• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Uttara Karnataka: 2024ರ ನಂತರ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ; ಸಚಿವ ಉಮೇಶ್ ಕತ್ತಿ ಬಾಂಬ್

Uttara Karnataka: 2024ರ ನಂತರ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ; ಸಚಿವ ಉಮೇಶ್ ಕತ್ತಿ ಬಾಂಬ್

ಸಚಿವ ಉಮೇಶ್​ ಕತ್ತಿ

ಸಚಿವ ಉಮೇಶ್​ ಕತ್ತಿ

ಉತ್ತರ ಕರ್ನಾಟಕ ರಾಜ್ಯವಾದಾಗ  ಪ್ರತ್ಯೇಕ ರಾಜ್ಯಕ್ಕೆ ಬೇಕಾದ ಮೂಲಸೌಕರ್ಯ ನಮ್ಮಲ್ಲಿವೆ ಎಂದು ಸಹ ಆಹಾರ ಮತ್ತು ಅರಣ್ಯ ಸಚಿವ ಉಮೇಶ ಕತ್ತಿ ಪ್ರತ್ಯೇಕ ರಾಜ್ಯದ ಮಾತೆತ್ತಿದ್ದಾರೆ.

  • Share this:

ಬೆಳಗಾವಿ: 2024 ರ ಲೋಕಸಭೆ ಚುನಾವಣೆ ನಂತ್ರ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾಗಲಿದೆ  ಎಂದು   ಬೆಳಗಾವಿಯಲ್ಲಿ (Belagavi) ಆಹಾರ ಮತ್ತು ಅರಣ್ಯ ಸಚಿವ ಉಮೇಶ ಕತ್ತಿ (Umesh Katti) ಹೇಳಿಕೆ ನೀಡಿದ್ದಾರೆ.  ಈಮೂಲಕ ಮತ್ತೊಮ್ಮೆ ಕರ್ನಾಟಕ ಇಬ್ಬಾಗದ ಮಾತೆತ್ತಿದ್ದಾರೆ ಸಚಿವ ಉಮೇಶ ಕತ್ತಿ.  2024ರ ನಂತರ ದೇಶದಲ್ಲಿ 50 ಹೊಸ ರಾಜ್ಯಗಳು ಉದಯಿಸಲಿವೆ. ಆಗ ಕರ್ನಾಟಕವೂ ಎರಡು ರಾಜ್ಯಗಳಾಗಲಿವೆ. ಇದೇ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ಕುಡಿಯುವ ನೀರಿನ ಅಭಾವ ಸೃಷ್ಟಿಯಾಗಿದೆ. ಟ್ರಾಫಿಕ್ ಸಮಸ್ಯೆ (Bengaluru Traffic) ಹೆಚ್ಚಾಗಿದೆ. ಈ ಅಂಶಗಳೆಲ್ಲವೂ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾಗಲು (Uttara Karnataka) ಕಾರಣವಾಗಲಿದೆ ಎಂದು ಅವರು ವಿವಾದಿತ ಹೇಳಿಕೆ ನೀಡಿದ್ದಾರೆ.  


ಧಾರವಾಡದಲ್ಲಿ ಹೈಕೋರ್ಟ್, ಬೆಳಗಾವಿಯಲ್ಲಿ ಸುವರ್ಣಸೌಧ ಇದೆ.  ಉತ್ತರ ಕರ್ನಾಟಕ ರಾಜ್ಯವಾದಾಗ  ಪ್ರತ್ಯೇಕ ರಾಜ್ಯಕ್ಕೆ ಬೇಕಾದ ಮೂಲಸೌಕರ್ಯ ನಮ್ಮಲ್ಲಿವೆ ಎಂದು ಸಹ ಆಹಾರ ಮತ್ತು ಅರಣ್ಯ ಸಚಿವ ಉಮೇಶ ಕತ್ತಿ ಪ್ರತ್ಯೇಕ ರಾಜ್ಯದ ಮಾತೆತ್ತಿದ್ದಾರೆ. ಈ ಮುನ್ನವೂ ಸಹ ಸಚಿವ ಉಮೇಶ್ ಕತತ್ತಿ ಪದೇ ಪದೇ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಕುರಿತು ಮಾತನಾಡುತ್ತಲೇ ಇದ್ದರು. ಉತ್ತರ ಕರ್ನಾಟಕವನ್ನು ಪ್ರತ್ಯೇಕ ರಾಜ್ಯ ಮಾಡಲು ಬೇಡಿಕೆ ಇಡುತ್ತಲೇ ಇದ್ದರು. ಇದಿಗ ಅದೇ ಬೇಡಿಕೆಯನ್ನು ಮತ್ತೊಮ್ಮೆ ಮುಂದಿಟ್ಟಿದ್ದಾರೆ ಸಚಿವ ಉಮೇಶ್ ಕತ್ತಿ.


ಉತ್ತರ ಕರ್ನಾಟಕದವರೇ ಮುಖ್ಯಮಂತ್ರಿ ಆಗಬಹುದು ಎಂದಿದ್ದ ಸಚಿವ
ರಾಜ್ಯಕ್ಕೆ ಒಬ್ಬರೇ ಮುಖ್ಯಮಂತ್ರಿ. ಮುಂದೇ ಉತ್ತರ ಕರ್ನಾಟಕದವರೇ ಮುಖ್ಯಮಂತ್ರಿ ಆಗಬಹುದು ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಸಚಿವ ಉಮೇಶ ಕತ್ತಿ 2021ರಲ್ಲಿ ಹೇಳಿಕೆ ನೀಡಿದ್ದರು.  ಉತ್ತರ ಕರ್ನಾಟಕ ಒಡೆಯುವ ಉದ್ದೇಶ ನನಗಿಲ್ಲ, ನಾವೆಲ್ಲ ಅಖಂಡ ಕರ್ನಾಟಕದಲ್ಲಿ ಬದುಕಬೇಕು. ಅದನ್ನು ಆಳಬೇಕು ಎನ್ನುವ ಉದ್ದೇಶ ಇದೆ ಎನ್ನುವ ಮೂಲಕ ಸಿಎಂ‌ ಆಗುವ ಆಸೆಯನ್ನು‌ ಸಹ ಅವರು ವ್ಯಕ್ತಪಡಿಸಿದ್ದರು.


ನನಗೂ ಮುಖ್ಯಮಂತ್ರಿ ಆಗುವ ಆಸೆ
ನಾನು ಕೂಡ ಎಂಟು ಬಾರಿ ಶಾಸಕನಾಗಿ ಆಯ್ಕೆಯಾಗಿದ್ದೇನೆ. ಆರು ಇಲಾಖೆಗಳಲ್ಲಿ ಸಚಿವನಾಗಿ ಕೆಲಸ ಮಾಡಿದ ಅನುಭವ ಇದೆ. ಯಾವುದೇ ಕಪ್ಪು ಚುಕ್ಕೆ ಇಲ್ಲ. ಭ್ರಷ್ಟಾಚಾರ ಮಾಡಿಲ್ಲ. ನನಗೂ ಮುಖ್ಯಮಂತ್ರಿ ಆಗುವ ಆಸೆ ಇದೆ ಎಂದು ಇಂಗಿತ ವ್ಯಕ್ತಪಡಿಸಿದರು.


ಇದನ್ನೂ ಓದಿ: Ramya: ಮೈಸೂರಿನ ದೋಸೆ ತಿಂದು ಕನ್ನಡ ಸಿನಿಮಾ ಟ್ರೈಲರ್ ನೋಡಿ ಅಂತಾ ಮೋದಿಗೆ ರಮ್ಯಾ ಟಿಪ್ಸ್


ಹದಿನೈದು ವರ್ಷದಲ್ಲಿ ಸಿಎಂ ಆಗಬಹುದು ಎಂದಿದ್ದ ಸಚಿವ ಉಮೇಶ್ ಕತ್ತಿ
ಈ ಸಲ ಉತ್ತರ ಕರ್ನಾಟಕದವರಿಗೆ ಸಿಎಂ ಸ್ಥಾನ ಸಿಗಬಹುದು ಎಂಬ ಭರವಸೆ ಇದೆ. ನನಗೆ ಇನ್ನೂ 15 ವರ್ಷ ಅವಕಾಶ ಕೊಡಲು ಸಮಯ ಇದೆ, ಈಗ ನನಗೆ 60 ವರ್ಷ ಆಗಿದೆ, ಹದಿನೈದು ವರ್ಷದಲ್ಲಿ ಸಿಎಂ ಆಗಬಹುದು. ಎಂಟು ಸಲ ಎಂಎಲ್‌ಎ ಆಗಿದ್ದೇನೆ 11 ಸಲ ಎಂಎಲ್‌ಎ ಆಗುವೆ ಎಂದರು.


ಇದನ್ನೂ ಓದಿ: Diganth Health Update: ಆಪರೇಷನ್ ಬಳಿಕ ದಿಗಂತ್ ಹೇಗಿದ್ದಾರೆ? ಗಂಡನ ಆರೋಗ್ಯದ ಕುರಿತು ಮಾಹಿತಿ ನೀಡಿದ ಐಂದ್ರಿತಾ


ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿ ಆಗುವ ಮುನ್ನ ಶಾಸಕ ಅರವಿಂದ ಬೆಲ್ಲದ‌ ಪ ಉಮೇಶ್ರ ಕತ್ತಿ ಬ್ಯಾಟಿಂಗ್ ಮಾಡಿದ್ದರು. ಮುಂದಿನ ಮುಖ್ಯಮಂತ್ರಿ ಬೆಲ್ಲದ, ನಿರಾಣಿ ಅಥವಾ ನಾನೇ ಆಗಬಹುದು. ಶಾಸಕ, ಸಚಿವ, ಮುಖ್ಯಮಂತ್ರಿ ಬಳಿಕ ಪ್ರಧಾನಿ ಆಗುವ ಆಸೆಯೂ ಇದೆ ಎಂದು ಸಹ ಉಮೇಶ್ ಕತ್ತಿ ಆ ಸಂದರ್ಭದಲ್ಲಿ ಹೇಳಿಕೆ ನೀಡಿದ್ದರು. ಆದರೆ ಇದೀಗ ಮತ್ತೆ ಉತ್ತರ ಕರ್ನಾಟಕವನ್ನು ಪ್ರತ್ಯೇಕ ರಾಜ್ಯ ಮಾಡುವ ಕುರಿತು ಸಚಿವ ಉಮೇಶ್ ಕತ್ತಿ ಹೇಳಿಕೆ ನೀಡಿದ್ದಾರೆ.

top videos
    First published: