Rajesh DuggumaneRajesh Duggumane
|
news18-kannada Updated:May 21, 2020, 4:16 PM IST
ಪ್ರಾತಿನಿಧಿಕ ಚಿತ್ರ.
ಬೆಂಗಳೂರು (ಮೇ 21): ಕೊರೋನಾ ವೈರಸ್ ಭಾರತಕ್ಕೆ ಕಾಲಿಟ್ಟು ಎರಡುವರೆ ತಿಂಗಳು ಕಳೆದಿದೆ. ಹೀಗಿದ್ದರೂ, ಉತ್ತರ ಕನ್ನಡ ಜಿಲ್ಲೆಯ ಶಿರಸಿ ಭಾಗದಲ್ಲಿ ಒಂದೇ ಒಂದು ಕೊರೋನಾ ಕೇಸ್ ಪತ್ತೆ ಆಗಿರಲಿಲ್ಲ. ಆದರೆ, ಈಗ ಒಂದೇ ದಿನ 9 ಜನರಿಗೆ ಕೊರೋನಾ ಪಾಸಿಟಿವ್ ಬಂದಿದ್ದು, ಶಿರಸಿ ಜನತೆ ಬೆಚ್ಚಿ ಬಿದ್ದಿದೆ.
ಇಂದು ಮಧ್ಯಾಹ್ನ ಆರೋಗ್ಯ ಇಲಾಖೆ ಬಿಡುಗಡೆ ಮಾಡಿದ ಬುಲೆಟಿನ್ ಪ್ರಕಾರ ಶಿರಸಿಯಲ್ಲಿ 9 ಕೇಸ್ ಪತ್ತೆ ಆಗಿರುವುದು ಖಚಿತವಾಗಿದೆ. ಈ ಪೈಕಿ 8 ಜನರು ಮಹಾರಾಷ್ಟ್ರದಿಂದ ಹಾಗೂ ಓರ್ವ ದುಬೈನಿಂದ ವಾಪಾಸಾಗಿದ್ದರು ಎಂದು ತಿಳಿದು ಬಂದಿದೆ.
ಮಹಾರಾಷ್ಟ್ರದಲ್ಲಿ ಕೊರೋನಾ ವೈರಸ್ ಅಬ್ಬರ ಜೋರಾಗಿದೆ. ಹೀಗಾಗಿ, ಅಲ್ಲಿಂದ ಬಂದ 160 ಜನರನ್ನು ನೇರವಾಗಿ ಕ್ವಾರಂಟೈನ್ ಕೇಂದ್ರದಲ್ಲಿ ಇಡಲಾಗಿತ್ತು. ಈ ಪೈಕಿ ಒಂದು ವರ್ಷದ ಮಗ, 42,36,30 ವಯಸ್ಸಿನ ಪುರುಷರು, 35,38,33 ವರ್ಷದ ಮಹಿಳೆಯರಿಗೆ ಹಾಗೂ 7 ಮತ್ತು 6 ವರ್ಷದ ಹೆಣ್ಣು ಮಗುವಿನಲ್ಲಿ ಕೊರೋನಾ ಪಾಸಿಟಿವ್ ಪತ್ತೆಯಾಗಿದೆ.
ಇದನ್ನೂ ಓದಿ: ಕರ್ನಾಟಕದಲ್ಲಿ ಕೋವಿಡ್-19: 24 ಗಂಟೆಯಲ್ಲಿ 116 ಕೇಸ್ ಪತ್ತೆ; 1,578ಕ್ಕೇರಿದ ಸೋಂಕಿತರ ಸಂಖ್ಯೆ
ಕೇಸ್ಗಳ ಸಂಖ್ಯೆ ಹೆಚ್ಚುವ ಆತಂಕ:
ಈ ಮೊದಲು ಕೊರೋನಾ ವೈರಸ್ ಉತ್ತರ ಕನ್ನಡದ ಗಡಿ ತಾಲೂಕು ಭಟ್ಕಳಕ್ಕೆ ಮಾತ್ರ ಸೀಮಿತವಾಗಿತ್ತು. ಈ ಭಾಗದಲ್ಲಿ ವಿದೇಶದಿಂದ ಬಂದವರಲ್ಲಿ ಕೊರೋನಾ ದೃಢಪಟ್ಟಿತ್ತು. ಆದರೆ, ಈಗ ಅದು ನಿಧಾನವಾಗಿ ಎಲ್ಲ ತಾಲೂಕುಗಳಿಗೂ ಹಬ್ಬುತ್ತಿದೆ. ಇತ್ತೀಚೆಗೆ, ಕುಮಟಾ, ಯಲ್ಲಾಪುರ ಹಾಗೂ ಹಳಿಯಾಳ ಭಾಗಗಳಲ್ಲಿ ಕೊರೋನಾ ವೈರಸ್ ಕೇಸ್ ಕಾಣಿಸಿಕೊಂಡಿತ್ತು. ಈಗ ಶಿರಸಿಗೂ ಕಾಲಿಟ್ಟಿದೆ. ಶಿರಸಿ ಭಾಗದಲ್ಲಿ ಕ್ವಾರಂಟೈನ್ನಲ್ಲಿರುವ ಇನ್ನೂ ಅನೇಕರ ಪರಿಕ್ಷಾ ವರದಿ ಬರುವುದ ಬಾಕಿ ಇದ್ದು, ಹೀಗಾಗಿ ಕೇಸ್ಗಳ ಸಂಖ್ಯೆ ಹೆಚ್ಚುವ ಸಾಧ್ಯತೆ ಇದೆ.
ಈಗ ಒಟ್ಟು 175 ಜನರನ್ನು ಕ್ವಾರಂಟೈನ್ ಕೇಂದ್ರದಲ್ಲಿ ಇಡಲಾಗಿದೆ. ಈ ಪೈಕಿ ಮಹಾರಾಷ್ಟ್ರದಿಂದ 105, ಪುಣೆಯಿಂದ 43, ಗುಜರಾತ್ 8, ಹೈದರಾಬಾದ್ನಿಂದ 35 ಹಾಗೂ ರಾಜಸ್ಥಾನದಿಂದ 8 ಜನರು ಆಗಮಿಸಿದ್ದಾರೆ. ಒಟ್ಟು 175 ಜನರನ್ನು ಕ್ವಾರಂಟೈನ್ನಲ್ಲಿ ಇಡಲಾಗಿದೆ.
ಜನರಲ್ಲಿ ಆತಂಕ ಬೇಡ:
ಕೊರೋನಾ ವೈರಸ್ ಪತ್ತೆಯಾದ 9 ಮಂದಿಯನ್ನು ಮಹಾರಾಷ್ಟ್ರದಿಂದ ಬಂದ ನಂತರ ನೇರವಾಗಿ ಕ್ವಾರಂಟೈನ್ ಕೇಂದ್ರದಲ್ಲಿ ಇಡಲಾಗಿತ್ತು. ಇವರು ಯಾರೊಬ್ಬರ ಸಂಪರ್ಕಕ್ಕೂ ಬಂದಿಲ್ಲ. ಹೀಗಾಗಿ, ಜನರು ಆತಂಕ ಪಡುವುದು ಬೇಡ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
First published:
May 21, 2020, 2:06 PM IST