Yadagiri: ನೀರಾವರಿ ಜಮೀನಿಗೆ ಖುಷ್ಕಿ ಭೂಮಿಯೆಂದು ನಮೂದು; ಪರಿಹಾರ ಕಡಿಮೆ ವಿತರಣೆಗೆ ರೈತರಿಗೆ ಮೋಸದಾಟ

ಈ ಬಗ್ಗೆ ಭೂಮಿ ಕಳೆದುಕೊಂಡ ವಡಗೇರಾ ಗ್ರಾಮದ ರೈತ ಪೀರ್ ಸಾಬ್ ಅವರು ನ್ಯೂಸ್ 18 ಕನ್ನಡಕ್ಕೆ ಮಾತನಾಡಿ, ನಾವು ಮಣ್ಣಿನ ಮಕ್ಕಳು ಜಮೀನು ಇದ್ದರೆ ನಾವು ಬದುಕು ಮಾಡುತ್ತೇವೆ.

ರೈತರ ಪ್ರತಿಭಟನೆ

ರೈತರ ಪ್ರತಿಭಟನೆ

  • Share this:
ಯಾದಗಿರಿ: ಭಾರತೀಯ ರಾಷ್ಟ್ರೀಯ ಹೆದ್ದಾರಿಯ ಪ್ರಾಧಿಕಾರವು (NHAI- National Highways Authority of India) ಭೂಮಿ ಕಳೆದು ರೈತರಿಗೆ ಕಡಿಮೆ ಪರಿಹಾರ ನೀಡಲು ಮುಂದಾಗಿದ್ದಕ್ಕೆ ರೈತರು (Farmers) ಹೆಚ್ಚಿನ ಪರಿಹಾರ ನೀಡಿದರೆ ಭೂಮಿ (Agriculture Land) ನೀಡುತ್ತೇವೆ. ಇಲ್ಲದಿದ್ದರೆ ಜಮೀನು ಕೊಡುವದಿಲ್ಲವೆಂದು ಪಟ್ಟು ಹಿಡಿದಿದ್ದಾರೆ. ಯಾದಗಿರಿ ಜಿಲ್ಲೆಯ ವಡಗೇರಾ (Vadagera, Yadagiri) ತಾಲೂಕಿನ ಕೋನಹಳ್ಳಿ, ಬೆಂಡಬೆಂಬಳಿ, ಮನಗನಾಳ, ವಡಗೇರಾ ಸೇರಿದಂತೆ ಮೊದಲಾದ ಗ್ರಾಮಸ್ಥರ ರೈತರು ಪ್ರತಿ ಎಕರೆಗೆ 50 ಲಕ್ಷ ರೂಪಾಯಿ ಪರಿಹಾರ ನೀಡಬೇಕೆಂದು ಆಗ್ರಹಿಸಿದ್ದಾರೆ. ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಮೂಲಕ ಕೇಂದ್ರ ಸರಕಾರವು ಯಾದಗಿರಿ ಜಿಲ್ಲೆಯಲ್ಲಿ ಭಾರತಮಾಲಾ ಪರಿಯೋಜನೆಯ (Bharatmala Pariyojana) ಅಡಿಯಲ್ಲಿ  ಸೂರತ್ -ಚೆನೈ ಎಕಾನಾಮಿಕ್ ಕಾರಿಡಾರ್ ಭಾಗವಾಗಿ, ಹೊಸದಾಗಿ ರಾಷ್ಟ್ರೀಯ ಹೆದ್ದಾರಿ 150 ಸಿ ನಿರ್ಮಾಣಕ್ಕೆ ಮುಂದಾಗಿದೆ.

ಈ ಹೆದ್ದಾರಿಯು ಶಹಾಪುರ ಹಾಗೂ ವಡಗೇರಾ ಮಾರ್ಗದ ಮೂಲಕ ಹಾದು ಹೋಗುತ್ತದೆ. ಈಗಾಗಲೇ ವಿಶೇಷ ಭೂಸ್ವಾಧೀನಾಧಿಕಾರಿಗಳ ಮೂಲಕ 516 ಹೆಕ್ಟೇರ್ ಪ್ರದೇಶ ಸ್ವಾಧೀನ ಪಡಿಸಿಕೊಳ್ಳಲಾಗಿದೆ. ಸುಮಾರು 21 ಗ್ರಾಮದ ವ್ಯಾಪ್ತಿಯ ರೈತರು ಭೂಮಿಯನ್ನು ಕಳೆದುಕೊಂಡಿದ್ದಾರೆ.

Vadagea Taluku Farmers protest against nhai
ರೈತರ ಪ್ರತಿಭಟನೆ


ಕಡಿಮೆ ಬೆಲೆಗೆ ಭೂಮಿ ನೀಡಲ್ಲ

718 ರೈತರು ಭೂಮಿ ಕಳೆದುಕೊಂಡಿದ್ದಾರೆ. ಆದರೆ, ಕೆಲ ರೈತರು ಹಣದ ಅವಶ್ಯಕಾರಣ ,ಪರಿಹಾರದ ಹಣ ಪಡೆದಿದ್ದು,150 ಕೋಟಿ ರೂಪಾಯಿ ಸರಕಾರ ಪರಿಹಾರದ ಹಣ ನೀಡಿದೆ. ಆದರೆ ವಡಗೇರಾ ತಾಲೂಕಿನ ರೈತರು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನಿಗದಿ ಮಾಡಿದ ಕಡಿಮೆ ಬೆಲೆಗೆ ಭೂಮಿ ನೀಡುವದಿಲ್ಲ.

ಇದನ್ನೂ ಓದಿ:  BJP ಪಕ್ಷಕ್ಕೆ ದೇಣಿಗೆ ಕೊಡುವರಿಗೆ ಶಕ್ತಿ ತುಂಬಿದೆ, ಇಬ್ಬರ ಭೇಟಿ ಒಳ್ಳೆಯದು ಅಲ್ಲವೇ? HD Kumaraswamy

ಪ್ರತಿ ಎಕರೆಗೆ 50 ಲಕ್ಷ ರೂಪಾಯಿ ಪರಿಹಾರದ ಹಣ ನೀಡಿದರೆ ಭೂಮಿ ನೀಡುತ್ತೇವೆ. ಇಲ್ಲದಿದ್ದರೆ ಜೀವ ಹೋದರು ಭೂಮಿ ನೀಡುವದಿಲ್ಲವೆಂದು ರೈತರು ಪಟ್ಟು ಹಿಡಿದಿದ್ದಾರೆ.

ರೈತರಿಗೆ ಮೋಸದಾಟ

ಅದೇ ರೀತಿ ನೀರಾವರಿ ಭೂಮಿಗೆ ಖುಷ್ಕಿ ಭೂಮಿಯೆಂದು ನಮೂದು ಮಾಡಿ ಕಡಿಮೆ ಪರಿಹಾರದ ಹಣ ನಿಗದಿ ಮಾಡಲಾಗಿದೆ. ಪ್ರತಿ ಎಕರೆಗೆ 6  ರಿಂದ 18 ಲಕ್ಷ ರೂಪಾಯಿ ವರಗೆ ನಿಗದಿ ಮಾಡಲಾಗಿದೆ. ನೀರಾವರಿ ಭೂಮಿ ಇದ್ರೂ ಖುಷ್ಕಿ ಭೂಮಿಯೆಂದು ಪ್ರತಿ ಎಕರೆಗೆ 6 ಲಕ್ಷ ರೂಪಾಯಿ ಬೆಲೆ ನಿಗದಿ ಮಾಡಲಾಗಿದೆ.

ನೀರಾವರಿ ಭೂಮಿಗೆ ಖುಷ್ಕಿ ಭೂಮಿ ನಮೂದು ಮಾಡಿ ಸರಕಾರ ರೈತರಿಗೆ ಮೋಸ ಮಾಡುವ ಕೆಲಸ ಮಾಡುತ್ತಿದೆ.

ಈ ಬಗ್ಗೆ ಭೂಮಿ ಕಳೆದುಕೊಂಡ ವಡಗೇರಾ ಗ್ರಾಮದ ರೈತ ಪೀರ್ ಸಾಬ್ ಅವರು ನ್ಯೂಸ್ 18 ಕನ್ನಡಕ್ಕೆ ಮಾತನಾಡಿ, ನಾವು ಮಣ್ಣಿನ ಮಕ್ಕಳು ಜಮೀನು ಇದ್ದರೆ ನಾವು ಬದುಕು ಮಾಡುತ್ತೇವೆ.

ಭೂಮಿ ಕಳೆದುಕೊಂಡ್ರೆ ನಮ್ಮ ಜೀವನ ಹೇಗೆ

ಭೂಮಿ ಕಳೆದುಕೊಂಡರೆ ನಾವು ಹ್ಯಾಂಗ್ ಬದುಕಬೇಕು. ನೀರಾವರಿ ಭೂಮಿ ಇದ್ದರು ನಮ್ಮ ಭೂಮಿಯು ಖುಷ್ಠಿ ಭೂಮಿಯೆಂದು ಮಾಡಿ ಪ್ರತಿ ಎಕರೆಗೆ 6 ಲಕ್ಷ ರೂಪಾಯಿ ಭೂಮಿ ಬೆಲೆ ನಿಗದಿ ಮಾಡಿ ಪರಿಹಾರ ನೀಡುವ ಕೆಲಸ ಮಾಡುತ್ತಿದ್ದಾರೆ.

Vadagea Taluku Farmers protest against nhai
ರೈತರ ಪ್ರತಿಭಟನೆ


ಹೆಚ್ಚಿನ ಪರಿಹಾರ ನೀಡದಿದ್ರೆ ಆತ್ಮಹತ್ಯೆ

ನೀರಾವರಿ ಭೂಮಿ ಇದ್ದರು ಮೋಸ ಮಾಡುತ್ತಿದ್ದಾರೆ. ಪ್ರತಿ ಎಕರೆಗೆ 50 ಲಕ್ಷ ರೂ ಪರಿಹಾರ ನೀಡಬೇಕು. ಒಂದು ವೇಳೆ ಹೆಚ್ಚಿನ ಪರಿಹಾರ ನೀಡದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುತ್ತೆವೆಂದು ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ:  Murder: ಬಿಜೆಪಿ ಯುವ ಮೋರ್ಚಾ ಮುಖಂಡ ಪ್ರವೀಣ್​ ಬರ್ಬರ ಹತ್ಯೆ; ಪುತ್ತೂರಿನಾದ್ಯಂತ 144 ಸೆಕ್ಷನ್ ಜಾರಿ

ಕಾರಣ ಈ ಬಗ್ಗೆ ಸರಕಾರ ಹೆಚ್ಚಿನ ಪರಿಹಾರ ನೀಡುವ ಜೊತೆ ನೀರಾವರಿ ಭೂಮಿಗೆ ಖುಷ್ಠಿ ಭೂಮಿಯೆಂದು ತೆಗೆದು ನೀರಾವರಿ ಭೂಮಿಯೆಂದು ಪರಿಗಣನೆ ಮಾಡಿ ಹೆಚ್ಚಿನ ಪರಿಹಾರ ನೀಡಿ ರೈತರ ಹಿತ ಕಾಪಾಡಬೇಕಿದೆ.
Published by:Mahmadrafik K
First published: