ದೇವೇಗೌಡರ ಬಗ್ಗೆ ಏನೂ ಕೇಳಬೇಡಿ; ವಿಶ್ವನಾಥ್​ಗೆ ಅನ್ಯಾಯ ಆಗಲ್ಲ: ಶ್ರೀನಿವಾಸ ಪ್ರಸಾದ್

ಬಿಜೆಪಿ ಪಕ್ಷದೊಳಗೆ ಯಾವುದೇ ಅಸಮಾಧಾನ ಇಲ್ಲ. ಕೇಂದ್ರ ಹಾಗೂ ರಾಜ್ಯದಲ್ಲಿ ಸುಭದ್ರ ಸರ್ಕಾರಗಳಿವೆ. ಯಡಿಯೂರಪ್ಪ ಅವರು ಇನ್ನು 3 ವರ್ಷ ಅಧಿಕಾರ ಪೂರ್ಣಗೊಳಿಸುತ್ತಾರೆ ಎಂದು ಸಂಸದ ವಿ ಶ್ರೀನಿವಾಸ ಪ್ರಸಾದ್ ಅಭಿಪ್ರಾಯಪಟ್ಟರು.

ಸಂಸದ ವಿ ಶ್ರೀನಿವಾಸ ಪ್ರಸಾದ್

ಸಂಸದ ವಿ ಶ್ರೀನಿವಾಸ ಪ್ರಸಾದ್

  • Share this:
ಮೈಸೂರು(ಜೂನ್ 15): ಚಾಮರಾಜನಗರ ಸಂಸದ ವಿ. ಶ್ರೀನಿವಾಸ ಪ್ರಸಾದ್ ಅವರು ಮಾಜಿ ಪ್ರಧಾನಿ ದೇವೇಗೌಡರ ಬಗ್ಗೆ ಮಾತನಾಡಲು ಹಿಂದೇಟು ಹಾಕಿದ ಪ್ರಸಂಗ ನಡೆಯಿತು. ಮಾಧ್ಯಮಗಳೊಂದಿಗೆ ಸಂವಾದ ನಡೆಸುತ್ತಿದ್ದ ವೇಳೆ ಪತ್ರಕರ್ತರು ದೇವೇಗೌಡರ ರಾಜ್ಯಸಭೆ ಪ್ರವೇಶ ವಿಚಾರವನ್ನು ಪ್ರಸ್ತಾಪಿಸಿದಾಗ ಶ್ರೀನಿವಾಸ ಪ್ರಸಾದ್ ಮಾತನಾಡಲು ನಿರಾಕರಿಸಿದರು.

ದೇವೇಗೌಡರ ಬಗ್ಗೆ ನನ್ನ ಬಳಿ ಮಾತನಾಡಬೇಡ್ರಪ್ಪ. ಅವರ ಹೆಸರನ್ನ ಸುಮ್ಮಸುಮ್ಮನೆ ಪ್ರಸ್ತಾಪ ಮಾಡಬೇಡಿ. ನಾನು ಅವರ ಹೆಸರು ಎತ್ತೋದೇ ಇಲ್ಲ. ಸುಮ್ಮನೆ ಅವರ ಹೆಸರು ಹೇಳಿ ವಿವಾದ ಮಾಡೋದು ಬೇಡ ಎಂದು ಮಾಜಿ ಸಚಿವರೂ ಆದ ಶ್ರೀನಿವಾಸ ಪ್ರಸಾದ್ ಕೋಪಪಟ್ಟರು.

ಇನ್ನು, ಹೆಚ್. ವಿಶ್ವನಾಥ್ ಬಗ್ಗೆ ಮಾತನಾಡಿದ ಅವರು, ವಿಶ್ವನಾಥ್​ಗೆ ಅನ್ಯಾಯ ಆಗಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು. ವಿಶ್ವನಾಥ್ ಅವರಿಗೆ ಏನು ಅನ್ಯಾಯ ಆಗಿದೆ? ಯಡಿಯೂರಪ್ಪ ಜೊತೆ ನಾನು ಸಾಕಷ್ಟು ಮಾತುಕತೆ ನಡೆಸಿದ್ದೇನೆ. ಗೆದ್ದವರಿಗೆಲ್ಲಾ ಯಡಿಯೂರಪ್ಪನವರು ಸಚಿವ ಸ್ಥಾನ ಕೊಟ್ಟಿದ್ಧಾರೆ. ಇದೀಗ ಸೋತವರು ಕೂಡ ಮಂತ್ರಿಗಿರಿ ಕೇಳುತ್ತಿದ್ಧಾರೆ. ಪಕ್ಷ ಸೇರುವಾಗ ಏನು ಮಾತು ಕೊಟ್ಟಿದ್ದರೋ ಅದು ಅವರಿಗೆ ಗೊತ್ತಿದೆ. ಸಿಎಂ ಜೊತೆ ವಿಶ್ವನಾಥ್ ಅವರು ಮಾತನಾಡಿ ಆರಾಮವಾಗಿ ಹೋಗಿದ್ಧಾರೆ ಎಂದು ಶ್ರೀನಿವಾಸ ಪ್ರಸಾದ್ ಹೇಳಿದರು.

ಇದನ್ನೂ ಓದಿ: ಜುಲೈ 2ಕ್ಕೆ ಡಿಕೆ ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾಗಿ ಪದಗ್ರಹಣ

ಬಿಜೆಪಿ ಪಕ್ಷದೊಳಗೆ ಯಾವುದೇ ಅಸಮಾಧಾನ ಇಲ್ಲ. ಕೇಂದ್ರ ಹಾಗೂ ರಾಜ್ಯದಲ್ಲಿ ಸುಭದ್ರ ಸರ್ಕಾರಗಳಿವೆ. ಯಡಿಯೂರಪ್ಪ ಅವರು ಇನ್ನು 3 ವರ್ಷ ಅಧಿಕಾರ ಪೂರ್ಣಗೊಳಿಸುತ್ತಾರೆ ಎಂದವರು ಅಭಿಪ್ರಾಯಪಟ್ಟರು.

ಇದನ್ನೂ ಓದಿ: ಪರಿಷತ್ ಫೈಟ್: ವಿಶ್ವನಾಥ್, ಮುನಿರತ್ನ, ಸೋಮಶೇಖರ್ ಸಭೆ; ರೋಷನ್ ಬೇಗ್ ಸಿಎಂ ಭೇಟಿ

ವಿಧಾನಪರಿಷತ್ ಚುನಾವಣೆಯಲ್ಲಿ ವಿಶ್ವನಾಥ್ ಮತ್ತಿತರರಿಗೆ ಟಿಕೆಟ್ ಸಿಗುವ ಬಗ್ಗೆ ಮಾತನಾಡಿದ ಚಾಮರಾಜನಗರ ಸಂಸದರು, ರಾಷ್ಟ್ರೀಯ ಪಕ್ಷದಲ್ಲಿ ತೆಗೆದುಕೊಳ್ಳುವ ನಿರ್ಣಯಕ್ಕೆ ಎಲ್ಲರೂ ಬದ್ಧರಾಗಿದ್ಧಾರೆ. ಇವೆಲ್ಲವನ್ನೂ ಹೈಕಮಾಂಡ್ ತೀರ್ಮಾನ ಮಾಡಲಿದೆ ಎಂದರು.

ಇದನ್ನೂ ಓದಿ: ಬೆಂಗಳೂರಿನ ಗಾಳಿಯಲ್ಲಿ ಏರೋಸಾಲ್ಸ್​ಗಳ ಅಪಾಯಕಾರಿ ಏರಿಕೆ; ತಜ್ಞರ ಆತಂಕ

ಇದಕ್ಕೂ ಮುನ್ನ ಸಚಿವ ನಾರಾಯಣ ಗೌಡ ಅವರು ಶ್ರೀನಿವಾಸ ಪ್ರಸಾದ್ ಮನೆಗೆ ಭೇಟಿ ನೀಡಿ ಮಾತುಕತೆ ನಡೆಸಿದರು. ಅದಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕೆಆರ್ ಪೇಟೆ ಶಾಸಕರೂ ಆದ ನಾರಾಯಣ ಗೌಡ, ಹೆಚ್ ವಿಶ್ವನಾಥ್​ಗೆ ಒಳ್ಳೆಯದಾಗುತ್ತೆ ಎಂದು ವಿಶ್ವಾಸಪಟ್ಟರು.ವಿಶ್ವನಾಥ್ ಅವರಿಗೆ ಪರಿಷತ್ ಟಿಕೆಟ್ ಸಿಗುತ್ತದೆ. ಅವರಿಗೆ ಒಳ್ಳೆಯದಾಗುತ್ತದೆ. ಅವರಿಗೆ ಪಕ್ಷದಲ್ಲಿ ಶಕ್ತಿ ತುಂಬುವ ಕೆಲಸ ಆಗುತ್ತಿದೆ. ಅದೆಲ್ಲವನ್ನೂ ದೊಡ್ಡವರು ತೀರ್ಮಾನ ತೆಗೆದುಕೊಳ್ಳುತ್ತಾರೆ. ನಾವೆಲ್ಲ ಹೈಕಮಾಂಡ್ ತೀರ್ಮಾನಕ್ಕೆ ಬದ್ಧರಾಗಿದ್ದೇವೆ ಎಂದು ನಾರಾಯಣ ಗೌಡ ಹೇಳಿದರು.
First published: