HOME » NEWS » State » VAIKUNTA EKADASI CELEBRATION IN RANGANATHSWAMY TEMPLE IN CHAMARAJANAGARA HK

Vaikunta Ekadasi: ವೈಕುಂಠ ಏಕಾದಶಿಯ ದಿನ ತ್ರಿರಂಗ ದರ್ಶನ: ಗ್ರಹಗತಿಗಳ ದೋಷ ಪರಿಹಾರದ ನಂಬಿಕೆ

vaikunta ekadasi: ಶ್ರೀರಂಗನಾಥಸ್ವಾಮಿ ದರ್ಶನವನ್ನು ವೈಕುಂಠ ಏಕಾದಶಿಯ ಒಂದೇ ದಿನ ಬೆಳಿಗ್ಗೆ ಸೂರ್ಯೋದಯದಿಂದ ಸೂರ್ಯಾಸ್ತ ವಾಗುವವರೆಗೆ ಪಡೆದರೆ ಗ್ರಹಗತಿಗಳ ದೋಷ ಪರಿಹಾರವಾಗುತ್ತದೆ.

news18-kannada
Updated:December 25, 2020, 2:39 PM IST
Vaikunta Ekadasi: ವೈಕುಂಠ ಏಕಾದಶಿಯ ದಿನ ತ್ರಿರಂಗ ದರ್ಶನ: ಗ್ರಹಗತಿಗಳ ದೋಷ ಪರಿಹಾರದ ನಂಬಿಕೆ
ವೈಕುಂಠ ಏಕಾದಶಿ
  • Share this:
ಚಾಮರಾಜನಗರ(ಡಿಸೆಂಬರ್ 25): ವೈಕುಂಠ ಏಕಾದಶಿಯ ದಿನ ಕಾವೇರಿ ನದಿ ತಟದಲ್ಲಿರುವ ಆದಿರಂಗ, ಮದ್ಯರಂಗ, ಹಾಗು ಅಂತ್ಯರಂಗ ಈ ಮೂರು ಕಡೆಗೂ ಒಂದೇ ದಿನ ಭೇಟಿ ನೀಡಿ ರಂಗನಾಥಸ್ವಾಮಿಯ ದರ್ಶನ ಪಡೆದರೆ ಮೋಕ್ಷ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ. ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ, ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲೂಕಿನ ಶಿವನಸಮುದ್ರ ಹಾಗು ತಮಿಳುನಾಡಿನ ತಿರುಚಿನಾಪಳ್ಳಿ ಜಿಲ್ಲೆಯ ಶ್ರೀರಂಗನಲ್ಲಿ ಕಾವೇರಿ ನದಿ ತಟದಲ್ಲಿ ಶ್ರೀರಂಗನಾಥಸ್ವಾಮಿ ದೇವಾಲಯಗಳಿವೆ. ಈ ಮೂರು ದೇವಾಲಯಗಳಲ್ಲಿ ಆದಿಶೇಷನ ಮೇಲೆ ಶಯನಾವಸ್ಥೆಯ ಭಂಗಿಯಲ್ಲಿರುವ ಒಂದೇ ರೀತಿಯ ಶ್ರೀರಂಗನಾಥಸ್ವಾಮಿಯ ಮೂರ್ತಿಗಳು ಇವೆ. ಶ್ರೀರಂಗಪಟ್ಟಣವನ್ನು  ಆದಿರಂಗವೆಂತಲೂ, ಶಿವನಸಮುದ್ರವನ್ನು ಮದ್ಯರಂಗವೆಂತಲೂ ತಮಿಳುನಾಡಿನ ಶ್ರೀರಂಗಂನನ್ನು ಅಂತ್ಯರಂಗವೆಂತಲೂ ಕರೆಯುತ್ತಾರೆ. ಈ ಮೂರು ಕಡೆ  ನೆಲೆಸಿರುವ ಶ್ರೀರಂಗನಾಥಸ್ವಾಮಿ ದರ್ಶನವನ್ನು ವೈಕುಂಠ ಏಕಾದಶಿಯ ಒಂದೇ ದಿನ ಬೆಳಿಗ್ಗೆ ಸೂರ್ಯೋದಯದಿಂದ ಸೂರ್ಯಾಸ್ತ ವಾಗುವವರೆಗೆ ಪಡೆದರೆ ಗ್ರಹಗತಿಗಳ ದೋಷ ಪರಿಹಾರವಾಗುತ್ತದೆ.

ಎಲ್ಲಾ ಪಾಪ ಕರ್ಮಗಳು ನಾಶವಾಗಿ ಒಳ್ಳೆಯದಾಗುತ್ತದೆ ಎಂಬ ನಂಬಿಕೆ ಇದ್ದು, ಇಂದಿಗೂ ಹಲವಾರು ಭಕ್ತರು  ವೈಕುಂಠ ಏಕಾದಶಿಯ ದಿನ ಈ ತ್ರಿರಂಗ ಕ್ಷೇತ್ರಗಳಿಗೆ ಒಂದೇ ದಿನ ಭೇಟಿ ನೀಡಿ ಶ್ರೀರಂಗನಾಥಸ್ವಾಮಿಯ ದರ್ಶನ ಪಡೆಯುತ್ತಾರೆ.

ಈ ಹಿಂದೆ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರು ಹಲವಾರು ಬಾರಿ ಈ  ಮೂರು ಕಡೆ ವೈಕುಂಠ ಏಕಾಶಿಯ ದಿನ ಭೇಟಿ ನೀಡಿ ಶ್ರೀರಂಗನಾಥಸ್ವಾಮಿ ದರ್ಶನ ಪಡೆಯುತ್ತಿದ್ದರು. ಇತ್ತೀಚಿನ ವರ್ಷಗಳಲ್ಲಿ ಅವರ ಮಗ, ಮಾಜಿ ಸಚಿವ ಹೆಚ್.ಡಿ.ರೇವಣ್ಣ ಈ ಪರಿಪಾಠ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಇಂದು ಬೆಳಿಗ್ಗೆ ಶಿವನಸಮುದ್ರಕ್ಕೆ ಭೇಟಿ ನೀಡಿದ್ದ ಹೆಚ್.ಡಿ.ರೇವಣ್ಣ  ಮದ್ಯರಂಗನ ದರ್ಶನ ಪಡೆದರು.

ಮದ್ಯರಂಗನ ದರ್ಶನ ಪಡೆದ ಮಾಜಿ ಸಚಿವ ಹೆಚ್ ಡಿ ರೇವಣ್ಣ


ಕಾವೇರಿ ನದಿ ಹರಿಯವ ಮಾರ್ಗದಲ್ಲಿ ಮೊದಲಿಗೆ ಶ್ರೀರಂಗಪಟ್ಟಣ (ಆದಿರಂಗ) ನಂತರ ಶಿವನಸಮುದ್ರ ( ಮದ್ಯರಂಗ) ಹಾಗು ಕೊನೆಯದಾಗಿ ಶ್ರೀರಂಗಂ (ಅಂತ್ಯರಂಗ) ಕ್ಷೇತ್ರಗಳಿರುವುದು ವಿಶೇಷವಾಗಿದೆ.ಅದರಲ್ಲು ಕಾವೇರಿ ನದಿಯ ತಟದಲ್ಲಿ ರೂಪುಗೊಂಡಿರುವ ದ್ವೀಪಗಳಲ್ಲೇ ಈ ದೇವಾಲಯಗಳು ನಿರ್ಮಾಣಗೊಂಡಿವೆ.

ಶ್ರೀರಂಗಪಟ್ಟಣವನ್ನು ಗೌತಮ ಕ್ಷೇತ್ರವೆಂದೂ ಇಲ್ಲಿ ಶ್ರೀರಂಗನಾಥಸ್ವಾಮಿಯ ಮೂರ್ತಿಯು ರಾಮನ ಭಕ್ತ ಚಿರಂಜೀವಿ  ಎನಿಸಿದ ವಿಭೀಷಣನಿಂದ ಇಂದಿಗೂ ಪೂಜಿಸಲ್ಪಡುತ್ತಿದೆ ಎಂಬ ನಂಬಿಕೆ ಇದೆ. ಕಾವೇರಿ ನದಿಯಿಂದ ಸುತ್ತುವರಿದಿರುವ ಪ್ರದೇಶದಲ್ಲಿ ಇಲ್ಲಿನ ದೇವಾಲಯವಿದೆ.ಶಿವನಸಮುದ್ರದಲ್ಲಿರುವ ಶ್ರೀರಂಗನಾಥಸ್ವಾಮಿ ದೇವಾಲಯವನ್ನು ದ್ರಾವಿಡ ಶೈಲಿಯಲ್ಲಿ ನಿರ್ಮಿಸಲಾಗಿದೆ.

ಇಲ್ಲಿನ ಶ್ರೀರಂಗನಾಥಸ್ವಾಮಿಯನ್ನು ಮೋಹನರಂಗ, ಜಗನ್ಮೋಹನರಂಗ ಎಂದು ಸಹ ಕರೆಯುತ್ತಾರೆ. ಇದೂ ಸಹ ಕಾವೇರಿ ನದಿಯಿಂದ ಸುತ್ತುವರಿದು ದ್ವೀಪದಂತಿರುವ ಪ್ರದೇಶದಲ್ಲಿ ನಿರ್ಮಾಣವಾಗಿದೆ.ಇನ್ನು ತಮಿಳುನಾಡಿನ ತಿರುಚಿನಾಪಳ್ಳಿ ಜಿಲ್ಲೆಯ ಶ್ರೀರಂಗನಲ್ಲಿರುವ ಶ್ರೀರಂಗನಾಥಸ್ವಾಮಿ ದೇವಾಲಯವು ಶ್ರೀರಂಗಪಟ್ಟಣ ಹಾಗು ಶಿವನಸಮುದ್ರದಲ್ಲಿರುವ ದೇವಸ್ಥಾನಗಳಿಗಿಂತಲೂ ದೊಡ್ಡದಾಗಿದೆ. ದೇಶದ ಅತಿ  ದೊಡ್ಡ ದೇವಾಲಯಗಳ ಪೈಕಿ  ಶ್ರೀರಂಗಂನಲ್ಲಿರುವ ರಂಗನಾಥಸ್ವಾಮಿ ದೇವಾಲಯವೂ ಒಂದಾಗಿದೆ. ಶ್ರೀರಂಗಂ ಸಹ ಕಾವೇರಿ ನದಿಯಿಂದ ಸುತ್ತುವರಿದು ದ್ವೀಪದಂತಿದೆ.ಇದನ್ನೂ ಓದಿ : ಮತದಾನ ಜಾಗೃತಿ ಮೂಡಿಸುತ್ತಿರುವ ಪೊಲೀಸ್ ಸಿಬ್ಬಂದಿ ಮಗ : ಮತ ಮಾರಾಟ ಮಾಡದಂತೆ ಕರೆ

ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದಿಂದ ತಮಿಳುನಾಡಿನ ಶ್ರಿರಂಗಂ ಸುಮಾರು 380 ಕಿಲೋ ಮೀಟರ್ ದೂರವಿದೆ ಒಂದು ದಿನ ಮುಂಚಿತವಾಗಿಯೇ ಶ್ರೀರಂಗಪಟ್ಟಣಕ್ಕೆ ಬಂದು ವಾಸ್ತವ್ಯ ಹೂಡಿ, ವೈಕುಂಠ ಏಕಾದಶಿಯ ದಿನ ಬೆಳಿಗೆ ಸೂರ್ಯೋದಯದ ವೇಳೆ  ಶ್ರೀರಂಗನಾಥಸ್ವಾಮಿಯ ದರ್ಶನ ಪಡದು ನಂತರ ಕಾರಿನಲ್ಲಿ ಎರಡು ಗಂಟೆ ಪ್ರಯಾಣಿಸಿ ಶಿವನಸಮುದ್ರಕ್ಕೆ ಭೇಟಿ ನೀಡಿ ಮದ್ಯರಂಗನ ದರ್ಶನ ಪಡೆಯಬಹುದು.
Youtube Video

ನಂತರ ಇಲ್ಲಿಂದ ಸುಮಾರು ಏಳೆಂಟು ಗಂಟೆ ಪ್ರಯಾಣಿಸಿ ಶ್ರೀರಂಗಂ ತಲುಪಿ ಸೂರ್ಯಾಸ್ತವಾಗುವುದರೊಳಗೆ ಅಲ್ಲಿನ ಶ್ರೀರಂಗನಾಥಸ್ವಾಮಿ ದರ್ಶನ ಪಡೆಯಬಹುದು.
Published by: G Hareeshkumar
First published: December 25, 2020, 2:37 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories