ರಾಜ್ಯದ ಜನ ನೋವಿನಲ್ಲಿರುವಾಗ, ಅದ್ದೂರಿ ದಸರಾದಲ್ಲಿ ಭಾಗಿಯಾಗಲು ಸಾಧ್ಯವಿಲ್ಲ; ಶ್ರೀನಿವಾಸ್ ಪ್ರಸಾದ್
ಜನರು ನೋವಿನಲ್ಲಿರುವ ಅದ್ಧೂರಿ ದಸರಾದಲ್ಲಿ ಭಾಗಿಯಾಗುವುದು ತಪ್ಪಾಗಲಿದೆ. ಈ ಕಾರಣದಿಂದ ದಸರಾ ಆಚರಣೆಯಿಂದ ಅಂತರ ಕಾಯ್ದುಕೊಳ್ಳುತ್ತಿದ್ದೇನೆ ; ಶ್ರೀನಿವಾಸ್ ಪ್ರಸಾದ್

ವಿ. ಶ್ರೀನಿವಾಸ ಪ್ರಸಾದ್
- News18 Kannada
- Last Updated: September 24, 2019, 7:06 PM IST
ಮೈಸೂರು (ಸೆ.24): ರಾಜ್ಯದ ಜನರು ಪ್ರವಾಹ ಸಂಕಷ್ಟದಲ್ಲಿದ್ದಾರೆ. ಅವರಿಗೆ ಇನ್ನು ಪುನರ್ವಸತಿ ಕಲ್ಪಿಸುವ ಕೆಲಸವಾಗಬೇಕು. ಇಂತಹ ಸಮಯದಲ್ಲಿ ಕುಣಿದು ಕುಪ್ಪಳಿಸುವ, ಅದ್ದೂರಿ ಮೈಸೂರು ದಸರಾ ಆಚರಣೆ ಬೇಡವಾಗಿತ್ತು. ಈ ಹಿನ್ನೆಲೆ ದಸರಾ ಸಂಭ್ರಮದಿಂದ ದೂರ ಇರುತ್ತೇನೆ ಎಂದು ಬಿಜೆಪಿ ಸಂಸದ ವಿ ಶ್ರೀನಿವಾಸ್ ಪ್ರಸಾದ್ ತಿಳಿಸಿದ್ದಾರೆ.
ರಾಜ್ಯದ 22ಕ್ಕೂ ಹೆಚ್ಚು ಜನರು ಪ್ರವಾಹದಿಂದ ನಲುಗಿದ್ದಾರೆ. ರಾಜ್ಯದ ಜನರು ಈ ನೋವಿನಲ್ಲಿರುವಾಗ ಅದ್ದೂರಿ ದಸರಾ ಆಚರಣೆ ಬೇಡವಾಗಿತ್ತು. ಈ ಬಗ್ಗೆ ಸಿಎಂ ಬಿಎಸ್ ಯಡಿಯೂರಪ್ಪ ಬಳಿ ಕೂಡ ಮನವಿ ಮಾಡಿ, ಸರಳ ದಸರಾ ಆಚರಣೆ ಮಾಡುವಂತೆ ಹೇಳಿದ್ದೆ ಆದರೆ ಸಿಎಂ ಬಾಯಲ್ಲಿಯೇ ಅದ್ದೂರಿ ದಸರಾ ಎಂಬ ಪದ ಬಂದಿದೆ. ಅವರ ಬಾಯಲ್ಲಿ ಈ ರೀತಿಯ ಪದ ಬರಬಾರದಾಗಿತ್ತು. ಇದು ಜನರ ದಸರಾ ಆಗಬೇಕಿತ್ತು. ಆದರೆ, ಸರ್ಕಾರದ ಅದ್ದೂರಿ ದಸರಾವಾಗಿದೆ. ಇದಕ್ಕೆ ನನ್ನ ಬೆಂಬಲವಿಲ್ಲ ಎಂದು ಹೇಳಿದರು.
ಜನರು ನೋವಿನಲ್ಲಿರುವ ಅದ್ಧೂರಿ ದಸರಾದಲ್ಲಿ ಭಾಗಿಯಾಗುವುದು ತಪ್ಪಾಗಲಿದೆ. ಇಂತಹ ಸಂದರ್ಭದಲ್ಲಿ ಯುವ ದಸರಾ, ತಿಂದು ತೇಗುವ ಆಹಾರದ ಮೇಳಗಳ ಅವಶ್ಯಕತೆ ಇರಲಿಲ್ಲ. ಜನರು ಕಷ್ಟಗಳಲ್ಲಿ ಮುಳುಗಿರುವಾಗ ಊರ ತುಂಬಾ ದೀಪಾಲಂಕಾರ ಬೇಕಾಗಿರಲಿಲ್ಲ. ಈ ಕಾರಣದಿಂದ ದಸರಾ ಆಚರಣೆಯಿಂದ ಅಂತರ ಕಾಯ್ದುಕೊಳ್ಳುತ್ತಿದ್ದೇನೆ ಎಂದು ಸ್ಪಷ್ಟಪಡಿಸಿದರು.ಇದನ್ನು ಓದಿ: Photo: ಪ್ರವಾಹ ಸಂತ್ರಸ್ತರ ಕಷ್ಟಕ್ಕೆ ಸ್ಪಂದಿಸದ ಕೇಂದ್ರ, ರಾಜ್ಯ ಸರ್ಕಾರದ ವಿರುದ್ಧ ಕಾಂಗ್ರೆಸ್ ಕಹಳೆ
ಇದೇ ವೇಳೆ ಮಾಜಿ ಸಿಎಂಗಳ ಟ್ವೀಟ್ ವಾರ್ ಕುರಿತು ಪ್ರತಿಕ್ರಿಯಿಸಿದ ಅವರು, ಯಾರು ಹದ್ದು, ಯಾರು ಗಿಳಿ ಎಂಬುದು ಜನರಿಗೆ ಗೊತ್ತಾಗುತ್ತಿದೆ. ಅವರು ಮೈತ್ರಿ ಮಾಡಿಕೊಂಡು ಒಗ್ಗಟ್ಟಿನಿಂದ ಕೆಲಸಮಾಡಿಲ್ಲ. ಈಗ ಮೈತ್ರಿ ಸರ್ಕಾರ ಪತನವಾಗುತ್ತಿದ್ದಂತಲೇ ಒಬ್ಬರ ಮೇಲೋಬ್ಬರು ಆರೋಪಮಾಡುತ್ತಿದ್ದಾರೆ. ಮೈತ್ರಿ ಸರ್ಕಾರದಲ್ಲಿ ಸಿದ್ದರಾಮಯ್ಯ ಅತೃಪ್ತ ಶಾಸಕನಾಗಿದ್ದರು. ಸುಮ್ಮನೆ ಇವರು ಅನರ್ಹ ಶಾಸಕರ ವಿರುದ್ದ ಮಾತನಾಡುತ್ತಿದ್ದರು. ಎಲ್ಲದಕ್ಕೂ ಈಗ ಎಲ್ಲದಕ್ಕೂ ಉತ್ತರ ಸಿಕ್ಕಿದೆ ಎಂದರು.
ರಾಜ್ಯದಲ್ಲಿ ಬಿಜೆಪಿ ಸರ್ಕಾರ ಭದ್ರವಾಗಿದ್ದು, ಅವಧಿ ಪೂರ್ಣ ಅಧಿಕಾರ ನಡೆಸಲಿದೆ. ಉಪ ಚುನಾವಣೆಯಲ್ಲಿ ಬಿಜೆಪಿಗೆ ಹೆಚ್ಚಿನ ಸ್ಥಾನ ಸಿಗಲಿದ್ದು, ಅತೃಪ್ತ ಶಾಸಕರಿಗೆ ಸಚಿವ ಸ್ಥಾನ ಸಿಗುತ್ತದೆ ಎಂದು ಭರವಸೆ ವ್ಯಕ್ತಪಡಿಸಿದರು.

Loading...