ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (MLA Basanagowda Patil Yatnal) ವಿರುದ್ಧ ದಾವಣಗೆರೆ ಜಿಲ್ಲೆಯ ಹರಿಹರ ಪಂಚಮಸಾಲಿ ಪೀಠದ ಶ್ರೀ ವಚನಾನಂದ ಸ್ವಾಮೀಜಿ (Sri Vachananda Swamiji) ವ್ಯಂಗ್ಯವಾಗಿ ತಮ್ಮ ಅಸಮಾಧಾನವನ್ನು ಹೊರ ಹಾಕಿದ್ದಾರೆ. ಶಾಸಕ ಯತ್ನಾಳ್ ಅವರ ಹೆಸರು ಉಲ್ಲೇಖ ಮಾಡದೇ ವಾಗ್ದಾಳಿ ನಡೆಸಿದ್ದಾರೆ. ಜೋಕರ್ಗಳ ಬಗ್ಗೆ ತಲೆಕೆಡಸಿಕೊಳ್ಳಬಾರದು. ಜೋಕರ್ (Joker) ಮಾತನ್ನು ಜೋಕ್ ಆಗಿ ತೆಗೆದುಕೊಳ್ಳಬೇಕು. ಪ್ರತಿನಿತ್ಯ ಒಂದೇ ಜೋಕ್ ಹೇಳಿದರೆ ಜನರು ನಗಲ್ಲ. ಹೊಸ ಹೊಸ ಜೋಕ್ ಹೇಳಿದರೆ ಆ ಜೋಕರ್ಗೆ ಉದ್ಯೋಗ ಸಿಗುತ್ತೆ. ಇಲ್ಲವಾದ್ರೆ ಅವರನ್ನು ಜನ ಉದಾಸೀನ ಮಾಡ್ತಾರೆ. ಅದೇ ರೀತಿ ಅ ಜೋಕರ್ಗಳನ್ನು ಉದಾಸೀನ ಮಾಡಬೇಕು ಎಂದು ಹೇಳುವ ಮೂಲಕ ಯತ್ನಾಳ್ ಅವರನ್ನು ಗಂಭೀರವಾಗಿ ತೆಗೆದುಕೊಳ್ಳುವ ಅಗತ್ಯವಿಲ್ಲ ಎಂಬ ಸಂದೇಶವನ್ನು ತಮ್ಮ ಭಕ್ತವೃಂದಕ್ಕೆ ರವಾನಿಸಿದರು.
ಜೋಕರ್ಗಳನ್ನು ಜೋಕ್ ಮಾಡಲು ಬಿಟ್ಟು ನಾವು ಮೀಸಲಾತಿ ಕಡೆ ಗಟ್ಟಿಯಾಗಿ ನಿಲ್ಲಬೇಕಿದೆ. ಕೆಲವರಿಗೆ ಮತ್ತೊಬ್ಬರನ್ನು ಬೈಯುವ ಚಟ ಇರುತ್ತದೆ. ಮತ್ತೊಬ್ಬರನ್ನು ತೆಗಳುವುದರಲ್ಲಿ ಖುಷಿ ಸಂತೋಷ ಪಡೆದುಕೊಳ್ಳುತ್ತಾರೆ. ಹತಾಶ ಮನೋಭಾವದಿಂದ ಈ ರೀತಿ ಮಾತನಾಡುತ್ತಾರೆ ಎಂದು ವಚನಾನಂದ ಸ್ವಾಮೀಜಿ ವ್ಯಂಗ್ಯ ಮಾಡಿದರು.
ಮೀಸಲಾತಿ ಕೊಡಿಸುವುದೇ ನಮ್ಮ ಉದ್ದೇಶ
ಹಗುರವಾಗಿ ಮಾತನಾಡುವ ಹಗುರ ವ್ಯಕ್ತಿಗಳ ಬಗ್ಗೆ ಮಾತನಾಡುವುದಿಲ್ಲ. ಪ್ರತಿಯೊಬ್ಬರಿಗೆ ಅವರದ್ದೇ ಅದಂತಹ ವಾಕ್ ಸ್ವಾತಂತ್ರ್ಯ ಇರುತ್ತದೆ. 2A ಮೀಸಲಾತಿ ಬಗ್ಗೆ ಕಾನೂನು ತೊಡಕುಗಳು ಇಲ್ಲದೇ ನಮ್ಮ ಜನರಿಗೆ ಮೀಸಲಾತಿ ಕೊಡಿಸುವುದೇ ನಮ್ಮ ಉದ್ದೇಶ ಎಂದು ವಚನಾನಂದ ಸ್ವಾಮೀಜಿ ಹೇಳಿದರು.
ಪೀಠಕ್ಕೆ ಗೌರವ ತರುವ ಕೆಲಸ ಮಾಡಬೇಕು
ಹಗುರವಾಗಿ ಮಾತನಾಡುವ ಹಗುರ ವ್ಯಕ್ತಿಗಳ ಬಗ್ಗೆ ನಾವು ಮಾತನಾಡಿದ್ರೆ ಅದು ಹಗುರತನ ಆಗುತ್ತದೆ. ನಾವು ಪೀಠದ ಘನತೆ ಮತ್ತು ಗೌರವವನ್ನು ಹೆಚ್ಚು ಮಾಡಬೇಕೇ ವಿನಃ ಕಡಿಮೆ ಮಾಡುವ ಕೆಲಸಕ್ಕೆ ನಾವ್ಯಾರು ಮುಂದಾಗಬಾರದು. ಸಮಾಜ ಇವರೆಲ್ಲರನ್ನು ಗಮನಿಸುತ್ತಿದೆ.
ನಮ್ಮ ಕಾಯಕ ಮಾತನಾಡಬೇಕು
ಈ ದೇಶದ ಪ್ರಧಾನ ಮಂತ್ರಿಗಳನ್ನು ಸಹ ಬಿಟ್ಟಿಲ್ಲ. ಇಂದು ಜನರು ಎಲ್ಲರನ್ನೂ ಟೀಕೆ ಮಾಡ್ತಾರೆ. ಇಲ್ಲಿಯವರೆಗೆ ಕೆಲವರ ಬಗ್ಗೆ ಟೀಕೆ ಮಾಡುತ್ತಿದ್ದರು. ಈಗ ನಮ್ಮ ಬಗ್ಗೆ ಟೀಕೆ ಮಾಡುತ್ತಿರೋದಕ್ಕೆ ನಾವು ಹೆಚ್ಚು ತಲೆಕೆಡಿಸಿಕೊಳ್ಳಲ್ಲ. ನಮ್ಮ ಕೆಲಸ ಮಾಡನಾಡಬೇಕೇ ಹೊರತು ಮಾತನಾಡೋದು ಕಾಯಕ ಆಗಬಾರದು ಎಂದು ಶಾಸಕ ಯತ್ನಾಳ್ ಅವರಿಗೆ ತಿರುಗೇಟು ನೀಡಿದರು.
ಇದನ್ನೂ ಓದಿ: DK Shivakumar: "ಯತ್ನಾಳ್ ಏನು ಮೆಂಟಲ್ಲಾ? ಅವರನ್ನು ಮೊದಲು ವಿಚಾರಣೆ ಮಾಡಿ" - ಸರ್ಕಾರಕ್ಕೆ ಡಿಕೆಶಿ ಆಗ್ರಹ
ಮುಸ್ಲಿಮರ ಮೀಸಲಾತಿ ತೆಗೆಯುವ ಚರ್ಚೆ
ಮುಸ್ಲಿಮರಿಗೆ ನೀಡಲಾಗಿರುವ 2ಎ ಮೀಸಲಾತಿ ತೆಗೆಯುವ ಕುರಿತು ಸರ್ಕಾರ ಮಟ್ಟದಲ್ಲಿ ಗಂಭೀರ ಚರ್ಚೆ ನಡೆಯುತ್ತಿವೆ. ನಾವು ಕೂಡ ಪುನರ್ ಪರಿಶೀಲನೆ ಮಾಡುವಂತೆ ಸಿಎಂ ಅವರಿಗೆ ಹೇಳಿದ್ದೇವೆ. ಎರಡು ಕಡೆ ಲಾಭ ಪಡೆಯುತ್ತಿರೋದನ್ನ ತೆಗೆದು ಉಳಿದ ಹಿಂದುಳಿದವರಿಗೆ ಮೀಸಲಾತಿ ಹೆಚ್ಚಿಸಬೇಕು ಎಂದು ಶಾಸಕ ಯತ್ನಾಳ್ ಆಗ್ರಹಿಸಿದ್ದಾರೆ.
ಈ ಸಂಬಂಧ ಸಿಎಂ ಜೊತೆಗೆ ಚರ್ಚೆಯಾಗಿದೆ, ಪರಿವಾರದಿಂದಲು ಚರ್ಚೆ ಆಗಿದೆ. ಒಂದು ಸಮುದಾಯ ಎರಡು ಕಡೆಗಳಲ್ಲಿ ಲಾಭ ಪಡೆಯೋದನ್ನ ತಡೆಯಬೇಕು. ದೇಶ ವಿರೋಧಿ ಚಟುವಟಿಕೆ ಮಾಡ್ತಾರೆ, ಎರಡು ಕಡೆ ಲಾಭ ಪಡೆಯುತ್ತಾರೆ. ಅಂತವರ ಎಲ್ಲ ಮೀಸಲಾತಿ ಸೌಲಭ್ಯ ರದ್ದುಪಡಿಸಬೇಕು. ಆದಷ್ಟು ಬೇಗನೆ ಸರ್ಕಾರ ಕ್ರಮ ವಹಿಸಲಿದೆ ಎಂದು ಯತ್ನಾಳ್ ಮಾಹಿತಿ ನೀಡಿದರು.
ಇದನ್ನೂ ಓದಿ; ದ್ವೇಷ ಮರೆತು ಒಂದಾದ Renukacharya, Yatnal.. ಡಿಕೆಶಿ ವೇಗವನ್ನು ತಡೆಯುವುದೇ ಇವರ ಗುರಿಯಂತೆ!
ಬ್ರಾಹ್ಮಣರಿಗೆ ಅಲ್ಪಸಂಖ್ಯಾತ ಸ್ಥಾನಮಾನ
ಬ್ರಾಹ್ಮಣರಿಗೆ ಅಲ್ಪಸಂಖ್ಯಾತ ಸ್ಥಾನಮಾನ ಸಿಗಬೇಕು. ಬ್ರಾಹ್ಮಣರು ಕೇವಲ ಶೇಕಡಾ 2 ರಿಂದ3 ರಷ್ಟಿದ್ದಾರೆ. ನಿಜವಾದ ಅಲ್ಪಸಂಖ್ಯಾತರು ಬ್ರಾಹ್ಮಣರು. ಅಲ್ಪಸಂಖ್ಯಾತ ಪಟ್ಟಿಯಲ್ಲಿ ಬ್ರಾಹ್ಮಣರನ್ನ ಸೇರಿಸಬೇಕು. ಇದು ನನ್ನ ವಾದ ಎಂದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ