• Home
  • »
  • News
  • »
  • state
  • »
  • Vachananda Swamiji: ಬಿಎಸ್​ವೈಯಿಂದ 10 ಕೋಟಿ ವಸೂಲಿ; ವಚನಾನಂದ ಸ್ವಾಮೀಜಿ ವಿರುದ್ಧ ಯತ್ನಾಳ್ ಆರೋಪ

Vachananda Swamiji: ಬಿಎಸ್​ವೈಯಿಂದ 10 ಕೋಟಿ ವಸೂಲಿ; ವಚನಾನಂದ ಸ್ವಾಮೀಜಿ ವಿರುದ್ಧ ಯತ್ನಾಳ್ ಆರೋಪ

ವಚನನಾಂದ ಸ್ವಾಮೀಜಿ ಮತ್ತು ಬಸನಗೌಡ ಪಾಟೀಲ್ ಯತ್ನಾಳ್

ವಚನನಾಂದ ಸ್ವಾಮೀಜಿ ಮತ್ತು ಬಸನಗೌಡ ಪಾಟೀಲ್ ಯತ್ನಾಳ್

ಯಾವ ಕಾರಣಕ್ಕೆ ಮಠ ಕಟ್ಟಿದ್ದಾರೆ ಎಂದು ಜನರಿಗೆ ಗೊತ್ತಾಗಿದೆ. ಮಠ ಕಟ್ಟಿದ್ದು ಸಮಾಜದ ಉದ್ದಾರಕ್ಕಲ್ಲ, ಮಂತ್ರಿ ಸ್ಥಾನಕ್ಕಾಗಿ. ಮುಂದಿನ ದಿನಗಳಲ್ಲಿ ಜನರೇ ಅದಕ್ಕೆ ತಕ್ಕ ಉತ್ತರ ನೀಡಲಿದ್ದಾರೆ ಎಂದು ಭವಿಷ್ಯ ನುಡಿದರು.

  • Share this:

ತಮ್ಮ ವಿರುದ್ಧ ಜೋಕರ್ (Joker) ಪದ ಬಳಕೆ ಮಾಡಿ ವಾಗ್ದಾಳಿ ನಡೆಸಿದ್ದ ದಾವಣಗೆರೆ ಜಿಲ್ಲೆಯ ಹರಿಹರ ಪಂಚಮಸಾಲಿ ಪೀಠದ ಶ್ರೀ ವಚನಾನಂದ ಸ್ವಾಮೀಜಿಗಳಿಗೆ (Vachananda Swamiji) ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (BJP MLA Basanagowda Patil Yatnal) ತಿರುಗೇಟು ನೀಡಿದ್ದಾರೆ. ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಶಾಸಕ ಯತ್ನಾಳ್, ಹರಿಹರ ಪೀಠದ ಸ್ವಾಮೀಜಿ ಬ್ರೋಕರ್ ಸ್ವಾಮಿ (Broker Swamy) ಆಗಿದ್ದಾರೆ. ಹಣ ವಸೂಲಿ ಮಾಡೋದು, ಮಂತ್ರಿ ಮಾಡಿ ಎಂದು ಹಣ (Money) ಕೇಳುವ ಕೆಲಸ ಮಾಡುತ್ತಾರೆ. ಮಂತ್ರಿ ಮಾಡಿ ಎಂದು ಬ್ರೋಕರ್ ಕೆಲಸ ಮಾಡುತ್ತಾರೆ ಎಂದು ಆರೋಪಿಸಿದರು.


ಹರಿಹರದ ವಚನಾನಂದ ಶ್ರೀಗಳು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ (Former CM BS Yediyurappa) ಬಳಿ 10 ಕೋಟಿ ವಸೂಲಿ ಮಾಡಿದ್ದಾರೆ. ಮಠದಲ್ಲಿ ಅಭಿವೃದ್ಧಿ ಕಾಮಗಾರಿ ಮಾಡುತ್ತೇವೆ ಎಂದು ಹಣ ಪಡೆದಿದ್ದಾರೆ‌. ಮಠದ ಹಣದ ವಿಚಾರದಲ್ಲಿ ಬಳಹ ಅವ್ಯವಹಾರ ಮಾಡಿದ್ದಾರೆ.


ಮುಂಬರುವ ಬೆಳಗಾವಿ ಅಧಿವೇಶನದಲ್ಲಿ ಅವ್ಯವಹಾರದ ಬಗ್ಗೆ ಚರ್ಚೆ ಮಾಡುತ್ತೇನೆ. ಮುಂದಿನ ದಿನಗಳಲ್ಲಿ ವಚನಾನಂದ ಶ್ರೀಗಳ ಬಣ್ಣ ಬಯಲು ಮಾಡುತ್ತೇನೆ ಎಂದು ಬಸನಗೌಡ ಪಾಟೀಲ್ ಯತ್ನಾಳ್ ಆಕ್ರೋಶ ಹೊರ ಹಾಕಿದರು.


ನಿರಾಣಿ ವಿರುದ್ಧವೂ ವಾಗ್ದಾಳಿ


ಇದೇ ವೇಳೆ ಪಂಚಮಸಾಲಿ ಮೂರನೇ ಪೀಠ ಸ್ಥಾಪನೆ ಮಾಡಿದ್ದ ವಿಚಾರಕ್ಕೆ ಪ್ರತಿಕ್ರಿಯಿಸಿ ಸಚಿವ ಮುರುಗೇಶ್ ನಿರಾಣಿ ವಿರುದ್ಧ ಯತ್ನಾಳ್ ವಾಗ್ದಾಳಿ ನಡೆಸಿದರು. ಯಾವ ಮಠ ಕಟ್ಟಿದ್ದಾರೆ, ಯಾಕೆ ಕಟ್ಟಿದ್ದಾರೆ ಅನ್ನೋದು ಎಲ್ಲರಿಗೂ ಗೊತ್ತಿದೆ. ಯಾರು ಮಠ ಕಟ್ಟಿದ್ದರು, ಯಾರು ಬೆನ್ನಿಗೇ ಚೂರು ಹಾಕಿದರು ಎಲ್ಲವೂ ಗೊತ್ತಿದೆ ಎಂದು ಹೇಳಿದರು.


ಇದನ್ನೂ ಓದಿ:  Basanagowda Patil Yatnal: ಜೋಕರ್ ಮಾತನ್ನು ಜೋಕ್ ಆಗಿ ತೆಗೆದುಕೊಳ್ಳಿ; ಯತ್ನಾಳ್​​ಗೆ ವಚನಾನಂದ ಸ್ವಾಮೀಜಿ ತಿರುಗೇಟು


ಯಾವ ಕಾರಣಕ್ಕೆ ಮಠ ಕಟ್ಟಿದ್ದಾರೆ ಎಂದು ಜನರಿಗೆ ಗೊತ್ತಾಗಿದೆ. ಮಠ ಕಟ್ಟಿದ್ದು ಸಮಾಜದ ಉದ್ದಾರಕ್ಕಲ್ಲ, ಮಂತ್ರಿ ಸ್ಥಾನಕ್ಕಾಗಿ. ಮುಂದಿನ ದಿನಗಳಲ್ಲಿ ಜನರೇ ಅದಕ್ಕೆ ತಕ್ಕ ಉತ್ತರ ನೀಡಲಿದ್ದಾರೆ ಎಂದು ಭವಿಷ್ಯ ನುಡಿದರು.


ರೌಡಿಶೀಟರ್ ಸೇರ್ಪಡೆಗೆ ಯತ್ನಾಳ್​ಗೆ ಪ್ರತಿಕ್ರಿಯೆ


ಬಿಜೆಪಿಗೆ ರೌಡಿಶೀಟರ್​​ಗಳ ಸೇರ್ಪಡೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಶಾಸಕ ಯತ್ನಾಳ್, ಕೊತ್ವಾಲ ರಾಮಚಂದ್ರನ ಶಿಷ್ಯರ ಕಡೆಯಿಂದ ನಾವು ಪಾಠ ಕಲಿಯಬೇಕಿಲ್ಲ. ಕೊತ್ವಾಲ ರಾಮಚಂದ್ರ ಬೆಂಗಳೂರಿಗೆ ದೊಡ್ಡ ರೌಡಿ. ಅವನಿಗೆ ಸಿಗರೇಟ್ ತಂದು ಕೊಡುತ್ತಿದ್ದವರು ನಮಗೆ ಪಾಠ ಮಾಡುತ್ತಿದ್ದಾರೆ. ಬ್ಲೂ ಫಿಲಂ ನಡೆಸುವವರು ಬಿಜೆಪಿ ಬಗ್ಗೆ ಹೇಳಿಕೆ ಕೊಡುವ ನೈತಿಕತೆ ಇಲ್ಲ ಎಂದು ಆರೋಪಗಳಿಗೆ ತಿರುಗೇಟು ನೀಡಿದರು.


ಎಂ.ಬಿ.ಪಾಟೀಲ್ ವಿರುದ್ಧ ವಾಗ್ದಾಳಿ


ಮಾಜಿ ಸಚಿಬ ಎಂ.ಬಿ.ಪಾಟೀಲ್ ಕಾಂಗ್ರೆಸ್ ನಾಯಕರಿದ್ದಾರೆ ಅವರು ಮಾತನಾಡಬೇಕಾಗುತ್ತದೆ. ಎಂ.ಬಿ.ಪಾಟೀಲ್ ನಮ್ಮನ್ನು ಸೋಲಿಸಬೇಕು ಎಂದಿದ್ದಾರೆ. ನಾನು ಅವರನ್ನು ಸೋಲಿಸಬೇಕು ಎಂದು ಹೇಳುತ್ತಾನೆ. ಅವರು ಕಾಂಗ್ರೆಸ್, ನಾನು ಬಿಜೆಪಿ. ನನ್ನನ್ನು ಸೋಲಿಸಲು 10 ಜನ ಎಂ.ಬಿ.ಪಾಟೀಲ್ ಬಂದರೂ ಸಾಧ್ಯವಿಲ್ಲ ಎಂದು ಗುಡುಗಿದರು.


ಎಂ.ಬಿ.ಪಾಟೀಲ್ ಅವರನ್ನ ಅವರದೇ ಪಕ್ಷದ ಇಬ್ಬರು ಶಾಸಕರು ಸೋಲಿಸುವುದಾಗಿ ಹೇಳಿದ್ದಾರೆ. ನನ್ನನ್ನು ಸೋಲಿಸುವುದು ಎಂಬಿ ಪಾಟೀಲ್ ಅಲ್ಲ. ಜನ ಅದನ್ನು ತೀರ್ಮಾನ ಮಾಡುತ್ತಾರೆ‌. ಯಲ್ಲಮ್ಮನ ಗುಡ್ಡದಾಗ ಮುಲ್ಲಾದು ಏನ್ ಕೆಲಸ ಎಂದು ವಾಗ್ದಾಳಿ ನಡೆಸಿದರು.


ಇದನ್ನೂ ಓದಿ:  Siddaramaiah: ಕ್ಷೇತ್ರ ಹುಡುಕಾಟದಲ್ಲಿರೋ ಸಿದ್ದರಾಮಯ್ಯಗೆ ಮತ್ತೊಂದು ಆಫರ್


ವಚನಾನಂದ ಸ್ವಾಮೀಜಿ ಹೇಳಿದ್ದೇನು?


ಜೋಕರ್​​ಗಳನ್ನು ಜೋಕ್ ಮಾಡಲು ಬಿಟ್ಟು ನಾವು ಮೀಸಲಾತಿ ಕಡೆ ಗಟ್ಟಿಯಾಗಿ ನಿಲ್ಲಬೇಕಿದೆ. ಕೆಲವರಿಗೆ ಮತ್ತೊಬ್ಬರನ್ನು ಬೈಯುವ ಚಟ ಇರುತ್ತದೆ. ಮತ್ತೊಬ್ಬರನ್ನು ತೆಗಳುವುದರಲ್ಲಿ ಖುಷಿ ಸಂತೋಷ ಪಡೆದುಕೊಳ್ಳುತ್ತಾರೆ. ಹತಾಶ ಮನೋಭಾವದಿಂದ ಈ ರೀತಿ ಮಾತನಾಡುತ್ತಾರೆ ಎಂದು ವಚನಾನಂದ ಸ್ವಾಮೀಜಿ ವ್ಯಂಗ್ಯ ಮಾಡಿದರು.

Published by:Mahmadrafik K
First published: