• Home
  • »
  • News
  • »
  • state
  • »
  • Mysuru Bus Shelter: ಗುಂಬಜ್ ಮಾದರಿ ಬಸ್ ನಿಲ್ದಾಣದ ವಿವಾದಕ್ಕೆ ಖಾದರ್ ಎಂಟ್ರಿ; ಕಾಂಗ್ರೆಸ್​ನಿಂದ ವ್ಯಂಗ್ಯ

Mysuru Bus Shelter: ಗುಂಬಜ್ ಮಾದರಿ ಬಸ್ ನಿಲ್ದಾಣದ ವಿವಾದಕ್ಕೆ ಖಾದರ್ ಎಂಟ್ರಿ; ಕಾಂಗ್ರೆಸ್​ನಿಂದ ವ್ಯಂಗ್ಯ

ಬಸ್​ ನಿಲ್ದಾಣ ವಿವಾದ

ಬಸ್​ ನಿಲ್ದಾಣ ವಿವಾದ

ನಮ್ಮದು ಊರು ಮತ್ತು ಜನರ ಮನಸ್ಸು ಕಟ್ಟುವ ಕೆಲಸ. ಕೆಲವರದ್ದು ಜನರ ಮನಸ್ಸು ಮತ್ತು ಊರು ಒಡೆಯುವ ಕೆಲಸ. ಅವರು ಒಡೆದುಕೊಂಡು ಹೋಗಲಿ, ನಾವು ಕಟ್ಟಿಕೊಂಡು ಹೋಗ್ತೇವೆ ಎಂದು ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ.

  • Share this:

ಮೈಸೂರಿನ ಗುಂಬಜ್ ಮಾದರಿಯ ಬಸ್ ನಿಲ್ದಾಣದ (Mysu Bus Shelter) ನಿರ್ಮಾಣ ಬಿಜೆಪಿಯ ಶಾಸಕ ಎಸ್​ಎ ರಾಮದಾಸ್ (MLA SA Ramdas) ಮತ್ತು ಸಂಸದ ಪ್ರತಾಸ್ ಸಿಂಹ (MP Pratap Simha) ನಡುವಿನ ವಾಕ್ಸಮರಕ್ಕೆ ಕಾರಣವಾಗಿದೆ. ಇದೀಗ ಈ ಸಂಬಂಧ ಮಂಗಳೂರಿನಲ್ಲಿ ಮಾತನಾಡಿರುವ ವಿಪಕ್ಷ ಉಪನಾಯಕ ಯು.ಟಿ.ಖಾದರ್ (UT Khader), ನಮ್ಮದು ಊರು ಮತ್ತು ಜನರ ಮನಸ್ಸು ಕಟ್ಟುವ ಕೆಲಸ. ಕೆಲವರದ್ದು ಜನರ ಮನಸ್ಸು ಮತ್ತು ಊರು ಒಡೆಯುವ ಕೆಲಸ. ಅವರು ಒಡೆದುಕೊಂಡು ಹೋಗಲಿ, ನಾವು ಕಟ್ಟಿಕೊಂಡು ಹೋಗ್ತೇವೆ ಎಂದು ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ.


ತನ್ವೀರ್ ಸೇಠ್​​ ಅವರ ಟಿಪ್ಪು ಸುಲ್ತಾನ್ ಪ್ರತಿಮೆ ಸ್ಥಾಪನೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಯು.ಟಿ.ಖಾದರ್, ತನ್ವೀರ್ ಸೇಠ್​​ಗೆ ಪ್ರಜಾಪ್ರಭುತ್ವದಲ್ಲಿ ಹೇಳಿಕೆ ಕೊಡುವ ಅವಕಾಶ ಇದೆ. ಪಕ್ಷದ ಹಿರಿಯರ ಜೊತೆ ಚರ್ಚಿಸಿ ಅವರು ನಿರ್ಧಾರ ಮಾಡ್ತಾರೆ. ಕಾನೂನು ಮತ್ತು ನಿಯಮದ ಪ್ರಕಾರ ಅವರು ಏನು ಬೇಕಾದರೂ ಮಾಡಲಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.


ಹೋರಾಟಗಾರರಿಗೆ ಗೌರವ ಸಲ್ಲಬೇಕು


ರಾಜ್ಯ ಸರ್ಕಾರದ ಅನುಮತಿ ಪಡೆದು ‌ಮಾಡಲು ಅವಕಾಶ ಇದೆ. ನಮ್ಮ ದೇಶದ ಎಲ್ಲಾ ಇತಿಹಾಸಕಾರರು, ಸ್ವತಂತ್ರ ಹೋರಾಟಗಾರರಿಗೆ ಗೌರವ ಸಲ್ಲಬೇಕು. ಅವರಿಗೆ ಗೌರವ ಸಲ್ಲಿಸುವ ಎಲ್ಲದಕ್ಕೂ ಈ ರಾಜ್ಯದ ನಾಗರಿಕರ ಬೆಂಬಲ ಇದೆ. ರಾಜ್ಯದಲ್ಲಿ ಸರ್ವಧರ್ಮಕ್ಕೆ ಕೊಡುಗೆ ಕೊಟ್ಟ ಹಲವು ಜನರಿದ್ದಾರೆ. ಅವರು ಕೊಟ್ಟ ಕೊಡುಗೆ ಮುಂದಿನ ಪೀಳಿಗೆಗೆ ಗೊತ್ತಾಗಬೇಕು ಎಂದರು.


ಕೊಲ್ಲೂರಿ‌ನಲ್ಲೂ ಸಲಾಂ ಪೂಜೆ ಇತ್ತು, ಶೃಂಗೇರಿಯಲ್ಲಿ ಶಿಲೆಗಳಲ್ಲೂ ಬರೆದಿದೆ. ಟಿಪ್ಪು ಸುಲ್ತಾನ್ ಇತಿಹಾಸ ಅಲ್ಲಿ ಬರೆಯಲಾಗಿದೆ. ಅಂತಹ ಇತಿಹಾಸ ಮುಂದಿನ ಯುವ ಸಮುದಾಯಕ್ಕೆ ‌ಗೊತ್ತಾಗಬೇಕು ಎಂದರು.


ಕಾಂಗ್ರೆಸ್ ವ್ಯಂಗ್ಯ


#BJPvsBJP ಕಿಚ್ಚು ಎಷ್ಟಿದೆ ಎನ್ನಲು ಮೈಸೂರಿನಲ್ಲಿ ನಡೆಯುತ್ತಿರುವ ಪ್ರತಾಪ್ ಸಿಂಹ vs ರಾಮದಾಸ್ ಕಾಳಗವೇ ಸಾಕ್ಷಿ. ಶಾಸಕರು ಕಟ್ಟಿಸಿದ ಬಸ್ ನಿಲ್ದಾಣವನ್ನು ಸಂಸದ ಒಡೆಯಲು ಹೊರಟಿದ್ದಾರೆ. ಬೇರೆಯವರ ಮನೆಯ ದೋಸೆಯ ತೂತನ್ನು ಹುಡುಕುವ ಬದಲು ಬಿಜೆಪಿ ತಮ್ಮ ಮನೆಯ ಕಾವಲಿಯ ತೂತುನ್ನು ನೋಡಿಕೊಂಡರೆ ಒಳಿತು ಎಂದು ಕಾಂಗ್ರೆಸ್ ಟ್ವೀಟ್ ಮೂಲಕ ವ್ಯಂಗ್ಯ ಮಾಡಿದೆ.


ಪ್ರತಾಪ್ ಸಿಂಹ ಆರೋಪಕ್ಕೆ ತಿರುಗೇಟು


ಈ ಎಲ್ಲಾ ಬೆಳವಣಿಗೆಗಳ ನಡುವೆ ಶಾಸಕ ರಾಮದಾಸ್​ ಗುಂಬಜ್ ವಿವಾದದ ಕುರಿತು ಮೌನ ಮುರಿದಿದ್ದಾರೆ. ಇಂದು ಪತ್ರದ ಮೂಲಕ ಮಾಧ್ಯಮಗಳ ಹೇಳಿಕೆ ನೀಡಿರುವ ಶಾಸಕರು, ಅರಮನೆ ಮಾದರಿಯಲ್ಲಿ ನಿರ್ಮಾಣವಾಗಿರುವ ಕಟ್ಟಡವನ್ನ ಮಸೀದಿಗೆ ಹೋಲಿಕೆ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಹರಡಿದವರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.


ಇದನ್ನೂ ಓದಿ:  Mysuru: ಬಸ್ ಶೆಲ್ಟರ್ ವಿವಾದಕ್ಕೆ ನಾಟಕೀಯ ತಿರುವು; ಸ್ವಾಮೀಜಿ, ಪ್ರಧಾನಿ, ಸಿಎಂ ಫೋಟೋ ಅಳವಡಿಕೆ


ಸಂಸದರು ಒಡೆಯುತ್ತೀನಿ ಎಂದ‌ ಮೇಲೆ ಕಳಸ ನಿರ್ಮಿಸಿಲ್ಲ. ಕೆಲವರು ಸುಳ್ಳು ಸುದ್ದಿ ಹಬ್ಬಿಸಿದ್ದಾರೆ. ಪ್ರತಾಪ್ ಸಿಂಹ ಹೇಳಿರುವಂತೆ ರಾತ್ರೋರಾತ್ರಿ ಕಳಸ ನಿರ್ಮಾಣ ಮಾಡಿಲ್ಲ. ಯಾವುದೇ ಧರ್ಮದ ಆಧಾರದ ಮೇಲೆ ಬಸ್ ನಿಲ್ದಾಣ ನಿರ್ಮಿಸಿಲ್ಲ ಎಂದು ಪ್ರತಾಪ್ ಸಿಂಹ ಆರೋಪಕ್ಕೆ ತಿರುಗೇಟು ನೀಡಿದರು.


ಮೈಸೂರು ಅರಮನೆಯ ಮಾದರಿಯಲ್ಲಿ ನಿರ್ಮಾಣ


ಮೈಸೂರಿನ ಪಾರಂಪರಿಕ ಮಹತ್ವ ಸಾರಲು ಮೈಸೂರು ಅರಮನೆಯ ಮಾದರಿಯಲ್ಲಿ ಬಸ್ ನಿಲ್ದಾಣ ನಿರ್ಮಾಣ ಮಾಡಲಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ತಪ್ಪಾಗಿ ಅರ್ಥೈಸಲಾಗಿದೆ ಎಂದು ಆರೋಪಿಸಿದರು. ಈ ಸಂಬಂಧ ಪೋಲಿಸ್ ಕಮಿಷನರ್​​ಗೆ ದೂರು ಸಲ್ಲಿಸಲಾಗಿದೆ ಎಂದು ತಿಳಿಸಿದರು.


ಇದನ್ನೂ ಓದಿ:  Mysuru: ಗುಂಬಜ್​ ದಂಗಲ್​ನಲ್ಲಿ ರಾಮದಾಸ್ Vs ಪ್ರತಾಪ್ ಸಿಂಹ ವಾರ್; ಸಂಸದರ ಆರೋಪಕ್ಕೆ ಶಾಸಕರ ತಿರುಗೇಟು


ಪಾಲಿಕೆಗೆ ನೋಟಿಸ್


ಇನ್ನು ಬಸ್​ ನಿಲ್ದಾಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮಧ್ಯ ಪ್ರವೇಶಿಸಿದ್ದು, ಪಾಲಿಕೆ ನೋಟಿಸ್ ನೀಡಿದೆ. ಊಟಿ ಮಾರ್ಗದ ಬಲಭಾಗದಲ್ಲಿ ಅನಧಿಕೃತವಾಗಿ ನಿರ್ಮಾಣವಾಗಿರುವ ಬಸ್​ ನಿಲ್ದಾಣವನ್ನು ಒಂದು ವಾರದೊಳಗೆ ತೆರವುಗೊಳಿಸುವಂತೆ ನೋಟಿಸ್ ನೀಡಿದೆ.

Published by:Mahmadrafik K
First published: