ಬಸವಣ್ಣನ ನಾಡಿನಲ್ಲಿ ಆದಿತ್ಯನಾಥ ಯೋಗಿ ಪ್ರಚಾರ; ರಾಮ-ಹನುಮನ ಭಾವನಾತ್ಮಕ ಸಂಬಂಧ ನೆನಪಿಸಲು ಬಂದಿದ್ದೇನೆ ಎಂದ ಉ.ಪ್ರ. ಸಿಎಂ

news18
Updated:May 4, 2018, 4:45 PM IST
ಬಸವಣ್ಣನ ನಾಡಿನಲ್ಲಿ ಆದಿತ್ಯನಾಥ ಯೋಗಿ ಪ್ರಚಾರ; ರಾಮ-ಹನುಮನ ಭಾವನಾತ್ಮಕ ಸಂಬಂಧ ನೆನಪಿಸಲು ಬಂದಿದ್ದೇನೆ ಎಂದ ಉ.ಪ್ರ. ಸಿಎಂ
  • Share this:
-ಮಹೇಶ ವಿ. ಶಟಗಾರ, ನ್ಯೂಸ್18 ಕನ್ನಡ

ವಿಜಯಪುರ,(ಮೇ 04): ಕರ್ನಾಟಕ ಮತ್ತು ಉತ್ತರ ಪ್ರದೇಶ ಭಾವನಾತ್ಮಕವಾಗಿ ಸಂಬಂಧ ಹೊಂದಿವೆ. ರಾಮನ ಜನ್ಮಭೂಮಿ, ಕೃಷ್ಣ, ಶಿವನ ಜನ್ಮಭೂಮಿ ಉತ್ತರ ಪ್ರದೇಶ ಎಂದು ಬಸವನಾಡಿನಲ್ಲಿ ಪ್ರಚಾರ ಕೈಗೊಂಡಿರುವ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.

ವಿಜಯಪುರ ಜಿಲ್ಲೆಯ‌ ಮುದ್ದೇಬಿಹಾಳದಲ್ಲಿ ಬಿರುಸಿನ ಪ್ರಚಾರ ಕೈಗೊಂಡ ಅವರು, ಕನ್ನಡದಲ್ಲಿ ಭಾಷಣ ಆರಂಭಿಸಿದರು. ಯೋಗಿ, ಕರ್ನಾಟಜದ ಮಹಾಜನತೆಗೆ ಹೃದಯಪೂರ್ವಕ ನಮಸ್ಕಾರಗಳು ಎಂದು ಹೇಳಿದರು. ರಾಮನಿಗೆ ವನವಾಸದಲ್ಲಿ ವಿಶ್ವಾಸನೀಯವಾಗಿ ಸಿಕ್ಕ ವ್ಯಕ್ತಿ ಕರ್ನಾಟಕದ ಹನುಮಂತ. ರಾಮ-ಹನುಮರ ಜೋಡಿಯಂತೆ ಇಂದು ದೇಶದಲ್ಲಿ ರಾಮರಾಜ್ಯ ಸ್ಥಾಪನೆಯಾಗಬೇಕಿದೆ. ರಾಮರಾಜ್ಯ ಸ್ಥಾಪಿಸುವಂತೆ ನಾನು ಕರ್ನಾಟಕದ ಮತದಾರರಲ್ಲಿ ಮನವಿ ಮಾಡುತ್ತೇನೆ ಎಂದು ಹೇಳಿದರು.

ಕರ್ನಾಟಕದ ಮಂಜುನಾಥನ ಪರಂಪರೆಗೂ ಗೋರಖನಾಥನಿಗೂ ಸಾಮ್ಯತೆಯಿದೆ. ಸಂಬಂಧವಿದೆ. ಕರ್ನಾಟಕದಲ್ಲಿ ಸಿದ್ಧರಾಮಯ್ಯ ಸರಕಾರ ಗೋಹತ್ಯೆ ಮತ್ತು ಗೋಮಾಂಸ ಭಕ್ಷಕರ ಪರವಿದ್ದರೆ, ನಾವು ಗೋಹತ್ಯೆ ನಿಷೇಧ ಹಾಗೂ ಗೋರಕ್ಷರ ಪರವಿದ್ದೇವೆ ಎಂದರು. ಇಲ್ಲಿ ಕೃಷಿಭೂಮಿ ಇದೆ. ಆದರೆ ನೀರಾವರಿ ಸೌಲಭ್ಯಗಳಿಲ್ಲ. ಪ್ರಧಾನಿ ನರೇಂದ್ರ ಮೋದಿ ಕೃಷಿ ಯೋಜನೆ ಜಾರಿಗೆ ತಂದಿದ್ದರೆ ಅದನ್ನು ಇಲ್ಲಿ ಜಾರಿಗೊಳಿಸುವ ಬದಲು ಸಿದ್ದರಾಮಯ್ಯ ಜನ ಮತ್ತು ಧರ್ಮ ವಿಭಜನೆಯಲ್ಲಿ ತೊಡಗಿದ್ದಾರೆ. ಮುಸ್ಲಿಂ ಮಹಿಳೆಯರ ಪರ ಮತ್ತು ತ್ರಿವಳಿ ತಲಾಖ್​​ ತಡೆದಿದ್ದು ಬಿಜೆಪಿ ಸರಕಾರ. ಬಿಜೆಪಿ ರೈತರ ಸಮಸ್ಯೆಗಳಿಗೆ ಸ್ಪಂದಿಸಿದೆ. ಉತ್ತರ ಪ್ರದೇಶದಲ್ಲಿ 86 ಲಕ್ಷ ರೈತರ ಸಾಲ ಉತ್ತರಪ್ರದೇಶದಲ್ಲಿ ಮನ್ನಾ ಮಾಡಲಾಗಿದೆ. ಆದರೆ, ಕರ್ನಾಟಕದಲ್ಲಿ ರೈತರ ಆತ್ಮಹತ್ಯೆ ತಡೆಯಲು ಸಿದ್ಧರಾಮಯ್ಯ ವಿಫಲರಾಗಿದ್ದಾರೆ ಎಂದು ಟೀಕಿಸಿದರು.

ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ರೈತರ ಸಾಲಮನ್ನಾ, ರೈತರ ಬೆಳೆಗಳಿಗೆ ಉತ್ತಮ ಬೆಲೆ ನೀಡಲಿದೆ. ಕಾಂಗ್ರೆಸ್ ರೈತರು ಮತ್ತು ಯುವಕರ ಪರ ಎಂದೂ ಕೆಲಸ ಮಾಡಿಲ್ಲ. ಯುವಶಕ್ತಿಯ ಸದ್ಬಳಕೆಯಲ್ಲಿ ಕರ್ನಾಟಕ ವಿಫಲವಾಗಿದೆ. ಕಾಂಗ್ರೆಸ್ ಧರ್ಮ, ಸಂಸ್ಜೃತಿ ವಿರೋಧಿಯಾಗಿದೆ. ಯುವಕರು, ಮಹಾಪುರುಷರಿಗೆ ಕಾಂಗ್ರೆಸ್ ಅವಮಾನ ಮಾಡುತ್ತಿದೆ. ಕರ್ನಾಟಕ ಸರಕಾರ ಕಾಂಗ್ರೆಸ್ ಪಾಲಿನ ಎಟಿಎಂ ಆಗಿದೆ ಎಂದು‌ ಆರೋಪಿಸಿದರು.

ಬಿಜೆಪಿ ಅಭ್ಯರ್ಥಿ ಎ. ಎಸ್. ಪಾಟೀಲ ನಡಹಳ್ಳಿ ಸಹ  ಬಿರುಸಿನ ಪ್ರಚಾರ ಕೈಗೊಂಡರು. ಭಾರತ‌ ಮಾತೆಯ ಭಾವಚಿತ್ರಕ್ಕೆ ಆದಿತ್ಯನಾಥ ಯೋಗಿ ಪುಷ್ಪಾರ್ಚನೆ ಮಾಡಿದರು. ಈ ಸಂದರ್ಭದಲ್ಲಿ ಮುದ್ದೇಬಿಹಾಳ ಬಿಜೆಪಿ ಅಭ್ಯರ್ಥಿ ಮತ್ತು ಶಾಸಕ ಎ. ಎಸ್. ಪಾಟೀಲ ನಡಹಳ್ಳಿ ಆದಿತ್ಯನಾಥ ಯೋಗಿ ಅವರಿಗೆ ಬಸವೇಶ್ವರ ಭಾವಚಿತ್ರ ನೀಡಿ‌ ಗೌರವಿಸಿದರು‌.
First published:May 4, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ