HOME » NEWS » State » UTTARA KANNADA DISTRICT PEOPLE REQUEST TO LOCAL TRAIN RESUM DKK SESR

ಲೋಕಲ್ ಟ್ರೈನ್ ಪುನರಾರಂಭವಾಗದೆ ಆರ್ಥಿಕ ಸಂಕಷ್ಟ; ಪುನರ್​ಆರಂಭಕ್ಕೆ ಉತ್ತರ ಕನ್ನಡ ಜನರ ಒತ್ತಾಯ

ಮಧ್ಯಮ ವರ್ಗದವರಿಗೆ ಸಂಚಾರಕ್ಕೆ ಅನುವು ಮಾಡಿಕೊಡುವ ನಿಟ್ಟಿನಲ್ಲಿ ಈ ಲೋಕಲ್​ ಟ್ರೈನ್​ ಓಡಾಟಕ್ಕೆ ಅನುಮತಿ ನೀಡಬೇಕು ಎಂಬುದು ಇಲ್ಲಿನ ಜನರ ಆಗ್ರಹವಾಗಿದೆ

news18-kannada
Updated:March 5, 2021, 8:34 PM IST
ಲೋಕಲ್ ಟ್ರೈನ್ ಪುನರಾರಂಭವಾಗದೆ ಆರ್ಥಿಕ ಸಂಕಷ್ಟ; ಪುನರ್​ಆರಂಭಕ್ಕೆ ಉತ್ತರ ಕನ್ನಡ ಜನರ ಒತ್ತಾಯ
ಸಾಂದರ್ಭಿಕ ಚಿತ್ರ
  • Share this:
ಕಾರವಾರ (ಮಾ.5 ): ಉತ್ತರ ಕನ್ನಡ ಜಿಲ್ಲೆಯಿಂದ ಮಂಗಳೂರು ಆಸ್ಪತ್ರೆ ಆಶ್ರಯಿಸಿಕೊಂಡಿದ್ದ ರೋಗಿಗಳ ಪಾಲಿಗೆ ಆಶಾಕಿರಣ, ಗೋವಾಕ್ಕೆ ಉದ್ಯೋಗಕ್ಕೆ ಹೋಗುವ ಯುವಕರ ಪಾಲಿಗೆ  ಭರವಸೆಯಾಗಿದ್ದುದ್ದು ಡೆಮೋ ಲೋಕಲ್ ಟ್ರೈನ್. ಕಾರಣ ಜನರು ತಮ್ಮ ಅಗ್ಗದ ಸಂಚಾರಕ್ಕೆ ಈ ಲೋಕಲ್​ ಟ್ರೈನ್​ ಅನ್ನು ಆಶ್ರಯಿಸಿದ್ದರು. ಆದರೆ, ಈಗ ಒಂದು ವರ್ಷದಿಂದ ಈ ರೈಲು ಸಂಚಾರ ಸ್ಥಗಿತಗೊಂಡಿದ್ದು, ಜನರು ದುಬಾರಿ ವೆಚ್ಚದಲ್ಲಿ ಸಂಚಾರ ನಡೆಸಬೇಕಾದ ಅನಿವಾರ್ಯತೆ ಬಂದೊದಗಿದೆ. ಲಾಕ್​ಡೌನ್​ ತೆರವಾಗಿ ನಿಧಾನವಾಗಿ ರೈಲು ಸಂಚಾರ ಆರಂಭವಾಗಿದೆಯಾದರೂ ಇನ್ನು ಲೋಕಲ್​ ಟ್ರೈನ್​ಗಳ ಸಂಚಾರಕ್ಕೆ ಮಾತ್ರ ಹಸಿರು ನಿಶಾನೆ ಸಿಕ್ಕಿಲ್ಲ. ಈ ಹಿನ್ನಲೆ ಸರ್ಕಾರ ಮಧ್ಯಮ ವರ್ಗದವರಿಗೆ ಸಂಚಾರಕ್ಕೆ ಅನುವು ಮಾಡಿಕೊಡುವ ನಿಟ್ಟಿನಲ್ಲಿ ಈ ಲೋಕಲ್​ ಟ್ರೈನ್​ ಓಡಾಟಕ್ಕೆ ಅನುಮತಿ ನೀಡಬೇಕು ಎಂಬುದು ಇಲ್ಲಿನ ಜನರ ಆಗ್ರಹವಾಗಿದೆ. 

ಉತ್ತರ ಕನ್ನಡ ಜಿಲ್ಲೆಯಿಂದ ಮಂಗಳೂರು ಬರೋಬ್ಬರಿ 280 ಕಿ.ಮೀ ಇದೆ. ಟ್ರೈನ್ ಗೆ ಹೋಗಿ ಬಂದರೆ 250 ರಿಂದ 300 ಒಳಗೆ ಹೋಗಿ ಬರುವ ಖರ್ಚು ಮುಗಿಯುತ್ತದೆ. ಆದರೆ ಈಗ ಖಾಸಗಿ ವಾಹನ ಮಾಡಿಕೊಂಡು 5ರಿಂದ 6 ಸಾವಿರ ರೂ ಖರ್ಚು ಮಾಡುವ ಸ್ಥಿತಿ ಬಂದೊದಗಿದೆ.ಇನ್ನು ಆರ್ಥಿಕ ಸ್ಥಿತಿ ಸರಿ ಇಲ್ಲದ ಜನರು ಮಂಗಳೂರು ಹೋಗುವುದನ್ನೆ ಬಿಟ್ಟಿದ್ದಾರೆ. ಸರಿಯಾದ ಚಿಕಿತ್ಸೆ ಸಿಗದೆ ಅದೆಷ್ಟೊ ಮಂದಿ ಸಾವು ಕಂಡಿದ್ದಾರೆ. ಇನ್ನೂ ಗೋವಾ ದಿಂದ ಕಾರವಾರ- ಕಾರವಾರದಿಂದ ಗೋವಾ ಹೋಗಿ ಬಂದು ಉದ್ಯೋಗ ಮಾಡುತ್ತಿದ್ದ ಅದೆಷ್ಟೊ ಯುವಕರು ಇವತ್ತು ಬೈಕ್ ಮೇಲೆ ಹೋಗಿ ಬಂದು ಮಾಡುತ್ತಿದ್ದಾರೆ. ಈಪ್ರಯಾಣ ದುಬಾರಿಯಾಗಿದೆ. ಈ ಹಿನ್ನಲೆ ಈ ಟ್ರೈನ್​ ಪುನಾರ್​ಆರಂಭಿಸುವಂತೆ ಜಿಲ್ಲೆಯ ಜನರು ಮನವಿ ಮಾಡಿದ್ದಾರೆ.

ಎನೇನು ಸಮಸ್ಯೆ?

ಉತ್ತರ ಕನ್ನಡ ಜಿಲ್ಲೆಯ ಜನ ಮುಂಜಾನೆ ಕಾರವಾರದಿಂದ ಬಿಡುವ ಲೋಕಲ್ ಡೆಮೊ ಟ್ರೈನ್ ಅನ್ನು ಕಾರವಾರ ಗಡಿ ಗ್ರಾಮದ ಸಾವಿರಾರು ಯುವಕರು  ಅವಲಂಬಿಸಿದ್ದರು. ಗೋವಾ ರಾಜ್ಯದಲ್ಲಿ ವಿವಿಧ ಕಂಪನಿಗಳಲ್ಲಿ ದಿನಗೂಲಿ ನೌಕರಿ ಮಾಡಲು ಹೋಗುವ  ಗಡಿ ಗ್ರಾಮದ ಸಾವಿರಾರು ಯುವಕರ ಪಾಲಿಗೆ ಈ ಟ್ರೈನ್ ಆಶಾದಾಯಕ ವಾಗಿತ್ತು. ಆದರೆ ಈಗ ಕಳೆದ ಒಂದು ವರ್ಷದಿಂದ ಕೊರೋನಾ ಲಾಕ್ ಡೌನ್ ನಿಂದ ಟ್ರೈನ್ ಮತ್ತೆ ಪುನರಾರಂಭಿಸಿಲ್ಲ. ಹೀಗಾಗಿ ಅವಲಂಬಿತರೆಲ್ಲ ಈಗ ಬೈಕ್‌ಮೇಲೆ ಹೋಗಿ ಬಂದು ಮಾಡುತ್ತಿದ್ದಾರೆ. ಇದರಿಂದ ಆರ್ಥಿಕವಾಗಿ ಸಾಕಷ್ಟು ನಷ್ಟ ಅನುಭವಿಸುತ್ತಿದ್ದಾರೆ. ಅದೆಷ್ಟೊ ಯುವಕರು ಉದ್ಯೋಗವನ್ನೆ ಕೈ ಚೆಲ್ಲಿ ಕೊಂಡಿದ್ದಾರೆ.

ಅನಾರೋಗ್ಯ ಪೀಡಿತರಿಗೆ ಸಮಸ್ಯೆ

ಉತ್ತರ ಕನ್ನಡ ಜಿಲ್ಲೆಯಲ್ಲಿ ಕ್ಯಾನ್ಸರ ನಂತಹ ಮಾರಕ ರೋಗಕ್ಕೆ ತುತ್ತಾದವರು ಹೆಚ್ಚಿನ ಚಿಕಿತ್ಸೆ ಪಡೆಯಲು ಮಂಗಳೂರುನಿ ಖಾಸಗಿ ಆಸ್ಪತ್ರೆ ಯನ್ನ ಅವಲಂಬಿಸಿದ್ದಾರೆ. ಇಂಥಹ ರೋಗಿಗಳಿಗೆ ತಿಂಗಳಿಗೊಮ್ಮೆ ತಪಾಸಣೆ ಇರುತ್ತದೆ. ಸಾವಿರಾರು ರೋಗಿಗಳು ತಿಂಗಳ ತಪಾಸಣೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಯನ್ನ ಅವಲಂಬಿಸಿದ್ದು ಅವರಿಗೆಲ್ಲ ಡೆಮೊ ಲೊಕಲ್ ಟ್ರೈನ್ ಮೂಲಕ ಸುಖ ಪ್ರಯಾಣ ನಡೆಸುತ್ತಿದ್ದರು. ಜೊತೆಗೆ  ಖರ್ಚು ಉಳಿತಿತ್ತು ಆದರೆ ಈಗ ಡೆಮೊ ಲೋಕಲ್ ಟ್ರೈನ್ ಪುನರಾರಂಭವಾಗದೆ ಇವರೆಲ್ಲ ಈಗ ಐದು ಹತ್ತು ಸಾವಿರ ಖರ್ಚು ಮಾಡಿ ಪ್ರತ್ಯೇಕ   ಖಾಸಗಿ ವಾಹನ ಮಾಡಿ ಹೋಗಿ ಬರುವಂತ ಸ್ಥಿತಿ ನಿರ್ಮಾಣ ವಾಗಿದೆ. ಆರ್ಥಿಕ ಸಂಕಷ್ಟ ಎದುರಿಸುವ ಜನ ಈಗ ತಪಾಸಣೆಗೆ ಹೊಗುವದನ್ನೆ ಬಿಟ್ಟಿದ್ದಾರೆ. ಕೆಲವರು ಸರಿಯಾದ ಚಿಕಿತ್ಸೆ ಸಿಗದೆ ಸಾವು ಕಂಡಿದ್ದಾರೆ ಇಂತ ದುಸ್ಥಿತಿ ಎದುರಾಗಿದೆ. .ಈ ನಿಟ್ಟಿನಲ್ಲಿ ಕೂಡಲೇ ಮತ್ತೆ ಟ್ರೈನ್ ಪುನರಾರಂಭಿಸಬೇಕೆಂಬ ಆಗ್ರಹ ಜೋರಾಗಿದೆ.
Published by: Seema R
First published: March 5, 2021, 8:28 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories