• Home
  • »
  • News
  • »
  • state
  • »
  • ಶಬರಿಮಲೆ ಸಂಪ್ರದಾಯ ಉಳಿಯಬೇಕು ಎಂದ ಯುಟಿ ಖಾದರ್

ಶಬರಿಮಲೆ ಸಂಪ್ರದಾಯ ಉಳಿಯಬೇಕು ಎಂದ ಯುಟಿ ಖಾದರ್

ಯು.ಟಿ ಖಾದರ್

ಯು.ಟಿ ಖಾದರ್

ಹಿಂದಿನಿಂದಲೂ ಬಂದಿರುವ ಸಂಪ್ರದಾಯವನ್ನು ಉಳಿಸಲು ಕೇಂದ್​ರ ಸರಕಾರ ಪ್ರಾಮಾಣಿಕ ಪ್ರಯತ್ನ ಮಾಡಿಲ್ಲ ಎಂಬುದು ಖಾದರ್ ಅಭಿಪ್ರಾಯ.

  • News18
  • Last Updated :
  • Share this:

ಬೆಂಗಳೂರು(ಜ. 03): ಶಬರಿಮಲೆ ಅಯ್ಯಪ್ಪ ದೇಗುಲದಲ್ಲಿ 10-50 ವರ್ಷದ ಮಹಿಳೆಯರ ಪ್ರವೇಶಕ್ಕೆ ಸಾಂಪ್ರದಾಯಿಕವಾಗಿ ನಿಷಿದ್ಧವಿದೆ. ಸುಪ್ರೀಂ ಕೋರ್ಟ್ ಈ ಸಂಪ್ರದಾಯದ ಬಂಧ ಕಳಚಿ ಎಲ್ಲಾ ಮಹಿಳೆಯರ ಪ್ರವೇಶಕ್ಕೂ ಮುಕ್ತ ಮಾಡಿರುವುದು ಕೇರಳ ಹೊತ್ತಿ ಉರಿಯುವಂತೆ ಮಾಡಿದೆ. ಈ ಬಗ್ಗೆ ಮಂಗಳೂರಿನಲ್ಲಿ ಗುರುವಾರ ಮಾತನಾಡಿರುವ ಸಚಿವ ಯು.ಟಿ. ಖಾದರ್ ಅವರು ಶಬರಿಮಲೆ ಸಂಪ್ರದಾಯದ ಪರ ಬ್ಯಾಟಿಂಗ್ ಮಾಡಿದ್ದಾರೆ.

ಹಿಂದಿನಿಂದಲೂ ಬಂದಿರುವ ಸಂಪ್ರದಾಯ ಉಳಿಯಬೇಕು. ಶಾಂತಿಯುತವಾಗಿ ಚರ್ಚೆ ನಡೆಸಬೇಕು. ಹಿರಿಯರು, ಗುರು-ಸ್ವಾಮೀಜಿಗಳ ಜೊತೆ ಪ್ರಧಾನಿ ಸಭೆ ಕರೆದು ನಿರ್ಣಯ ತೆಗೆದುಕೊಳ್ಳಬೇಕು. ಸುಪ್ರೀಂ ಕೋರ್ಟ್​ಗೆ ಈ ಬಗ್ಗೆ ಮನವರಿಕೆ ಮಾಡುವ ಕೆಲಸವಾಗಬೇಕು. ಎಂದು ಯುಟಿ ಖಾದರ್ ಸಲಹೆ ನೀಡಿದ್ದಾರೆ.

ಶಬರಿಮಲೆ ವಿವಾದದಲ್ಲಿ ಬಿಜೆಪಿ ಬೇಜವಾಬ್ದಾರಿಯುತವಾಗಿ ನಡೆಯುತ್ತಿದೆ. ರಾಜಕೀಯ ಮಾಡುತ್ತಿದೆ. ಅದಕ್ಕೆ ನಿಜವಾದ ಕಾಳಜಿ ಇದ್ದಲ್ಲಿ ಸಂಪ್ರದಾಯ ಉಳಿಸಿಕೊಳ್ಳುವ ಪ್ರಾಮಾಣಿಕ ಪ್ರಯತ್ನ ಮಾಡಬೇಕಿತ್ತು. ಸಂಸತ್​ನಲ್ಲಿ ಬಿಜೆಪಿ ಸಂಸದರು ಈ ವಿಚಾರದ ಬಗ್ಗೆ ಮಾತನಾಡಲಿಲ್ಲ. ಹಿಂದೂ ಮುಸ್ಲಿಮ್ ಸೌಹಾರ್ದತೆಯ ಕ್ಷೇತ್ರವಾದ ಶಬರಿಮಲೆಯಲ್ಲಿ ಬಿಜೆಪಿಯವರೇ ಹೋಗಿ ಗಲಾಟೆ ಮಾಡಿಸುತ್ತಾರೆ ಎಂದು ಮಂಗಳೂರಿನ ಕಾಂಗ್ರೆಸ್ ಮುಖಂಡರೂ ಆದ ಯುಟಿ ಖಾದರ್ ಆರೋಪಿಸುತ್ತಾರೆ.

ಶಬರಿಮಲೆಯಲ್ಲಿ ಅಯ್ಯಪ್ಪ ದರ್ಶನ ಮಾಡಲು ಬಯಸುವ ಮಹಿಳೆಯರಿಗೆ ರಕ್ಷಣೆ ಕೊಡುವ ಕೇರಳದ ಎಲ್​ಡಿಎಫ್ ಸರಕಾರದ ಕ್ರಮವನ್ನು ಖಾದರ್ ಸಮರ್ಥಿಸಿಕೊಂಡಿದ್ದಾರೆ. ಸುಪ್ರೀಂ ಕೋರ್ಟ್ ಆದೇಶವನ್ನು ಪಾಲಿಸಬೇಕಾದ ಅನಿವಾರ್ಯತೆ ಕೇರಳ ಸರಕಾರಕ್ಕಿದೆ ಎಂದು ಖಾದರ್ ಹೇಳಿದ್ದಾರೆ.

ಇದೇ ವೇಳೆ, 40ರ ಆಸುಪಾಸಿನ ವಯಸ್ಸಿನ ಇಬ್ಬರು ಮಹಿಳೆಯರು ಅಯ್ಯಪ್ಪ ದೇಗುಲ ಪ್ರವೇಶ ಮಾಡಿದ ಬಳಿಕ ಕೇರಳ ಅಕ್ಷರಶಃ ಉದ್ವಿಗ್ನ ಸ್ಥಿತಿಯಲ್ಲಿದೆ. ಆ ಮಹಿಳೆಯರ ದೇಗುಲ ಪ್ರವೇಶದ ಹಿಂದೆ ಕೇರಳ ಸರಕಾರದ ಕುಮ್ಮಕ್ಕಿದೆ ಎಂದು ಆರೋಪಿಸಿ ಬಿಜೆಪಿ ಬೆಂಬಲದೊಂದಿಗೆ ಹಲವು ಸಂಘಟನೆಗಳು ಕರೆಕೊಟ್ಟ ಕೇರಳ ಬಂದ್​ಗೆ ಒಬ್ಬನ ಆಹುತಿ ಆಗಿದೆ. ಹಲವು ಆಸ್ತಿಪಾಸ್ತಿಗಳು ನಷ್ಟವಾಗಿದೆ. ಕಲ್ಲುತೂರಾಟದಿಂದ ಹಲವಾರು ಜನರಿಗೆ ಗಾಯಗಳಾಗಿವೆ.

ಅಯ್ಯಪ್ಪ ಸ್ವಾಮಿ ದೇಗುಲಕ್ಕೆ ಮಹಿಳೆಯರ ಪ್ರವೇಶ ವಿರೋಧಿಸಿ ಕರ್ನಾಟಕ  ಹಲವು ಕಡೆ ಅಯ್ಯಪ್ಪ ಭಕ್ತರಿಂದ ಪ್ರತಿಭಟನೆಗಳು ನಡೆದಿವೆ. ಪೇಜಾವರ ಮಠದ ವಿಶ್ವೇಶ್ವರ ತೀರ್ಥ ಸ್ವಾಮಿ, ಮುರುಘಾಮಠದ ಡಾ. ಶಿವಮೂರ್ತಿ ಮುರುಘಾ ಶರಣರು ಸೇರಿದಂತೆ ಕೆಲವಾರು ಮಠ ಮಾನ್ಯಗಳು ಈ ವಿಚಾರದಲ್ಲಿ ತಟಸ್ಥ ನಿಲುವು ತಳೆದಿವೆ. ರಾಷ್ಟ್ರೀಯ ಸ್ವಯಂಸೇವಕ ಸಂಘ ಕೂಡ ಬಹುತೇಕ ತಟಸ್ಥ ನಿಲುವು ಹೊಂದಿದ್ದು, ಹಿಂದೂ ಧರ್ಮದಲ್ಲಿ ಯಾವುದೇ ಸುಧಾರಣೆ ತರಲು ಮುಕ್ತವಾಗಿದ್ದೇವೆ ಎಂದು ಹೇಳಿರುವುದು ಗಮನಾರ್ಹ.

ಕೇರಳದಲ್ಲಿ ನಡೆಯುತ್ತಿರುವ ಪ್ರತಿಭಟನೆಗಳು ಅಯ್ಯಪ್ಪ ಭಕ್ತರು ನಡೆಸುತ್ತಿರುವುದಲ್ಲ, ಇದು ಬಿಜೆಪಿಯಿಂದ ರಾಜಕೀಯ ಕಾರಣಕ್ಕೆ ಆಗುತ್ತಿರುವ ಗಲಭೆ ಎಂದು ಕೇರಳ ಸಿಎಂ ಪಿಣಾರಯಿ ವಿಜಯನ್ ಟೀಕಿಸಿದ್ದು, ಮಹಿಳೆಯರ ಹಕ್ಕು ರಕ್ಷಣೆ ಹಾಗೂ ಸುಪ್ರೀಂ ತೀರ್ಪು ಪಾಲನೆಗೆ ತಮ್ಮ ಸರಕಾರ ಕಟಿಬದ್ಧವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

First published: