• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • ಠೇವಣಿ ವಿಮೆ 5 ಲಕ್ಷಕ್ಕೆ ಹೆಚ್ಚಳ: ಬ್ಯಾಂಕ್ ದಿವಾಳಿಯಾದರೆ 90 ದಿನಗಳಲ್ಲಿ ಗ್ರಾಹಕರ ಕೈ ಸೇರಲಿದೆ ಹಣ

ಠೇವಣಿ ವಿಮೆ 5 ಲಕ್ಷಕ್ಕೆ ಹೆಚ್ಚಳ: ಬ್ಯಾಂಕ್ ದಿವಾಳಿಯಾದರೆ 90 ದಿನಗಳಲ್ಲಿ ಗ್ರಾಹಕರ ಕೈ ಸೇರಲಿದೆ ಹಣ

ಬ್ಯಾಂಕ್​ ವಹಿವಾಟಿನ ಸಾಂದರ್ಭಿಕ ಚಿತ್ರ

ಬ್ಯಾಂಕ್​ ವಹಿವಾಟಿನ ಸಾಂದರ್ಭಿಕ ಚಿತ್ರ

ಡಿಐಜಿಸಿ ಕಾಯ್ದೆ, 1961 ಕ್ಕೆ ತಿದ್ದುಪಡಿ ಮೂಲಕ ಸರಳ ಹಾಗೂ ಒಂದು ಚೌಕಟ್ಟಿಗೆ ತಂದು ಸುಗಮಗೊಳಿಸುವ ಬದಲಾವಣೆ ಇದಾಗಿದ್ದು, ಬ್ಯಾಂಕ್ ತನ್ನ ಜವಾಬ್ದಾರಿಯನ್ನು ಸರಿಯಾಗಿ ನಿಭಾಯಿಸಲು ಸಾಧ್ಯವಾಗದಿದ್ದರೆ, ಅಂತಹ ಬ್ಯಾಂಕಿನ ಠೇವಣಿದಾರರು ಸುಲಭವಾಗಿ ಮತ್ತು ಸಮಯಕ್ಕೆ ಸರಿಯಾಗಿ ತಮ್ಮ ಹಣವನ್ನು ಪಡೆಯಬಹುದು.

ಮುಂದೆ ಓದಿ ...
  • Share this:

    ಪಂಜಾಬ್​- ಮಹಾರಾಷ್ಟ್ರ ಬ್ಯಾಂಕ್‌ನಲ್ಲಿ ನಡೆದ ಅವ್ಯವಹಾರಗಳು ಹಾಗೂ ಅನುತ್ಪಾದಕ ಆಸ್ತಿಯ ಬಗ್ಗೆ ಕೆಲ ವರ್ಷಗಳಿಂದ ಸರಿಯಾಗಿ ಆರ್‌ಬಿಐಗೆ ಮಾಹಿತಿ ನೀಡದ ಹಿನ್ನೆಲೆಯಲ್ಲಿ  ಪಂಜಾಬ್ ಮತ್ತು ಮಹಾರಾಷ್ಟ್ರ ಸಹಕಾರ (ಪಿಎಮ್‌ಸಿ) ಬ್ಯಾಂಕ್ಅನ್ನು ಸ್ಥಗಿತಗೊಳಿಸುವಂತೆ ಆರ್​ಬಿಐ ಸೂಚನೆ ನೀಡಿತ್ತು. ಇದರಿಂದ ಈ ಬ್ಯಾಂಕಿನ ಠೇವಣಿದಾರರು ಆತಂಕಕ್ಕೆ ಒಳಗಾಗಿದ್ದರು. ಆದರೆ ಈಗ ಬ್ಯಾಂಕಿನ ಠೇವಣಿದಾರರಿಗೆ ಪರಿಹಾರ ನೀಡಲು ಕೇಂದ್ರ ಸಚಿವ ಸಂಪುಟ ಬುಧವಾರ ಠೇವಣಿ ವಿಮೆ ಮತ್ತು ಸಾಲ ಖಾತರಿ ನಿಗಮ ಕಾಯ್ದೆ 1961 (ಡಿಐಜಿಸಿ ಕಾಯ್ದೆ) ಯಲ್ಲಿನ ಒಂದಷ್ಟು ನಿರ್ಬಂಧಗಳನ್ನು ತಿದ್ದುಪಡಿಯ ಮೂಲಕ ತೆರವುಗೊಳಿಸಿದೆ.


    ಪಿಎಮ್‌ಸಿ ಬ್ಯಾಂಕ್, ಯೆಸ್ ಬ್ಯಾಂಕ್ ಮತ್ತು ಲಕ್ಷ್ಮಿ ವಿಲಾಸ್ ಬ್ಯಾಂಕ್‌ನಂತಹ ಬ್ಯಾಂಕುಗಳ ಠೇವಣಿದಾರರು ಎದುರಿಸುತ್ತಿರುವ ಆತಂಕ ಕಡಿಮೆ ಮಾಡುವುದು ಇದರ ಉದ್ದೇಶ. ನಿಷೇಧದ ಅಡಿಯಲ್ಲಿರುವ ಬ್ಯಾಂಕುಗಳ ಠೇವಣಿದಾರರು ತಮ್ಮ ಹಣವನ್ನು ಪಡೆಯಲು ಬ್ಯಾಂಕ್ ಅನ್ನು ದಿವಾಳಿ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಘೋಷಿಸುವ ತನಕ ಕಾಯಬೇಕಾಗಿಲ್ಲ. ಕೇಂದ್ರ ಸರ್ಕಾರವು ಠೇವಣಿ ವಿಮಾ ರಕ್ಷಣೆಯನ್ನು 5 ಲಕ್ಷಕ್ಕೆ ಏರಿಸಿತು ಮತ್ತು ಬ್ಯಾಂಕನ್ನು ಆರ್‌ಬಿಐ ಕಣ್ಗಾವಲಿನಲ್ಲಿ ಇರಿಸಿದ್ದರೂ ಸಹ ಬ್ಯಾಂಕ್​ಗಳ ನಿಯಮಿತ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿದೆ.


    1984ರಲ್ಲಿ ಆರಂಭವಾದ ಪಂಜಾಬ್‌-ಮಹಾರಾಷ್ಟ್ರ ಸಹಕಾರ ಬ್ಯಾಂಕ್‌ ಕಳೆದ 35 ವರ್ಷಗಳಲ್ಲಿ ಅಗಾಧವಾಗಿ ಬೆಳೆದು, ದೇಶದ ಅನೇಕ ರಾಜ್ಯಗಳಲ್ಲಿ 137 ಶಾಖೆಗಳನ್ನು ಹೊಂದಿದೆ. ಇದು ನಮ್ಮ ದೇಶದಲ್ಲಿರುವ ಐದು ಅತಿದೊಡ್ಡ ನಗರ ಸಹಕಾರ ಬ್ಯಾಂಕ್‌ಗಳಲ್ಲಿ ಒಂದು. ಸುಮಾರು 60 ಸಾವಿರ ಗ್ರಾಹಕರನ್ನು ಹೊಂದಿದೆ.


    ಠೇವಣಿ ವಿಮೆ ಮತ್ತು ಕ್ರೆಡಿಟ್ ಗ್ಯಾರಂಟಿ ಕಾರ್ಪೊರೇಷನ್ (ಡಿಐಸಿಜಿಸಿ) ಭಾರತೀಯ ರಿಸರ್ವ್ ಬ್ಯಾಂಕ್ (ಆರ್​ಬಿಐ)ನ ಸಂಪೂರ್ಣ ಅಂಗಸಂಸ್ಥೆಯಾಗಿದೆ. ಬ್ಯಾಂಕ್ ತನ್ನ ಠೇವಣಿದಾರರಿಗೆ ಹಣ ಪಾವತಿಸಲು ವಿಫಲವಾದಾಗ, ಈ ಅಂಗ ಸಂಸ್ಥೆ ಬ್ಯಾಂಕ್ ಠೇವಣಿ ಹೊಂದಿರುವ ಗ್ರಾಹಕರಿಗೆ ವಿಮಾ ರಕ್ಷಣೆಯನ್ನು ಒದಗಿಸುತ್ತದೆ. ಭಾರತದಲ್ಲಿರುವ ಎಲ್ಲಾ ವಾಣಿಜ್ಯ ಮತ್ತು ವಿದೇಶಿ ಬ್ಯಾಂಕುಗಳಲ್ಲಿ ಠೇವಣಿದಾರರ ಹಣವನ್ನು ಡಿಐಜಿಸಿಜಿ ರಕ್ಷಿಸುತ್ತದೆ; ಕೇಂದ್ರ, ರಾಜ್ಯ ಮತ್ತು ನಗರ ಸಹಕಾರಿ ಬ್ಯಾಂಕುಗಳು; ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳು; ಮತ್ತು ಸ್ಥಳೀಯ ಬ್ಯಾಂಕುಗಳು, ಬ್ಯಾಂಕ್ ಡಿಐಜಿಸಿಸಿ ಅಡಿಯಲ್ಲಿ ಬರುತ್ತವೆ. ಡಿಐಜಿಸಿಯು ಬ್ಯಾಂಕಿನ ಅಡಿಯಲ್ಲಿ ಬರುವ ಬ್ಯಾಂಕ್​ಗಳಲ್ಲಿ ಪ್ರತಿ ಬ್ಯಾಂಕ್‌ ಖಾತೆದಾರರಿಗೆ 5 ಲಕ್ಷ ರೂ ಹಣ ಮಿಮೆಯನ್ನು ಇನ್ನು ಮುಂದೆ ಮಾಡಲಾಗಿರುತ್ತದೆ. ಅಂದರೆ ಎಲ್ಲಾ ರೀತಿಯ ಠೇವಣಿ ಖಾತೆಗಳಾದ ಉಳಿತಾಯ, ಕರೆಂಟ್, ಮರುಕಳಿಸುವ ಮತ್ತು ಸ್ಥಿರ ಠೇವಣಿ ಖಾತೆಗಳಿಗೆ ಇದು ಅನ್ವಯಿಸುತ್ತದೆ.


    "ಈ ಅಧಿವೇಶನದಲ್ಲಿ ಡಿಐಜಿಸಿ ಕಾಯ್ದೆ, 1961 ಕ್ಕೆ ತಿದ್ದುಪಡಿ ಮೂಲಕ ಸರಳ ಹಾಗೂ ಒಂದು ಚೌಕಟ್ಟಿಗೆ ತಂದು ಸುಗಮಗೊಳಿಸುವ ಬದಲಾವಣೆ ಇದಾಗಿದ್ದು, ಇದರಿಂದಾಗಿ ಬ್ಯಾಂಕ್ ತನ್ನ ಜವಾಬ್ದಾರಿಯನ್ನು ಸರಿಯಾಗಿ ನಿಭಾಯಿಸಲು ಸಾಧ್ಯವಾಗದಿದ್ದರೆ, ಅಂತಹ ಬ್ಯಾಂಕಿನ ಠೇವಣಿದಾರರು ಅವರಿಗೆ ಸುಲಭವಾಗಿ ಮತ್ತು ಸಮಯಕ್ಕೆ ಸರಿಯಾಗಿ ತಮ್ಮ ಹಣವನ್ನು ಪಡೆಯಬಹುದು ಅಲ್ಲದೇ ಬ್ಯಾಂಕ್​ ಠೇವಣಿದಾರರ ಹಣಕ್ಕೆ ವಿಮಾ ರಕ್ಷಣೆ ಒದಗಿಸಲಾಗಿದೆ"ಎಂದು ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ತಮ್ಮ ಬಜೆಟ್ ಭಾಷಣದಲ್ಲಿ ಹೇಳಿದರು.


    ಇದನ್ನೂ ಓದಿ: ನೀವಾದರೂ ಕೇಂದ್ರದ ಅನ್ಯಾಯದ ವಿರುದ್ದ ಮಾತನಾಡಿ: ನೂತನ ಸಿಎಂಗೆ ಮಾಜಿ ಸಿಎಂ ಕಿವಿಮಾತು


    "ಠೇವಣಿದಾರರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು, ಸರ್ಕಾರವು ಕಳೆದ ವರ್ಷ ಠೇವಣಿ ವಿಮಾ ರಕ್ಷಣೆಯ ಮೊತ್ತವನ್ನು1 ಲಕ್ಷದಿಂದ 5 ಲಕ್ಷಕ್ಕೆ ಹೆಚ್ಚಿಸಿತ್ತು. ಅತ್ಯಂತ ತುರ್ತು ಪರಿಸ್ಥಿತಿಯಲ್ಲಿ ಈ ಹಣವನ್ನು ಕ್ಲೈಮ್​ ಮಾಡಬಹುದಾಗಿದೆ. ಬ್ಯಾಂಕಿನ ಪರವಾನಗಿಯನ್ನು ರದ್ದುಗೊಳಿಸಿದರೆ ಅಥವಾ ಬ್ಯಾಂಕ್​ ದಿವಾಳಿ ಎದ್ದರೆ ಈ ಹಣವನ್ನು ಬಳಸಬಹುದು"ಎಂದು ಬ್ಯಾಂಕ್​ ಬಜಾರ್​ ಸಿಇಒ ಅಧಿಲ್ ಶೆಟ್ಟಿ ಹೇಳಿದ್ದಾರೆ.


    ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.

    Published by:HR Ramesh
    First published: