ರಾಯಚೂರು: ಈ ವರ್ಷ ಮತ್ತೆ ಕೃಷ್ಣಾ ನದಿಯಲ್ಲಿ ಪ್ರವಾಹ ಭೀತಿ ಆವರಿಸಿದೆ. ಕಳೆದ ವರ್ಷದ ಮಹಾಪ್ರವಾಹದಿಂದಾಗಿ ಅನೇಕರು ಮನೆಗಳನ್ನು ಕಳೆದುಕೊಂಡಿದ್ದಾರೆ. ಒಂದು ವರ್ಷವಾದರೂ ಪ್ರವಾಹಕ್ಕೆ ತುತ್ತಾದವರಿಗೆ ಮನೆಗಳನ್ನು ಕಟ್ಟಿಸಿಲ್ಲ, ಮನೆ ಕಟ್ಟಲು 5 ಲಕ್ಷ ರೂಪಾಯಿ ನೀಡುವುದಾಗಿ ಸರ್ಕಾರ ಭರವಸೆ ನೀಡಿತ್ತು. ಆದರೆ, ಆ ಪರಿಹಾರ ಮೊತ್ತ ಇನ್ನೂ ಜನರ ಕೈ ಸೇರಿಲ್ಲ, ಮನೆ ಕಟ್ಟಿಸಿಕೊಡುವಂತೆ ಜನರು ಸರ್ಕಾರಿ ಕಚೇರಿಗೆ ಅಲೆದಾಡುವಂತಾಗಿದೆ.
ಮಹಾರಾಷ್ಟ್ರ, ಬೆಳಗಾವಿಯಲ್ಲಿ ಮಳೆಯಾದರೆ ಸಾಕು ರಾಯಚೂರು ಜಿಲ್ಲೆಯ ಜನತೆಯಲ್ಲಿ ನಡುಕ ಉಂಟಾಗುತ್ತಿದೆ. ಈ ಜಿಲ್ಲೆಯ ಮುಖಾಂತರ ಹರಿಯುವ ಕೃಷ್ಣಾ ನದಿಯ ಪ್ರವಾಹವೇ ಇದಕ್ಕೆ ಕಾರಣ. ಕಳೆದ ವರ್ಷ ಕೃಷ್ಣಾ ನದಿ ಉಕ್ಕಿ ಹರಿದಿದ್ದರಿಂದಾಗಿ ನದಿಯ ಪಕ್ಕದಲ್ಲಿದ್ದವರ ಮನೆಗಳು ಹಾಳಾಗಿವೆ. ಪ್ರವಾಹದಿಂದಾಗಿ ಮನೆಗಳು ಹಾಳಾಗಿದ್ದು ದೇವದುರ್ಗಾ ತಾಲೂಕಿನ ಹೂವಿನ ಹೆಡಗಿ ಗ್ರಾಮಸ್ಥರ ಏಳು ಮನೆಗಳು ಹಾಳಾಗಿವೆ. ನದಿಯ ಹತ್ತಿರವಿದ್ದ ಏಳು ಮನೆಗಳು ಸಂಪೂರ್ಣವಾಗಿ ಹಾಳಾಗಿದ್ದವು. ಈ ಸಂದರ್ಭದಲ್ಲಿ ಇವರಿಗೆ ಮನೆಗಳನ್ನು ನಿರ್ಮಿಸಿಕೊಳ್ಳಲು ತಲಾ 5 ಲಕ್ಷ ರೂ. ನೀಡುವುದಾಗಿ ಘೋಷಣೆ ಮಾಡಿದೆ. ಅದರಲ್ಲಿ ಏಳು ಜನರು ತಮಗೆ ಅನುಕೂಲವಾದ ಕಡೆಯಲ್ಲಿ ಸುಮಾರು 5-6 ಲಕ್ಷ ರೂ. ಖರ್ಚು ಮಾಡಿ ಮನೆ ಕಟ್ಟಿಸುತ್ತಿದ್ದಾರೆ. ಅವರಿಗೆ ಸರಕಾರದಿಂದ ಬರಬೇಕಾದ ಅನುದಾನ ಬಂದಿಲ್ಲ.
ಇದನ್ನೂ ಓದಿ: Bengaluru Riots: ಬೆಂಗಳೂರು ಗಲಭೆ; ಪ್ರಮುಖ ಆರೋಪಿಗಳು ಪರಪ್ಪನ ಅಗ್ರಹಾರ ಜೈಲಿಗೆ ಶಿಫ್ಟ್
ಜಿಲ್ಲಾಧಿಕಾರಿಗಳೇ ಭೇಟಿ ನೀಡಿ ಮನೆಗಳನ್ನು ನಿರ್ಮಿಸಿ ನಿಮ್ಮ ಮನೆಗಳಿಗೆ ಹಂತ ಹಂತವಾಗಿ ಹಣ ಬಿಡುಗಡೆಯಾಗುತ್ತಿದೆ ಎಂದು ಹೇಳಿದ್ದಾರೆ. ಇದರಿಂದಾಗಿ ಮನೆಗಳನ್ನು ನಿರ್ಮಿಸುತ್ತಿದ್ದವರಿಗೆ ಬುನಾದಿ ಹಾಕಿದಾಗ ಒಂದು ಲಕ್ಷ, ಬೇಸ್ಮೆಂಟ್ ಲೆವೆಲ್ ಗೆ ಬಂದಾಗ ಒಂದೊಂದು ಲಕ್ಷ ರೂಪಾಯಿ ನೀಡಿದ್ದು ನಂತರ ಹಣ ನೀಡಿಲ್ಲ. ಮನೆಗಳಿಗಾಗಿ ಸಾಲ ಮಾಡಿಕೊಂಡವರಿಗೆ ಈಗ ಸಾಲ ಬೆಳೆಯುತ್ತಿದೆ. ಕೊರೊನಾ ಸಂದರ್ಭದಲ್ಲಿ ಕೆಲಸವೂ ಇಲ್ಲದೆ ಮನೆಗಾಗಿ ಸಾಲವನ್ನು ಮಾಡಿಕೊಂಡವರು ಈಗ ಅಧಿಕಾರಿಗಳ ಬಳಿ ಅಲೆದಾಡುತ್ತಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಆರ್ . ವೆಂಕಟೇಶ ಕುಮಾರ್, ಮನೆಗಳನ್ನು ನಿರ್ಮಿಸಿಕೊಂಡು ಸರಿಯಾದ ದಾಖಲೆಗಳನ್ನು ನೀಡಿದರೆ ಸಕಾಲಕ್ಕೆ ಹಂತ ಹಂತವಾಗಿ ಹಣ ಬಿಡುಗಡೆ ಮಾಡಲಾಗುತ್ತಿದೆ. ಹೂವಿನ ಹಡಗಿಯಲ್ಲಿಯೂ ಇಷ್ಟರಲ್ಲಿ ಅವರಿಗೆ ಹಣ ಬಿಡುಗಡೆ ಮಾಡುವುದಾಗಿ ಹೇಳಿದ್ದಾರೆ. ಕಳೆದ ಬಾರಿ ಪ್ರವಾಹದಲ್ಲಿ ರಾಯಚೂರು ಜಿಲ್ಲೆಯಲ್ಲಿ ಒಟ್ಟು 405 ಮನೆಗಳ ಹಾಳಾಗಿದ್ದು ಅದರಲ್ಲಿ 65 ಮನೆಗಳ ಸಂಪೂರ್ಣವಾಗಿ ಹಾಳಾಗಿವೆ. ಅವರಿಗೆ 5 ಲಕ್ಷ ರೂಪಾಯಿ ಮನೆ ನಿರ್ಮಿಸಲು ಜಿಲ್ಲಾಡಳಿತ ಮಾಲೀಕರಿಗೆ ತಿಳಿಸಿದೆ. ಆದರೆ ಅವರಿಗೆ ಸರಿಯಾದ ಸಮಯಕ್ಕೆ ಅನುದಾನ ಬಿಡುಗಡೆಯಾಗಿಲ್ಲ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ