7 ತಿಂಗಳಿಂದ ಉತ್ತರ ಕನ್ನಡದ ಸಂಚಾರಿ ಆಸ್ಪತ್ರೆಯ ಸಿಬ್ಬಂದಿಗಿಲ್ಲ ಸಂಬಳ

ಕಳೆದ ಎರಡೂವರೆ ವರ್ಷಗಳಿಂದ ಸುಮಾರು 2,000 ಎಂಡೋಸಲ್ಫಾನ್ ಪೀಡಿತರು ಸೇರಿದಂತೆ ಸುಮಾರು 65,000ಕ್ಕೂ ಹೆಚ್ಚು ರೋಗಿಗಳಿಗೆ ಈ ಸಂಚಾರಿ ಆರೋಗ್ಯ ಘಟಕಗಳಿಂದ ಸೇವೆ ಒದಗಿಸಲಾಗಿದೆ.

ಉತ್ತರ ಕನ್ನಡದ ಸಂಚಾರಿ ಆಸ್ಪತ್ರೆ

ಉತ್ತರ ಕನ್ನಡದ ಸಂಚಾರಿ ಆಸ್ಪತ್ರೆ

  • Share this:
ಕಾರವಾರ (ಅ. 9): ಉತ್ತರ ಕನ್ನಡ ಜಿಲ್ಲೆಯಲ್ಲಿ ಎಂಡೋಸಲ್ಫಾನ್ ಬಾಧಿತರಿಗೆ ಮನೆ ಬಾಗಿಲಿಗೆ ತೆರಳಿ ಆರೋಗ್ಯ ಸೇವೆ ಒದಗಿಸುತ್ತಿರುವ ಸಂಚಾರಿ ಆರೋಗ್ಯ ಘಟಕಗಳಿಗೆ ಕಳೆದ 7 ತಿಂಗಳಿಂದ ಬಾಕಿ ಇರುವ ವೇತನ ಹಾಗೂ ನಿರ್ವಹಣಾ ವೆಚ್ಚ ಬಾರದೆ ಸೇವೆಯಲ್ಲಿ ವ್ಯತ್ಯಯವಾಗುವ ಸಾಧ್ಯತೆ ಇರುವುದರಿಂದ ಅನುದಾನ ಬಿಡುಗಡೆಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸುವಂತೆ ಗುತ್ತಿಗೆ ಪಡೆದ  ಸ್ಕೋಡ್‌ವೆಸ್ ಸಂಸ್ಥೆಯವರು ಜಿಲ್ಲಾಡಳಿತದ ಮೊರೆ ಹೋಗಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಎಂಡೋಸಲ್ಪಾನ್ ಪೀಡಿತರಿಗಾಗಿ 6 ತಾಲೂಕುಗಳ ವ್ಯಾಪ್ತಿಯಲ್ಲಿ ಸಂಚಾರಿ ಆರೋಗ್ಯ ಘಟಕಗಳ ಮೂಲಕ ಆರೋಗ್ಯ ಸೇವೆ ನೀಡುತ್ತಿರುವ ಸ್ಕೋಡ್‌ವೆಸ್ ಸಂಸ್ಥೆಯ ಸಂಚಾರಿ ಆರೋಗ್ಯ ಘಟಕಗಳಿಗೆ ಕಳೆದ 7 ತಿಂಗಳುಗಳಿಂದ ಅನುದಾನ ಬಿಡುಗಡೆಯಾಗದೇ ಸಿಬ್ಬಂದಿ ಆರ್ಥಿಕ ಸಮಸ್ಯೆ ಎದುರಿಸುತ್ತಿದ್ದಾರೆ. ಜಿಲ್ಲೆಯ ಎಂಡೋಸಲ್ಪಾನ್ ಬಾಧಿತರಿಗೆ ಸೌಲಭ್ಯ ಒದಗಿಸುವಲ್ಲಿ ಕೆಲವು ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿರುವುದು, ಅನುದಾನ ಬಿಡುಗಡೆಗೆ ಅಡ್ಡಿ ಮಾಡುತ್ತಿರುವುದು ವೇತನ ಪಾವತಿಸಲು ಅನಾರೋಗ್ಯಕರ ಬೇಡಿಕೆ ಸಲ್ಲಿಸುತ್ತಿರುವ ವಿಷಯದ ಬಗ್ಗೆಯೂ ಗುತ್ತಿಗೆ ಪಡೆದ ಸಂಸ್ಥೆಯವರು ಆರೋಪಿಸುತ್ತಿದ್ದಾರೆ.

ಕಳೆದ ಎರಡೂವರೆ ವರ್ಷಗಳಿಂದ ಸುಮಾರು 2,000 ಎಂಡೋಸಲ್ಫಾನ್ ಪೀಡಿತರು ಸೇರಿದಂತೆ ಸುಮಾರು 65,000ಕ್ಕೂ ಹೆಚ್ಚು ರೋಗಿಗಳಿಗೆ ಈ ಸಂಚಾರಿ ಆರೋಗ್ಯ ಘಟಕಗಳಿಂದ ಸೇವೆ ಒದಗಿಸಲಾಗಿದೆ. ವೈದ್ಯರು, ಫಿಜಿಯೋ ಥೆರಪಿಸ್ಟ್, ಸ್ಟಾಫ್ ‌ನರ್ಸ್​ಗಳು, ಆರೋಗ್ಯ ಸಹಾಯಕರು ಸೇರಿದಂತೆ 6 ಜನರ ವೈದ್ಯಕೀಯ ತಂಡ ದಿನನಿತ್ಯ ಎಂಡೋಸಲ್ಪಾನ್ ಬಾಧಿತರ ಸೇವೆಯಲ್ಲಿ ತೊಡಗಿದ್ದರೂ ನಿಯಮಾನುಸಾರ ವೇತನ ಹಾಗೂ ನಿರ್ವಹಣಾ ವೆಚ್ಚ ಪಾವತಿಯಾಗದೆ ಇರುವುದರಿಂದ ಸದರಿ ಯೋಜನೆಯ ಅನುಷ್ಠಾನದಲ್ಲಿ ಆಸಕ್ತಿ ಕಳೆದುಕೊಂಡ ವೈದ್ಯಕೀಯ ತಂಡಗಳು ಎಂಡೋಸಲ್ಫಾನ್ ಬಾಧಿತರ ವೇತನ ಪಾವತಿಯಾಗುವವರೆಗೆ ಸೇವೆಯನ್ನು ಸ್ಥಗಿತಗೊಳಿಸಬೇಕೆಂಬ ಬಗ್ಗೆ ಚರ್ಚೆ ಶುರುವಾಗಿದೆ.

ಅಧಿಕಾರಿಗಳು ಏನಂತಾರೆ?:

ಉತ್ತರ ಕನ್ನಡ ಜಿಲ್ಲೆಯ ಎಂಡೋಸಲ್ಪಾನ್ ಪೀಡಿತರಿಗಾಗಿ ಆರೋಗ್ಯ ಸೇವೆ ಸಲ್ಲಿಸುತ್ತಿರುವ ಸಂಚಾರಿ ಆರೋಗ್ಯ ಘಟಕಗಳ ಸಮಸ್ಯೆ ಗಮನಕ್ಕೆ ಬಂದಿದ್ದು ಸರ್ಕಾರದ ಗಮನಕ್ಕೆ ತಂದು ಈ ಬಗ್ಗೆ ಪ್ರಸ್ತಾಪಿಸಿ ಅನುದಾನ ಬಿಡುಗಡೆಗೆ ಪ್ರಯತ್ನಿಸಲಾಗುವುದು ಎನ್ನುತ್ತಾರೆ ಅಧಿಕಾರಿಗಳು.

ಎಂಡೋಸಲ್ಪಾನ್ ಪೀಡಿತರ ಮನೆ ಬಾಗಿಲಿಗೆ ತೆರಳಿ ಜಿಲ್ಲಾಡಳಿತ ಹಾಗೂ ಸರ್ಕಾರದ ನಿರ್ದೇಶನದಂತೆ ಆರೋಗ್ಯ ಸೇವೆ ನೀಡುತ್ತಿರುವ ನಮಗೆ ಸಕಾಲದಲ್ಲಿ ವೇತನ ಹಾಗೂ ನಿರ್ವಹಣಾ ವೆಚ್ಚ ಪಾವತಿಯಾಗದಿದ್ದಲ್ಲಿ ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿಯನ್ನು ನಿರ್ವಹಿಸುವುದು ಕಷ್ಟವಾಗುತ್ತದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಶಾಸಕರು ಹಾಗೂ ಸಚಿವರಿಗೆ ಮನವಿ ನೀಡಲಾಗುತ್ತಿದ್ದು ಅವರ ಸಲಹೆ ಸೂಚನೆಯನ್ನಾಧರಿಸಿ ಸೇವೆಯನ್ನು ಮುಂದುವರಿಸುವ ಅಥವಾ ಸ್ಥಗಿತಗೊಳಿಸುವ ತೀರ್ಮಾನ ಕೈಗೊಳ್ಳಲಾಗುವುದು.
Published by:Sushma Chakre
First published: