Uttara Kannada: ಗ್ರಾಮೀಣ ಭಾಗದಲ್ಲಿ ಹೊಸತು ಹಬ್ಬದ ಸಂಭ್ರಮ -ನೂರಾರು ವರ್ಷದ ಸಾಂಪ್ರದಾಯಿಕ ಪದ್ದತಿ ಆಚರಿಸಿದ ಜನ

Festival : ಪೂಜೆಯ ನಂತರ ಕೊಯ್ದ ಕದಿರನ್ನು ಪ್ರತಿಯೊಬ್ಬರೂ ತಲೆಯ ಮೇಲೆ ಹೊತ್ತಿಕೊಂಡು ಮನೆಗೆ ಬರತ್ತಾರೆ. ಹೊತ್ತು ತಂದ ಕದಿರನ್ನು ತುಳಸಿ ಮನೆಯಲ್ಲಿ ಇಟ್ಟು ಪೂಜೆ ಸಲ್ಲಿಸಿ ದೇವಸ್ಥಾನದಿಂದ ತಂದಿರುವ ಕದಿರನ ಜೊತೆ ತಮ್ಮ ತಮ್ಮ ಗದ್ದೆಗೆ ಪೂಜೆ ಸಲ್ಲಿಸಿ ತಂದಿರುವ ಕದಿರನ್ನು ಸೇರಿಸಿ ಪೂಜೆ ಸಲ್ಲಿಸಿ ಮನೆ ಬಾಗಿಲಿಗೆ ಹಾಗೂ ರೈತರು ಕೃಷಿ ಉಪಕರಣಗಳಿಗೆ ಕದಿರು ಕಟ್ಟಲಾಗತ್ತೆ.

ಸಂಭ್ರಮದಿಂದ ಹಬ್ಬ ಆಚರಿಸಿದ ಜನ

ಸಂಭ್ರಮದಿಂದ ಹಬ್ಬ ಆಚರಿಸಿದ ಜನ

  • Share this:
ಹೊಸ ಫಸಲನ್ನ ಮನೆಗೆ ತರುವ ಹೊಸತು ಹಬ್ಬವನ್ನ(Festival) ಉತ್ತರ ಕನ್ನಡ(Uttara Kannada) ಜಿಲ್ಲೆಯ  ಕರಾವಳಿ ಭಾಗದಲ್ಲಿ ವಿಶೇಷ ಹಬ್ಬವಾಗಿ ಆಚರಿಸ್ತಾರೆ. ಐತಿಹಾಸಿಕ ಗ್ರಾಮಿಣ ಸೊಗಡಿನ ಕರಾವಳಿ(Coastal) ಹೊಸ್ತು ಹಬ್ಬ ಇದಾಗಿದ್ದು,ಈ ಗ್ರಾಮದಲ್ಲಿ ಹೊಸ್ತಿನ ಹಬ್ಬ ಆಚರಣೆ ಆಗದೆ ಇದ್ರೆ  ಗ್ರಾಮದಲ್ಲಿ ಮುಂದೆ ಬರೋ ಯಾವ ಹಬ್ಬ ಹರಿದಿನಗಳು ನಡೆಯಲ್ಲ ಅನ್ನೋ ಪ್ರತೀತಿಯಿದೆ. ಹೀಗಾಗಿ ಇಡಿ ಊರಿನ ಜನ್ರೆ ಗದ್ದೆಗೆ ತೆರಳಿ ಪೂಜೆ ಮಾಡಿ ಭತ್ತದ ತೆನೆಗಳನ್ನ ಮನೆಗೆ ತರೋದು ಜಿಲ್ಲೆಯ ಆಯಾ ಗ್ರಾಮದ  ಸಂಪ್ರದಾಯ..ಹೀಗೆ ಈ‌ಹಬ್ಬ ಈಗ ಜಿಲ್ಲೆಯಾದ್ಯಂತ ನಡೆಯುತ್ತಿದೆ.

ನೂರಾರು ವರ್ಷದ ಸಾಂಪ್ರದಾಯಿಕ ಹೊಸತು ಹಬ್ಬ

ಉತ್ತರಕನ್ನಡ ಜಿಲ್ಲೆಯ ವಿವಿಧ ಗ್ರಾಮಗಳಲ್ಲಿ  ದಸರಾ, ಗಂಗಾಷ್ಠಮಿ ಸಂದರ್ಭದಲ್ಲಿ  ಹೊಸ್ತಿನ ಹಬ್ಬವನ್ನು ಸಡಗರ ಸಂಭ್ರಮದಿಂದ ಅನಾದಿಕಾಲದಿಂದಲ್ಲೂ  ಆಚರಿಸಿಕೊಂಡು ಬರಲಾಗತ್ತಾ ಇದೆ. ಹಳೆ ತಲೆಮಾರುಗಳಿಂದ ಬಂದಿರುವ ವಿಶೇಷ ಹಬ್ಬ ಹರಿದಿನಗಳು ಇಂದಿನ ದಿನಗಳಲ್ಲಿ ನಿಧಾನವಾಗಿ ಮರೆಯಾಗುತ್ತಿವೆ. ಇಂದಿನ ಯುವ ಪೀಳಿಗೆಯೂ ಸಹ ಇಂತಹ ಸಾಂಪ್ರದಾಯಿಕ ಹಬ್ಬಗಳಿಂದ ದೂರ ಸರಿಯುತ್ತಿದ್ದಾರೆ.ಆದ್ರೆ ಜಿಲ್ಲೆಯ ಕೆಲವಷ್ಟು ಗ್ರಾಮದಲ್ಲಿ ಇಂದಿಗೂ ಆಚರಿಸಲಾಗುವ ಹೊಸ್ತಿನ ಹಬ್ಬಕ್ಕೆ ತನ್ನದೇ ಆದ ವಿಶಿಷ್ಟವಿದೆ.

ಕೃಷಿಯೇ ಈ ಹಬ್ಬದ ಮೂಲ

ಕೃಷಿ ಮೂಲವಾದ ಈ ಹಬ್ಬವನ್ನು ನೂರಾರು ವರ್ಷಗಳಿಂದ ಈ ಭಾಗದ ರೈತರು ಆಚರಿಸಿಕೊಂಡು ಬರುತ್ತಿದ್ದಾರೆ. ಈ ಹಬ್ಬವನ್ನು ಹರಣ ಮೂರ್ತ, ಹೊಸ ಧಾನ್ಯ ಮೊದಲಾದ ಹೆಸರುಗಳಿಂದ ಕರೆಯಲಾಗುತ್ತದೆ. ಹಬ್ಬದ ದಿನ ಗ್ರಾಮದ ಊರ ದೇವಿಯ ಪೂಜಾ ಪುನಸ್ಕಾರ ಮಾಡಿ ವಾದ್ಯ ಮೇಳದೊಂದಿಗೆ ಭಕ್ತರು ಹಾಗೂ ಅರ್ಚಕರು ಹೊಸ್ತಿನ ಹಬ್ಬಕ್ಕಾಗಿಯೇ ಮೀಸಲಿಟ್ಟಿರುವ ಗದ್ದೆಗೆ ಹೋಗಿ ವಿಶೇಷ ಪೂಜೆ ಸಲ್ಲಿಸಿ ಕದಿರು ಹೊತ್ತು ತರುತ್ತಾರೆ. ಎಲ್ಲಾ ಸಮುದಾಯದವರು ಈ ಹಬ್ಬದಲ್ಲಿ ಪಾಲ್ಗೊಳ್ಳುವುದು ವಿಶೇಷ.

ಇದನ್ನೂ ಓದಿ: ತಲಕಾವೇರಿಯ ಬ್ರಹ್ಮಕುಂಡಿಕೆಯಲ್ಲಿ ತೀರ್ಥರೂಪಿಣಿಯಾದ ಕಾವೇರಿ ಮಾತೆ

ಇನ್ನೂ ಹೊಸ್ತಿನ ಹಬ್ಬ ಊರಿನ‌ ಗ್ರಾಮ ದೇವತೆ ಕಳಸ ಸಾವಿರಾರು ಭಕ್ತರೊಂದಿಗೆ ಮೆರವಣಿಗೆಯಲ್ಲಿ ಸಾಗಿ ಆಯಾ ದೇವಾಲಯಕ್ಕೆ ತೆರಳಿ ಬರುತ್ತದೆ. ಬಳಿಕ ಗ್ರಾಮದ ಭಕ್ತರು ಸೇರಿ ಹೊಸ್ತಿ ಹಬ್ಬಕ್ಕೆ ಅಂತಾನೆ ಮೀಸಲಾಗಿಟ್ಟಿರುವ ಗದ್ದೆಗೆ ತೆರಳಿ ಗದ್ದೆಗೆ ವಿಶೇಷ ಪೂಜೆ ಸಲ್ಲಿಸಿ ಕದಿರು ಕೊಯ್ಯಲಾಗತ್ತೆ. ಪೂಜೆಯ ನಂತರ ಕೊಯ್ದ ಕದಿರನ್ನು ಪ್ರತಿಯೊಬ್ಬರೂ ತಲೆಯ ಮೇಲೆ ಹೊತ್ತಿಕೊಂಡು ಮನೆಗೆ ಬರತ್ತಾರೆ.

ಹೊತ್ತು ತಂದ ಕದಿರನ್ನು ತುಳಸಿ ಮನೆಯಲ್ಲಿ ಇಟ್ಟು ಪೂಜೆ ಸಲ್ಲಿಸಿ ದೇವಸ್ಥಾನದಿಂದ ತಂದಿರುವ ಕದಿರನ ಜೊತೆ ತಮ್ಮ ತಮ್ಮ ಗದ್ದೆಗೆ ಪೂಜೆ ಸಲ್ಲಿಸಿ ತಂದಿರುವ ಕದಿರನ್ನು ಸೇರಿಸಿ ಪೂಜೆ ಸಲ್ಲಿಸಿ ಮನೆ ಬಾಗಿಲಿಗೆ ಹಾಗೂ ರೈತರು ಕೃಷಿ ಉಪಕರಣಗಳಿಗೆ ಕದಿರು ಕಟ್ಟಲಾಗತ್ತೆ. ಮನೆಯಲ್ಲಿ ಧಾನ್ಯ ಲಕ್ಷ್ಮೀ ನೆಲೆಸಬೇಕು ಎನ್ನುವುದು ಇದರ ಉದ್ದೇಶವಾಗಿದೆ. ಬರ್ಗಿಯಲ್ಲಿ ಹೊಸ್ತಿನ ಹಬ್ಬವನ್ನು ಆಚರಿಸದೇ ಹೋದರೆ ಮುಂದೆ ಗ್ರಾಮದಲ್ಲಿ ನಡೆಯ ಬಹುದಾದ ಸಂಕ್ರಾಂತಿ ಸೇರಿದಂತೆ ಯಾವ ಹಬ್ಬ ಹರಿದಿನಗಳನ್ನ ಗ್ರಾಮದಲ್ಲಿ ಆಚರಿಸಲಾಗಲ್ಲ ಎನ್ನುವ ಪ್ರತೀತಿಯಿದೆ.

ಇದನ್ನೂ ಓದಿ: ಜಂಬೂ ಸವಾರಿ ಮುಗಿಸಿ ಕಾಡಿಗೆ ಪ್ರಯಾಣ ಬೆಳೆಸಿದ ಅಭಿಮನ್ಯು ಟೀಂ

ಒಟ್ಟಾರೆ ಅನಾದಿಕಾಲದಿಂದಲ್ಲೂ ಉತ್ತರ ಕನ್ನಡ ಜಿಲ್ಲೆಯ ವಿವಿಧ ಗ್ರಾಮದಲ್ಲಿ ನಡೆದುಕೊಂಡು ಬಂದಿರುವ ವಿಶಿಷ್ಟ ಹೊಸ್ತಿನ ಹಬ್ಬವನ್ನ ಇಂದಿನ ಯುವ ಪೀಳಿಗೆ ಸಹ ಇದನ್ನ ಆಚರಿಸಿಕೊಂಡು ಬರುತ್ತಿದ್ದು, ಹೊಸ್ತಿನ ಹಬ್ಬದ ಮೂಲಕ ಗ್ರಾಮಕ್ಕೆ ಇನ್ನಷ್ಟು ಹೊಸ ತನ ಬರುವಂತಾಗಿಲಿ.
Published by:Sandhya M
First published: