Yogi Adityanath: ಹನುಮ ಜನ್ಮಭೂಮಿ ಅಂಜನಾದ್ರಿಗೆ ಬರ್ತಾರಾ ಯೋಗಿ ಆದಿತ್ಯನಾಥ್? ಹೆಚ್ಚಿದ ಕುತೂಹಲ

ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಅಂಜನಾದ್ರಿ ಪರ್ವತ ಹನುಮ ಹುಟ್ಟಿದ ಸ್ಥಳ ಎಂದು ಹೆಸರುವಾಸಿಯಾಗಿದೆ. ಈಬಾರಿ ಅಗಸ್ಟ್   ತಿಂಗಳಿನಲ್ಲಿ ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಅಂಜನಾದ್ರಿಯಲ್ಲಿ ಸಂತ ಸಮ್ಮೇಳನ ನಡೆಯಲಿದೆ. 

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
ಕೊಪ್ಪಳ: ಹನುಮಂತನ ಜನ್ಮಭೂಮಿ ಕೊಪ್ಪಳದ ಅಂಜನಾದ್ರಿಯ (Anjanadri) ಖ್ಯಾತಿ ಇಡೀ ದೇಶದಲ್ಲೇ ಹರಡಿದೆ.  ಹನುಮಾನ್ ಜನ್ಮಭೂಮಿ (Hanuman Birthplace) ಯಾವುದು? ಎಂಬ ಕುರಿತು ವಿವಾದಗಳು ಆಗಾಗ ಸದ್ದು ಮಾಡುತ್ತಲೆ ಇದ್ದರೂ ಅಪಾರ ಪ್ರಮಾಣದ ಭಕ್ತರಂತೂ ಅಂಜನಾದ್ರಿಯೇ ಹನುಮಾನ್ ಜನ್ಮಭೂಮಿ ಎಂದು ನಂಬಿಕೆ ಹೊಂದಿದ್ದಾರೆ. ಈ ಹಿನ್ನೆಲೆಯಲ್ಲಿ ಅತ್ಯಂತ ಪ್ರಾಮುಖ್ಯತೆ ಪಡೆದಿರುವ ಕೊಪ್ಪಳದ (Koppal) ಅಂಜನಾದ್ರಿಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Uttar Pradesh CM Yogi Adityanath) ಆಗಮಿಸುತ್ತಾರಾ? ಎಂಬ ಪ್ರಶ್ನೆ ಈಗ ಹುಟ್ಟಿಕೊಂಡಿದೆ. ಈಮೂಲಕ ಕರ್ನಾಟಕದ ಕೊಪ್ಪಳದ ಅಂಜನಾದ್ರಿಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಆಗಮಿಸುವ ಕುರಿತು ಪ್ರಶ್ನೆಗಳು ಎದ್ದಿವೆ.

ಇದೀಗ ಅಂಜನಾದ್ರಿಯಲ್ಲಿ ನಡೆಯಲಿರುವ ಸಂತ ಸಮ್ಮೇಳನಕ್ಕೆ ಉತ್ತರ ಪ್ರದೇಶ ಮುಖ್ಯಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಆಹ್ವಾನ ನೀಡಲಾಗಿದೆ. ಅಂಜನಾದ್ರಿ ಪರ್ವತದ ಅರ್ಚಕ ವಿದ್ಯಾದಾಸ್ ಬಾಬಾ ಅವರು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಸಂತ ಸಮ್ಮೇಳನಕ್ಕೆ ಆಗಮಿಸುವಂತೆ ಆಹ್ವಾನ ನೀಡಿದ್ದಾರೆ.

ಅಗಸ್ಟ್   ತಿಂಗಳಿನಲ್ಲಿ ನಡೆಯಲಿದೆ ಸಂತ ಸಮ್ಮೇಳನ
ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಅಂಜನಾದ್ರಿ ಪರ್ವತ ಹನುಮ ಹುಟ್ಟಿದ ಸ್ಥಳ ಎಂದು ಹೆಸರುವಾಸಿಯಾಗಿದೆ. ಈಬಾರಿ ಅಗಸ್ಟ್   ತಿಂಗಳಿನಲ್ಲಿ ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಅಂಜನಾದ್ರಿಯಲ್ಲಿ ಸಂತ ಸಮ್ಮೇಳನ ನಡೆಯಲಿದೆ. 

ರಾಜ್ಯದ ಹಲವು ನಾಯಕರಿಗೂ ಆಹ್ವಾನ
ರಾಜ್ಯದ ಬಿಜೆಪಿ ಕಾಂಗ್ರೆಸ್ ನಾಯಕರಿಗೆ ಅಂಜನಾದ್ರಿ ಪರ್ವತದ ಅರ್ಚಕ ವಿದ್ಯಾದಾಸ್ ಬಾಬಾ ಆಹ್ವಾನ ನೀಡಿದ್ದಾರೆ. ರಾಜ್ಯದ ನಾಯಕರ ಜೊತೆಗೆ ಉತ್ತರ ಪ್ರದೇಶಕ್ಕೆ ತೆರಳಿ ಅಂಜನಾದ್ರಿ ಪರ್ವತಕ್ಕೆ ಆಗಮಿಸುವಂತೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಅಂಜನಾದ್ರಿ ಪರ್ವತದ ಅರ್ಚಕ ವಿದ್ಯಾದಾಸ್ ಬಾಬಾ ಅವರು ಆಹ್ವಾನ ನೀಡಿದ್ದಾರೆ.

ಏನಿದು ಹನುಮ ಜನ್ಮಭೂಮಿ ವಿವಾದ?
2019 ರಲ್ಲಿ ರಾಮ ಜನ್ಮಭೂಮಿ ವಿವಾದವನ್ನು ಸುಪ್ರೀಂ ಕೋರ್ಟ್ ಇತ್ಯರ್ಥಗೊಳಿಸಿದ ನಂತರ, ಹನುಮ ಜನ್ಮಸ್ಥಳದ ಬಗ್ಗೆ ಹೊಸ ವಿವಾದ ಹೊರಹೊಮ್ಮಿದೆ. ಹಂಪಿಯ ಸಮೀಪದ ಆನೆಗುಂಡಿಯಲ್ಲಿರುವ ಅಂಜನಾದ್ರಿಯಲ್ಲಿ ಹನುಮಂತ ಜನಿಸಿದನೆಂದು ಹೇಳಲಾಗುತ್ತದೆ.

ಗೋಕರ್ಣ ಹನುಮ ಜನ್ಮಭೂಮಿ ಎಂದಿತ್ತು ರಾಮಚಂದ್ರಾಪುರ ಮಠ
ಇದೇ ಸಂದರ್ಭದಲ್ಲಿ ಆಂಧ್ರಪ್ರದೇಶವು ತಿರುಮಲದಲ್ಲಿರುವ ಅಂಜನಾಚಲಂ ಬೆಟ್ಟ ಹನುಮ ಜನ್ಮಭೂಮಿ ಎಂದು ಟಿಟಿಡಿ ವಾದ ಮುಂದಿಟ್ಟಿತ್ತು. ಆದರೆ ಕರ್ನಾಟಕದ ಅಂಜನಾದ್ರಿ ಹನುಮ ಜನ್ಮಭೂಮಿ ಎಂದು ಸಾರಲು ಹಲವು ದಾಖಲೆಗಳು, ನಂಬಿಕೆಗಳು ಬಹು ಮುಂಚಿನಿಂದಲೂ ಇದ್ದವು. ಈ ಮಧ್ಯೆ ಗೋಕರ್ಣ ಹನುಮ ಜನ್ಮಭೂಮಿ ಎಂದು ರಾಮಚಂದ್ರಾಪುರ ಮಠ ವಾದ ಮುಂದಿಟ್ಟಿತ್ತು.

ಕಳೆದ ವರ್ಷ ಏಪ್ರಿಲ್‌ನಲ್ಲಿ ಆಂಧ್ರಪ್ರದೇಶದ ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಮತ್ತು ಕರ್ನಾಟಕದ ಶ್ರೀ ಹನುಮದ್ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಹನುಮಂತನ ಜನ್ಮಸ್ಥಳಗಳ ಕುರಿತು ಭಿನ್ನ  ಪ್ರತಿಪಾದನೆ ಮಾಡಿದ ನಂತರ ಈ ಸಮಸ್ಯೆ ಉದ್ಭವಿಸಿದೆ.

ಇದನ್ನೂ ಓದಿ: Yash Joining Politics: ಗೋವಾ ಸಿಎಂ ಜೊತೆ ರಾಕಿ ಭಾಯ್, ರಾಜಕೀಯಕ್ಕೆ ಎಂಟ್ರಿ ಕೊಡ್ತಾರಾ ಯಶ್?

ಪುರಾತನ ಗ್ರಂಥಗಳಾದ ಪುರಾಣಗಳು ಮತ್ತು ತಾಮ್ರ ಹಲಗೆಯ ಶಾಸನಗಳ ಪ್ರಕಾರ ಅಂಜನಾದ್ರಿಯನ್ನು ಈಗ ತಿರುಮಲ ಎಂದು ಕರೆಯುತ್ತಿದ್ದು, ಇದೇ ಹನುಮಂತನ ಜನ್ಮಸ್ಥಳ ಎಂದು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ ಎಂದು ಟಿಟಿಡಿ ಹೇಳಿತ್ತು. ಆದರೆ ಅಂಜನಾದ್ರಿಯೇ ಹನುಮ ಜನ್ಮಸ್ಥಳ ಎಂದು ಭಕ್ತರ ನಂಬಿಕೆಯಾಗಿದೆ.

ತಿರುಮಲ ಅಂಜನಾದ್ರಿಯನ್ನು ಹನುಮಂತನ ಹುಟ್ಟಿದ ಜಾಗ ಎಂದು ಖಚಿತಪಡಿಸಲು ಪುರಾಣಗಳು, ಪುರಾತತ್ತ್ವ ಶಾಸ್ತ್ರ ಮತ್ತು ಇತರ ಪುರಾವೆಗಳನ್ನು ಸಂಶೋಧಿಸಿದ ಖ್ಯಾತ ವಿದ್ವಾಂಸರು ಮತ್ತು ವಿಜ್ಞಾನಿಗಳ ಸಮಿತಿಯನ್ನು ಟಿಟಿಡಿ ಈ ಹಿಂದೆ ರಚಿಸಿತ್ತು.

ಇದನ್ನೂ ಓದಿ:School Holidays: ಮೇ 16ರಿಂದ ಶಾಲೆ ಶುರು ಇಲ್ಲ? ಶಾಲಾ ಮಕ್ಕಳ ಬೇಸಿಗೆ ರಜೆ ವಿಸ್ತರಿಸಲು ಶಿಕ್ಷಣ ಇಲಾಖೆ ಚಿಂತನೆ

ಆಂಜನೇಯನ ಜನ್ಮಸ್ಥಳ ಎಂದು ಜಗತ್ತಿನ ಯಾವುದೇ ಭಾಗವನ್ನು ದೃಢೀಕರಿಸಲು ಯಾವುದೇ ಪುರಾವೆಗಳು ಕಂಡುಬಂದಿಲ್ಲ ಎಂದು ಟಿಟಿಡಿ ಹೇಳಿತ್ತು. ಜೊತೆಗೆ ತೀರ್ಥ ಕ್ಷೇತ್ರ ಟ್ರಸ್ಟ್ ಯುನೆಸ್ಕೋ ವಿಶ್ವ ಪರಂಪರೆಯ ತಾಣವಾದ ಹಂಪಿ ಹನುಮಂತನ ಜನ್ಮಸ್ಥಳ ಎಂದು ಸ್ಥಾಪಿಸಲು ಸಮಿತಿಯನ್ನು ರಚಿಸಿತ್ತು. ಇದು ಸಹ ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿತ್ತು.
Published by:guruganesh bhat
First published: