'ಬಿಜೆಪಿ ನಾಯಕರು ಸಾವಿನ ಮನೆಯಲ್ಲೂ ರಾಜಕೀಯ ಮಾಡ್ತಾರೆ'; ಯು.ಟಿ. ಖಾದರ್ ಆರೋಪ

ಗೋಲಿಬಾರ್​ ನಲ್ಲಿ ಮೃತಪಟ್ಟವರಿಗೆ ಸರ್ಕಾರ ನೀಡಿದ ಪರಿಹಾರವನ್ನು ಹಿಂಪಡೆದಿದೆ. ಆದರೆ, ಯಾರ ಮಾತು ಕೇಳಿ ಹಿಂಪಡೆದಿದ್ದಾರೆ? ಇದರ ಹಿಂದೆ ಯಾರಿದ್ದಾರೆ, ಇದರ ಉದ್ದೇಶವೇನು? ಸರ್ಕಾರ ಈ ಕುರಿತು ಸ್ಪಷ್ಟಪಡಿಸಬೇಕು. ರಾಜ್ಯ ಸರ್ಕಾರಕ್ಕೆ ಜವಾಬ್ದಾರಿ ಇಲ್ವ ಎಂದು ಮಾಜಿ ಸಚಿವ ಯು.ಟಿ. ಖಾದರ್ ಚಾಟಿ ಬೀಸಿದ್ದಾರೆ.

ಮಾಜಿ ಸಚಿವ ಯು.ಟಿ. ಖಾದರ್

ಮಾಜಿ ಸಚಿವ ಯು.ಟಿ. ಖಾದರ್

  • Share this:
ಮಂಗಳೂರು (ಡಿಸೆಂಬರ್ 26); ಪೊಲೀಸ್ ಗೋಲಿಬಾರ್​ನಲ್ಲಿ ಮೃತಪಟ್ಟ ಯುವಕರ ವಿಚಾರವನ್ನು ಮುಂದಿಟ್ಟು ಬಿಜೆಪಿ ನಾಯಕರು ಸಾವಿನ ಮನೆಯಲ್ಲೂ ರಾಜಕೀಯ ಮಾಡ್ತಿದ್ದಾರೆ ಎಂದು ಮಾಜಿ ಸಚಿವ ಯು.ಟಿ. ಖಾದರ್ ಆರೋಪಿಸಿದ್ದಾರೆ.

ರಾಜ್ಯ ಸರ್ಕಾರ ಮಂಗಳೂರು ಗೋಲಿಬಾರ್ ನಲ್ಲಿ ಮೃತಪಟ್ಟ ಯುವಕರಿಗೆ ನೀಡಿದ ಪರಿಹಾರವನ್ನು ಹಿಂಪಡೆದ ವಿಚಾರವನ್ನು ಖಂಡಿಸಿ ಇಂದು ಮಾತನಾಡಿರುವ ಮಾಜಿ ಸಚಿವ ಯು.ಟಿ. ಖಾದರ್, “ಸರ್ಕಾರ ಪರಿಹಾರ ನೀಡದಿದ್ರೆ ಪರವಾಗಿಲ್ಲ. ನಾವೇ ಸಾರ್ವಜನಿಕರಿಂದ ಒಟ್ಟು ಮಾಡಿ ಅದಕ್ಕಿಂತ ಹೆಚ್ಚು ಪರಿಹಾರ ನೀಡ್ತೇವೆ. ಆದರೆ, ಹೀಗೆ ನೋವಿನಲ್ಲಿದ್ದವರಿಗೆ ಅವಮಾನ ಮಾಡಬಾರದು. ಸಾವಿನ ಮನೆಯಲ್ಲಿ ರಾಜಕೀಯ ಮಾಡಬಾರದು” ಎಂದು ವಿಷಾಧ ವ್ಯಕ್ತಪಡಿಸಿದ್ದಾರೆ.

“ಸರ್ಕಾರ ಇದೀಗ ಪರಿಹಾರವನ್ನು ಹಿಂಪಡೆದಿದೆ. ಆದರೆ, ಯಾರ ಮಾತು ಕೇಳಿ ಹಿಂಪಡೆದಿದ್ದಾರೆ? ಇದರ ಹಿಂದೆ ಯಾರಿದ್ದಾರೆ, ಇದರ ಉದ್ದೇಶವೇನು? ಸರ್ಕಾರ ಈ ಕುರಿತು ಸ್ಪಷ್ಟಪಡಿಸಬೇಕು. ರಾಜ್ಯ ಸರ್ಕಾರಕ್ಕೆ ಜವಾಬ್ದಾರಿ ಇಲ್ವ” ಎಂದು ಚಾಟಿ ಬೀಸಿದ್ದಾರೆ.

ಇದನ್ನೂ ಓದಿ : ಮಂಗಳೂರು ಗೋಲಿಬಾರ್​ನಲ್ಲಿ ಸತ್ತವರು ಸಮಾಜಘಾತುಕರು; ಪೊಲೀಸರನ್ನು ಶ್ಲಾಘಿಸಿದ ಕಲ್ಲಡ್ಕ ಪ್ರಭಾಕರ್​ ಭಟ್
Published by:MAshok Kumar
First published: