ಉತ್ತರ ಕನ್ನಡದಲ್ಲೂ ಬಿಎಸ್​ವೈ, ಹೆಗಡೆ ಮೇಲುಗೈ, ಕುಮಟಾ ಇನ್ನೂ ಕಗ್ಗಂಟು

news18
Updated:April 16, 2018, 8:13 PM IST
ಉತ್ತರ ಕನ್ನಡದಲ್ಲೂ ಬಿಎಸ್​ವೈ, ಹೆಗಡೆ ಮೇಲುಗೈ, ಕುಮಟಾ ಇನ್ನೂ ಕಗ್ಗಂಟು
news18
Updated: April 16, 2018, 8:13 PM IST
ನ್ಯೂಸ್ 18 ಕನ್ನಡ 

ಬೆಂಗಳೂರು (ಏ.16) :  ಉತ್ತರ ಕನ್ನಡ ಜಿಲ್ಲೆಯಲ್ಲಿ ಬಿಜೆಪಿ ಪಾಲಿಗೆ ಕಗ್ಗಂಟಾಗಿದ್ದ ಭಟ್ಕಳ, ಯಲ್ಲಾಪುರ ಹಾಗೂ ಹಳಿಯಾಳ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆಯ್ಕೆ ಎರಡನೇ ಹಂತದ ಕಸರತ್ತಿನಲ್ಲಿ ಬಗೆಹರಿದಿದೆ.

ಭಟ್ಕಳ ಕ್ಷೇತ್ರಕ್ಕೆ ಬಿಜೆಪಿ ಜಿಲ್ಲಾ ಯುವ ಮೋರ್ಚಾ ಕಾರ್ಯದರ್ಶಿ ಸುನೀಲ್ ನಾಯ್ಕ,  ಯಲ್ಲಾಪುರ ಕ್ಷೇತ್ರಕ್ಕೆ ಮಾಜಿ ಶಾಸಕ ವಿ.ಎಸ್.ಪಾಟೀಲ ಹಾಗೂ ಹಳಿಯಾಳ ಕ್ಷೇತ್ರಕ್ಕೆ ಮಾಜಿ ಶಾಸಕ ಸುನೀಲ ಹೆಗಡೆ ಆಯ್ಕೆ ಎರಡನೇ ಹಂತದ ಕಸರತ್ತಿನಲ್ಲಿ ಅಂತಿಮವಾಗಿದೆ.

ವಿ.ಎಸ್.ಪಾಟೀಲ ಮೂರನೇ ಬಾರಿ ಸ್ಪರ್ಧಿಸಲು ಮುಂದಾಗಿದ್ದಾರೆ. ಕಳೆದೆ ಎರಡು ಬಾರಿ ಕಾಂಗ್ರೆಸ್ ನ ಶಿವರಾಮ ಹೆಬ್ಬಾರ ವಿರುದ್ಧ ಸ್ಪರ್ಧಿಸಿದ್ದ ಅವರು ಒಮ್ಮೆ ಗೆದ್ದು ಇನ್ನೊಮ್ಮೆ ಪರಾಭವಗೊಂಡಿದ್ದರು. ಈ ಬಾರಿ ಕೂಡ ಹೆಬ್ಬಾರ ವಿರುದ್ಧ ತೊಡೆ ತಟ್ಟಲು ಪಾಟೀಲ ಸಿದ್ಧರಾಗಿದ್ದಾರೆ.

ಇನ್ನು ಕಾಂಗ್ರೆಸ್ ಹುಲಿ ಹಳಿಯಾಳ ಕ್ಷೇತ್ರದಿಂದ ಸಚಿವ ಆರ್.ವಿ.ದೇಶಪಾಂಡೆ ವಿರುದ್ಧ ಬಿಜೆಪಿಯಿಂದ ಸುನೀಲ ಹೆಗಡೆ ಕೂಡ ಮೂರನೇ ಬಾರಿ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಹಳೆ ವೈರಿಯ ಹೆಡೆಮುರಿ ಕಟ್ಟಲು ಕಣದಲ್ಲಿರುವ ಅಭ್ಯರ್ಥಿಗಳು ತಂತ್ರಗಾರಿಕೆಯಲ್ಲಿ ತೊಡಗಿದ್ದಾರೆ.

ಕುಮಟಾ ಕ್ಷೇತ್ರ ಕಗ್ಗಂಟು.

ಕುಮಟಾ ಕ್ಷೇತ್ರದಲ್ಲಿ ಮಾಜಿ ಶಾಸಕ ದಿನಕರ ಶೆಟ್ಟಿ, ಉದ್ಯಮಿ ಯಶೋಧರ ನಾಯ್ಕ ಹಾಗೂ ಬಿಜೆಪಿ ಹಿಂದುಳಿದ ವರ್ಗದ ರಾಜ್ಯ ಪ್ರಧಾನ ಕಾರ್ಯದರ್ಶಿ ಸೂರಜ್ ನಾಯ್ಕ ಸೋನಿ ಪ್ರಭಲ ಆಕಾಂಕ್ಷಿಗಳಾಗಿದ್ದಾರೆ.
Loading...

ಈ ಮೂವರೂ ಪಕ್ಷ ಸಂಘಟನೆಯಲ್ಲಿ ತಮ್ಮದೇ ಆದ ಕೊಡುಗೆ ಕೂಡ ನೀಡುದ್ದಾರೆ. ಈ ಹಿನ್ನೆಲೆಯಲಗಲಿ ಯಾರಿಗೆ ಟಿಕೇಟ್ ನೀಡಬೇಕೆಂಬ ಗೊಂದಲ ಪಕ್ಷದ ವರಿಷ್ಠರಿಗೆ ಕಾಡುತ್ತಿದೆ. ನಾಮಧಾರಿ, ಹಾಲಕ್ಕಿ, ಒಕ್ಕಲಿಗ, ಬ್ರಾಹ್ಮಣ ಸಮುದಾಯದ ಮತದಾರರು ಹೆಚ್ಚಿರುವ ಕಾರಣ ಸಮುದಾಯದ ಒಲವಿರುವವರಿಗೇ ಟಿಕೇಟ್ ನೀಡಲು ಪಕ್ಷ ತೀರ್ಮಾನಿಸಿದ್ದು, ಗೊಂದಲ ಮುಂದುವರಿಯುವಂತಾಗಿದೆ

ಭಟ್ಕಳದಲ್ಲಿ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದ ಮಾಜಿ ಶಾಸಕ ಜೆ.ಡಿ.ನಾಯ್ಕ ಅವರಿಗೆ  ತುಂಬಾ ನಿರಾಸೆಯಾಗಿದೆ.

ಇನ್ನೂ ಈ ಬಗ್ಗೆ  ಪ್ರತಿಕ್ರಿಯೆ ನೀಡಿರುವ  ಜೆ.ಡಿ.ನಾಯ್ಕ ,  ಪಕ್ಷದಲ್ಲಿ ಹೊಸ ವ್ಯಕ್ತಿಯಾದರೂ ಪ್ರಮಾಣಿಕ ಕೆಲಸ ಮಾಡಿದ್ದೇನೆ. ಪಕ್ಷದ ವರಿಷ್ಠರು  ಅವರು ನಿರ್ಧಾರ ಕೈಗೊಂಡು ಟಿಕೇಟ್ ನೀಡಿದ್ದಾರೆ.  ಪಕ್ಷದ ಸಿದ್ದಾಂತಕ್ಕೆ ತಲೆಬಾಗುವೆ. ಬಿ.ಜೆ.ಪಿ ಸಕ್ರಿಯ ಕಾರ್ಯಕರ್ತನಾಗಿ ದುಡಿಯುತ್ತೇನೆ ಎಂದಿದ್ದಾರೆ.

ಒಟ್ಟಾರೆ ಎಲ್ಲ ಪಕ್ಷಗಳ ಅಭ್ಯರ್ಥಿ ಘೋಷಣೆ ನಂತರ ಭಟ್ಕಳ, ಯಲ್ಲಾಪುರ ಹಾಗೂ ಹಳಿಯಾಳ ಕ್ಷೇತ್ರದಲ್ಲಿ ಮಿಂಚಿನ ಸಂಚಲನವಾಗಿದೆ.  ಎಲ್ಲ ಪಕ್ಷಗಳ ಅಭ್ಯರ್ಥಿ ಘೋಷಣೆಯ ನಂತರ ಈ ಕ್ಷೇತ್ರಗಳು ಜಿದ್ದಿನ ಕಣವಾಗಿ ಮಾರ್ಪಟ್ಟಿವೆ.
First published:April 16, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...