• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Somanna Audio: 'ತೊಟ್ಟಿ ನನ್ ಮಗನ ಮಾತು ಕೇಳ್ಬೇಡ, ನಾಮಪತ್ರ ವಾಪಸ್ ತಕೋ'! ಮ್ಯಾಚ್‌ ಫಿಕ್ಸಿಂಗ್‌ಗೆ ಇಳಿದ್ರಾ ಸೋಮಣ್ಣ?

Somanna Audio: 'ತೊಟ್ಟಿ ನನ್ ಮಗನ ಮಾತು ಕೇಳ್ಬೇಡ, ನಾಮಪತ್ರ ವಾಪಸ್ ತಕೋ'! ಮ್ಯಾಚ್‌ ಫಿಕ್ಸಿಂಗ್‌ಗೆ ಇಳಿದ್ರಾ ಸೋಮಣ್ಣ?

ವೈರಲ್ ಆಡಿಯೋ ಯಾರದ್ದು?

ವೈರಲ್ ಆಡಿಯೋ ಯಾರದ್ದು?

ಚಾಮರಾಜನಗರದಿಂದ ಸ್ಪರ್ಧಿಸುತ್ತಿರುವ ಸಚಿವ ವಿ. ಸೋಮಣ್ಣ ಮ್ಯಾಚ್ ಫಿಕ್ಸಿಂಗ್‌ಗೆ ಮುಂದಾಗಿದ್ದಾರಾ ಎಂಬ ಅನುಮಾನ ವ್ಯಕ್ತವಾಗುತ್ತಿದೆ. ಚಾಮರಾಜನಗರ ಜೆಡಿಎಸ್ ಅಭ್ಯರ್ಥಿ ಮಲ್ಲಿಕಾರ್ಜುನ್ ಸ್ವಾಮಿ ಅಲಿಯಾಸ್ ಆಲೂರು ಮಲ್ಲುಗೆ ವಿ. ಸೋಮಣ್ಣ ಕಾಲ್ ಮಾಡಿದ್ದಾರೆ ಎನ್ನಲಾದ ಆಡಿಯೋ ಒಂದು ವೈರಲ್ ಆಗುತ್ತಿದೆ.

ಮುಂದೆ ಓದಿ ...
  • News18 Kannada
  • 5-MIN READ
  • Last Updated :
  • Chamarajanagar, India
  • Share this:

ಚಾಮರಾಜನಗರ: ರಾಜ್ಯ ವಿಧಾನಸಭಾ ಚುನಾವಣಾ ಕಣ (assembly election) ರಂಗೇರುತ್ತಿದೆ. ಅದರಲ್ಲೂ ಮತದಾನದ ದಿನಾಂಕ (polling date) ಹತ್ತಿರ ಬಂದಂತೆ, ಮತದಾರರನ್ನು (Voters) ಸೆಳೆಯಲು ಅಭ್ಯರ್ಥಿಗಳು (Candidates) ವಿವಿಧ ರೀತಿಯ ತಂತ್ರ ಹೆಣೆಯುತ್ತಿದ್ದಾರೆ. ಇದರ ನಡುವೆ ತಮ್ಮ ಎದುರಾಳಿಗಳನ್ನು ಎದುರಿಸಿಲು ಅಭ್ಯರ್ಥಿಗಳು ರಣತಂತ್ರ ರೂಪಿಸುತ್ತಿದ್ದಾರೆ. ಇದೀಗ ಚಾಮರಾಜನಗರದಿಂದ (Chamarajanagar) ಸ್ಪರ್ಧಿಸುತ್ತಿರುವ ಸಚಿವ ವಿ. ಸೋಮಣ್ಣ (V. Somanna) ಮ್ಯಾಚ್ ಫಿಕ್ಸಿಂಗ್‌ಗೆ ಮುಂದಾಗಿದ್ದಾರಾ ಎಂಬ ಅನುಮಾನ ವ್ಯಕ್ತವಾಗುತ್ತಿದೆ. ಚಾಮರಾಜನಗರ ಜೆಡಿಎಸ್ ಅಭ್ಯರ್ಥಿ (JDS) ಮಲ್ಲಿಕಾರ್ಜುನ್ ಸ್ವಾಮಿ (Mallikarjun Swamy) ಅಲಿಯಾಸ್ ಆಲೂರು ಮಲ್ಲು ಜೊತೆ ವಿ ಸೋಮಣ್ಣ ಕಾಲ್ ಮಾಡಿದ್ದಾರೆ ಎನ್ನಲಾದ ಆಡಿಯೋ (Audio) ಒಂದು ವೈರಲ್ ಆಗುತ್ತಿದೆ. ಆಡಿಯೋದಲ್ಲಿ ನಾಮಪತ್ರ ವಾಪಸ್ ತಗೋ, ನಿನಗೆ ಅನುಕೂಲ ಮಾಡಿಕೊಡ್ತೀನಿ ಅಂತ ಹೇಳಲಾಗಿದೆ.


ವೈರಲ್ ಆಗಿರುವ ಆಡಿಯೋ ಸೋಮಣ್ಣನವರದ್ದಾ?


ವಿ. ಸೋಮಣ್ಣ ಅವರದ್ದು ಎನ್ನಲಾದ ಆಡಿಯೋ ಒಂದು ವೈರಲ್ ಆಗಿದೆ. ಚಾಮರಾಜನಗರದಿಂದ ಸ್ಪರ್ಧಿಸುತ್ತಿರುವ ವಿ. ಸೋಮಣ್ಣ ಅಲ್ಲಿನ ಜೆಡಿಎಸ್‌ ಅಭ್ಯರ್ಥಿ ಮಲ್ಲಿಕಾರ್ಜುನ್ ಜೊತೆ ಫಿಕ್ಸಿಂಗ್ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದ್ದು, ಇದೀಗ ವೈರಲ್ ಆಗ್ತಿರೋ ಆಡಿಯೋ ನ್ಯೂಸ್ 18ಗೆ ಲಭ್ಯವಾಗಿದೆ.




ನಾಮಪತ್ರ ವಾಪಸ್ ಪಡೆಯುವಂತೆ ಒತ್ತಾಯ


ಜೆಡಿಎಸ್ ಅಭ್ಯರ್ಥಿಗೆ ನಾಮಪತ್ರ ವಾಪಸ್ ಪಡೆಯುವಂತೆ ಸೋಮಣ್ಣ ಒತ್ತಾಯಿಸಿದ್ದಾರೆ ಎನ್ನಲಾದ ಆಡಿಯೋ ಬಹಿರಂಗವಾಗಿದೆ. ನಾಮಪತ್ರ ವಾಪಸ್ ಪಡೆಯುವಂತೆ ಹೇಳುವ ಆಡಿಯೊ ತುಣುಕು ವಾಟ್ಸ್ ಆ್ಯಪ್ ನಲ್ಲಿ ವೈರಲ್ ಆಗಿದೆ. ಬಿಜೆಪಿ ಅಧಿಕಾರಕ್ಕೆ ಬರುತ್ತದೆ. ನಿನಗೆ ಗೂಟದ ಕಾರು ಕೋಡ್ತೀವಿ. ಮೊದಲು ವಾಪಸ್ ತಗೋ ಅಂತ ಹೇಳಿದ್ದಾರೆ.


ಇದನ್ನೂ ಓದಿ: Next CM: ಸಿಟಿ ರವಿ ಕರ್ನಾಟಕದ ಮುಂದಿನ ಸಿಎಂ ಆಗಲಿ! ಮಾಜಿ ಸಚಿವ ಕೆಎಸ್ ಈಶ್ವರಪ್ಪ ಆಗ್ರಹ


ನಿನ್ನ ಬದುಕಿಗೆ ಏನು ಬೇಕೋ ಮಾಡ್ತೀನಿ!


ಇನ್ನು ಮುಂದುವರಿದು, ತೊಟ್ಟಿ ನನ್ನ ಮಗನ ಮಾತು ಕೇಳಿ ನಿಂತ್ತಿದ್ದೀಯಾ? ಮೊದಲು ತೆಗಿ, ಆಮೇಲೆ ಎಲ್ಲ ಮಾತನಾಡೋಣ. ನಿನ್ನ ಬದುಕಿಗೆ ಏನು ಬೇಕೋ ಅದು ಮಾಡ್ತೇನೆ. ಹಿತ ಕಾಪಾಡ್ತೇನೆ' ಅಂತ ಆಡಿಯೋದಲ್ಲಿ ಹೇಳಲಾಗಿದೆ. ಇನ್ನು ಸೋಮಣ್ಣ ಅವರೇ ಕರೆ ಮಾಡಿದ್ದರು ಎನ್ನುವುದನ್ನು ಆಲೂರು ಮಲ್ಲು ದೃಢಪಡಿಸಿದ್ದಾರೆ.


ವೈರಲ್ ಆದ ಆಡಿಯೋದಲ್ಲಿ ಏನಿದೆ?


ಆಲೂರು ಮಲ್ಲು - ಅಣ್ಣಾ...ನಮಸ್ಕಾರ


ಸೋಮಣ್ಣ -  ಮೊದಲು ತಕೊಳ್ಳಯ್ಯ, ಆಮೇಲೆ ಏನು ಬೇಕಾದ್ರು ಮಾಡ್ತೀನಿ.


ಆಲೂರು ಮಲ್ಲು - ಅಣ್ಣಾ ತೆಗೆಯೋಕೆ ಆಗೋದಿಲ್ಲ ಅಣ್ಣಾ, ನೀವು ಹೇಳಿದಂಗೆ ನಾನು ಇರ್ತೀನಿ


ಸೋಮಣ್ಣ -  ಇದೆಲ್ಲಾ ಕಥೆ ಬೇಡ.. ಹೇಳೋ ತನಕ ಕೇಳು.. ನಾನು ಮಾತಾಡೋದನ್ನ ಕೇಳು ಇಲ್ಲಿ


ಆಲೂರು ಮಲ್ಲು - ಅಣ್ಣಾ...


ಸೋಮಣ್ಣ -  ನೀನು ನನಗೊಬ್ಬ ಹಳೇ ಸ್ನೇಹಿತ.. ಅವನ್ಯಾವನೋ ತೊಟ್ಟಿ ನನ್ ಮಗನ್ ಮಾತು ಕೇಳೋದಕ್ಕೆ ಹೋಗಬೇಡ.


ಆಲೂರು ಮಲ್ಲು - ಇಲ್ಲಣ್ಣ ಇಲ್ಲಣ್ಣ..


ಸೋಮಣ್ಣ - ನಾನು ಹೇಳೋ ತನಕ ಕೇಳೋ ಇಲ್ಲಿ.. ನಿನಗೆ ಬದುಕೋದಕ್ಕೆ ಏನೆಲ್ಲಾ ಬೇಕು ಎಲ್ಲ ಮಾಡ್ತೀನಿ.. ಅಣ್ಣ ಇದ್ದಾರೆ.. ಮೊದಲು ವಾಪಾಸ್ ತಕೋ ಆಮೇಲೆ ನಾನು ಮಾತಾಡ್ತೀನಿ.. ಮೊದಲು ವಾಪಾಸ್ ತೊಕೋ ನನ್ ಮಾತು ಕೇಳು.. ನಿನ್ನ ಹಿತ ಕಾಪಾಡೋದು ನನ್ ಜವಾಬ್ದಾರಿ.. ಮರಂಕಲ್ಲು.. ನಾನು.. ಸುದೀಪಣ್ಣ ಮೂರು ಜನ ಇರ್ತೀವಿ.. ನಿನ್ನ ತಕ್ಕೊಂಡು ಎಲ್ಲಿ ಬಿಡಬೇಕೋ.. ಮದರ್ ಪ್ರಾಮಿಸ್... ದೇವಸ್ಥಾನದಲ್ಲಿ ಇದ್ದೀನಿ.. ಉಪ್ಪಾರ ದೇವಸ್ಥಾನದಲ್ಲಿ ಇದ್ದೀನಿ... ಮೊದಲು ನಾನು ಹೇಳೋ ಮಾಡು.. ನಿನ್ ಕೈ ಮುಗೀತೀನಿ...


ಆಲೂರು ಮಲ್ಲು - ಸರಿ ಅಣ್ಣಾ.. ಸರಿ ಅಣ್ಣಾ... ಮಾತಾಡ್ತೀನಿ ಬಿಡಣ್ಣ.. ಮಾತಾಡ್ತೀನಿ...


ಸೋಮಣ್ಣ - ಇರೋದು ಇನ್ನು ಒಂದು ಗಂಟೆ... ಅದ್ಯಾವನೋ ಪೋಲಿ ನನ್ನ ಮಗನ ಮಾತು ಕೇಳಿಕೊಂಡು..


ಆಲೂರು ಮಲ್ಲು - ಯಾರ ಮಾತು ಕೇಳಿಲ್ಲ ಅಣ್ಣ... ನೀವು ಮುಖ್ಯಮಂತ್ರಿ ಆಗಬೇಕು ಅಂತ ನಾನು...


ಸೋಮಣ್ಣ - ಸರ್ಕಾರ ಬರುತ್ತೆ... ಒಂದು ಗೂಟದ ಕಾರು ಬೇಕು... ಮುಚ್ಕೊಂಡು ವಾಪಾಸ್ ತಕೋ.. ನಾನು ದೇವರ ಮುಂದೆ ನಿಂತ್ಕೊಂಡಿದ್ದೀನಿ...


ಆಲೂರು ಮಲ್ಲು - ಆಯ್ತಣ್ಣ... ಆಯ್ತಣ್ಣ...


ಸೋಮಣ್ಣ - ಉಪ್ಪಾರ ದೇವರ ಮುಂದೆ ನಿಂತಿದ್ದೀನಿ... ತಕೋ ಮೊದಲು... ಯಾರನ್ನೂ ಕೇಳೋದಕ್ಕೆ ಹೋಗಬೇಡ.. ನಾನು ಜಿ.ಟಿ. ದೇವೇಗೌಡ ನಾನು ಫ್ರೆಂಡ್ಸ್... ನೀನು ವಾಪಾಸ್ ತಕೋ...


ಇದನ್ನೂ ಓದಿ: V Somanna: ಸಿದ್ದರಾಮಯ್ಯ ವಿರುದ್ಧ ಗೆದ್ದು ಬೀಗುತ್ತಾರಾ ಸೋಮಣ್ಣ? ಲಿಂಗಾಯತ ನಾಯಕನ ಏಳುಬೀಳು ಹೇಗಿತ್ತು?




ಹೀಗಂತ ವೈರಲ್ ಆಗಿರೋ ಆಡಿಯೋದಲ್ಲಿ ಸಂಭಾಷಣೆ ನಡೆಸಲಾಗಿದೆ. ಇದು ಸೋಮಣ್ಣ ಅವರದ್ದೇ ಆಡಿಯೋ ಎನ್ನಲಾಗುತ್ತಿದೆ. ಇನ್ನು ಸೋಮಣ್ಣ ಅವರೇ ಕರೆ ಮಾಡಿದ್ದರು ಎನ್ನುವುದನ್ನು ಆಲೂರು ಮಲ್ಲು ದೃಢಪಡಿಸಿದ್ದಾರೆ.

First published: