V Somanna: ಬರ್ತ್​ಡೇ ಸ್ಪೆಷಲ್! ಸಚಿವ ಸೋಮಣ್ಣ ಅಭಿಮಾನಿಗಳಿಂದ ರೊಬೋಟಿಕ್ ಲ್ಯಾಬ್ ಕೊಡುಗೆ

ಈ ರೊಬೋಟ್ ನೊಂದಿಗೆ ವಿವಿಧ ಸಲಕರಣೆಗಳನ್ನು ಒಳಗೊಂಡ 40 ಕಿಟ್ ಗಳನ್ನು ಸಹ ನೀಡಲಾಗಿದ್ದು ಶಿಕ್ಷಕರ ನೆರವಿಲ್ಲದೆ ರೊಬೋಟ್ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳೆ ನಾನಾ ರೀತಿಯ ಮಾಡಲ್ ತಯಾರಿಸಬಹುದು,  ಪ್ರಯೋಗಗಳನ್ನು ಮಾಡಬಹುದು

ರೋಬೋಟಿಕ್ ಲ್ಯಾಬ್

ರೋಬೋಟಿಕ್ ಲ್ಯಾಬ್

  • Share this:
ಚಾಮರಾಜನಗರ (ಜು.26)  ಕೇಕ್  ಕತ್ತರಿಸಿ, ಅದ್ದೂರಿ ಪಾರ್ಟಿ (Party) ಮಾಡಿ ಸಾರ್ವಜನಿಕ  ಸ್ಥಳಗಳಲ್ಲಿ ಬ್ಯಾನರ್ ಫ್ಲೆಕ್ಸ್, ಬಂಟಿಂಗ್‌ಗಳನ್ನು ಅಳವಡಿಸಿ, ದುಂದುವೆಚ್ಚ ಮಾಡಿ ಅಭಿಮಾನಿಗಳು ತಮ್ಮ ನಾಯಕನ ಹುಟ್ಟು ಹಬ್ಬವನ್ನು (Birthday) ಆಚರಿಸುವುದನ್ನು ನೋಡಿದ್ದೇವೆ. ಆದರೆ ವಸತಿ ಹಾಗು ಮೂಲಸೌಕರ್ಯಗಳ ಭಿವೃದ್ಧಿ ಸಚಿವ ವಿ.ಸೋಮಣ್ಣ ಅವರ ಅಭಿಮಾನಿಗಳು ಹತ್ತಾರು ವರ್ಷ ನೆನಪಿನಲ್ಲಿ ಉಳಿಯುವಂತಹ ಜನೋಪಯೋಗಿ ಕೆಲಸವೊಂದನ್ನು ಮಾಡುವ ಮೂಲಕ  ತಮ್ಮ ನಾಯಕನ ಹುಟ್ಟುಹಬ್ಬವನ್ನು ವಿಶಿಷ್ಠವಾಗಿ ಆಚರಿಸಿದ್ದಾರೆ.

ಹೌದು ಚಾಮರಾಜನಗರ (Chamarajanagara) ಮೈಸೂರು ಜಿಲ್ಲೆಯ  ವಿ.ಸೋಮಣ್ಣ  (V Somanna) ಅಭಿಮಾನಿಗಳ ಬಳಗವು  ಸರ್ಕಾರಿ ಪದವಿ ಪೂರ್ವ ಕಾಲೇಜೊಂದಕ್ಕೆ ಅತ್ಯಾಧುನಿಕ ವಿಜ್ಞಾನ ಮತ್ತು ರೊಬೋಟಿಕ್ ಪ್ರಯೋಗಾಲಯವನ್ನು (Robotic Lab) ಕೊಡುಗೆಯಾಗಿ ನೀಡುವ ಮೂಲಕ ತಮ್ಮ ನಾಯಕನ ಹುಟ್ಟುಹಬ್ಬವನ್ನು  ವಿ಼ಭಿನ್ನವಾಗಿ ಆಚರಿಸುವ ಮೂಲಕ ಮಾದರಿಯಾಗಿದ್ದಾರೆ.

ವಿಜ್ಞಾನ ಮತ್ತು ರೊಬೋಟಿಕ್ ಪ್ರಯೋಗಾಲಯ

ಕಳೆದ ವರ್ಷ ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೋಕು ಹಂಗಳ ಗ್ರಾಮದಲ್ಲಿರುವ ಸರ್ಕಾರಿ ಪ್ರೌಢಶಾಲೆಗೆ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಡಿಜಿಟಲ್ ಲೈಬ್ರರಿ  ಕೊಡುಗೆಯಾಗಿ  ನೀಡಿದ್ದ ವಿ.ಸೋಮಣ್ಣ ಅಭಿಮಾನಿ ಬಳಗ ಈ ಬಾರಿ ಮತ್ತೊಂದು ಹೆಜ್ಜೆ ಮುಂದೆ ಇರಿಸಿ ಗುಂಡ್ಲುಪೇಟೆ ತಾಲೋಕು ಬೇಗೂರು ಹೋಬಳಿ ಕೇಂದ್ರದಲ್ಲಿರುವ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ  ವಿಜ್ಞಾನ ಮತ್ತು ರೊಬೋಟಿಕ್ ಪ್ರಯೋಗಾಲಯವನ್ನು ಕೊಡುಗೆಯಾಗಿ ನೀಡುವ ಮೂಲಕ ತಮ್ಮ ನಾಯಕನ ಜನ್ಮದಿನದ ಆಚರಣೆಯನ್ನು ಸ್ಮರಣೀಯವಾಗಿಸಿದ್ದಾರೆ.

ಇದನ್ನೂ ಓದಿ: ಕರ್ನಾಟಕ ರಾಜ್ಯ ಸಫಾಯಿ ಅಭಿವೃದ್ಧಿ ನಿಗಮದಿಂದ ಅರ್ಜಿ ಆಹ್ವಾನ; ಹೀಗೆ ಅಪ್ಲೈ ಮಾಡಿ

ಇದರೊಂದಿಗೆ ಇಡೀ ರಾಜ್ಯದಲ್ಲೇ ಅತ್ಯಾಧುನಿಕ ರೊಬೋಟಿಕ್ ಪ್ರಯೋಗಾಲಯ ಹೊಂದಿದ ಪ್ರಥಮ ಸರ್ಕಾರಿ ಪದವಿಪೂರ್ವ ಕಾಲೇಜು ಎಂಬ ಹೆಗ್ಗಳಿಕೆಗೆ ಬೇಗೂರು  ಸರ್ಕಾರಿ ಪದವಿಪೂರ್ವ ಕಾಲೇಜು  ಪಾತ್ರವಾಗಿದೆ.



ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳೇ ವ್ಯಾಸಂಗ ಮಾಡುವ ಈ ಕಾಲೇಜಿನಲ್ಲಿ ಲಕ್ಷಾಂತರ ರೂಪಾಯಿ  ಖರ್ಚು ಮಾಡಿ ವಿಜ್ಷಾನ ಮತ್ತ ರೊಬೋಟಿಕ್ ಪ್ರಯೋಗಾಲಯ ನಿರ್ಮಿಸಿಕೊಟ್ಟು ಅದಕ್ಕೆ ಲಿಂಗೈಕ್ಯ ಶ್ರೀ ಸಿದ್ದಗಂಗಾ ಶಿವಕುಮಾರಸ್ವಾಮೀಜಿ ಅವರ ಹೆಸರನ್ನು ನಾಮಕರಣ ಮಾಡಲಾಗಿದ್ದು ಸುತ್ತೂರ ಮೈಸೂರು ರಾಜವಂಶಸ್ಥ ಯಧುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಲೋಕಾರ್ಪಣೆ ಮಾಡಿದರು.

ವಿವಿಧ ಸಲಕರಣೆಗಳನ್ನುಳ್ಳ 40 ಕಿಟ್

ಈ ರೊಬೋಟ್ ನೊಂದಿಗೆ ವಿವಿಧ ಸಲಕರಣೆಗಳನ್ನುಳ್ಳ 40 ಕಿಟ್ ಗಳನ್ನು ಸಹ ನೀಡಲಾಗಿದ್ದು ಶಿಕ್ಷಕರ ನೆರವಿಲ್ಲದೆ ರೊಬೋಟ್ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳೆ ನಾನಾ ರೀತಿಯ ಮಾಡಲ್ ತಯಾರಿಸಬಹುದು,  ಪ್ರಯೋಗಗಳನ್ನು ಮಾಡಬಹುದು. ಅದು ಭೌತಶಾಸ್ತ್ರವಿರಲಿ, ಜೀವಶಾಸ್ತ್ರವಿರಲಿ, ರಸಾಯನಶಾಸ್ತ್ರ ವಿರಲಿ, ಸಾಮಾನ್ಯ ಜ್ಞಾನವಾಗಿರಲಿ ವಿದ್ಯಾರ್ಥಿಗಳು ಯಾವುದೇ ಪ್ರಶ್ನೆಗಳನ್ನು  ರೊಬೋಟ್ ಮುಂದೆ ಕೇಳಿ ಉತ್ತರ ಪಡೆಯಬಹುದಾಗಿದೆ ಜೊತೆಗೆ  ಸಂಶಯಗಳನ್ನು ನಿವಾರಿಸಿಕೊಳ್ಳಬಹುದಾಗಿದೆ.

ಪಠ್ಯಗಳ ಪ್ರೋಗ್ರಾಮಿಂಗ್

"ರೊಬೋಟ್ ಗೆ ರಾಷ್ಟ್ರೀಯ ಶಿಕ್ಷಣ ನೀತಿಗೆ ಪೂರಕವಾದ ಪಠ್ಯಗಳ ಪ್ರೋಗ್ರಾಮಿಂಗ್ ಗಳನ್ನು ಅಳವಡಿಸಲಾಗಿದ್ದು  ಪ್ರೌಢಶಾಲಾ ಹಾಗು ಪಿಯು ವಿದ್ಯಾರ್ಥಿಗಳ ಕ್ರಿಯಾಶೀಲ  ಕಲಿಕೆಗೆ ಈ ವಿಜ್ಞಾನ ಮತ್ತು ರೊಬೋಟಿಕ್ ಪ್ರಯೋಗಾಲಯ ಪೂರಕವಾಗಿದೆ,  ಇದು ವಿದ್ಯಾರ್ಥಿಗಲ್ಲಿ ಮತ್ತಷ್ಟು  ಕಲಿಕಾ ಆಸಕ್ತಿ ಮೂಡಿಸಲಿದೆ" ಎನ್ನುತ್ತಾರೆ ಕಾಲೇಜಿನ ವಿಜ್ಞಾನ ಉಪನ್ಯಾಸಕ ಷಢಕ್ಷರಿ

ಇದನ್ನೂ ಓದಿ: Vijayapura: ಕರ್ನಾಟಕ ರಾಜ್ಯ ಸಫಾಯಿ ಅಭಿವೃದ್ಧಿ ನಿಗಮದಿಂದ ಅರ್ಜಿ ಆಹ್ವಾನ; ಹೀಗೆ ಅಪ್ಲೈ ಮಾಡಿ

ನಮ್ಮ ಕಾಲೇಜಿನಲ್ಲಿ ಪ್ರಯೋಗಾಲಯ ಇದ್ದರೂ ಬೇಕಾದ ಸೌಲಭ್ಯಗಳ ಕೊರತೆ ಇತ್ತು, ಇದೀಗ ರೊಬೋಟ್ ಸೇರಿದಂತೆ ಹಲವು ಉಪಕರಣಗಳನ್ನು ನೀಡಿರುವುದರಿಂದ ಕಲಿಯಲು ಇನ್ನೂ ಹೆಚ್ಚಿನ ಉತ್ಸಾಹ ಬಂದಿದೆ. ದೊಡ್ಡ ದೊಡ್ಡ ನಗರಗಳ ಪ್ರತಿಷ್ಠಿತ ಖಾಸಗಿ ಕಾಲೇಜುಗಳಲ್ಲಿ ಕಾಣಬಹುದಾದ ಅತ್ಯಾಧುನಿಕ  ಪ್ರಯೋಗಾಲಯ ನಮ್ಮ ಗ್ರಾಮೀಣ ಪ್ರದೇಶದ ಕಾಲೇಜಿನಲ್ಲು ಇರುವುದು ಖುಷಿ ತಂದಿದೆ  ಎಂದುವಿದ್ಯಾರ್ಥಿನಿ ಬಸವಸಿರಿ ತಿಳಿಸಿದರು.
Published by:Divya D
First published: