ಉತ್ತರ ಕನ್ನಡದಲ್ಲೂ Goa ಮಾದರಿ Casinos ಇರಬೇಕು: ಸಚಿವ ಹೆಬ್ಬಾರ್ ಮಾತಿಗೆ ವಿರೋಧವೇಕೆ?

ಜಿಲ್ಲೆಯ ಕೆಲವರಿಂದ ಗೋವಾ ಮಾದರಿ ಪ್ರವಾಸೋದ್ಯಮಕ್ಕೆ ವಿರೋಧ ವ್ಯಕ್ತವಾಗಿದೆ. ನಮ್ಮ ಜಿಲ್ಲೆಯ ಸಂಸ್ಕೃತಿಗೆ ಧಕ್ಕೆ ಬರುತ್ತೆ. ನಾವ್ಯಾಕೆ ಗೋವಾ ಮಾದರಿ ಅನುಸರಿಸಬೇಕು. ಕುಡುಕರ, ಜೂಜುಕೋರರ ಅಡ್ಡೆಯಾಗುವುದೇ ಅಭಿವೃದ್ಧಿಯೇ ಎಂದು ಟೀಕಿಸಿದ್ದಾರೆ. 

 ಸಚಿವ ಶಿವರಾಮ್ ಹೆಬ್ಬಾರ್

ಸಚಿವ ಶಿವರಾಮ್ ಹೆಬ್ಬಾರ್

  • Share this:
ಕಾರವಾರ: ಗೋವಾದಲ್ಲಿರುವ ಕ್ಯಾಸಿನೋದಿಂದ (Casinos in Goa) ವರ್ಷಕ್ಕೆ ಸುಮಾರು ₹696 ಕೋಟಿ ತೆರಿಗೆ (Tax)  ಸರ್ಕಾರಕ್ಕೆ ಬರುತ್ತಿದೆ. ಸುಮಾರು ಮೂರು ಸಾವಿರಕ್ಕೂ ಅಧಿಕ ಜನರು ಉದ್ಯೋಗ(Jobs) ಕಂಡುಕೊಂಡಿದ್ದಾರೆ. ಉತ್ತರ ಕನ್ನಡ (Uttara Kannada) ಸೇರಿದಂತೆ ರಾಜ್ಯದ ಹಲವೆಡೆಯಿಂದ ಕ್ಯಾಸಿನೋದಲ್ಲಿ ಆಡಲು ಜನರು ತೆರಳುತ್ತಾರೆ. ಗೋವಾದಲ್ಲಿ ಕ್ಯಾಸಿನೋ ಆದರೆ ಜನರಿಗೆ ಏನೂ ಸಮಸ್ಯೆ ಇಲ್ಲ. ಆದರೆ ಜಿಲ್ಲೆಗೆ ಇದನ್ನ ತಂದರೆ ಮಾತ್ರ ಜನರು ವಿರೋಧ ಮಾಡುತ್ತಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ್ ಹೆಬ್ಬಾರ್ ( Minister Shivaram Hebbar) ಅಸಮಾಧಾನ ವ್ಯಕ್ತಪಡಿಸಿದರು. 

ಜಿಲ್ಲೆಯ ಪ್ರವಾಸೋದ್ಯಮಕ್ಕೆ ಹಿನ್ನಡೆ 

ಉತ್ತರ ಕನ್ನಡ ಜಿಲ್ಲೆಯಲ್ಲೂ ಪ್ರವಾಸೋದ್ಯಮ ಅಭಿವೃದ್ಧಿಯಾಗಬೇಕಾಗಿದೆ. ನೆರೆಯ ಗೋವಾದಲ್ಲಿ ಇರುವ ಕಡಲ ತೀರಗಳೇ ಜಿಲ್ಲೆಯಲ್ಲೂ ಇದೆ. ಆದರೆ ಗೋವಾದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಯಿಂದ ಸಾವಿರಾರು ಜನರು ಉದ್ಯೋಗ ಕಂಡುಕೊಂಡಿದ್ದಾರೆ. 4 ಸಾವಿರ ಟ್ಯಾಕ್ಸಿಗಳನ್ನ ಮಾಡಿಕೊಂಡು ಜೀವನ ಸಾಗಿಸುತ್ತಿದ್ದು, ಇನ್ನು 3850 ರೂಮ್ ಗಳನ್ನ ಪ್ರವಾಸಿಗರಿಗೆ ಬಾಡಿಗೆ ಕೊಡಲಾಗುತ್ತಿದೆ. ಆದರೆ ಉತ್ತರ ಕನ್ನಡ ಜಿಲ್ಲೆಯ ಪ್ರವಾಸೋದ್ಯಮ ಹಿನ್ನಡೆಯಾಗಿರುವುದರಿಂದ  ಉದ್ಯೋಗ ಸೃಷ್ಟಿಯಾಗುತ್ತಿಲ್ಲ.

ಸರ್ಕಾರದ ಸಹಭಾಗಿತ್ವದಲ್ಲಿ ಪ್ರವಾಸೋದ್ಯಮ

ಜಿಲ್ಲೆಯಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ಪ್ರವಾಸೋದ್ಯಮ ಅಭಿವೃದ್ದಿ ಪಡಿಸುವ ಚಿಂತನೆ ನಡೆಸಲಾಗಿದೆ. ಸರ್ಕಾರದ ಸಹಭಾಗಿತ್ವದಲ್ಲಿ ಪ್ರವಾಸೋದ್ಯಮ ಅಭಿವೃದ್ದಿ ಪಡಿಸಲು ಸಾಧ್ಯವಾಗುವುದಿಲ್ಲ. ಜಿಲ್ಲೆಯ ಬುದ್ದಿಜೀವಿಗಳ ಜೊತೆ ಈ ಬಗ್ಗೆ ಚರ್ಚಿಸಲಾಗುವುದು. ಈ ನಿಟ್ಟಿನಲ್ಲಿ ಪ್ರವಾಸೋದ್ಯಮ ಸಚಿವರನ್ನು ಜಿಲ್ಲೆಗೆ ಕರೆತಂದು ಚರ್ಚೆ ನಡೆಸಿ ನಂತರ ಇದಕ್ಕೆ ಚಾಲನೆ ಕೊಡಲು ಚಿಂತಿಸಲಾಗಿದೆ ಎಂದರು.

ನಮ್ಮ ಕಡಲ ತೀರವನ್ನು ಬಳಸಿಕೊಳ್ಳಬೇಕು 

ಜೊಯಿಡಾ ತಾಲೂಕಿನಲ್ಲಿ ಸಾಕಷ್ಟು ಹೋಮ್ ಸ್ಟೇ, ರೆಸಾರ್ಟ್ ನಡೆಯುತ್ತಿದೆ. ಇದೇ ಮಾದರಿಲ್ಲಿ ಕರಾವಳಿ ಭಾಗದಲ್ಲೂ ಹೋಮ್ ಸ್ಟೇ, ರೆಸಾರ್ಟ್ ಹೆಚ್ಚಾಗಿ ತರಲು ಚಿಂತನೆ ನಡೆಸಲಾಗಿದೆ. ಮಾಲ್ಡಿವ್ಸ್ ಎನ್ನುವ ಚಿಕ್ಕ ರಾಷ್ಟ್ರ ತನ್ನಲ್ಲಿರುವ ಕಡಲ ತೀರವನ್ನ ಬಳಸಿಕೊಂಡು ವಿಶ್ವದಲ್ಲಿ ಪ್ರವಾಸೋದ್ಯಮದಲ್ಲಿ ಗಮನ ಸೆಳೆದಿದೆ. ಜಿಲ್ಲೆಯಲ್ಲಿ ಅದರಷ್ಟೇ ಕಡಲ ತೀರವಿದ್ದು ಇದನ್ನ ಬಳಸಿಕೊಂಡು ಪ್ರವಾಸೋದ್ಯಮ ಅಭಿವೃದ್ದಿ ಮಾಡಬೇಕಾಗಿದೆ ಎಂದು ಹೇಳಿದರು.

ಗೋವಾ ಮಾದರಿ ಪ್ರವಾಸೋದ್ಯಮ ಬೇಕು 

ಗೋವಾ ಮಾದರಿ ಪ್ರವಾಸೋದ್ಯಮ ಕಾರವಾರಕ್ಕೆ ಪರುಚಯಿಸಿದ್ರೆ ಪ್ರವಾಸೋದ್ಯಮ ಬೆಳೆಯಲು ಸಾದ್ಯ ಎಂದರು. ಉತ್ತರ ಕನ್ನಡ ಜಿಲ್ಲೆಯ ಕಾರವಾರಕ್ಕೆ ಗೋವಾ ಮಾದರಿ ಪ್ರವಾಸೋದ್ಯಮ ಪರಿಚಯಿಸುವ ಅವಶ್ಯಕತೆ ಇದೆ ಗೋವಾ ಮಾದರಿ ಪ್ರವಾಸೋದ್ಯಮ ಪರಿಚಯಿಸಿದ್ದಲ್ಲಿ ಮಾತ್ರ ಕಾರವಾರ ಪ್ರವಾಸೋದ್ಯಮ ಬೆಳಿಯಲು ಸಾದ್ಯ ಎಂದು ಸಚಿವ ಶಿವರಾಮ್ ಹೆಬ್ಬಾರ್ ಗೋವಾ ಮಾದರಿಯಲ್ಲಿ ಕ್ಯಾಸಿನೊ ವನ್ನ ಕಾರವಾರಕ್ಕೆ ಪರಿಚಯಿಸಲು ಮುಂದಾಗಿದ್ದಾರೆ....ಗೋವಾದಲ್ಲಿ ಇರುವ ಕ್ಯಾಸಿನೊದಲ್ಲಿ ಕಾರವಾರದ ಜನ ಹೋಗಿ ಎಂಜಾಯ್ ಮಾಡುವ ಬದಲು ಕಾರವಾರದಲ್ಲೆ ಎಂಜಾಯ್ ಮಾಡಲಿ. ಗೋವಾ ಸಮುದ್ರ ದಲ್ಲಿ ಕ್ಯಾಸಿನೊ ಇರತ್ತೆ ಕಾರವಾರ ರವೀಂದ್ರನಾಥ ಕಡಲತೀರ ವ್ಯಾಪ್ತಿಯಲ್ಲಿ ಇದ್ರೆ ಏನು ತಪ್ಪು? ಎಂದು ಪ್ರವಾಸೋದ್ಯಮ ಕ್ಕೆ ಅಡ್ಡಗಾಲು ಹಾಕುವವರನ್ನ ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: Karinjeshwara Temple: ಐತಿಹಾಸಿಕ ಕಾರಿಂಜೇಶ್ವರ ಕ್ಷೇತ್ರದ ಪಾವಿತ್ರ್ಯಕ್ಕೆ ಧಕ್ಕೆ; ಅನ್ಯಧರ್ಮದ ಯುವಕರಿಂದ ಕೃತ್ಯ?

ಎಲ್ಲ ಸರಿ ಹೋದಲ್ಲಿ ಕಾರವಾರಕ್ಕೆ ಗೋವಾ ಮಾದರಿ ಪ್ರವಾಸೋದ್ಯಮ ಪರಿಚಯಿಸುವದಾಗಿ ಹೆಬ್ಬಾರ್ ಹೇಳಿದ್ದಾರೆ. ಗೋವಾ ಮಾದರಿ ಪ್ರವಾಸೋದ್ಯಮ ಪರಿಚಯವಾದಲ್ಲಿ ಆರ್ಥಿಕವಾಗಿಯೂ ಗಟ್ಟಿ ಆಗಲು ಸಾದ್ಯ ಎಂದಿದ್ದಾರೆ.ಪುನಃ ಪುನಃ ಗೋವಾ ಮದರಿಯ ಪ್ರವಾಸೋದ್ಯಮವನ್ನ ಹೆಬ್ಬಾರ್ ಸಮರ್ಥಿಸಿಕೊಂಡರು. ಆದರೆ ಜಿಲ್ಲೆಯ ಕೆಲವರಿಂದ ಗೋವಾ ಮಾದರಿ ಪ್ರವಾಸೋದ್ಯಮಕ್ಕೆ ವಿರೋಧ ವ್ಯಕ್ತವಾಗಿದೆ. ನಮ್ಮ ಜಿಲ್ಲೆಯ ಸಂಸ್ಕೃತಿಗೆ ಧಕ್ಕೆ ಬರುತ್ತೆ. ನಾವ್ಯಾಕೆ ಗೋವಾ ಮಾದರಿ ಅನುಸರಿಸಬೇಕು. ಕುಡುಕರ, ಜೂಜುಕೋರರ ಅಡ್ಡೆಯಾಗುವುದೇ ಅಭಿವೃದ್ಧಿಯೇ ಎಂದು ಟೀಕಿಸಿದ್ದಾರೆ.
Published by:Kavya V
First published: