ಕಾರವಾರ(ಜು.31): ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಅಡ್ಲೂರು ಗ್ರಾಮದಲ್ಲಿ ಉತ್ತರ ಕನ್ನಡ ಜಿಲ್ಲಾಧಿಕಾರಿ ಭತ್ತದ ಗದ್ದೆಯಲ್ಲಿ ಸಸಿ ನಾಟಿ ಮಾಡುವ ಮೂಲಕ ಮಾದರಿ ಕಾರ್ಯಕ್ಕೆ ಮುನ್ನುಡಿ ಬರೆದು ಯುವ ಸಮೂದಾಯ ಕೃಷಿ ಯನ್ನ ತೊರೆಯಬಾರದು ಎಂಬ ಸಂದೇಶ ನೀಡಿದರು. ಉತ್ತರ ಕನ್ನಡ ಜಿಲ್ಲೆಯ ಬೆಳೆಗಾರರ ಸಮೀತಿಯಿಂದ ಹಮ್ಮಿಕೊಂಡ ಭತ್ತದ ಗದ್ದಯಲ್ಲಿ ಸಸಿ ನಾಟಿ ಮಾಡುವ ಕಾರ್ಯಕ್ರಮ ಇವತ್ತು ಸಮಾಜಕ್ಕೆ ಮಾದರಿ ಆಯಿತು. ಕೃಷಿ ಎಂದ್ರೆ ಮುಗು ಮುರಿಯುವ ಯುವ ಸಮೂದಾಯ ಇವತ್ತು ರಾಜ್ಯದಾದ್ಯಂತ ವ್ಯಾಪಿಸಿಕೊಂಡಿದೆ ಇದಕ್ಕೆ ಹತ್ತು ಹಲವು ಕಾರಣವಿದೆ.
ವರ್ಷ ಕಳೆದಂತೆ ಕೃಷಿ ಮಾಡುವ ಕುಟುಂಬ ಕೃಷಿ ಭೂಮಿಯನ್ನ ಬಂಜರು ಬಿಡುತ್ತಿದೆ. ಯುವ ಸಮೂದಾಯ ಇತ್ತಚಿನ ವರ್ಷಗಳಲ್ಲಿ ಕೃಷಿಯನ್ನ ತೊರೆದು ನಗರದತ್ತ ಮುಖಮಾಡಿ ದಿನಗೂಲಿ ಕೆಲಸಕ್ಕೆ ಅಂಟಿಕೊಂಡಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಆಗಿರಬಹುದು ಅಥವಾ ಮಲೆನಾಡಿನಲ್ಲಿ ಮುಂಗಾರು ಪ್ರವೇಶವಾಗುತ್ತಿದ್ದಂತೆ ಹಚ್ಚ ಹಸುರಿನಲ್ಲಿ ಕಂಗೊಳಿಸುತ್ತಿದ್ದ ಭತ್ತದ ಗದ್ದೆಗಳು ಈಗ ಬಂಜರು ಬಿಳುವಂತಾಗಿದೆ.
ಕೃಷಿಯತ್ತ ಜನರನ್ನ ಮತ್ತೆ ಸೆಳೆಯಲು ಕ್ರಮ
ಹೀಗೆ ಒಂದೊ ಎರಡೊ ನೂರಾರು ಸಮಸ್ಯೆಗೆ ಬೆಂದು ಹೋದ ರೈತ ನಿರಂತರವಾಗಿ ಕೃಷಿಯನ್ನು ತೊರೆದು ನಗರದತ್ತ ಮುಖ ಮಾಡಿರೋದು ಕಳವಳ ಇವೆಲ್ಲ ಸಮಸ್ಯೆ ಮುಂದಿಟ್ಟು ಕೃಷಿಯತ್ತ ಜನರನ್ನ ಮತ್ತೆ ಸೆಳೆಯಬೇಕು ಎನ್ನುವ ನಿಟ್ಟಿನಲ್ಲಿ ಇವತ್ತು ಬೆಳೆಗಾರರ ಸಮೀತಿಯಿಂದ ಒಂದು ಗದ್ದೆಯನ್ನ ಗೇಣಿ ಪಡೆದು ಭತ್ತದ ಸಸಿ ನಾಟಿ ಮಾಡಲಾಯಿತು.
ಇದಕ್ಕೆ ಉತ್ತರ ಕನ್ನಡ ಜಿಲ್ಲಾಧಿಕಾರಿ ಮುಲೈ ಮುಹಿಲನ್ ಯಾವ ರೈತರಿಗೂ ಕಮ್ಮಿಇಲ್ಲವೆಂಬತ್ತೆ ಭತ್ತದ ಗದ್ದೆಯಲ್ಲಿ ಕಾಲು ಕೈ ಕೆಸರು ಮಾಡಿಕೊಂಡು ಸಸಿ ನಾಟಿ ಮಾಡಿದರು. ಒಂದೈದು ನಿಮಿಷಗಳ ಕಾಲ ಎತ್ತಿನ ಜೋಡಿಯಲ್ಲಿ ನೇಗಿಲು ಹಿಡಿದು ಭೂಮಿಯನ್ನ ಕೂಡಾ ಉಳುಮೆ ಮಾಡಿದರು.
ಕೃಷಿಯಿಂದ ವಿಮುಖವಾಗುವ ಯುವ ಸಮೂದಾಯಕ್ಕಾಗಿ ಕೃಷಿ ಜಾಗೃತಿ ಕಾರ್ಯಕ್ರಮ
ಇತ್ತಿಚಿಗೆ ಕೃಷಿಯಿಂದ ವಿಮುಕವಾಗುತ್ತಿರುವ ಯುವ ಸಮೂದಾಯಕ್ಕಾಗಿ ಇವತ್ತು ಉತ್ತರ ಕನ್ನಡ ಜಿಲ್ಲೆಯಲ್ಲಿ ಬೆಳೆಗಾರರ ಸಮೀತಿಯಿಂದ ಕೃಷಿ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಒಂದೆಡೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಇತ್ತಚಿಗೆ ಸಂಭವಿಸುತ್ತಿರುವ ಮಳೆಯಿಂದ ನದಿ ಪ್ರವಾಹಕ್ಕೆ ಬೆದರಿ ನದಿ ತಟದ ಒಂದಿಷ್ಟು ರೈತ ಸಮೂದಾಯ ಕೃಷಿಯನ್ನೆ ಬಿಟ್ಟಿದ್ದಾರೆ. ಆಧುನಿಕತೆ ಆರ್ಭಟದಲ್ಲಿ ರೈತರಿಗೆ ಕೃಷಿ ಮಾಡಲು ಕೊಂಚ ಹಿನ್ನಡೆಯಾಗುತ್ತಿದೆ.
ಇವತ್ತಿನ ಆಧುನಿಕತೆಯನ್ನ ತಂತ್ರಜ್ಞಾನ ವನ್ನ ಬಳಸಿ ಹೇಗೆ ಕೃಷಿ ಮಾಡಬಹುದು ಎಂಬುದನ್ನ ಸಮಾಜಕ್ಕೆ ತೋರಿಸಿ ಉತ್ತಮ ಸಂದೇಶ ಸಾರಿ ಜಾಗೃತಿ ಮೂಡಿಸುವ ಕಾರ್ಯಕ್ರಮ ಇವತ್ತಿನದಾಗಿತ್ತು. ಕೇವಲ ಹಳೆ ಸಂಪ್ರದಾಯ ಮರೆಮಾಚಿದ ಮಾತ್ರಕ್ಕೆ ಕೃಷಿ ತೆರೆಯಮರೆಗೆ ಸರಿಯುತ್ತಿದೆ ಆದ್ರೆ ಇವತ್ತಿನ ದಿನದಲ್ಲಿ ಕಾಲಕ್ಕೆ ತಕ್ಕಂತೆ ಆಧುನಿಕ ತಂತ್ರಜ್ಞಾನ ಬಳಕೆ ಮಾಡಿ ಹೇಗೆಲ್ಲ ಕೃಷಿ ಮಾಡಬಹುದು ಎನ್ನುವದನ್ನ ತಿಳಿಸಲಾಯಿತು.. ಜತೆಗೆ ಕಾರಣ ನೀಡಿ ಕೃಷಿಯಿಂದ ವಿಮುಕವಾಗುತ್ತಿರುವ ಜನರಿಗೆ ಆಧುನಿಕತೆಯ ಕೃಷಿ ಜೀವನದ ನಗ್ಗೆಯೂ ತಿಳಿಸಲಾಯಿತು.
ಇದನ್ನೂ ಓದಿ: Breaking News: ಐಸಿಸ್ ಜೊತೆ ನಂಟು ಹೊಂದಿರೋ ಶಂಕೆ, ಭಟ್ಕಳದಲ್ಲಿ ಇಬ್ಬರನ್ನು ವಶಕ್ಕೆ ಪಡೆದ NIA
ಕುಟುಂಬ ಸಮೇತ ಗದ್ದೆಗೆ ಇಳಿದ ಜಿಲ್ಲಾಧಿಕಾರಿ
ತನ್ನ ಪತ್ನಿ ಅಶ್ವೀನಿ ಮುಹಿಲನ್ ಅವರನ್ನ ಕೂಡಾ ಕೃಷಿ ಜಾಗೃತಿ ಕಾರ್ಯಕ್ರಮಕ್ಕೆ ಕರೆದುಕೊಂಡು ಬಂದಿದ್ದ ಜಿಲ್ಲಾಧಿಕಾರಿ ಮುಲೈ ಮುಹಿಲನ್ ತನ್ನ ಪತ್ನಿಗೂ ಕೃಷಿ ಜಾಗೃತಿ ಕಾರ್ಯಕ್ರಮದ ಬಗ್ಗೆ ತಿಳಿಸಿದ್ರು. ಹೀಗೆ ಇವತ್ತು ಕೃಷಿಯಿಂದ ವಿಮುಖವಾಗುತ್ತಿರುವ ಯುವ ಸಮೂದಾಯಕ್ಕೆ ಒಂದು ಕೃಷಿ ಪಾಠ ಹೇಳುವ ಉದ್ದೇಶದಿಂದ ಇವತ್ತು ಕೃಷಿ ಜಾಗೃತಿ ಕಾರ್ಯಕ್ರಮ ಮಾದರಿ ಆಯಿತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ