನ ವಿವಿಧ ದೇವಾಲಯಗಳಲ್ಲಿ ಬೆಳಗ್ಗೆ 4 ಗಂಟೆಯಿಂದಲೇ ಉತ್ತರದ್ವಾರದ ಬಾಗಿಲು ತೆರೆದು ಪೂಜೆ ಪುನಸ್ಕಾರ ಮಾಡಲಾಗುತ್ತಿದೆ. ನಂಜನಗೂಡು ರಸ್ತೆಯ ವೆಂಕಟೇಶ್ವರ ದೇವಾಲಯ, ಒಂಟಿಕೊಪ್ಪಲಿನ ವೆಂಕಟೇಶ್ವರ ದೇವಾಲಯಗಳಲ್ಲಿ ವೈಕುಂಠ ಏಕಾದಶಿಯ ದರ್ಶನ ಪಡೆಯುತ್ತಿದ್ದಾರೆ.

ಇದನ್ನೂ ಓದಿ: ವಿವಿಧ ಬೇಡಿಕೆಗೆ ಒತ್ತಾಯಿಸಿ ಶ್ರೀಕಂಠೇಶ್ವರ ದೇವಾಲಯದ ನೌಕರರಿಂದ ಪ್ರತಿಭಟನೆ

ಮೈಸೂರಿನ ಗಣಪತಿ ಸಚ್ಚಿದಾನಂದ ಸ್ವಾಮೀಜಿ ವೈಕುಂಠ ಏಕಾದಶಿ ಆಚರಣೆ ಕುರಿತು ನ್ಯೂಸ್​ 18 ಕನ್ನಡದ ಜೊತೆ ಮಾತನಾಡಿದ್ದಾರೆ. ವೈಕುಂಠ ಏಕಾದಶಿಯ ದಿನ ವೆಂಕಟೇಶ್ವರ ದರ್ಶನ ಮಾಡಬೇಕು. ದೇವಾನು ದೇವತೆಗಳೆ ಅವನ ದರ್ಶನಕ್ಕೆ ಕಾಯುತ್ತಿದ್ದರು. ಆಗ ಉತ್ತರ ದ್ವಾರದಿಂದ ಭಗವಂತ ಎಲ್ಲರಿಗೂ ದರ್ಶನ ನೀಡಿದ. ತನ್ನ ನಂಬಿದ ಭಕ್ತರಿಗಾಗಿ ವೆಂಕಟೇಶ್ವರ ಬೆಟ್ಟವನ್ನೆ ಎತ್ತಿ ಆನಂದ ನೀಡಿದ್ದಾನೆ. ಕರ್ತವ್ಯ ಬಿಟ್ಟು ದೇವರನ್ನ ನೋಡಬೇಡಿ. ಆದರೆ ಇಂದು ಸಂಜೆಯೊಳಗಾಗಿ ಹೇಗಾದರೂ ಮಾಡಿ ದರ್ಶನ ಪಡೆದರೆ ಮುಕ್ತಿ ಸಿಗುತ್ತದೆ. ದತ್ತ ವೆಂಕಟೇಶ್ವರ ದೇವಾಲಯದಲ್ಲಿ ಅನೇಕ ಪೂಜೆ ನಡೆದಿದೆ. ವೈಕುಂಠ ಏಕಾದಶಿಯದ ಉತ್ತರ ದ್ವಾರ ದರ್ಶನವು ಸಿಗಲಿದೆ ಎಂದು ಹೇಳಿದರು.

ಸಿಲಿಕಾನ್ ಸಿಟಿಯಲ್ಲಿ ವೈಕುಂಠ ಏಕಾದಶಿ:
Loading...

ಇಸ್ಕಾನ್​ ದೇವಾಲಯದಲ್ಲಿ ಬೆಳಗ್ಗೆ 3 ಗಂಟೆಗೆ ವೈಕುಂಠ ದ್ವಾರದ ಬಾಗಿಲು ತೆರೆದು ದರ್ಶನಕ್ಕೆ ಅನುವು ಮಾಡಕೊಡಲಾಯಿತು. ಭಕ್ತರು ದೇಶ-ವಿದೇಶದಿಂದ ಇಸ್ಕಾನ್​ ದೇವಾಲಯಕ್ಕೆ ಆಗಮಿಸಿದ್ದರು. ಇಡೀ ದೇವಾಲಯವನ್ನು ವಿಶೇಷವಾಗಿ ಅಲಂಕಾರ ಮಾಡಲಾಗಿದೆ. ಮಲೇಶ್ವರಂನ ಚಿಕ್ಕ ತಿರುಪತಿಯಲ್ಲಿ ಬೆಳಗಿನ ಜಾವ 4. 40 ಕ್ಕೆ ವೈಕುಂಠ ದ್ವಾರ ತೆರೆಯಲಾಯಿತು. ಸಾವಿರಾರು ಭಕ್ತರು ಮಹಾವಿಷ್ಣುವನ ದರ್ಶನ ಪಡೆದು ಪುನೀತರಾದರು.

ಇನ್ನೂ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಆದಿರಂಗ ಶ್ರೀರಂಗನಾಥನ ದರ್ಶನ ಪಡೆಯಲು ಸಾವಿರಾರು ಭಕ್ತರು ಆಗಮಿಸಿದ್ದಾರೆ. ಇಂದು ಆದಿರಂಗ, ಮಧ್ಯರಂಗ, ಅಂತ್ಯರಂಗನ ದರ್ಶನ ಪಡೆದರೆ ಮೋಕ್ಷ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ. ಇನ್ನೂ ನೆಲಮಂಗಲ, ಶಿವಮೊಗ್ಗ, ಕೋಲಾರ, ರಾಮನಗರ ಇನ್ನೂ ಮೊದಲಾದ ಕಡೆಗಳಲ್ಲಿ ವಿಷ್ಣುವಿಗೆ ಪೂಜೆ-ಪುನಸ್ಕಾರಗಳು ನಡೆಯುತ್ತಿದ್ದು, ಲಕ್ಷಾಂತರ ಭಕ್ತರು ದೇವರ ದರ್ಶನ ಪಡೆಯುತ್ತಿದ್ದಾರೆ.

First published:December 18, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ