news18-kannada Updated:August 6, 2020, 8:15 AM IST
ಕೊಲೆಗೈದ ದಂಪತಿ
ಕಾರವಾರ (ಆಗಸ್ಟ್ 6): ಮೂರು ದಿನಗಳ ಹಿಂದೆ ಬಾವಿಯಲ್ಲಿ ಒಂದು ತಿಂಗಳ ಮಗುವಿನ ಶವ ಪತ್ತೆ ಆಗಿತ್ತು. ಈ ಹಸುಗೂಸಿನ ಸಾವಿನ ಪ್ರಕರಣಕ್ಕೆ ಈಗ ಹೊಸ ಟ್ವಿಸ್ಟ್ ಸಿಕ್ಕಿದೆ. ಹೆತ್ತ-ತಂದೆ ತಾಯಿಗಳೇ ಮಗುವನ್ನು ಹತ್ಯೆ ಮಾಡಿದ್ದಾರೆ ಎನ್ನುವ ವಿಚಾರ ಬಹಿರಂಗವಾಗಿದೆ.
ಯಲ್ಲಾಪುರ ತಾಲ್ಲೂಕಿನ ಸಹಸ್ರಳ್ಳಿ ರಾಮನಕೊಪ್ಪ ಗ್ರಾಮದ ಚಂದ್ರಶೇಖರ ಭಟ್ ಮತ್ತು ಈತನ ಪತ್ನಿ ಪ್ರಿಯಾಂಕ ಭಟ್ ಬಂಧಿತ ಆರೋಪಿಗಳು. ಆ.2 ರಂದು ರಾತ್ರಿ ಮಲಗಿದ್ದ ಮಗುವನ್ನು ಯಾರೋ ಎತ್ತಿಕೊಂಡು ಹೋಗಿ ಬಾವಿಯಲ್ಲಿ ಹಾಕಿ ಕೊಲೆ ಮಾಡಿದ ಬಗ್ಗೆ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅದರಂತೆ ಸ್ಥಳಕ್ಕೆ ಬಂದು ಪರಿಶೀಲಿಸಿದ ಪೊಲೀಸರಿಗೆ 30 ದಿನಗಳ ಹಿಂದೆ ಜನಿಸಿದ ಮುದ್ದಾದ ಕಂದ ಬಾಯಿಯಲ್ಲಿ ಬಿದ್ದಿದ್ದನ್ನು ಕಂಡು ಕ್ರೂರಿಗಳ ಮನಸ್ಥಿತಿಗೆ ಪೊಲೀಸರು ಬೆಚ್ಚಿ ಬಿದ್ದಿದ್ದರು.
ಎಸ್ಪಿ ಶಿವಪ್ರಕಾಶ ನಿರ್ದೇಶನದಂತೆ, ಡಿವೈಎಸ್ಪಿ ಗೋಪಾಲಕೃಷ್ಣ ನಾಯಕ ಮಾರ್ಗದರ್ಶನದಲ್ಲಿ ಯಲ್ಲಾಪುರ ಪಿಐ ಸುರೇಶ ಯಳ್ಳೂರು ಹಾಗೂ ಪಿಎಸ್ ಐ ಮಂಜುನಾಥ ಗೌಡರ್ ನೇತೃತ್ವದ ತಂಡ ತನಿಖೆ ಕೈಗೊಂಡಿತ್ತು. ಹಸುಗೂಸಿನ ಮನೆಯವರ ಮೇಲೆ ಅನುಮಾನ ಮೂಡಿದ ಹಿನ್ನೆಲೆಯಲ್ಲಿ ತೀವ್ರ ವಿಚಾರಣೆ ನಡೆಸಿದಾಗ ಆರೋಪಿಗಳು ಬಾಯ್ಬಿಟ್ಟಿದ್ದಾರೆ. ಹೆಣ್ಣು ಮಗು ಎಂಬ ಕಾರಣಕ್ಕೆ ಸ್ವತಃ ಹೆತ್ತ ತಂದೆ ತಾಯಿಗಳೇ ಮಗುವನ್ನು ಬಾವಿಗೆ ಹಾಕಿ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದು ತಿಳಿದುಬಂದಿದೆ. ಈಗಾಗಲೇ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಘಟನೆ ನಡೆದ 24 ಗಂಟೆಯಲ್ಲಿಯೇ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಹೆಣ್ಣು ಆಗಿ ಹುಟ್ಟಿದ್ದೆ ತಪ್ಪಾ?:
ಹೆಣ್ಣು ಮಕ್ಕಳೆ ಸ್ಟ್ರಾಂಗು ಗುರು, ಎನ್ನೋ ಮಾತು ಈಗ ಗಲ್ಲಿ ಗಲ್ಲಿ ಗಳಲ್ಲಿ ಬಾಯಿಮಾತು. ಹೆಣ್ಣಾಗಲಿ, ಗಂಡಾಗಲಿ ನಮಗೊಂದು ಮಗು ಕರುಣಿಸು ದೇವರೆ ಎನ್ನೋರು ಅನೇಕರಿದ್ದಾರೆ. ಅದೆಷ್ಟೋ ಜನರಿಗೆ ಮಕ್ಕಳ ಭಾಗ್ಯವೇ ಇಲ್ಲ, ಈ ಎಲ್ಲದರ ನಡುವೆ ಕ್ರೂರ ಮನಸ್ಸಿನ ತಂದೆ ತಾಯಿಯರೂ ಇರ್ತಾರೆ ಎನ್ನೋದಕ್ಕೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ರಾಮನಕೊಪ್ಪ ಗ್ರಾಮದ ಚಂದ್ರಶೇಖರ ಮತ್ತು ಪ್ರಿಯಾಂಕ ದಂಪತಿಗಳೆ ಸಾಕ್ಷಿ.
ಕಳೆದ ನಲವತ್ತು ದಿನದ ಹಿಂದೆ ಹಡೆದ ಹೆಣ್ಣು ಮಗುವನ್ನ ಬಾವಿಗೆ ಎಸೆದು ಕೊಲೆ ಮಾಡಿದ್ದಾರೆ. ತಮಗೆ ಹುಟ್ಟಿದ್ದು ಹೆಣ್ಣು ಮಗು ಅನ್ನೋದೆ ಕೊಲೆಗೆ ಕಾರಣ. ಕೊಲೆಗೈದ ಈ ದಂಪತಿ ಆ ಮನೆ ಕಳ್ಳರು ತಾವಲ್ಲ ಅಂತಾ ಯ್ಯಾರೋ ಕೃತ್ಯ ಎಸಗಿದ್ದಾರೆ ಎಂದು ನಾಟಕವಾಡಿ ಪೋಲಿಸ್ ಠಾಣೆ ಮೆಟ್ಟಿಲೇರಿ ದೂರು ನೀಡಿದ್ದರು. ಈ ಕ್ರೂರ ಮನಸ್ಸಿನ ಹಿಂದಿನ ನಾಟಕ ಅರಿತ ಪೋಲಿಸರ ತೀವ್ರ ವಿಚಾರಣೆ ನಡೆಸಿದಾಗ ಈ ಕ್ರೂರ ದಂಪತಿ ಬಾಯಿಯಿಂದ ಹೇಸೊಗೆ ಕೆಲಸದ ಕೃತ್ಯ ಹೊರಬಂದಿದೆ. ಹಸುಗುಸನ್ನ ಬಾರದ ಲೋಕ್ಕೆ ಕಳುಹಿಸಿದ ಈ ಕ್ರೂರ ಪಾಪಿ ತಂದೆ ತಾಯಿ ಈಗ ಜೈಲು ಪಾಲಾಗಿದ್ದಾರೆ. ಒಟ್ಟಾರೆ ಕ್ರೂರಿ ಪಾಪಿ ಪಾಲಕರನ್ನ ಬಂಧಿಸುವಲ್ಲಿ ಪೋಲಿಸರ ಯಶಸ್ವಿ ಆಗಿದ್ದಾರೆ.
Published by:
Rajesh Duggumane
First published:
August 6, 2020, 7:49 AM IST