• Home
 • »
 • News
 • »
 • state
 • »
 • Davanagere: ಗಾಳಿಯಲ್ಲಿ ಗುಂಡು ಹೊಡೆಯುವುದು ಸರಿಯಲ್ಲ, ಯತ್ನಾಳ್ ವಿರುದ್ಧ ವಚನಾನಂದ ಸ್ವಾಮೀಜಿ ಕಿಡಿ

Davanagere: ಗಾಳಿಯಲ್ಲಿ ಗುಂಡು ಹೊಡೆಯುವುದು ಸರಿಯಲ್ಲ, ಯತ್ನಾಳ್ ವಿರುದ್ಧ ವಚನಾನಂದ ಸ್ವಾಮೀಜಿ ಕಿಡಿ

ವಚನಾನಂದ ಶ್ರೀ, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್‌

ವಚನಾನಂದ ಶ್ರೀ, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್‌

ಐದು ವರ್ಷಗಳಾಗಿದೆ ಇದುವರೆಗೂ ನಾನು ಮಠದಲ್ಲಿ ಹಣದ ವ್ಯವಹಾರ ಮಾಡಿಲ್ಲ. ಚಕ್ ಮೇಲೆ ಸಹಿಯಾಗಲಿ, ಹಣ ಪಡೆಯುವುದಾಗಲಿ ಮಾಡಿಲ್ಲ. ಅದಕ್ಕೆ‌ ಅಂತನೇ ಟ್ರಸ್ಟ್ ಇದೆ, ನಾನು ಕೇವಲ ಸಮಾಜ ಸಂಘಟನೆಯಲ್ಲಿ ಇದ್ದೇನೆ. ಗಾಳಿಯಲ್ಲಿ ಗುಂಡು ಹೊಡೆಯುವುದು ಸರಿಯಲ್ಲ ಎಂದು ಯತ್ನಾಳ್ ವಿರುದ್ಧ ಹರಿಹರ ಪಂಚಮಸಾಲಿ ಪೀಠದ ವಚನನಾಂದ ಶ್ರೀಗಳು ಕಿಡಿಕಾರಿದ್ದಾರೆ

ಮುಂದೆ ಓದಿ ...
 • News18 Kannada
 • 4-MIN READ
 • Last Updated :
 • Davanagere, India
 • Share this:

ದಾವಣಗೆರೆ: ಇತ್ತೀಚೆಗಷ್ಟೇ ಶಾಸಕ ಬಸನಗೌಡ ಪಾಟೀಲ್,  ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ (Yediyurappa) ಅವರಿಂದ ಹರಿಹರ ಶ್ರೀಗಳು ರೂ. 10 ಕೋಟಿ ಹಣ ವಸೂಲು ಮಾಡಿದ್ದಾರೆ. ಮಠದಲ್ಲಿ ಅಭಿವೃದ್ಧಿ ಕಾಮಗಾರಿ ಮಾಡುತ್ತೇವೆ ಎಂದು ಹಣ ಪಡೆದಿದ್ದಾರೆ‌. ಮಠದಲ್ಲಿ ಹಣದ ವಿಚಾರದಲ್ಲಿ ಬಹಳ ಅವ್ಯವಹಾರ ಮಾಡಿದ್ದಾರೆ. ಮುಂಬರುವ ಬೆಳಗಾವಿ ಅಧಿವೇಶನದಲ್ಲಿ (Belgavi Session) ಅವ್ಯವಹಾರದ ಬಗ್ಗೆ ಚರ್ಚೆ ಮಾಡಿ, ಮುಂದಿನ ದಿನಗಳಲ್ಲಿ ವಚನಾನಂದ ಶ್ರೀಗಳ (Vachanananda Swamiji) ಬಣ್ಣ ಬಯಲು ಮಾಡುತ್ತೇನೆ ಎಂದಿದ್ದರು. ಇದೀಗ ಯತ್ನಾಳ್ (Basana gouda patil yatnal) ಆರೋಪಕ್ಕೆ ವಿರುದ್ಧ ಸಿಡಿದೆದ್ದಿರುವ ಹರಿಹರ ಪಂಚಮಸಾಲಿ ಪೀಠದ ವಚನನಾಂದ ಶ್ರೀಗಳು ಗಾಳಿಯಲ್ಲಿ ಗುಂಡು ಹೊಡೆಯುವುದು ಸರಿಯಲ್ಲ, ಯಾರು ಈ ರೀತಿ ಹೇಳಿಕೆ ನೀಡಿದ್ದಾರೋ ಅಂತವರನ್ನುತನಿಖೆಗೆ ಒಳಪಡಿಸಬೇಕು ಎಂದು ಕಿಡಿಕಾರಿದ್ದಾರೆ.


ಯತ್ನಾಳ್ ವಿರುದ್ದ ವಚನಾನಂದ ಸ್ವಾಮೀಜಿ ಆಕ್ರೋಶ


ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಹನಗವಾಡಿ ಬಳಿ ಇರುವ ಪಂಚಮಸಾಲಿ ಗುರುಪೀಠದಲ್ಲಿ ಮಾತನಾಡಿದ ವಚನಾನಂದ ಸ್ವಾಮೀಜಿ ಅವರು, ಐದು ವರ್ಷಗಳಾಗಿದೆ ಇದುವರೆಗೂ ನಾನು ಮಠದಲ್ಲಿ ಹಣದ ವ್ಯವಹಾರ ಮಾಡಿಲ್ಲ.


ಚಕ್ ಮೇಲೆ ಸಹಿಯಾಗಲಿ, ಹಣ ಪಡೆಯುವುದಾಗಲಿ ಮಾಡಿಲ್ಲ. ಅದಕ್ಕೆ‌ ಅಂತನೇ ಟ್ರಸ್ಟ್ ಇದೆ, ನಾನು ಕೇವಲ ಸಮಾಜ ಸಂಘಟನೆಯಲ್ಲಿ ಇದ್ದೇನೆ. ಗಾಳಿಯಲ್ಲಿ ಗುಂಡು ಹೊಡೆಯುವುದು ಸರಿಯಲ್ಲ. ಯಾರು ಈ ರೀತಿ ಹೇಳಿಕೆ ನೀಡಿದ್ದಾರೋ ಅಂತವರ ಮೇಲೆ ತನಿಖೆಗೆ ಒಳಪಡಿಸಬೇಕು. ಅವರ ಹೇಳಿಕೆಯ ಸತ್ಯಾಂಶ ಹೊರಬರಬೇಕಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.


Vachananada swamiji gave taunt to Basanagowda Patil Yatnal mrq
ಶಾಸಕ ಯತ್ನಾಳ್


ಸಣ್ಣ ತನ ಇಟ್ಟುಕೊಂಡವನು ಯಾವತ್ತು ದೊಡ್ಡವನಾಗುವುದಿಲ್ಲ. ದೊಡ್ಡತನ ಪ್ರದರ್ಶನ ಮಾಡಿದರೆ ಮಾತ್ರ ದೊಡ್ಡವರು ಆಗಲು ಸಾಧ್ಯ. ಕಾಮಿಡಿ ಮಾಡುವವರನ್ನು ಕಾಮಿಡಿ ಮಾಡಲು ಬಿಡಬೇಕು ಎಂದು ಪರೋಕ್ಷವಾಗಿ ಯತ್ನಾಳ್ ಗೆ ಟಾಂಗ್ ನೀಡಿದ್ದಾರೆ.


ನಮ್ಮ ಪ್ರಯತ್ನವನ್ನು ಅವರು ಲಾಭ ಮಾಡ್ಕೋತ್ತಿದ್ದಾರೆ


ಈ ಹೋರಾಟ ಶುರುವಾದಾಗ ಈಗ ಹೋರಾಟ ಮಾಡುವವರು ಎಲ್ಲಿ ಇದ್ದರು. ಆಗ ಹೋರಾಟ ಮಾಡುವ ಬದಲು ಧರ್ಮ ಹೊಡೆಯುವ ಕೆಲಸ ಮಾಡುತ್ತಿದ್ದರು. ಈಗ ನಾವು ಹೋರಾಟ ಶುರು ಮಾಡಿದ ಮೇಲೆ ಅವರು ಈಗ ಬರುತ್ತಿದ್ದಾರೆ. ನಮ್ಮ ಪ್ರಯತ್ನವನ್ನು ಅವರು ಲಾಭ (ಎನ್ಕ್ಯಾಚ್) ಮಾಡಿಕೊಂಡರು. ಪಾದಯಾತ್ರೆಯನ್ನು ಕೂಡ ಕೆಲವೊಬ್ಬರು ಸ್ವಾರ್ಥಕ್ಕೆ ಬಳಕೆ ಮಾಡಿಕೊಂಡರು‌ ಎಂದು ವಾಗ್ದಾಳಿ ನಡೆಸಿದ್ದಾರೆ.


ಆದಷ್ಟು ಬೇಗ ಮೀಸಲಾತಿ ನೀಡುವಂತೆ ಮನವಿ


ಇದೇ ವೇಳೆ ಪಂಚಮಸಾಲಿ ಸಮಾಜಕ್ಕೆ 2A ಮೀಸಲಾತಿ ನೀಡುವ ವಿಚಾರವಾಗಿ ಮಾತನಾಡಿದ ಅವರು, 2 A ಮೀಸಲಾತಿ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೊಂದಿಗೆ  ಸುದೀರ್ಘ ಚರ್ಚೆ ಆಗಿದೆ. ಆ ಸಭೆಯಲ್ಲಿ ಸಮಾಜದ ಮುಖಂಡರು ಕೂಡ ಭಾಗವಹಿಸಿದ್ದರು‌. ವರದಿಯನ್ನು ತರಿಸಿಕೊಂಡು ಆದಷ್ಟು ಬೇಗ ಮೀಸಲಾತಿ ನೀಡುವಂತೆ ಮನವಿ ಮಾಡುತ್ತೇವೆ ಎಂದು ತಿಳಿಸಿದ್ದಾರೆ.


bengaluru tech summit bengaluru is number one in industry-says
ಸಿಎಂ ಬಸವರಾಜ ಬೊಮ್ಮಾಯಿ


ಇದನ್ನೂ ಓದಿ: Basanagowda Patil Yatnal: ಜೋಕರ್ ಮಾತನ್ನು ಜೋಕ್ ಆಗಿ ತೆಗೆದುಕೊಳ್ಳಿ; ಯತ್ನಾಳ್​​ಗೆ ವಚನಾನಂದ ಸ್ವಾಮೀಜಿ ತಿರುಗೇಟು


ವರದಿಯ ಸಿದ್ಧತೆಯನ್ನು ಈಗಾಗಲೇ ಜಯಪ್ರಕಾಶ್ ಹೆಗ್ಡೆಯವರು ಮಾಡುತ್ತಿದ್ದಾರೆ. ವರದಿ ಬಂದ ನಂತರ ಸರ್ವ ಪಕ್ಷ ಸಭೆ ಕರೆದು ನಿರ್ಣಯ ಮಾಡುತ್ತಾರೆ. ಈ ಸರ್ವಪಕ್ಷಗಳ ಸಭೆಯಲ್ಲಿ ಮೀಸಲಾತಿ ಘೋಷಣೆ ಮಾಡುವ ನಿರೀಕ್ಷೆ ಇದೆ. ಮಾಜಿ ಸಿಎಂ ಸಿದ್ದರಾಮಯ್ಯ, ಕುಮಾರಸ್ವಾಮಿ ಹಾಗೂ ಡಿಕೆ ಶಿವಕುಮಾರ್ ಸೇರಿದಂತೆ ಹಲವರನ್ನು ಭೇಟಿ ಮಾಡಿದ್ದೇವೆ. ಅವರು ಕೂಡ ನಿಮ್ಮ ಪರವಾಗಿ ನಾವು ಇರುತ್ತೇವೆ ಎಂದು ತಿಳಿಸಿರುವುದಾಗಿ ಹೇಳಿದ್ದಾರೆ.


ವರದಿ ಅಧಾರದ ಮೇಲೆ ಕಾನೂನಾತ್ಮಕ ತೊಡಕು ಆಗದ ರೀತಿ ಘೋಷಣೆ ಮಾಡುತ್ತಾರೆ. ಅನೇಕ ರಾಜ್ಯಗಳಲ್ಲಿ ವರದಿ ಇಲ್ಲದೇ ಘೋಷಣೆ ಮಾಡಿ ಅದು ಕಾನೂನು ತೊಡಕಾಗಿದೆ. ಆದ್ದರಿಂದ ಮೀಸಲಾತಿ ಘೋಷಣೆ ಯಲ್ಲಿ ಅತ್ಯಂತ ಮುಖ್ಯ ಎಂದರೆ ವರದಿ. 28 ವರ್ಷಗಳ ಹೋರಾಟ ಇದು ನಿನ್ನೆ ಮೊನ್ನೆ ಹುಟ್ಟಿಕೊಂಡಿದ್ದಲ್ಲ. ಮೀಸಲಾತಿ ಸಿಗುವ ಎಲ್ಲಾ ವಿಶ್ವಾಸ ಇದೆ ಎಂದು ತಿಳಿಸಿದರು.

Published by:Monika N
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು