• Home
 • »
 • News
 • »
 • state
 • »
 • ವಚನಾನಂದ ಸ್ವಾಮೀಜಿ ಇನ್ನಾದರೂ ಸುಧಾರಣೆಯಾಗಿ, ತಮ್ಮ ಕಾರ್ಯವೈಖರಿ ಬದಲಿಸಿಕೊಳ್ಳಬೇಕು; ಯತ್ನಾಳ್ ಸಲಹೆ

ವಚನಾನಂದ ಸ್ವಾಮೀಜಿ ಇನ್ನಾದರೂ ಸುಧಾರಣೆಯಾಗಿ, ತಮ್ಮ ಕಾರ್ಯವೈಖರಿ ಬದಲಿಸಿಕೊಳ್ಳಬೇಕು; ಯತ್ನಾಳ್ ಸಲಹೆ

ಬಸನಗೌಡ ಪಾಟೀಲ್​ ಯತ್ನಾಳ್​

ಬಸನಗೌಡ ಪಾಟೀಲ್​ ಯತ್ನಾಳ್​

ಘಟನೆ ಬಗ್ಗೆ ಅನೇಕ ಸ್ವಾಮಿಗಳು ಕ್ಷಮೆ ಕೋರಿ ವಿಷಾದ ವ್ಯಕ್ತಪಡಿಸಿದ್ದಾರೆ. ಮುರುಗೇಶ ನಿರಾಣಿ ಅವರು ಕ್ಷಮೆ ಕೇಳಬೇಕಾಗುತ್ತದೆ. ತಪ್ಪು ಮಾಡಿದವರು ಕ್ಷೆಮೆ ಕೋರುವುದು ಧರ್ಮ. ಆ ಕೆಲಸವನ್ನು ನಿರಾಣಿ ಮಾಡಿದ್ದಾರೆ ಎಂದರು.

 • Share this:

  ಯಾದಗಿರಿ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು  ಸಿಎಎ ಪರವಾಗಿ ಜಾಗೃತಿ ಮೂಡಿಸಲು ಹುಬ್ಬಳ್ಳಿಗೆ ಬಂದಿದ್ದಾರೆ. ಈ ವೇಳೆ ಯಾವ ವಿಚಾರದ ಬಗ್ಗೆ ಚರ್ಚೆಯಾಗುತ್ತದೆ ಎಂಬುದು ಗೊತ್ತಾಗುವುದಿಲ್ಲ. ಸಚಿವ ಸಂಪುಟ ವಿಸ್ತರಣೆ ಬಗ್ಗೆ ಚರ್ಚೆ ಆಗಬಹುದು, ಆಗದೆಯೂ ಇರಬಹುದು ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಹೇಳಿದರು.


  ಯಾದಗಿರಿ ಜಿಲ್ಲೆಯ ಸುರಪುರದಲ್ಲಿ ಯತ್ನಾಳ್, ಮಾಜಿ ಸಚಿವ ಮುರುಗೇಶ ನಿರಾಣಿ ಅವರು ಸಿಎಂ ಗೆ ಕ್ಷೇಮೆ ಕೇಳಿದ ವಿಚಾರವಾಗಿ ಮಾತನಾಡಿ, ಈ ಘಟನೆ ಬಗ್ಗೆ ಅನೇಕ ಸ್ವಾಮಿಗಳು ಕ್ಷಮೆ ಕೋರಿ ವಿಷಾದ ವ್ಯಕ್ತಪಡಿಸಿದ್ದಾರೆ. ಮುರುಗೇಶ ನಿರಾಣಿ ಅವರು ಕ್ಷಮೆ ಕೇಳಬೇಕಾಗುತ್ತದೆ. ತಪ್ಪು ಮಾಡಿದವರು ಕ್ಷೆಮೆ ಕೋರುವುದು ಧರ್ಮ. ಆ ಕೆಲಸವನ್ನು ನಿರಾಣಿ ಮಾಡಿದ್ದಾರೆ ಎಂದರು.


  ಮಠಾಧೀಶರು ರಾಜಕೀಯವಾಗಿ ಒತ್ತಡ ಹಾಕುವುದು ಸರಿಯಲ್ಲ,  ಸಚಿವ ಸ್ಥಾನದ ಬಗ್ಗೆ ಒತ್ತಡ ಹಾಕುವುದು ಅವರ ಕೆಲಸವಲ್ಲ. ಸ್ವಾಮೀಜಿಗಳು ಧರ್ಮದ ಕೆಲಸ ಮಾಡಬೇಕು ಹಾಗೂ ಬಡಬಗ್ಗರ ಹಿತ ಕಾಪಾಡಬೇಕು. ತಪ್ಪನ್ನು ಯಾರೇ ಮಾಡಿದರೂ ಅದು ತಪ್ಪೆ, ಸ್ವಾಮಿಯಾದರೂ ಸರಿ, ರಾಷ್ಟ್ರಪತಿಯಾದರೂ ಸರಿ. ವಚನಾನಂದ ಸ್ವಾಮೀಜಿಯ ಹೇಳಿಕೆಯನ್ನು ಪಂಚಮಸಾಲಿ ಸಮಾಜ ಒಪ್ಪಿಕೊಳ್ಳುವುದಿಲ್ಲ. ವಚನಾನಂದ ಸ್ವಾಮಿ ಇನ್ನಾದರೂ ಸುಧಾರಣೆ ಆಗಬೇಕು. ತಮ್ಮ ಕಾರ್ಯವೈಖರಿ ಬದಲಾವಣೆ ಮಾಡದಿದ್ದರೆ ಅದರ ಪರಿಣಾಮ ಎರಡ್ಮೂರು ತಿಂಗಳಲ್ಲಿ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.


  ಇದನ್ನು ಓದಿ: ಸಚಿವನಾಗಬೇಕು ಅಂತ ಆಸೆ ಇದೆ, ಆದರೆ ಬಹಿರಂಗವಾಗಿ ಹೇಳಲು ಆಗುವುದಿಲ್ಲ; ಯಲಹಂಕ ಶಾಸಕ ವಿಶ್ವನಾಥ ಇಂಗಿತ

  Published by:HR Ramesh
  First published: