ಬೆಂಗಳೂರು(ಡಿ.24): ನಾಳೆ ವೈಕುಂಠ ಏಕಾದಶಿ. ಕೊರೋನಾ ಬಂದಿಲ್ಲ ಎಂದಿದ್ದರೆ ಎಲ್ಲಾ ದೇವಾಲಯಗಳಲ್ಲೂ ಭಕ್ತರದ್ದೇ ಕಾರುಬಾರು ಇರುತ್ತಿತ್ತು. ಪ್ರತೀ ವರ್ಷ ಸಂಭ್ರಮದಿಂದ ಆಚರಿಸಲಾಗುತ್ತಿದ್ದ ವೈಕುಂಠ ಏಕಾದಶಿಯನ್ನು ಈ ವರ್ಷ ಆಚರಿಸಲು ಸಾಧ್ಯವಿಲ್ಲ. ಕಾರಣ ಮಹಾಮಾರಿ ಕೊರೋನಾ. ಹೌದು, ಈ ಕೊರೋನಾ ಕಾರಣದಿಂದಾಗಿ ನಾಳಿನ ವೈಕುಂಠ ಏಕಾದಶಿಯಂದು ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶವಿಲ್ಲ. ಬೆಂಗಳೂರಿನ ಬಹುತೇಕ ಎಲ್ಲಾ ದೇವಾಲಯಗಳಲ್ಲಿ ಸಾರ್ವಜನಿಕರ ಪ್ರವೇಶಕ್ಕೆ ನಿಷೇಧ ಹೇರಲಾಗುತ್ತದೆ ಎಂದು ತಿಳಿದು ಬಂದಿದೆ.
ಕೋವಿಡ್-19 ಹಿನ್ನೆಲೆಯಲ್ಲಿ ದೇವಾಲಯಗಳಿಗೆ ಭಕ್ತರ ಪ್ರವೇಶಕ್ಕೆ ಅವಕಾಶ ಇರುವುದಿಲ್ಲ. ಸರ್ಕಾರದ ಆದೇಶದಂತೆ ಪೂಜೆಗಳು ನಡೆಯುತ್ತವೆ, ಆದರೆ ಭಕ್ತರಿಗೆ ದೇವಾಲಯದೊಳಗೆ ಪ್ರವೇಶವಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.
ಇನ್ನು, ಇಸ್ಕಾನ್ ದೇವಾಲಯದಲ್ಲಿ ಭಕ್ತರಿಗೆ ಆನ್ಲೈನ್ ದರ್ಶನದ ವ್ಯವಸ್ಥೆ ಕಲ್ಪಿಸಲಾಗಿದೆ. ದೇವಸ್ಥಾನದ ಅಧಿಕೃತ ವೆಬ್ ಸೈಟ್ ಆದ www.iskconbangalore.org ನಲ್ಲಿ ಇಡೀ ಕಾರ್ಯಕ್ರಮದ ನೇರ ಪ್ರಸಾರವನ್ನು ನೋಡಬಹುದಾಗಿದೆ.
ರಾತ್ರಿ ಕರ್ಫ್ಯೂ ವಿಧಿಸಿದರೆ ಹಗಲು ಹೊತ್ತಲ್ಲಿ ಕೊರೋನಾ ಬರಲ್ವಾ?; ಶಾಸಕ ಯತ್ನಾಳ ವ್ಯಂಗ್ಯ
ಇಸ್ಕಾನ್ ನಲ್ಲಿ ನಾಳಿನ ಕಾರ್ಯಕ್ರಮಗಳ ವಿವರ ಇಂತಿದೆ.
ಕಾರ್ಯಕ್ರಮಗಳ ವಿವರ
ಮುಂಜಾನೆ 3.45 ಕ್ಕೆ - ಶ್ರೀ ಶ್ರೀ ಶ್ರೀನಿವಾಸ ಗೋವಿಂದ ಮಹಾ-ಅಭಿಷೇಕ
ಮುಂಜಾನೆ 5.45 ರಿಂದ 6.30 ರವರೆಗೆ - ವೈಕುಂಠ ದ್ವಾರ ಪ್ರವೇಶ ಕಾರ್ಯಕ್ರಮ
ಬೆಳಗ್ಗೆ 8.30 ರಿಂದ - ಶ್ರೀ ಶ್ರೀನಿವಾಸ ಗೋವಿಂದ ದೇವಸ್ಥಾನದಲ್ಲಿ ಲಕ್ಷಾರ್ಚನೆ ಸೇವೆ
ಬೆಳಗ್ಗೆ 8.00 ಕ್ಕೆ, ಬೆಳಗ್ಗೆ 11.30 ಕ್ಕೆ, ಸಂಜೆ 6.30 ಕ್ಕೆ - ಶ್ರೀ ಶ್ರೀ ಕೃಷ್ಣ - ರುಕ್ಮಿಣಿ - ಸತ್ಯಭಾಮಾ ಕಲ್ಯಾಣೋತ್ಸವ
ರಾತ್ರಿ 9.00 ಗಂಟೆಗೆ -ಶ್ರೀ ಚಂಚಲಪತಿ ದಾಸ, ಹಿರಿಯ ಉಪಾಧ್ಯಕ್ಷರು, ಇಸ್ಕಾನ್ ಬೆಂಗಳೂರು ಅವರಿಂದ ವೈಕುಂಠ ದ್ವಾರ ಪ್ರವೇಶ ಮತ್ತು ಪರಮಪದ ಏಕಾದಶಿ ಆಚರಣೆ ಬಗ್ಗೆ ವಿಶೇಷ ನಿರೂಪಣೆ ಇರುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ