HOME » NEWS » State » UTTARA KANNADA DISTRICT NEEDS MULTI SPECIALTY HOSPITAL SESR DKK

ಪ್ರವಾಸಿಗರ ಸ್ವರ್ಗವಾಗಿರುವ ಉತ್ತರ ಕನ್ನಡ ಜಿಲ್ಲೆಗಿಲ್ಲ ಸೂಕ್ತ ವೈದ್ಯಕೀಯ ಸೌಲಭ್ಯ

ಪ್ರವಾಸಿ ತಾಣ ಜತೆಗೆ ಧಾರ್ಮಿಕ ಕ್ಷೇತ್ರದಲ್ಲೂ ತನ್ನದೆ ಆದ ಛಾಪು ಮೂಡಿಸಿದ ಜಿಲ್ಲೆಯಲ್ಲಿ  ವೈದ್ಯಕೀಯ ಸೌಲಭ್ಯ ಅಭಿವೃದ್ದಿ ಕಂಡಿಲ್ಲ.

news18-kannada
Updated:January 16, 2021, 7:14 AM IST
ಪ್ರವಾಸಿಗರ ಸ್ವರ್ಗವಾಗಿರುವ ಉತ್ತರ ಕನ್ನಡ ಜಿಲ್ಲೆಗಿಲ್ಲ ಸೂಕ್ತ ವೈದ್ಯಕೀಯ ಸೌಲಭ್ಯ
ಕಡಲ ತೀರದಲ್ಲಿ ಪ್ರವಾಸಿಗರ ದಂಡು
  • Share this:
ಕಾರವಾರ (ಜ. 16):  ಪ್ರವಾಸಿಗರ ಸ್ವರ್ಗವಾಗಿರುವ ಉತ್ತರ ಕನ್ನಡ ಜಿಲ್ಲೆಯಲ್ಲಿ  ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಕೊರತೆಯಿಂದ ಬಳಲುತ್ತಿದೆ.  ಜಿಲ್ಲೆಯ ಜನ ಹೆಚ್ಚಿನ ಚಿಕಿತ್ಸೆಗೆ  ಮಂಗಳೂರು, ಮಣಿಪಾಲ ಹೋಗುವ ಪರಿಪಾಠಲು ಇನ್ನು ಮುಂದುವರೆದಿದ್ದು ವೈದ್ಯಕೀಯ ಸೌಲಭ್ಯದಿಂದ ವಂಚಿತರಾಗುತ್ತಿದ್ದಾರೆ. ಇಂತ ದುರಾವಸ್ಥೆ ಇಲ್ಲಿನ ಜನಪ್ರತಿನಿಧಿಗಳ ಕಣ್ಣಿಗೆ ಕಾಣುವ ಹಾಗೆ ಇದ್ದರೂ ಇಚ್ಚಾಶಕ್ತಿ ಕೊರತೆಯಿಂದ ವ್ಯವಸ್ಥೆ ಹಾಳಾಗಿದೆ.    ಪ್ರವಾಸಿ ತಾಣ ಜತೆಗೆ ಧಾರ್ಮಿಕ ಕ್ಷೇತ್ರದಲ್ಲೂ ತನ್ನದೆ ಆದ ಛಾಪು ಮೂಡಿಸಿದ ಜಿಲ್ಲೆಯಲ್ಲಿ  ವೈದ್ಯಕೀಯ ಸೌಲಭ್ಯ ಅಭಿವೃದ್ದಿ ಕಂಡಿಲ್ಲ. ಕಾರವಾರದಲ್ಲಿ ಮೆಡಿಕಲ್ ಕಾಲೇಜು ಇದೆಯಾದರೂ ತಜ್ಞ ವೈದ್ಯರ ಕೊರತೆ ಇದೆ. ಆಸ್ಪತ್ರೆಯಲ್ಲಿ ಮೂಲ ಸೌಕರ್ಯದ ಕೊರತೆ ಇದೆ. ಹೈ ಟೆಕ್ ವೈದ್ಯಕೀಯ ಉಪಕರಣಗಳ ಕೊರತೆ ಇದ್ದು, ಗಂಭೀರ ಕಾಯಿಲೆಗಳಿಗೆ ಉತ್ತಮ ಚಿಕಿತ್ಸೆ ಬೇಕು ಎಂದರೆ  ಜಿಲ್ಲೆಯಲ್ಲಿ ಸಾಧ್ಯವೇ ಇಲ್ಲ. ಯಾವುದೇ ಆಸ್ಪತ್ರೆಯಲ್ಲಿ ಉತ್ತಮ ಉಪಕರಣ ವ್ಯವಸ್ಥೆ ಇಲ್ಲ ಮತ್ತು ನುರಿತ ವೈದ್ಯರು ಇಲ್ಲ. ಹೀಗಾಗಿ ಉತ್ತರ ಕನ್ನಡ ಜಿಲ್ಲೆಯ ಬಹುತೇಕ ಜನ ಮಂಗಳೂರು ಮತ್ತು ಮಣಿಪಾಲ ಪಕ್ಕದ ಗೋವಾ ರಾಜ್ಯವನ್ನ ಅವಲಂಭಿಸಿದ್ದಾರೆ. ಸಣ್ಣ ಪುಟ್ಟ ಶೀತ ಜ್ವರಕ್ಕೆ ಮಾತ್ರ ಇಲ್ಲಿ ಚಿಕಿತ್ಸೆ ಬೇರೆ ರೋಗಕ್ಕೆ ಮಂಗಳೂರು ಮಣಿಪಾಲ ಎನ್ನುವಂತಾಗಿದೆ.

ರಸ್ತೆ ಅಪಘಾತವಾದ್ರೆ ನೇರವಾಗಿ ಮಂಗಳೂರು ಕಡೆ

ಉತ್ತರ ಕನ್ನಡ ಜಿಲ್ಲೆಯಲ್ಲಿ ರಸ್ತೆ ಅಪಘಾತವಾದರೆ ಬದುಕುಳಿಯುವ ಜೀವ ಕೂಡಾ ರಸ್ತೆ ಮಧ್ಯೆದಲ್ಲಿ ಮಸಣ ಸೇರೊತ್ತದೆ. ಕಾರಣ ಸೂಕ್ತ ಚಿಕಿತ್ಸೆ ಕೊಡಬೇಕು ಎಂದರೆ ಹತ್ತಿರದಲ್ಲಿ ಯಾವುದೇ ಉತ್ತಮ ಆಸ್ಪತ್ರೆ ಇಲ್ಲ. ನುರಿತ ವೈದ್ಯರಿಲ್ಲ. ಇಲ್ಲಿ ರಸ್ತೆ ಅಪಘಾತದಲ್ಲಿ ಸ್ಥಳದಲ್ಲಿ ಸಾವು ಕಾಣದಿದ್ದರೂ ಆಸ್ಪತ್ರೆಗೆ ಸಾಗಿಸುವ ಸಂದರ್ಭದಲ್ಲಿ ಮಾರ್ಗ ಮಧ್ಯೆ ಸಾವು ಕಂಡವರೆ ಹೆಚ್ಚು. ರಸ್ತೆ ಅಪಘಾತವಾದ ಕೂಡಲೇ ಗಾಯಾಳುಗಳನ್ನ ಹತ್ತಿರದ ಸ್ಥಳೀಯ ಆಸ್ಪತ್ರೆಗೆ ಸಾಗಿಸುತ್ತಾರೆ. ಇಲ್ಲಿ ಸೂಕ್ತ ವ್ಯವಸ್ಥೆ ಮತ್ತು ಮೂಲ ಸೌಕರ್ಯ, ನುರಿತ ವೈದ್ಯರ ಕೊರತೆ ಇರುವುದರಿಂದ ಇವರಿಗೆ ಪ್ರಥಮ ಚಿಕಿತ್ಸೆ ನೀಡಿ ಮಂಗಳೂರು ಅಥವಾ ಮಣಿಪಾಲು ಕರೆದೊಯ್ಯರಿ ಎನ್ನುತ್ತಾರೆ, ಅಂಬ್ಯುಲೆನ್ಸ್ ಮತ್ತು ಅಗತ್ಯ ಎಲ್ಲ ವ್ಯವಸ್ಥೆ ಮಾಡಿಕೊಂಡು ಮಂಗಳೂರು ಹೋಗುವಷ್ಟರಲ್ಲಿ ಚಿಕಿತ್ಸೆ ಕೊರತೆ ಯಿಂದ ದಾರಿ ಮಧ್ಯೆ ಸಾವು ಕಾಣುವಂತಹ ದುಸ್ಥಿತಿ ಎದುರಾಗಿದೆ

ಕೈ ಚೆಲ್ಲುವ ವೈದ್ಯರು

ಯಾವುದೇ ಗಂಭಿರ ಕಾಯಿಲೆಗೆ ಚಿಕಿತ್ಸೆ ನೀಡಲು ತಮ್ಮಿಂದ ಸಾದ್ಯವಾಗುತ್ತಿಲ್ಲ ಎನ್ನುವ ಮಾತು ಇಲ್ಲಿನ ವೈದ್ಯರಿಂದ ಸಾಮಾನ್ಯವಾಗಿದೆ.   ಹೆಚ್ಚಿನ ಚಿಕಿತ್ಸೆಗಾಗಿ ಇಲ್ಲಿನ ವೈದ್ಯರು ಏಕಾಏಕಿಯಾಗಿ ನೀವು ಮಂಗಳೂರು ಅಥವಾ ಮಣಿಪಾಲ ಕರೆದೊಯ್ಯಿರಿ ಎಂದು ಹೇಳುತ್ತಾರೆ. ಇದರಿಂದ ಕಂಗೆಟ್ಟ ರೋಗಿಯ ಕುಟುಂಬಸ್ಥರು ಕೂಡಾ ದಿಕ್ಕೆ ತೋಚದೆ ಗಾಬರಿಗೊಳಗಾಗುತ್ತಾರೆ. ಕೊನೆ ಸಂದರ್ಭದಲ್ಲಿ ಹೀಗೆ ಹೇಳಿದ್ರಿಂದ ರೋಗಿ ಬದುಕುಳಿಯುವದು ಕಷ್ಟವಾಗುತ್ತದೆ.

ಕೇಂದ್ರ ಸಚಿವ ಶ್ರೀಪಾದ ನಾಯ್ಕ್ ರಿಗೂ ಅನುಭವ

ಕಳೆದ ಸೋಮವಾರ ರಸ್ತೆ ಅಪಘಾತದಲ್ಲಿ ಗಂಭಿರ ಗಾಯಗೊಂಡ ಕೇಂದ್ರ ಸಚಿವ ಶ್ರಿಪಾದ್ ನಾಯ್ಕ್ ರಿಗೂ ಉತ್ತರ ಕನ್ನಡ ಜಿಲ್ಲೆಯ ವೈದ್ಯಕೀಯ ಸೌಲಭ್ಯದ ಕೊರತೆಯ ಬಗ್ಗೆ ಮನದಟ್ಟಾಗಿದೆ. ರಸ್ತೆ ಅಪಘಾತದಲ್ಲಿ ತನ್ನ ಪತ್ನಿಯನ್ನ ಕಳೆದುಕೊಂಡ ಶ್ರೀಪಾದ ನಾಯ್ಕರು ಗಂಭಿರವಾಗಿ ಗಾಯಗೊಂಡು ಸಾವು ನೋವಿನ ನಡುವೆ ಹೋರಾಟ ಅನುಭವಿಸುತ್ತಿದ್ದರು. ಆದರೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಅವರಿಗೆ ಸಿಕ್ಕಿದ್ದು ಕೇವಲ ಪ್ರಥಮ ಚಿಕಿತ್ಸೆ, ಉತ್ತಮ ಚಿಕಿತ್ಸೆ ಗಾಗಿ ಅವರು ಗೋವಾ ರಾಜ್ಯವನ್ನೆ ಅವಲಂಭಿಸ ಬೇಕಾಯಿತು. ಇಂತಹ ದುರ್ಘಟನೆಗಳು ಉತ್ತರ ಕನ್ನಡ ಜಿಲ್ಲೆದಾದ್ಯಂತ ನಡೆಯುತ್ತಿದ್ದರೂ ಇಲ್ಲಿನ ಜನಪ್ರತಿನಿಧಿಗಳು ಕಣ್ಣುಮುಚ್ಚಿ ಕುಳಿತಿದ್ದಾರೆ.ಆಸ್ಪತ್ರೆಗಾಗಿ ಅಭಿಯಾನವೇ ನಡೆಯಿತು

ಉತ್ತರ ಕನ್ನಡ ಜಿಲ್ಲೆಯಲ್ಲಿ ಮಲ್ಟಿಸ್ಪೆಶಿಯಾಲಿಟಿ ಆಸ್ಪತ್ರೆ ಬೇಕು ಎನ್ನುವ ಬಗ್ಗೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಒಂದು ಅಭಿಯಾನವೇ ನಡೆದಿದೆ. ಈ ಅಭಿಯಾನಕ್ಕೆ ಯಾವುದೇ ಜನಪ್ರತಿನಿಧಿಗಳು ಕೈ ಜೋಡಿಸಿಲಿಲ್ಲ.  ಬದಲಾಗಿ ಟೀಕೆ ಟಿಪ್ಪಣಿಗಳೆ ಮಾಡಿದರು. ನಪ್ರತಿನಿಧಿಗಳ ಇಚ್ಚಾಶಕ್ತಿ ಕೊರತೆಯಿಂದ ಇವತ್ತು ಉತ್ತರ ಕನ್ನಡ ಜಿಲ್ಲೆಯಲ್ಲಿ ವೈದ್ಯಕೀಯ ಸೌಲಭ್ಯ ಸಿಗುತ್ತಿಲ್ಲ ಅಂತಿದ್ದಾರೆ ಇಲ್ಲಿನ ನೊಂದ ಜೀವಗಳು.
Published by: Seema R
First published: January 16, 2021, 7:14 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories