ಬಾಯಿ ಚಪಲಕ್ಕೆ ಮಾತನಾಡಬಾರದು: ಅನಂತಕುಮಾರ್ ಹೆಗಡೆ, ಖರ್ಗೆ, ಸಿದ್ದರಾಮಯ್ಯ ವಿರುದ್ಧ ಸೋಮಣ್ಣ ಕಿಡಿ

ರಾಜಕಾರಣಿಗಳಿಂದ ವಿವಾದಾತ್ಮಕ ಹೇಳಿಕೆ ಹೆಚ್ಚಾಗಲು ಮಾಧ್ಯಮಗಳಲ್ಲಿ ಸಿಗುತ್ತಿರುವ ಪ್ರಾಶಸ್ತ್ಯವೇ ಕಾರಣ ಎಂದು ಬಿಜೆಪಿ ನಾಯಕ ವಿ. ಸೋಮಣ್ಣ ದೂರಿದ್ದಾರೆ.

news18
Updated:May 17, 2019, 7:42 PM IST
ಬಾಯಿ ಚಪಲಕ್ಕೆ ಮಾತನಾಡಬಾರದು: ಅನಂತಕುಮಾರ್ ಹೆಗಡೆ, ಖರ್ಗೆ, ಸಿದ್ದರಾಮಯ್ಯ ವಿರುದ್ಧ ಸೋಮಣ್ಣ ಕಿಡಿ
ವಿ. ಸೋಮಣ್ಣ
news18
Updated: May 17, 2019, 7:42 PM IST
ಕಲಬುರ್ಗಿ(ಮೇ 17): ಮಹಾತ್ಮ ಗಾಂಧಿ ಹಂತಕ ನಾಥುರಾಮ್ ಗೋಡ್ಸೆ ಪರ ಅಭಿಪ್ರಾಯ ವ್ಯಕ್ತಪಡಿಸಿದ್ದ ಅನಂತಕುಮಾರ್ ಹೆಗಡೆ ಅವರ ಹೇಳಿಕೆ ಬಗ್ಗೆ ಬಿಜೆಪಿ ನಾಯಕ ವಿ. ಸೋಮಣ್ಣ ವಿಷಾದಿಸಿದರು. ಅನಂತಕುಮಾರ್ ಹೆಗಡೆ ಬಾಯಿ ಚಪಲಕ್ಕೆ ಹೇಳಿಕೆ ನೀಡಬಾರದು ಎಂದು ಆಗ್ರಹಿಸಿದ ಮಾಜಿ ಸಚಿವ ಸೋಮಣ್ಣ, ರಾಜಕಾರಣಿಗಳ ವಿವಾದಾತ್ಮಕ ಹೆಳಿಕೆ  ಹೆಚ್ಚಾಗಲು ಮಾಧ್ಯಮಗಳೇ ಕಾರಣ ಎಂದು ದೂಷಿಸಿದರು. ಮಾಧ್ಯಮಗಳು ಇಂಥ ಹೇಳಿಕೆಗಳಿಗೆ ಹೆಚ್ಚು ಆದ್ಯತೆ ನೀಡದಿದ್ದರೆ ಇದಕ್ಕೆ ಕಡಿವಾಣ ಹಾಕಲು ಸಾಧ್ಯ ಎಂದು ಸೋಮಣ್ಣ ಅಭಿಪ್ರಾಯಪಟ್ಟರು.

ಅನಂತಕುಮಾರ್ ಹೆಗಡೆ ಅಷ್ಟೇ ಅಲ್ಲ, ಸಿದ್ದರಾಮಯ್ಯ, ಪ್ರಿಯಾಂಕ್ ಖರ್ಗೆ, ಡಾ| ಜಿ. ಪರಮೇಶ್ವರ್ ಸೇರಿದಂತೆ ಯಾರೂ ಕೂಡ ಬಾಯಿ ಚಪಲಕ್ಕೆ ಹೇಳಿಕೆ ನೀಡಬಾರದು ಎಂದು ಸಲಹೆ ನೀಡಿದ ಶಾಸಕ ವಿ. ಸೋಮಣ್ಣ, ಸಿದ್ದರಾಮಯ್ಯ ವರ್ತನೆಗೆ ಅಚ್ಚರಿ ಪಟ್ಟರು.

ಇದನ್ನೂ ಓದಿ: ಕೊನೆಗೂ ಮೌನ ಮುರಿದ ಮೋದಿ; ಗಾಂಧಿ ವಿರುದ್ಧ ಹೇಳಿಕೆಗೆ ಸಾಧ್ವಿ ಪ್ರಗ್ಯಾಸಿಂಗ್​ರನ್ನು ಕ್ಷಮಿಸಲಾರೆ ಎಂದ ಪ್ರಧಾನಿ

ಚಿಂಚೋಳಿಯಲ್ಲಿ ಬಿಜೆಪಿ ಮುಖಂಡರಾದ ಸುನೀಲ್ ವಲ್ಯಾಪುರೆ, ಎ.ಬಿ. ಮಾಲಕರೆಡ್ಡಿ ಅವರೊಂದಿಗೆ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ವಿ. ಸೋಮಣ್ಣ ಅವರು ಪ್ರಿಯಾಂಕ್ ಖರ್ಗೆ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಪ್ರಿಯಾಂಕ್ ಖರ್ಗೆ ಅವರನ್ನು ಮಲ್ಲಿಕಾರ್ಜುನ ಖರ್ಗೆಯವರ ಮಗ ಎಂದು ಹೇಳಲು ನಾಚಿಕೆಯಾಗುತ್ತದೆ. ಮಲ್ಲಿಕಾರ್ಜುನ ಖರ್ಗೆ ಮಾತನಾಡಬೇಕಾದರೆ ಯೋಚನೆ ಮಾಡಿ ಮಾತನಾಡುತ್ತಾರೆ. ಪ್ರಧಾನಿ ಬಗ್ಗೆ ಹೇಳಿಕೆ ನೀಡುವ ಪ್ರಿಯಾಂಕ್ ಖರ್ಗೆ ತಮ್ಮ ಇತಿಮಿತಿ ಅರಿತು ಮಾತನಾಡಬೇಕು. ತಮ್ಮ ಆಟಾಟೋಪ ನಿಲ್ಲಿಸಬೇಕು. ಮಲ್ಲಿಕಾರ್ಜುನ ಖರ್ಗೆ ತಮ್ಮ ಮಗನನ್ನು ನಿಯಂತ್ರಣದಲ್ಲಿಡಲು ಆಗಿಲ್ಲ ಎಂದು ವಿ. ಸೋಮಣ್ಣ ಟೀಕಿಸಿದರು.

ಚಿಂಚೋಳಿ ಉಪಚುನಾವಣೆಯಲ್ಲಿ ಬಿಜೆಪಿ ಗೆಲುವನ್ನು ತಡೆಯಲು ಸಾಧ್ಯವಿಲ್ಲ. ರವಿಕುಮಾರ್ ಮತ್ತು ತಾನು ಸೇರಿ ಈ ಬಾರಿ ಹೆಣೆದಿರುವ ಚುನಾವಣೆ ರಣತಂತ್ರವನ್ನು ಕಾಂಗ್ರೆಸ್ 10 ವರ್ಷವಾದರೂ ಭೇದಿಸಲು ಸಾಧ್ಯವಿಲ್ಲ. 118 ಹಳ್ಳಿಗಳಲ್ಲಿ ಪ್ರಚಾರ ನಡೆಸಿದ್ದೇವೆ. ಸಮ್ಮಿಶ್ರ ಸರಕಾರದ ಮೇಲೆ ಚಿಂಚೋಳಿ ಜನರಿಗೆ ನಂಬಿಕೆ ಇಲ್ಲ. ಚಿಂಚೋಳಿ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ 25 ಸಾವಿರ ಮತಗಳ ಅಂತರದಿಂದ ಗೆಲ್ಲದಿದ್ದರೆ ತಾನು ಮುಂದೆ  ಯಾವತ್ತೂ ಚುನಾವಣೆಯಲ್ಲಿ ತೊಡಗಿಸಿಕೊಳ್ಳುವುದಿಲ್ಲ ಎಂದು ಸೋಮಣ್ಣ ಬಲವಾದ ವಿಶ್ವಾಸ ವ್ಯಕ್ತಪಡಿಸಿದರು.

ಇದನ್ನೂ ಓದಿ: ಗಾಂಧಿ-ಗೋಡ್ಸೆ ವಿವಾದಕ್ಕೆ ಕಿಡಿ ಹೊತ್ತಿಸಿದ ಅನಂತ್ ಕುಮಾರ್ ಟ್ವೀಟ್​ ಡಿಲೀಟ್; ಶಿಸ್ತು ಕ್ರಮಕ್ಕೆ ಮುಂದಾದ ಬಿಜೆಪಿಬಹಿರಂಗ ಪ್ರಚಾರಕ್ಕೆ ಕೊನೆಯ ದಿನವಾದ ಇವತ್ತು ಸಂಜೆ 6 ಗಂಟೆಯ ನಂತರ ಚಿಂಚೋಳಿ ಮತಕ್ಷೇತ್ರದ ಹೊರಗಿನವರನ್ನು ಆಚೆ ಕಳುಹಿಸಬೇಕು. ಪ್ರಿಯಾಂಕ್ ಖರ್ಗೆ ಅವರನ್ನೂ ಇಲ್ಲಿಗೆ ಬಿಡಬಾರದು. ಹೈದರಾಬಾದ್, ತೆಲಂಗಾಣದಿಂದ ಕಾಂಗ್ರೆಸ್ಸಿಗರು ಗೂಂಡಾಗಳನ್ನ ಕರೆಸಿದ್ದಾರೆ ಎಂದು ಆರೋಪಿಸಿದ ವಿ. ಸೋಮಣ್ಣ, ತಾವು ಮಾಹಿತಿ ನೀಡಿದ ಮತಗಟ್ಟೆಗಳಿಗೆ ಬಿಗಿ ಭದ್ರತೆ ಒದಗಿಸಬೇಕು ಎಂದು ಚುನಾವಣಾಧಿಕಾರಿಗಳನ್ನು ಒತ್ತಾಯಿಸಿದರು.

ಮೇ 23ರ ನಂತರ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಕಿತ್ತಾಟ ಹೆಚ್ಚಾಗಿ, ರಾಜಕೀಯ ಧ್ರುವೀಕರಣ ಆಗಲಿದೆ ಎಂದೂ ಸೋಮಣ್ಣ ಭವಿಷ್ಯ ನುಡಿದರು.

(ವರದಿ: ಮಹೇಶ್ ವಿ. ಶಟಗಾರ)

ನಿಮ್ಮ ನ್ಯೂಸ್ 18 ಕನ್ನಡವನ್ನು ಶೇರ್​​ಚಾಟ್​ನಲ್ಲೂ ಹಿಂಬಾಲಿಸಿ
First published:May 17, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ