ಐಷಾರಾಮಿ ಕಾರಿನಲ್ಲಿ ಬಂದು ಗೋ ಕಳ್ಳತನ; ಆರೋಪಿಗಳ ಬಂಧಿಸುವಲ್ಲಿ ಪೊಲೀಸರು ಯಶಸ್ವಿ

ಕರಾವಳಿಯಲ್ಲಿ ಕೆಲ ವರ್ಷಗಳಿಂದ ರಾತ್ರಿ ವೇಳೆ ದುಷ್ಕರ್ಮಿಗಳು ಖಾಸಾಯಿಖಾನೆಗೆ ಸಾಗಿಸಲು ಹಸುಗಳನ್ನ ಕದೆಯ್ಯೊತ್ತಿರುವುದು ಇತ್ತೀಚೆಗೆ ಸಾಮಾನ್ಯವಾಗಿ ಬಿಟ್ಟಿತ್ತು. ಇದನ್ನ ಹತ್ತಿರದ ಸಿಸಿ ಕ್ಯಾಮೆರಾಗಳು ಸಾಕ್ಷಿಕರಿಸುತ್ತಿದ್ದವು, 

 ಐಷಾರಾಮಿ ಕಾರಿನಲ್ಲಿ ಬಂದು ಗೋ ಕಳ್ಳತನ

ಐಷಾರಾಮಿ ಕಾರಿನಲ್ಲಿ ಬಂದು ಗೋ ಕಳ್ಳತನ

  • Share this:
ಕಾರವಾರ (ಆ. 29): ಉತ್ತರ ಕನ್ನಡ ಜಿಲ್ಲೆಯ ಕರಾವಳಿಯಲ್ಲಿ ಗೋ ಕಳ್ಳತನ (cattle Thieves ) ಸಾಕಷ್ಟು ಚರ್ಚಿತ ವಿಷಯವಾಗಿತ್ತು. ರಾತ್ರಿ ವೇಳೆ ಐಷಾರಾಮಿ ಕಾರಿನಲ್ಲಿ ಬರುವ ಕಳ್ಳರು ರಸ್ತೆ ಬದಿಯಲ್ಲಿರುವ ಹಸುಗಳನ್ನ ಕದ್ದು ಕಾರಿನಲ್ಲಿ ತುಂಬಿಕೊಂಡು ಖಾಸಾಯಿಕಾನೆಗೆ ಸಾಗಿಸುವ ಕೆಲಸ ಕಳೆದ ಹಲವು ವರ್ಷಗಳಿಂದ ಮಾಡುತ್ತಾ ಬಂದಿದ್ದರು. ಇತ್ತಿಚೆಗೆ ಜಿಲ್ಲೆಯ ಹೊನ್ನಾವರದಲ್ಲೂ ಇಂತಹ ನಾಲ್ಕೈದು ಪ್ರಕರಣ ನಡೆದಿದ್ದು, ಇದೀಗ ಜಿಲ್ಲಾ ಪೊಲೀಸರು ಗೋ ಕಳ್ಳರ ಪತ್ತೆ ಹಚ್ಚುವ  ಕಾರ್ಯಕ್ಕೆ ಮುಂದಾಗಿದ್ದು ಗೋ ಕಳ್ಳರ ಹೆಡೆಮುರಿ ಕಟ್ಟುತ್ತಿದ್ದಾರೆ.

ಕರಾವಳಿಯಲ್ಲಿ ಕೆಲ ವರ್ಷಗಳಿಂದ ರಾತ್ರಿ ವೇಳೆ ದುಷ್ಕರ್ಮಿಗಳು ಖಾಸಾಯಿಖಾನೆಗೆ ಸಾಗಿಸಲು ಹಸುಗಳನ್ನ ಕದೆಯ್ಯೊತ್ತಿರುವುದು ಇತ್ತೀಚೆಗೆ ಸಾಮಾನ್ಯವಾಗಿ ಬಿಟ್ಟಿತ್ತು. ಇದನ್ನ ಹತ್ತಿರದ ಸಿಸಿ ಕ್ಯಾಮೆರಾಗಳು ಸಾಕ್ಷಿಕರಿಸುತ್ತಿದ್ದವು,  ಇತ್ತೀಚೆಗೆ ಜಿಲ್ಲೆಯ ಹೊನ್ನಾವರ ತಾಲೂಕಿನ ಮಂಕಿ ಗ್ರಾಮದಲ್ಲಿನ ಎರಡು ಕಡೆ ರಾತ್ರಿ ವೇಳೆ ಐಷಾರಾಮಿ ಕಾರಿನಲ್ಲಿ ಬಂದು ರಸ್ತೆ ಬದಿಯಲ್ಲಿ ಮಲಗಿದ್ದ ಹಸುಗಳನ್ನ ಕದ್ದು ಪರಾರಿಯಾಗಿದ್ದರು. ಈ ದೃಶ್ಯ ಸಿಸಿಟಿವಿಯಲ್ಲಿ ಸಹ ಸೆರೆಯಾಗಿತ್ತು. ಇನ್ನು ಪ್ರಕರಣ ಕರಾವಳಿಯಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾದ ವಿಚಾರವಾಗಿದ್ದು, ಪೊಲೀಸರ ಮೇಲೆ ಆರೋಪಿಗಳನ್ನ ಬಂಧಿಸುವಂತೆ ಸಾಕಷ್ಟು ಒತ್ತಡಗಳು ಸಹ ಕೇಳಿ ಬಂದಿದ್ದವು. ಪ್ರಕರಣವನ್ನ ಗಂಭೀರವಾಗಿ ತೆಗೆದುಕೊಂಡ ಹೊನ್ನಾವರ ಠಾಣಾ ಪೊಲೀಸರು ಭಟ್ಕಳ ಹಾಗೂ ಉಡುಪಿ ಮೂಲದ ಏಳು ಜನ ಆರೋಪಿಗಳನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಇದನ್ನು ಓದಿ: ರಂಗೇರಿದ ಹುಬ್ಬಳ್ಳಿ-ಧಾರವಾಡ ಪಾಲಿಕೆ ಚುನಾವಣೆ; ಡಿಕೆಶಿ- ಶ್ರೀರಾಮುಲು ಆರೋಪ-ಪ್ರತ್ಯಾರೋಪ

ಬಂಧಿತರು ಐಷಾರಾಮಿ ಕಾರನ್ನು ಖರೀದಿ ಮಾಡಿ ಕಳೆದ ಹಲವು ವರ್ಷಗಳಿಂದ ರಸ್ತೆ ಬದಿಯಲ್ಲಿ ಮಲಗಿದ್ದ ಗೋವನ್ನ ಕದ್ದು ಖಾಸಾಯಿ ಖಾನೆಗೆ ಸಾಗಿಸುವ ಕಾರ್ಯವನ್ನು ಮಾಡುತ್ತಿದ್ದರು ಎನ್ನಲಾಗಿದೆ. ಮಂಗಳೂರು, ಭಟ್ಕಳ ಕೇರಳ ರಾಜ್ಯಕ್ಕೆ ಕದ್ದ ಹಸುವನ್ನ ಸಾಗಿಸುತ್ತಿದ್ದು, ಖಸಾಯಿಖಾನೆಯಲ್ಲಿ ಹಸುವೊಂದಕ್ಕೆ 30 ಸಾವಿರ ರೂಪಾಯಿಗೆ ಮಾರಾಟ ಮಾಡುತ್ತಿದ್ದರಂತೆ. ಕಾರಿನ ನಂಬರ್ ಪ್ಲೇಟ್ ಬದಲಿಸಿಕೊಂಡು ಬಂದು ಕದ್ದು ಸಾಗುತ್ತಿದ್ದು ಸಿಸಿಟಿವಿಯಲ್ಲಿ ಒಂದೊಮ್ಮೆ ಸೆರೆಯಾದರೆ ಕಾರಿನ ನಂಬರ್ ಮೂಲಕ ಪತ್ತೆ ಹಚ್ಚ ಬಾರದು ಎಂದು ನಂಬರ್ ಬದಲಿಸಿಕೊಂಡು ತಮ್ಮ ಕಾರ್ಯವನ್ನ ಮಾಡುತ್ತಿದ್ದರಂತೆ. ಸದ್ಯ ಜಿಲ್ಲಾ ಪೊಲೀಸರು ಇಂತಹ ಘಟನೆ ಮತ್ತೆ ನಡೆಯದಂತೆ ಹೆಚ್ಚುವರಿ ಚೆಕ್ ಪೊಸ್ಟ್ ಗಳನ್ನ ನಿರ್ಮಿಸಿದ್ದು ರಾತ್ರಿ ವೇಳೆ ಹೆದ್ದಾರಿಯಲ್ಲಿ ವೇಗವಾಗಿ ಓಡಾಡುವ ಹೊರ ರಾಜ್ಯದ ವಾಹನಗಳ ಮೇಲೆ ಹೆಚ್ಚಾಗಿ ಕಣ್ಣಿಡುವುದಾಗಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳು ತಿಳಿಸಿದ್ದಾರೆ.

ಕೆಲ ದಿನದ ಹಿಂದೆ ಜಿಲ್ಲೆಯ ಶಿರಸಿಯಲ್ಲೂ ರಾತ್ರಿ ವೇಳೆ ಕಾರಿನಲ್ಲಿ ಬಂದು ಹಸುಗಳನ್ನ ಕದ್ದು ಪರಾರಿಯಾಗುವ ಘಟನೆ ನಡೆದಿತ್ತು. ಶಿರಸಿಯಲ್ಲಿ ಹಸುಕಳ್ಳತನ ಪ್ರಕರಣ ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದರಿಂದ ಅಂತಿಮವಾಗಿ ಶಿವಮೊಗ್ಗ ಮೂಲದ ಆರೋಪಿಗಳನ್ನ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದರು. ಇದೀಗ ಜಿಲ್ಲೆಯ ಕರಾವಳಿ ಭಾಗದಲ್ಲಿ ಸಹ ಹಲವು ವರ್ಷಗಳಿಂದ ಹಸು ಕಳ್ಳತನ ಮಾಡುತ್ತಿದ್ದ ಆರೋಪಿಗಳನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದು ಈ ಮೂಲಕ ಗೋ ಕಳ್ಳತನ ಪ್ರಕರಣಗಳು ಜಿಲ್ಲೆಯಲ್ಲಿ ಬ್ರೇಕ್ ಬೀಳುವಂತಾಗಲಿ ಎನ್ನುವುದು ಜನರ ಅಭಿಪ್ರಾಯ.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
Published by:Seema R
First published: