HOME » NEWS » State » UTTARA KANNADA DISTRICT BOYS GAVE NEW LOOK TO SCHOOL BEFORE STARTED SCHOOLS LG

ಶಾಲೆಗೆ ಬಣ್ಣ ಬಳಿದು ಚಂದದ ರೂಪ ಕೊಟ್ಟ ಯುವಕರ ತಂಡ; ಮಕ್ಕಳನ್ನು ಸೆಳೆಯಲು ಉತ್ತಮ ಚಿಂತನೆ

ಸುಮಾರು 10 ಸಾವಿರ ರೂ ಅನ್ನು ತಮ್ಮ ಕೈಯಿಂದಲೇ  ಖರ್ಚು ಮಾಡಿ ಶಾಲೆಗೆ ಸುಣ್ಣ ಬಣ್ಣ ಬಳಿದು ಶಾಲೆಯ ಸೌಂದರ್ಯ ಹೆಚ್ಚಿಸಿದ್ದಾರೆ. ಈ ಯುವಕರೆಲ್ಲ ಕಲಕರಡಿ ಸುತ್ತಮುತ್ತ ಗ್ರಾಮದಲ್ಲಿ ಕೃಷಿ ಚಟುವಟಿಕೆಯಲ್ಲಿ ಇದ್ದವರು, ಇನ್ನು ಕೆಲವರು ವಿವಿಧ ಬೇರೆ ಉದ್ಯೋಗದಲ್ಲಿ ಇದ್ದವರಾಗಿದ್ದಾರೆ.

news18-kannada
Updated:September 13, 2020, 9:12 AM IST
ಶಾಲೆಗೆ ಬಣ್ಣ ಬಳಿದು ಚಂದದ ರೂಪ ಕೊಟ್ಟ ಯುವಕರ ತಂಡ; ಮಕ್ಕಳನ್ನು ಸೆಳೆಯಲು ಉತ್ತಮ ಚಿಂತನೆ
ಶಾಲೆಗೆ ಹೊಸ ರೂಪ ಕೊಟ್ಟ ಯುವಕರ ತಂಡ
  • Share this:
ಕಾರವಾರ(ಸೆ.12): ಕೊನೆಗೂ ಸರಕಾರ ಶಾಲೆ ಪುನರಾರಂಭಕ್ಕೆ ಅನ್ ಲಾಕ್ 4.0 ಮಾರ್ಗಸೂಚಿಯಲ್ಲಿ ಮನಸ್ಸು ಮಾಡಿದೆ. ಕಳೆದ ಆರು ತಿಂಗಳಿಂದ ವಿದ್ಯಾರ್ಥಿಗಳ ಕಲರವ, ಮಕ್ಕಳ ಆಟಾಟೋಪ ಇಲ್ಲದ ಶಾಲೆಗಳು ಪುನರಾರಂಭಕ್ಕೆ ಕಾಯುತ್ತಿವೆ. ಇನ್ನು ಕೆಲವೆಡೆ ಶಾಲೆಗಳ ಅಂದ ಕೆಟ್ಟಿದೆ ಅಂತಾ ಶಾಲೆಗಳ ಅಂದ ಚಂದ ಹೆಚ್ಚಿಸುವ ಕಾರ್ಯಗಳು ಕೂಡಾ ನಡೆಯುತ್ತಿವೆ. ಇದಕ್ಕೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಕಲಕರಡಿ ಶಾಲೆ ಸಾಕ್ಷಿಯಾಗಿದೆ. ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಕಲಕರಡಿಯ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯನ್ನ ಇಲ್ಲಿನ ವಾಯುಪುತ್ರ ಯುವಕರ ತಂಡ ತಮ್ಮ ಸ್ವಂತ ವೆಚ್ಛದಲ್ಲಿ ಶಾಲೆಗೆ ಸುಣ್ಣ- ಬಣ್ಣ ಬಳಿದು ಶಾಲೆಯ ಅಂದ ಚಂದ ಹೆಚ್ಚಿಸಿ ಶಾಲೆಯನ್ನ ಶೃಂಗಾರಗೊಳಿಸಿದ್ದಾರೆ. ಕಲಕರಡಿ ಗ್ರಾಮದ ಸುಮಾರು ಹತ್ತಕ್ಕೂ ಹೆಚ್ಚು ಸಂಖ್ಯೆಯಲ್ಲಿರುವ ಯುವಕರ ತಂಡ ಈ ಉತ್ತಮ ಕಾರ್ಯದಲ್ಲಿ ಭಾಗಿಯಾಗಿ ಸಮಾಜಸೇವೆ ಮೆರೆದಿದ್ದಾರೆ. ಸುಮಾರು 10 ಸಾವಿರ ರೂ ಅನ್ನು ತಮ್ಮ ಕೈಯಿಂದಲೇ  ಖರ್ಚು ಮಾಡಿ ಶಾಲೆಗೆ ಸುಣ್ಣ ಬಣ್ಣ ಬಳಿದು ಶಾಲೆಯ ಸೌಂದರ್ಯ ಹೆಚ್ಚಿಸಿದ್ದಾರೆ. ಈ ಯುವಕರೆಲ್ಲ ಕಲಕರಡಿ ಸುತ್ತಮುತ್ತ ಗ್ರಾಮದಲ್ಲಿ ಕೃಷಿ ಚಟುವಟಿಕೆಯಲ್ಲಿ ಇದ್ದವರು, ಇನ್ನು ಕೆಲವರು ವಿವಿಧ ಬೇರೆ ಉದ್ಯೋಗದಲ್ಲಿ ಇದ್ದವರಾಗಿದ್ದಾರೆ. ಒಂದು ದಿನ ಬಿಡುವು ಮಾಡಿಕೊಂಡು ಶಾಲೆಯನ್ನ ಸ್ವಚ್ಚ ಗೊಳಿಸಿ ವಿದ್ಯಾರ್ಥಿಗಳಿಗೆ ಉತ್ತಮ ವಾತಾವರಣ ಕಲ್ಪಿಸಿಕೊಟ್ಟಿದ್ದಾರೆ.Amit Shah Hospitalized: ಮತ್ತೆ ಏಮ್ಸ್ ಆಸ್ಪತ್ರೆಗೆ ದಾಖಲಾದ ಕೇಂದ್ರ ಗೃಹ ಸಚಿವ ಅಮಿತ್ ಶಾ

ಶಾಲೆಗೆ ಬಣ್ಣ ಬಳಿಯಲು ಹೇಗೆ ರೂಪಿತವಾಯಿತು ಯೋಜನೆ?

ಸಾಮಾಜಿಕ ಜಾಲತಾಣ ಈಗ ಮೂಲೆ ಮೂಲೆಯಲ್ಲಿರುವ ಸ್ನೇಹಿತರನ್ನ ಒಂದುಗೂಡಿಸುತ್ತಿದೆ. ಜತೆಗೆ ಅದೆಷ್ಟೊ ಉತ್ತಮ ಕಾರ್ಯಕ್ಕೂ ವೇದಿಕೆ ಆಗುತ್ತಿದೆ. ಕಲಕರಡಿಯ ಈ ಯುವಕರ ತಂಡಕ್ಕೂ ಸಾಮಾಜಿಕ ಜಾಲತಾಣದಲ್ಲೊಂದಾದ ವಾಟ್ಸಪ್ ಸೇತುವೆ ಆಗಿದೆ. ಕಲಕರಡಿ ಬಾಯ್ಸ್ ಎಂಬ ವಾಟ್ಸಪ್ ಗ್ರೂಪಿನಲ್ಲಿ ಶಾಲೆಯನ್ನ ಸ್ವಚ್ಚಗೊಳಿಸುವ ಬಗ್ಗೆ ಚರ್ಚೆ ನಡೆದಾಗ ಎಲ್ಲ ಯುವಕರು ಒಂದಾಗಿ ಶಾಲೆಯನ್ನ ಸ್ವಚ್ಚಗೊಳಿಸುವ ಕುರಿತು ಕೈ ಜೋಡಿಸಿದ್ದಾರೆ. ಶಾಲೆಗೆ ಸುಣ್ಣ ಬಣ್ಣ ಬಳಿಯುವ ಬಗ್ಗೆ ಸರಕಾರದಿಂದ ವಿಶೇಷ ಅನುದಾನ ಇಲ್ಲ ಎಂಬ ವಿಚಾರ ತಿಳಿದ ಇಲ್ಲಿನ ಯುವಕರ ತಂಡ, ಕೂಡಲೇ ಈ ಕಾರ್ಯವನ್ನು ನಾವೇ ಮುಂಚಿತವಾಗಿ ಮಾಡೋಣ ಎಂದು ಶಾಲೆಯನ್ನ ಸ್ವಚ್ಚಗೊಳಿಸಿದ್ದಾರೆ. ಜೊತೆಗೆ ಶಾಲೆಗೆ ಸುಣ್ಣಬಣ್ಣ ಬಳಿದು ಶಾಲೆಯ ನಾಮಫಲಕ ಅಂದಚಂದಗೊಳಿಸಿ ಸೌಂದರ್ಯ ಹೆಚ್ಚಿಸಿದ್ದಾರೆ.


ಕೊರೋನಾ ಭಯದಲ್ಲಿ ಇರುವ ವಿದ್ಯಾರ್ಥಿಗಳಿಗೆ ಉತ್ತಮ ವಾತಾವರಣ

ಈಗಾಗಲೆ ಶಾಲೆ ಪುನರಾರಂಭಕ್ಕೆ ಸರಕಾರ ಮನಸ್ಸು ಮಾಡಿದೆಯಾದರೂ, ಪಾಲಕರಲ್ಲಿ ಕೊರೋನಾ ಭಯ ಮಾತ್ರ ಹೋಗಿಲ್ಲ. ಹೀಗಾಗಿ ಮಕ್ಕಳನ್ನ ಶಾಲೆಗೆ ಕಳಿಸಲು ಹಿಂದೇಟು ಹಾಕುತ್ತಿರುವ ಸುದ್ದಿ ಈಗ ಕೇಳಿ ಬರುತ್ತಿದೆ. ಈ ಹಿನಲೆಯಲ್ಲಿ ಶಾಲೆಯ ವಾತಾವರಣ ಸ್ವಚ್ಚವಾಗಿದ್ದರೆ ಬರುವ ವಿದ್ಯಾರ್ಥಿಗಳಿಗೂ ಅನುಕೂಕವಾಗುತ್ತೆ ಎನ್ನುವ ನಿಟ್ಟಿಲ್ಲಿ ಈ ಯುವಕರ ತಂಡ ಶಾಲೆಯ ಆವರಣ ಮತ್ತು ಎಲ್ಲ ಕೋಣೆಯನ್ನ ಸ್ವಚ್ಚಗೊಳಿಸಿದ್ದಾರೆ. ಕಳೆದ ಆರು ತಿಂಗಳ ಬಳಿಕ ಶಾಲೆ ಪುನರಾರಂಭವಾಗುತ್ತಿದ್ದು ಬರುವ ಮಕ್ಕಳು ಶಾಲೆಯನ್ನ ನೋಡಿ ಮನಸ್ಸು ಮುರಿಯಬಾರದು, ಜತೆಗೆ ಪಾಲಕರಿಗೆ ತಮ್ಮ ಮಕ್ಕಳನ್ನ ಸರಕಾರಿ ಶಾಲೆಯತ್ತ ವಾಲಿಸಬೇಕು ಎನ್ನುವ ನಿಟ್ಟಿನಲ್ಲಿ ಇಂತ ಉತ್ತಮ ಕಾರ್ಯಕ್ಕೆ ನಾಂದಿ ಹಾಡದ್ದೇವೆ ಅಂತಾರೆ ಇಲ್ಲಿನ ಯುವಕರ ತಂಡ.

ಈ ಕಾರ್ಯ ಜಿಲ್ಲೆಗೆ ಮಾದರಿಯಾಗಿದ್ದು, ಆಯಾ ಯುವಕರ ತಂಡ ಕೂಡಾ  ತಮ್ಮ ಏರಿಯಾದಲ್ಲಿರುವ ಶಾಲೆಗಳನ್ನ ಹೀಗೆ ಸ್ವಚ್ಛಮಾಡಿ ಉತ್ತಮ ವಾತಾವರಣ ಕಲ್ಪಿಸಿದರೆ, ಸರಕಾರಿ ಶಾಲೆಗಳಿಗೆ ಮಕ್ಕಳ ಆಗಮನ ಅಧಿಕವಾಗುತ್ತದೆ ಎನ್ನುವುದು ಯುವಕರ ಅಭಿಪ್ರಾಯ.
Published by: Latha CG
First published: September 13, 2020, 9:09 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories